ಪುಣೆ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಿವಾಜಿರಾವ್ ಪಾಟೀಲ್ ನೀಲಂಗೆಕರ್ ಅವರು ಪುಣೆಯಲ್ಲಿ ಬುಧವಾರ ನಿಧನರಾದರು. ಪುಣೆಯ ರೂಬಿ ಹಾಲ್ ಕ್ಲಿನಿಕ್ ನಲ್ಲಿ ಅವರು ಕೊನೆಯುಸಿರೆಳೆದರು. COVID-19 ನಿಂದ ಚೇತರಿಸಿಕೊಂಡ ನಂತರ ಅವರನ್ನು ಇತ್ತೀಚೆಗೆ ಬೇರೆ ವಾರ್ಡ್ಗೆ ಸ್ಥಳಾಂತರಿಸಲಾಯಿತು. ಆದರೆ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಮೂತ್ರಪಿಂಡ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ ಎಂದು ಅವರ ಮೊಮ್ಮಗ ಬಿಜೆಪಿ ಶಾಸಕ ಸಂಭಜಿರಾವ್ ಪಾಟೀಲ್ ನೀಲಂಗೆಕರ್ ಖಚಿತಪಡಿಸಿದ್ದಾರೆ. …
Read More »ಪಿಎಸ್ ಐ ಕೃಷ್ಣವೇಣಿ ಅವರ ಪತಿ ಸಂಜು ಬಂಡಾರಿ(40) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ.
ಬೆಳಗಾವಿ: ಪಿಎಸ್ ಐ ಕೃಷ್ಣವೇಣಿ ಅವರ ಪತಿ ಸಂಜು ಬಂಡಾರಿ(40) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ಸಂಜು ಅವರು ಉತ್ತರ ಸಂಚಾರಿ ಠಾಣೆಯ ಪೊಲೀಸ್ ಕಾನ್ಸಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ರಜೆ ಮೇಲೆ ಖಾನಾಪುರ ತಾಲ್ಲೂಕಿನ ಹಟ್ಟಿಹೊಳ್ಳಿ ತಮ್ಮ ಸ್ವ ಗ್ರಾಮಕ್ಕೆ ತೆರಳಿದ್ದರು. ಬಳಿಕ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಹೃದಯಾಘಾತದಿಂದ ಕೊನೆಯೂಸಿರೆಳೆದಿದ್ದಾರೆ.
Read More »ಎರಡು ದಿನಗಳಿಂದ ಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿವೆ.
ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ನೇತ್ರಾವತಿ, ಅಘನಾಶಿನಿ, ಕಾವೇರಿ, ಕಾಳಿ ಸೇರಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಜೂನ್ ಹಾಗೂ ಜುಲೈ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿತ್ತು. ನಂತರ ಮಳೆ ಆಗಿರಲೇ ಇಲ್ಲ. ಹೀಗಾಗಿ ರಾಜ್ಯದ ಜಲಾಶಯಗಳು ಅಂದುಕೊಂಡ ಮಟ್ಟಿಗೆ ತುಂಬಿಲ್ಲ. ಆದರೆ, ಈಗ …
Read More »ರಾಮ ಬಿಟ್ಟ ಬಾಣಕ್ಕೆ ನಿರ್ಮಾಣವಾದ ಹೊಂಡವಿದೆ ಬೆಳಗಾವಿಯಲ್ಲಿ!
ಚಿಕ್ಕೋಡಿ(ಬೆಳಗಾವಿ): ಜಿಲ್ಲೆಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿ ಪ್ರಾಚೀನ ಕಾಲದಲ್ಲಿ ನಿರ್ಮಿಸಿರುವ ರಾಮಲಿಂಗೇಶ್ವರ ದೇವಸ್ಥಾನ.ಶ್ರೀ ರಾಮ ವನವಾಸದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿಯ ಶಿಪ್ಪೂರ ಗ್ರಾಮಕ್ಕೆ ವಿಶ್ರಾಂತಿ ಪಡೆದು ಹೋಗಿದ್ದರು ಎನ್ನುವದಕ್ಕೆ ಇಲ್ಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನವೇ ಸಾಕ್ಷಿ. ಇಲ್ಲಿ ಸ್ವತಃ ಶ್ರೀ ರಾಮನು ಶಿವಲಿಂಗ ಸ್ಥಾಪಿಸಿ ಪೂಜೆ ಸಲ್ಲಿಸಿದ ಕಾರಣ ಈ ಕ್ಷೇತ್ರಕ್ಕೆ ಪೌರಾಣಿಕ ಕಥೆಯಿದೆ. ಗುಡ್ಡಗಾಡಿನಲ್ಲಿ ಇದ್ದ ಈ ಪ್ರದೇಶದಲ್ಲಿ ಶ್ರೀ ರಾಮನಿಗೆ ಕುಡಿಯಲು …
Read More »ರಾಮಮಂದಿರಕ್ಕಾಗಿ 28 ವರ್ಷಗಳಿಂದ ಉಪವಾಸ ಮಾಡ್ತೀರೋ 82ರ ವೃದ್ಧೆ
ಭೋಪಾಲ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವವರೆಗೂ ಆಹಾರ ಸೇವಿಸುವುದಿಲ್ಲ ಎಂದು ದೀಕ್ಷೆ ಸ್ವೀಕಾರ ಮಾಡಿ, ಕಳೆದ 28 ವರ್ಷಗಳಿಂದ ಮಧ್ಯ ಪ್ರದೇಶದ ಜಬಲ್ಪುರಕ್ಕೆ ನಿವಾಸಿ ಊರ್ಮಿಳಾ ಚರ್ತುವೇದಿ (82) ಉಪವಾಸ ಮಾಡುತ್ತಿದ್ದಾರೆ.1992ರ ಡಿ.6 ರಂದು ವಿವಾದತ್ಮಾಕ ಕಟ್ಟದ ನೆಲಸಮ ಮಾಡಿದ ಸಮಯದಿಂದ ಊರ್ಮಿಳಾ ಅವರು ಉಪವಾಸ ಮಾಡುತ್ತಿದ್ದಾರೆ. ರಾಮನಿಗೆ ಮತ್ತೆ ಮಂದಿರ ನಿರ್ಮಾಣ ಮಾಡುವವರೆಗೂ ಆಹಾರ ಸೇವಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರು. ಕಳೆದ ವರ್ಷ ರಾಮಮಂದಿರ ನಿರ್ಮಾಣಕ್ಕೆ ನ್ಯಾಯಾಲಯ ಅನುಮತಿ …
Read More »ಕೊಪ್ಪಳದ ಮುಸ್ಲಿಂ ಯುವಕಸಂಶುದ್ದೀನ್ 1 ಚೀಲ ಸಿಮೆಂಟ್ನೊಂದಿಗೆ ಅಯೋಧ್ಯೆಗೆ
ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಮುಸ್ಲಿಂ ಯುವಕನಲ್ಲಿ ಸಂಭ್ರಮ ಮನೆ ಮಾಡಿದೆ.ಹೌದು. ಮೂರು ವರ್ಷಗಳ ಹಿಂದೆ ಸಂಶುದ್ದೀನ್ 1 ಚೀಲ ಸಿಮೆಂಟ್ನೊಂದಿಗೆ ಅಯೋಧ್ಯೆಗೆ ತೆರಳಿದ್ದರು. 2017ರ ಏಪ್ರೀಲ್ 27 ರಂದು ಕೊಪ್ಪಳದಿಂದ ರೈಲು ಮೂಲಕ ತೆರಳಿ, 2017ರ ಮೇ 1 ರಂದು ಅಯೋಧ್ಯೆಯಲ್ಲಿದ್ದರು. ಅಲ್ಲದೆ ಅಂದೇ ಟ್ರಸ್ಟ್ ಗೆ ಒಂದು ಚೀಲ ಸಿಮೆಂಟ್ ನೀಡಿದ್ದರು. ಈ ವೇಳೆ ಶ್ರೀರಾಮ ಮಂದಿರ ಶೀಘ್ರವೇ ನಿರ್ಮಾಣವಾಗಲೆಂದು …
Read More »ಯುಪಿಎಸ್ ಸಿಯ 1 ಸಾವಿರ ರ್ಯಾಂಕ್ ಗಳಲ್ಲಿ ರಾಜ್ಯದ ಒಟ್ಟು 37 ಜನರು
ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪ್ರದೀಪ್ ಸಿಂಗ್ ದೇಶಕ್ಕೆ ಮೊದಲ ರ್ಯಾಂಕ್ ಪಡೆಇದ್ದಾರೆ. ಯಶಸ್ವಿನಿ.ಬಿ ರಾಜ್ಯದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಚಿಕ್ಕಮಗಳೂರು ಮೂಲದ ಯಶಸ್ವಿನಿ 71ನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇನ್ನು ಎಚ್. ವಿನೋದ್ ಪಾಟೀಲ್ (132) ಹಾಗೂ ಎಚ್.ಎಸ್.ಕೀರ್ತನಾ(167) ಕ್ರಮವಾಗಿ ರಾಜ್ಯಕ್ಕೆ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ. ಯುಪಿಎಸ್ ಸಿಯ 1 ಸಾವಿರ ರ್ಯಾಂಕ್ …
Read More »ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಇಂದು ಕೂಡ ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕವಿದ ವಾತಾವರಣ ಮುಂದುವರಿದಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ …
Read More »ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹೊಸ ತಿರುವು
ಮುಂಬೈ: 34 ವರ್ಷದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಸುಶಾಂತ್ ಮಾಜಿ ಗೆಳತಿ ನಟಿ ಅಂಕಿತಾ ಲೋಖಂಡೆ, ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ ಎಂದು ಇನ್ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ. ಸುಶಾಂತ್ ನಿಧನದ ಒಂದು ತಿಂಗಳ ಬಳಿಕ ಅಂಕಿತಾ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಸುಶಾಂತ್ ಜೊತೆಗಿನ ಸ್ನೇಹ, ಒಡನಾಟ, ನಿಗೂಢ ಸಾವಿನ ಬಗ್ಗೆ ಹಲವು ವಿಷಯಗಳನ್ನು ಅಂಕಿತಾ ಶೇರ್ …
Read More »ದುರ್ಗಾಪರಮೇಶ್ವರಿಗೆ ನದಿ ನೀರ ಅಭಿಷೇಕ- ಕಮಲಶಿಲೆ ದೇಗುಲದೊಳಕ್ಕೆ ಹರಿದ ಕುಬ್ಜಾ ನದಿ
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ಹರಿದಿದೆ. ಕುಬ್ಜಾ ನದಿ ತೀರದಲ್ಲಿರುವ ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಕುಬ್ಜೆ ದುರ್ಗಾ ದೇವಿಯ ಪಾದ ತೊಳೆಯಲು ಗರ್ಭಗುಡಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಈ ಬಾರಿಯೂ ಸಂಪ್ರದಾಯ ಮುಂದುವರಿದಿದೆ. ಈ ರೀತಿ ಪ್ರವಾಹದ ನೀರು ಉಕ್ಕಿ ಗರ್ಭಗುಡಿಗೆ ಪ್ರವೇಶ ಮಾಡಿದಾಗ ದೇವರಿಗೆ ವಿಶೇಷ ಮಂಗಳಾರತಿ ನಡೆಯುತ್ತದೆ. ಪ್ರತಿವರ್ಷ ಈ ರೀತಿ ನದಿಯ ನೀರು ಗರ್ಭಗುಡಿ …
Read More »
Laxmi News 24×7