Breaking News

ಹಾಸನದಲ್ಲಿ ಹೆಚ್ಚಿದ ಕೊರೋನಾ ಭೀತಿ; ಇಡೀ ಊರಿಗೆ ಊರೇ ಹೋಮ್ ಐಸೋಲೇಷನ್​ನಲ್ಲಿ!

ಹಾಸನ (ಮಾ. 25): ಹಾಸನದಲ್ಲಿ ಮತ್ತೆ ಕೊರೋನಾ ಭೀತಿ ಹೆಚ್ಚಾಗಿದ್ದು, ಇಲ್ಲಿನ ಒಂದು ಊರಿಗೆ ಊರೇ ಹೋಂ ಐಸೋಲೇಷನ್​ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಹಾಸನದ ಅರಕಲಗೂಡು ತಾಲೂಕಿನ ರಾಂಪುರ ಗ್ರಾಮದ 75 ಜನರಿಗೆ ಹೋಮ್ ಐಸೋಲೇಷನ್​ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಈ ಊರಿನ ಯಾರೂ ಮನೆಯಿಂದ ಹೊರಗೆ ಹೋಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ಗ್ರಾಮಸ್ಥರ ಕೈಗೆ ಸೀಲ್ ಹಾಕಿದ್ದಾರೆ. ಮಸ್ಕತ್, ದುಬೈ, ಮಂಗಳೂರಿನಿಂದ ಬಂದಿರುವ 75 ಮಂದಿ ಈ ಗ್ರಾಮದಲ್ಲಿದ್ದಾರೆ. …

Read More »

ದೇಶಾದ್ಯಂತ 21 ದಿನಗಳ ಲಾಕ್ ಡೌನ್ – ವಿದೇಶದಿಂದ ಬೆಂಗಳೂರಿಗೆ ಬಂದ 14 ಸಾವಿರ ಜನರ ಪತ್ತೆ ಹಚ್ಚಿದ ಪೊಲೀಸರು

ಬೆಂಗಳೂರು(ಮಾ.25) : ಕೊರೋನಾ ಭೀತಿಯ ಹಿನ್ನೆಲೆ ದೇಶಾದ್ಯಂತ  21 ದಿನಗಳ ಲಾಕ್​​​ಡೌನ್​​​​ ಮಾಡಲಾಗಿದೆ. ವಿದೇಶದಿಂದ ಬೆಂಗಳೂರಿಗೆ ಬಂದಿದ್ದ ಜನರನ್ನು ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿಗಳು ಪತ್ತೆ ಮಾಡಿದ್ದಾರೆ.  ಕರ್ಪ್ಯೂ ಇರುವುದರಿಂದ ಪೊಲೀಸರು ತೀವ್ರ ಕಟ್ಟೆಚ್ಚರವನ್ನು ವಹಿಸಲಾಗಿದೆ. ವಿದೇಶದಿಂದ ಬೆಂಗಳೂರಿಗೆ ಬಂದಿದ್ದ 14 ಸಾವಿರ ಜನರನ್ನು ಬಿಬಿಎಂಪಿ ಸಿಬ್ಬಂದಿಗಳು ಹಾಗೂ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಫೆಬ್ರವರಿ 13 ರಿಂದ ಮಾರ್ಚ್ 19ರ ಅವಧಿಯಲ್ಲಿ ಬಂದಿದ್ದವರಿಗೆ ಸ್ಟಾಂಪಿಂಗ್ ಮಾಡಲಾಗಿದೆ. ಇವರೆಲ್ಲರು ಬಿಬಿಎಂಪಿ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ …

Read More »

ಕೊರೋನಾದಿಂದ ರಾಜ್ಯದಲ್ಲಿ ಎರಡನೇ ಸಾವು?; ಶಂಕಿತೆಯ ವರದಿ ಬಂದ ನಂತರ ದೃಢ

ಆಂಧ್ರಪ್ರದೇಶ ಮೂಲದ 75 ವರ್ಷದ ಮಹಿಳೆ ಮಾರ್ಚ್‌ 23ರಂದು ಮೆಕ್ಕಾದಿಂದ ವಾಪಸ್ಸಾಗಿ ಗೌರಿ ಬಿದನೂರಿನಲ್ಲಿರುವ ಮಗನ ಮನೆಯಲ್ಲಿ ಕ್ವಾರಟೈನ್ ನಲ್ಲಿದ್ದರು. ಆದರೆ, ಮಾರ್ಚ್‌ 24 ರಂದು ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು   ಬೆಂಗಳೂರು (ಮಾ‌ರ್ಚ್‌ 25); ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಮತ್ತೋರ್ವ ಮಹಿಲೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.ಆದರೆ, ಆಕೆಯ ಸಾವಿನ ಕುರಿತ ಸಂಪೂರ್ಣ ವರದಿ ಕೈಸೇರುವ ತನಕ ಇದು ಕೊರೋನಾ ಸೋಂಕಿನಿಂದಲೇ ಉಂಟಾದ ಮರಣ ಎಂದು ದೃಢಪಡಿಸಲು ಸಾಧ್ಯವಿಲ್ಲ ಎಂದು ಆರೋಗ್ಯ …

Read More »

ರಾಜ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಇಬ್ಬರು ಸಚಿವರು ಅಧಿಕಾರ ಹಂಚಿಕೆ ವಿಚಾರವಾಗಿ ಅಸಮಾಧಾನ

ಬೆಂಗಳೂರು: ಇಡೀ ದೇಶ ಕೊರೋನಾ ವೈರಸ್ ಭೀತಿ ಎದುರಿಸುತ್ತಿದ್ದು, ಏಪ್ರಿಲ್ 14ರವರೆಗೆ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಇತ್ತ ಕೊರೋನಾ ಪರಿಸ್ಥಿತಿ ನಿಯಂತ್ರಣ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಿರುವುದಿರಿಂದ ಆರೋಗ್ಯ ಸಚಿವ ಶ್ರೀರಾಮುಲು ತೀವ್ರ ಅಸಮಾಧಾನಗೊಂಡಿದ್ದಾರೆ. ಇದೇ ವಿಚಾರವಾಗಿ ಶ್ರೀರಾಮುಲು ಸಿಎಂ ಮೇಲೆ ಗರಂ ಕೂಡ ಆಗಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಲ್ಲಿ …

Read More »

ವಿಚಿತ್ರ ವದಂತಿ, ಅಲ್ಲಗಳೆದ ಶ್ರೀಶೈಲ ಜಗದ್ಗುರು……….

ಶ್ರೀಶೈಲದಲ್ಲಿ ದೀಪ ಆರಿದೆಯಂತೆ, ಪ್ರತಿಯೊಬ್ಬರೂ ಐದೈದು ಮನೆಗೆ ಹೋಗಿ ಒಂದೊಂದು ಕೊಡ ನೀರು ತಂದು ತಮ್ಮ ಮನೆಯ ಮಗನ ಮೇಲೆ ಸುರುವಬೇಕಂತೆ -ಇದು ಇಂದು ಸಂಜೆಯಿಂದ ಅಥಣಿಯಲ್ಲಿ ಹಬ್ಬಿರುವ ವಿಚಿತ್ರ ವದಂತಿ. ಅಥಣಿಯ ಗಲ್ಲಿ ಗಲ್ಲಿಯಲ್ಲಿ ಜನ ಐದೈದು ಮನೆಗೆ ಹೋಗಿ ಒಂದೊಂದು ಕೊಡ ನೀರು ತಂದು ಮನೆಯ ಮಕ್ಕಳ ಮೇಲೆ ಸುರುವುತ್ತಿದ್ದಾರಂತೆ. ಕೊರೋನೋ ಇರುವ ಈ ಸಂದರ್ಭದಲ್ಲಿ ಇಂತಹ ವದಂತಿ ಮತ್ತು ಇದರಿಂದ ಜನರು ಮಾಡುತ್ತಿರುವ ಮೂಢನಂಬಿಕೆಗೆ ಅವರು …

Read More »

ಕೊರೋನಾ ಭೀತಿ; ಮಹಾರಾಷ್ಟ್ರದಿಂದ ಅಕ್ರಮವಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಸಾವಿರಾರು ಜನರು

ಚಿಕ್ಕೋಡಿ(ಮಾ.25): ಮಹಾರಾಷ್ಟ್ರದಲ್ಲಿ ದಿನನಿತ್ಯ ಕೊರೋನಾ ಭೀತಿ ಹೆಚ್ಚುತ್ತಿರುವ ಹಿನ್ನಲೆ ಮಹಾರಾಷ್ಟ್ರದಲ್ಲಿ ಕೆಲಸಕ್ಕೆಂದು ತೆರಳಿದ್ದ ಬೆಳಗಾವಿ ಜಿಲ್ಲೆಯ ಸಾವಿರಾರು ಜನ ಮರಳಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಈಗ ಕೊರೋನಾ ಭೀತಿ ಹೆಚ್ಚಾಗಿದೆ. ಇಷ್ಟು ದಿನ ಬರಿ ನಗರ ಪ್ರದೇಶಗಳಲ್ಲಿ ಕೊರೋನಾ ಭೀತಿ ತಾಂಡವಾಡುತ್ತಿತ್ತು ದಿನಗಳು ಕಳೆಯುತ್ತಿದ್ದಂತೆ ಅದು ಜಿಲ್ಲಾ ಕೇಂದ್ರಗಳು ಗ್ರಾಮೀಣ ಭಾಗಕ್ಕೂ ಆವರಿಸಿದೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣ ಇದುವರೆಗೂ ಪತ್ತೆಯಾಗಿಲ್ಲ. ಆದರೆ, ಜಿಲ್ಲೆಯಲ್ಲಿಗ ಕೊರೋನಾ …

Read More »

ಮನೆಯಲ್ಲೇ ಸರಳವಾಗಿ ಹಬ್ಬ ಆಚರಿಸಿ; ಯುಗಾದಿ ಶುಭಾಶಯ ಕೋರಿದ ಸಿಎಂ ಬಿಎಸ್​​ವೈ

ಬೆಂಗಳೂರು: ಎಲ್ಲೆಡೆ ಯುಗಾದಿ ಸಂಭ್ರಮ. ಆದರೆ, ಈ ಬಾರಿ ಯುಗಾದಿ ಹಬ್ಬಕ್ಕೆ ಕೊರೋನಾ ವೈರಸ್​ ಕರಿನೆರಳು ಬಿದ್ದಿದೆ. ಭೀಕರ ವೈರಸ್ನ​ ಭೀತಿ ಹೆಚ್ಚುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ಕೇಂದ್ರ ಸರ್ಕಾರ 21 ದಿನ ಲಾಕ್​ಡೌನ್​ ಆದೇಶ ಹೊರಡಿಸಿದೆ. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ರಾಜ್ಯದ ಜನತೆಗೆ ಯುಗಾಧಿ ಶುಭಾಶಯ ತಿಳಿಸಿದ್ದಾರೆ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯ. ಹೊಸ ಸಂವತ್ಸರ ಸರ್ವರಿಗೆ ಶುಭವನ್ನು ತರಲಿ. ಕೊರೋನಾ ಸೋಂಕು …

Read More »

21 ದಿನ ಮನೆಯಲ್ಲಿ ಇರಬೇಕು.! ಸಂಪೂರ್ಣ ಭಾರತ ಲಾಕ್ ಡೌನ್: ಪ್ರಧಾನಿ ಮೋದಿ

ಪ್ರಧಾನಮಂತ್ರಿಯಾಗಿ ನಾನು ನಿಮಗೆ ಹೇಳ್ತಿಲ್ಲ. ನಿಮ್ಮ ಮನೆಯ‌ ಸದಸ್ಯನಾಗಿ ಕೈಮುಗಿದು ಕೇಳ್ತಿದ್ದಿನಿ. ಇಂದು ರಾತ್ರಿ 12 ಗಂಟೆಯಿಂದ 21 ದಿನ ಮನೆಯಲ್ಲೇ‌ ಇರಿ ಎಂದು ಪ್ರಧಾನ ಮಂತ್ರಿ ನರೇಂದ ಮೋದಿ ಜನರಲ್ಲಿ ವಿನಂತಿಸಿಕೊಂಡ್ರು. ನಿಮ್ಮ ಕುಟುಂಬಗಳನ್ನ ಕಾಪಾಡಲು ನನಗೆ ಇರುವ ಒಂದೇ‌ ಒಂದು ಮಾರ್ಗವಿದು. ನಿಮ್ಮ ಮನೆಯವರಿಗಾಗಿ, ನಿಮ್ಮ ಕುಟುಂಬ ಕಾಪಾಡಿಕೊಳ್ಳುವುದಕ್ಕಾಗಿಯಾದ್ರು ಮನೆಯಲ್ಲೇ ಇರಿ. ಕೊರೊನಾ ಎಂಬ ಮಹಾಪಿಡುಗನ್ನ ತೊಲಗಿಸಲು ಸಹಕರಿಸಿ ಎಂದು ಪದೇ ಪದೇ ಮೋದಿ‌ ದೇಶದ ಜನತೆಗೆ …

Read More »

ಕೊರೋನಾ ಭೀತಿ: ಮುಂಜಾಗ್ರತಾ ಕ್ರಮವಾಗಿ ಗೋಕಾಕ ಗ್ರಾಮದೇವತೆ ಜಾತ್ರೆ ಎರಡು ವರ್ಷ ಮುಂದೂಡಿಕೆ

ಗೋಕಾಕ: ಐದು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಗೋಕಾಕ‌ ಗ್ರಾಮ‌‌ ದೇವತೆ ಜಾತ್ರೆಯನ್ನು ಕೊರೋನಾ‌ ಸೊಂಕು ಮತ್ತು ಇತರೆ ಕಾರಣಗಳಿಂದ ಜಾರಕಿಹೊಳಿ ಸಹೋದರರ ಮಾರ್ಗದರ್ಶನದಂತೆ ಎರಡು ವರ್ಷಗಳ ಕಾಲ ಮುಂದೂಡಲಾಗಿದೆ ಎಂದು ಜಾತ್ರಾ ಕಮಿಟಿ ಪ್ರಕಟಿಸಿದೆ ಇಲ್ಲಿನ ಎನ್ ಎಸ್ ಎಪ್ ಅತಿಥಿ ಗೃಹದಲ್ಲಿ ಜಾತ್ರೆ ಕಮಿಟಿ ಸದಸ್ಯರಾದ ಸಿದ್ಧಲಿಂಗ ದಳವಾಯಿ ಮತ್ತು ಎಸ್.ಎ.‌ಕೋತವಾಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೂನ 22 ರಿಂದ ನಡಯಬೇಕಾಗಿದ್ದ ಜಾತ್ರೆಯನ್ನು ಕೊರೋನಾ ಮಾರಣಾಂತಿಕ …

Read More »

ಕೊರೋನಾ ಭೀತಿಯ ಮಧ್ಯೆ ಉಳ್ಳವರು ಇಂಥವರ ತುತ್ತಿನ ಚೀಲಗಳ ಬಗೆಗೂ ತುಸು ಚಿಂತಿಸಬೇಕು:. . ( ಅಶೋಕ ಚಂದರಗಿ

ಕೊರೋನಾ ಭೀತಿಯ ಮಧ್ಯೆ ಉಳ್ಳವರು ಇಂಥವರ ತುತ್ತಿನ ಚೀಲಗಳ ಬಗೆಗೂ ತುಸು ಚಿಂತಿಸಬೇಕು: ಸಹಾಯ ಹಸ್ತವನ್ನು ಚಾಚಬೇಕು: ಇದು ಕೇವಲ ಸರಕಾರದ ಕರ್ತವ್ಯವಾಗಿರದೇ ನಮ್ಮ ಧರ್ಮವೂ ಹೌದು ಇಂದು ಬೆಳಗಾವಿಯಲ್ಲಿ ಲಾಕ್ ಔಟ್ .ಎಲ್ಲೆಲ್ಲೂ ಪೋಲೀಸರೇ.ಕರ್ಫ್ಯೂ ಮಾದರಿಯೇ ಸರಿ.ಕಾರ್ ತೆಗೆದುಕೊಂಡು ಶನಿವಾರ ಖೂಟದ ನನ್ನ ಬ್ಯುಜಿನೆಸ್ ಕಚೇರಿ ತಲುಪಲು ಸಾಕು ಬೇಕಾಯಿತು.ಅಷ್ಟರಲ್ಲಿ ಟಿವ್ಹಿ ಗಳಲ್ಲಿ ಸುದ್ದಿಯೊಂದು ಪ್ರಸಾರವಾಗುತ್ತಿತ್ತು.ಬೆಳಗಾವಿಯ ಕಿಲ್ಲಾ ಕೆರೆಯ ಬದಿಗೆ ಗುಡಿಸಲು ಹಾಕಿಕೊಂಡು ಬೀಸುಕಲ್ಲು,ಒರಳು ತಯಾರಿಸುವ ರಾಜಸ್ಥಾನ,ಬಿಹಾರ ಮೂಲದ …

Read More »