ಹುಬ್ಬಳ್ಳಿ: ಮದ್ಯ ಸಿಗುತ್ತಿಲ್ಲಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಸೂರಿನ ಗಣೇಶ ಪಾರ್ಕ್ ನಲ್ಲಿ ನಡೆದಿದೆ. ಧಾರವಾಡ ಮೂಲದ ಉಮೇಶ ಹಡಪದ (46) ಮೃತ ವ್ಯಕ್ತಿ. ಈತ 15 ದಿನಗಳ ಹಿಂದೆ ಗಣೇಶ ಪಾರ್ಕ್ನ ಮನೆಯೊಂದರಲ್ಲಿವಾಚ್ಮನ್ ಕೆಲಸಕ್ಕೆ ಸೇರಿಕೊಂಡಿದ್ದ. ಒಂದು ವಾರದಿಂದ ಮದ್ಯದಂಗಡಿ ಬಂದ್ ಆಗಿದ್ದು, 5 ದಿನದಿಂದ ಮದ್ಯ ಸಿಕ್ಕಿರಲಿಲ್ಲ. ಮದ್ಯ ಸಿಗದೇ ಕಂಗಾಲಾಗಿ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. …
Read More »ಕೊರೊನಾ ಯುದ್ಧದಲ್ಲಿ ಸೈನಿಕರಂತೆ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ “
ಹುಬ್ಬಳ್ಳಿ,ಮಾ,27- ಕೊರೊನಾ ವೈರಾಣು ಹರಡದಂತೆ ಸಹಕರಿಸಲು ಪ್ರಧಾನಿ ಮನವಿ ಮಾಡಿದರೂ ಜನರು ಸಮರ್ಪಕವಾಗಿ ಸ್ಪಂದನ ಮಾಡುತಿಲ್ಲ ಆದ್ದರಿಂದ ನಮ್ಮ ಹುಬ್ಬಳ್ಳಿ ಧಾರವಾಡ ಪಾಲಿಕೆ ಕಾರ್ಮಿಕರು. ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಹಗಲಿರುಳು ಹೋರಾಡುತ್ತಿದ್ದಾರೆ. ಕೊರೊನಾ ವೈರಾಣು ಹರಡದಂತೆ ಸಹಕರಿಸಲು ಪ್ರಧಾನಿ ಮನವಿ ಮಾಡಿದರೂ ಏನು ಪ್ರಯೋಜನವಾಗುತಿಲ್ಲ. ಆದರೂ ಸಹ ಇಲ್ಲಿ ಕೇಲವರು ತಮ್ಮ ಜೀವನದ ಮೇಲಿನ ಆಶೆ ಮೀರಿ ಹೋರಾಟ ಮಾಡುತಿದ್ದಾರೆ. ಅವರೇ ನಮ್ಮ ಹುಬ್ಬಳ್ಳಿ ಧಾರವಾಡ ಪಾಲಿಕೆ …
Read More »ಏಪ್ರಿಲ್ 14ರ ನಂತರ ಲಾಕ್‍ಡೌನ್ ಮುಂದುವರಿಗೆ ಸುಳ್ಳು ಸುದ್ದಿ ಎಂದ ಕೇಂದ್ರ : ರಾಜೀವ್ ಗೌಬಾ ಸ್ಪಷ್ಟನೆ
ನವದೆಹಲಿ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ 21 ದಿನಗಳ ಕಾಲ ಅಂದರೆ ಏ.14ರವರೆಗೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ನಡುವೆ ಏಪ್ರಿಲ್ 14ರ ನಂತರ ಲಾಕ್‍ಡೌನ್ ಮುಂದುವರಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ರಾಜೀವ್ ಗೌಬಾ, ಏಪ್ರಿಲ್ 14ರ ನಂತರ ಲಾಕ್‍ಡೌನ್ ಮುಂದುವರಿಸುವ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಹಾಗೆಯೇ …
Read More »ಬ್ರೇಕಿಂಗ್ : ಏ.11ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ರಜೆ ವಿಸ್ತರಣೆ
ಬೆಂಗಳೂರು, ಮಾ.30- ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾಗಿದ್ದ ರಜೆಯನ್ನು ಏಪ್ರಿಲ್ 11 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.ಆದರೆ, ರಜೆ ಅವಧಿಯಲ್ಲಿ ಯಾವುದೇ ಶಿಕ್ಷಕರು ಕೇಂದ್ರ ಸ್ಥಾನ ಬಿಡದಂತೆ ಸೂಚನೆ ನೀಡಿದ್ದಾರೆ. ಕೆಲ ಖಾಸಗಿ ಶಾಲೆಗಳು 2020-21 ನೇ ಸಾಲಿನ ಶುಲ್ಕ ವಸೂಲಾತಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭ ಮಾಡಿ ಪೋಷಕರಿಗೆ ಅನಗತ್ಯ ಸಮಸ್ಯೆ …
Read More »ಮೆಡಿಕಲ್ ಶಾಪ್ ಮತ್ತು ಖಾಸಗಿ ಕ್ಲಿನಿಕ್ ಮುಚ್ಚಿದರೆ ಪರವಾನಿಗೆ ರದ್ದು : ಬಿ.ಸಿ.ಪಾಟೀಲ್
ಹಾವೇರಿ, ಮಾ. 30:ಕೊರೊನಾದಂತಹ ಮಾರಕ ರೋಗ ಹರಡಿರುವ ಪ್ರಸಕ್ತ ಸಂದರ್ಭದಲ್ಲಿ ಮೆಡಿಕಲ್ ಶಾಪ್‌ಗಳಾಗಲೀ ಖಾಸಗಿ ವೈದ್ಯರು ಆಸ್ಪತ್ರೆಗಳನ್ನಾಗಲೀ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಎಲ್ಲಾ ಖಾಸಗಿ ವೈದ್ಯರಿಗೆ ನೊಟೀಸ್ ನೀಡಲಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಡೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಸರ್ಕಾರದ ನೊಟೀಸ್‌ಗೂ ಬೆಲೆಕೊಡದೇ ಯಾರಾದರೂ ವೈದ್ಯರು ಆಸ್ಪತ್ರೆ ತೆರೆಯದೇ ಇದ್ದಲ್ಲಿ ಅಂತಹ ವೈದ್ಯರ ಪರವಾನಿಗೆ ರದ್ದುಪಡಿಸಲಾಗುವುದು.ಸೋಮವಾರ ಜಿಲ್ಲೆಯ ಹಿರೇಕೆರೂರು ನಗರ, ರಾಣೆಬೆನ್ನೂರು, …
Read More »ಯಮಕನಮರಡಿ: ಕ್ಷೇತ್ರ ವ್ಯಾಪ್ತಿಯಲ್ಲಿ ಇಂದೂ ಕೂಡ ಠಿಕಾಣಿ ಹೂಡಿದ್ದಾರೆಶಾಸಕ ಸತೀಶ ಜಾರಕಿಹೊಳಿ
ಯಮಕನಮರಡಿ: ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ಮಾರಣಾಂತಿಕ ಸೊಂಕು ಹರಡದಂತೆ ಭಾರೀ ಮುನ್ನೆಚ್ಚರಿಕೆ ಕ್ರಮ ಮತ್ತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಶಾಸಕ ಸತೀಶ ಜಾರಕಿಹೊಳಿ ಇಂದೂ ಕೂಡ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ. ಇಲ್ಲಿನ ಪಾಶ್ಚಾಪೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದಾದ್ಯಂತ ಇಂದು ಸಂಚರಿಸಿ ಮಾಸ್ಕ ವಿತರಣೆ ಮಾಡಿ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದರು. ಜನರಿಗೆ ದಿನನಿತ್ಯದ ಸರಕುಗಳ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ …
Read More »21 ರ ಪೈಕಿ 18 ವರದಿಗಳು ನೆಗಟಿವ್: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಬೆಳಗಾವಿ : ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಒಟ್ಟು 8 ಮಾದರಿಗಳ ಪೈಕಿ, 5 ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂಟು ಮಾದರಿಗಳ ಪೈಕಿ ಇನ್ನು ಮೂರು ಮಾದರಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿರುವ ಒಟ್ಟಾರೆ ೨೧ ಮಾದರಿಗಳ ಪೈಕಿ ಇದೀಗ ಒಟ್ಟಾರೆ ೧೮ ನೆಗೆಟಿವ್ …
Read More ». ಲಾಕ್ ಡೌನ್ ಬಂದೋಬಸ್ತ್ ಗೆ ಸೇನಾ ಪಡೆ ಆಗಮಿಸಲಿದೆ ಇದೊಂದು ಸುಳ್ಳು ಸುದ್ದಿ:
ಬೆಳಗಾವಿ: ಲಾಕ್ ಡೌನ್ ಬಂದೋಬಸ್ತ್ ಗೆ ಸೇನಾ ಪಡೆ ಆಗಮಿಸಲಿದೆ ಎಂಬ ವದಂತಿ ಹರಿದಾಡುತ್ತಿದ್ದು, ಈ ವಿಚಾರವಾಗಿ ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಸೇನಾಪಡೆ ಆಗಮಿಸಲಿದೆ ಎಂಬುವುದನ್ನು ಅಲ್ಲಗೆಳೆದ ಅವರು, ಇದೊಂದು ಸುಳ್ಳು ಸುದ್ದಿ, ಬೆಳಗಾವಿ ಪೊಲೀಸರೆ ಇಲ್ಲಿನ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಸೇನೆ ಬಂದಿಲ್ಲ, ಬರೋದು ಇಲ್ಲ ಎಂದು ಹೇಳಿದ್ರು. ಬೆಳಗಾವಿ ಜನತೆ ವದಂತಿಗಳಿಗೆ ಕಿವಿಗೊಡಬೇಡಿ. ಜಿಲ್ಲೆಗೆ ಸಮಂಧಿಸಿದ ಕೊರೊನಾ ಶಂಕಿತರ ರಿಪೋರ್ಟ್ ಗಳು …
Read More »ಅಂಗಡಿಕಾರರು ಅನಗತ್ಯವಾಗಿ ಹೆಚ್ಚಿನ ದರ ಪಡೆದರೆ ಲೈಸೆನ್ಸನ್ನು ರದ್ದು : ಪ್ರಕಾಶ ಹೋಳೆಪ್ಪಗೋಳ
ಗೋಕಾಕ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ದಿನಸಿ ಹಾಗೂ ಅಗತ್ಯ ವಸ್ತುಗಳ ಬಗ್ಗೆ ಕೆಲವು ಅಂಗಡಿಗಳಲ್ಲಿ ತಾತ್ಕಾಲಿಕ ಕೊರತೆ ಸೃಷ್ಟಿಸುತ್ತಿರುವ ಬಗ್ಗೆ ಮತ್ತು ಅನಗತ್ಯವಾಗಿ ಹೆಚ್ಚಿನ ದರಗಳನ್ನು ಪಡೆಯುತ್ತಿರುವ ಬಗ್ಗೆ ತಿಳಿದು ಬಂದಿದೆ. ಇಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ತರಹ ಪರಿಸ್ಥಿತಿಯ ಲಾಭ ಪಡೆದು ಗ್ರಾಹಕರನ್ನು ವಂಚಿಸುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಆದ್ದರಿಂದ ತಾಲೂಕಿನ ಎಲ್ಲ ಅಂಗಡಿಕಾರರು ಯಾವುದೇ ರೀತಿ ತಾತ್ಕಾಲಿಕ ಕೊರತೆ ಸೃಷ್ಟಿಸುವುದಾಗಲಿ ಅಥವಾ ಅನಗತ್ಯವಾಗಿ …
Read More »ಕೌಜಲಗಿಯಲ್ಲಿ ಕೊರೋನಾ ವೈರಸ್ ಬಗ್ಗೆ ಅರಿವು ಜಾಥಾ
ಸಮೀಪದ ಗೋಸಬಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಗರನಾಳ, ಬಿಲಕುಂದಿ, ಗೋಸಬಾಳ ಗ್ರಾಮಗಳಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಮುನ್ನೆಚ್ಚರಿಕೆ ಜಾಥಾ ಬಿಲಕುಂದಿ ಗ್ರಾಮದಲ್ಲಿ ಇತ್ತೀಚೆಗೆ ಜರುಗಿತು. ಗೋಸಬಾಳ ಗ್ರಾ.ಪಂ. ಅಧ್ಯಕ್ಷ ಶಿವಲಿಂಗ ಬಳಿಗಾರ ಜಾಥಾದ ನೇತೃತ್ವ ವಹಿಸಿ ಮಾತನಾಡಿ ಕೊರೊನಾ ಮಹಾಮಾರಕವಾಗಿದೆ. ಕೊರೊನಾ ಸೊಂಕು ನಮ್ಮ ನಮ್ಮ ಗ್ರಾಮಗಳಲ್ಲಿ ಹರಡದಂತೆ ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಮಾಸ್ಕ ಧರಿಸಬೇಕೆಂದು ಹೇಳಿದರು. ಊರಿನ ಪ್ರತಿಯೊಂದು ಮನೆ ಮನೆಗೆ ತೆರಳಿ ಗ್ರಾಮಸ್ಥರಿಗೆ ಮಾಸ್ಕ ವಿತರಿಸಲಾಯಿತು. ಜಾಥಾದಲ್ಲಿ …
Read More »