Breaking News

ಕಲಬುರಗಿ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನ ಪತ್ನಿಗೆ ಕೊರೊನಾ ಸೋಂಕು

ಕಲಬುರಗಿ: ಕೊರೊನಾ ವೈರಸ್‍ನಿಂದಾಗಿ ಸಾವನ್ನಪ್ಪಿದ್ದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನ ಪತ್ನಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ಅಧಿಕೃತ ಪ್ರಕಟನೆ ಹೊರಡಿಸಿದೆ. ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರಲ್ಲಿ ಕೊರೊನಾ ಲಕ್ಷಣಗಳ ಕಂಡು ಬಂದ ಹಿನ್ನೆಲೆಯಲ್ಲಿ ಐಸೋಲೇಷನ್ ನಲ್ಲಿರಿಸಲಾಗಿತ್ತು. ಮೊದಲ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ 14 ದಿನಗಳ ಕಾಲ ಕಲಬುರಗಿಯ ಇಎಸ್‍ಐ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ವೈದ್ಯನ ಕಫ ಹಾಗೂ ರಕ್ತದ ಮಾದರಿಯನ್ನು ಎರಡನೇ …

Read More »

ಲಾಕ್‍ಡೌನ್ ನಡುವೆ ಕದ್ದು ಮುಚ್ಚಿ ಮದ್ಯದಂಗಡಿ ಓಪನ್:”………….

ತುಮಕೂರು: ಇಡೀ ದೇಶವೇ ಲಾಕ್‍ಡೌನ್ ಆಗಿ 8 ದಿನಗಳು ಕಳೆಯುತ್ತಾ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಾರ್ ಮಾಲೀಕರು ರಾತ್ರಿ ವೇಳೆ ಬಾರ್‌ನ ಮೂಲಕ ಮದ್ಯ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯ ತಿಮ್ಮಣ್ಣ ಗ್ರಾಮದಲ್ಲಿ ಬಾರ್ ಮಾಲೀಕನ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಾರ್ ಮುಂದೆ ಜಯಾಯಿಸಿದ ಗ್ರಾಮಸ್ಥರು ಬಾರ್ ಬಾಗಿಲಿಗೆ ಸೀಲ್ ಹಾಕಿದನ್ನ ವ್ಯಂಗ್ಯ ಮಾಡಿದ್ದಾರೆ. ರಾತ್ರಿ ವೇಳೆ …

Read More »

ಕೊರೊನಾದಿಂದ ಅಲ್ಲ ಊಟ ತಿಂಡಿ ಇಲ್ಲದೆ ಸಾಯೋ ಪರಿಸ್ಥಿತಿ ಬರುತ್ತೆ:ಹೆಚ್.ಡಿ.ರೇವಣ್ಣ

ಹಾಸನ: ಕೊರೊನಾದಿಂದ ಅಲ್ಲ ಊಟ ತಿಂಡಿ ಇಲ್ಲದೆ ಸಾಯೋ ಪರಿಸ್ಥಿತಿ ಬರುತ್ತೆ. ಸರ್ಕಾರದಲ್ಲಿ ಹಣ ಇಲ್ಲ ಎನ್ನುವ ಸಿಎಂ ಯಡಿಯೂರಪ್ಪ ಒಬ್ಬನೇ ಒಬ್ಬ ಗುತ್ತಿಗೆದಾರನಿಗೆ 1,200 ಕೋಟಿ ಹಣ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿನಿತ್ಯ 69 ಲಕ್ಷ ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಅದರಲ್ಲಿ 40 ಲಕ್ಷ ಲೀಟರ್ ಮಾತ್ರ ಮಾರಾಟ ಮಾಡಲಾಗುತ್ತಿದೆ. ಉಳಿದ 29 ಲಕ್ಷ …

Read More »

“ಇನ್ಸ್‌ಪೆಕ್ಟರ್‌ ಕಾಲಿಗೆ ಬಿದ್ದು ನಮಸ್ಕರಿಸಿದ ಶಾಸಕ”

ವಿಶಾಖಪಟ್ಟಣಂ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಪೊಲೀಸರು ಜನದಡ್ಡನೆ, ವಾಹನಗಳ ಸಂಚಾರ ತಡೆಯುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ ಸೇವೆಗೆ ಆಂಧ್ರಪ್ರದೇಶದ ಶಾಸಕರೊಬ್ಬರು ಫುಲ್ ಫಿದಾ ಆಗಿ ಇನ್ಸ್‌ಪೆಕ್ಟರ್ ಒಬ್ಬರ ಕಾಲಿಗೆ ಮುಟ್ಟಿ ನಮಸ್ಕರಿಸಿದ್ದಾರೆ. ಆಂಧ್ರ ಪ್ರದೇಶದ ಅರಕು ಕ್ಷೇತ್ರದ ಶಾಸಕ ಚೆಟ್ಟಿ ಫಲ್ಗುನಾ ವಿಶಾಖಪಟ್ಟಣಂನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಶಾಸಕರ …

Read More »

ದೆಹಲಿಯ ಜಮಾತ್ ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದ ಯಾರೂ ಪಾಲ್ಗೊಂಡಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್

ಉಡುಪಿ: ಕೊರೊನಾ ಹಾಟ್ ಸ್ಪಾಟ್ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಉಡುಪಿ ಜಿಲ್ಲೆಯಿಂದ 16 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯಿದೆ. ಉಡುಪಿ, ಕುಂದಾಪುರ- ಬೈಂದೂರು, ಕಾರ್ಕಳ, ಪಡುಬಿದ್ರೆ ವ್ಯಾಪ್ತಿಯ ಯುವಕರು ಮತ್ತು ಮಧ್ಯವಯಸ್ಕರು ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆಂಬ ಮಾಹಿತಿ ರಾಜ್ಯದಿಂದ ಜಿಲ್ಲೆಗೆ ರವಾನೆಯಾಗಿದೆ. ಮಂಗಳವಾರ ರಾತ್ರಿ ಈ ಮಾಹಿತಿ ಬಂದಿದ್ದು, ಆಯಾ ಪೊಲೀಸ್ ಠಾಣೆಯ ಮೂಲಕ ಶಿಬಿರಾರ್ಥಿಗಳನ್ನು ಹಾಗೂ ಶಿಬಿರಾರ್ಥಿಗಳ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕೆಲಸ ನಡೆದಿದೆ. 16 …

Read More »

ಬೆಳಗಾವಿ:ಆಹಾರ ಧಾನ್ಯ ವಿತರಿಸಿದ ಸತೀಶ ಜಾರಕಿಹೊಳಿ  ಅಭಿಮಾನಿ ಬಳಗ,

ಬೆಳಗಾವಿ:  ಸತೀಶ ಜಾರಕಿಹೊಳಿ  ಅಭಿಮಾನಿ ಬಳಗ, ವಾಲ್ಮೀಕಿ ಯುವ ವೇದಿಕೆ ಕಾರ್ಯಕರ್ತರು  ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕೀಡಾದ ಬಡ ಜನರಿಗೆ, ಕೂಲಿ  ಕಾರ್ಮಿಕರಿಗೆ, ಆಹಾರ ಧಾನ್ಯ ಸೇರಿ ಅಗತ್ಯ ವಸ್ತುಗಳನ್ನು  ವಿತರಿಸಿದರು. ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ  ವಿಜಯ ತಳವಾರ ನೇತೃತ್ವದಲ್ಲಿ ಕಾರ್ಯಕರ್ತರು,  ಮಾಹಾನಗರ ಪಾಲಿಕೆ ಮೂಲಕ ಬಡವರಿಗೆ ಮತ್ತು ಅಗತ್ಯ ಸೇವೆ ಸಲ್ಲಿಸುತ್ತಿರುವ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ  ಊಟ, ಹಣ್ಣು ಹಂಪಲ, ಹ್ಯಾಂಡ್ ವಾಷ್, ವಾಟರ್ ಬಾಟಲ್ …

Read More »

ಮೂಡಲಗಿ:ದೇಹದ ಮೇಲೆ ಕೊರೊನಾ ಚಿತ್ರದ ಜತೆಗೆ ಜಾಗೃತಿ ಸಂದೇಶ

ಬೆಳಗಾವಿ: ಜಿಲ್ಲೆಯ ಮೂಡಲಗಿ ಪಟ್ಟಣದ ಯುವಕನೊಬ್ಬ ದೇಹದ ಮೇಲೆ ಕೊರೊನಾ ಚಿತ್ರದ ಜತೆಗೆ ಜಾಗೃತಿ ಸಂದೇಶ ಸಾರುವ ಸಾಲುಗಳನ್ನು ಬರೆಸಿಕೊಂಡು ಜನರಿಗೆ ಕೊರೊನಾ ಕುರಿತು ತಿಳುವಳಿಕೆ ಮೂಡಿಸುತ್ತಿದ್ದಾನೆ. ಜಗತ್ತಿನಾದ್ಯಂತ ಕೊರೊನಾ ಸೋಂಕಿನಿಂದ ಜನರು ತತ್ತರಿಸಿದ್ದಾರೆ. ಇದರಿಂದ ಭಾರತ ಸರ್ಕಾರವೂ ಮುಂಜಾಗೃತ ಕ್ರಮವಾಗಿ ಸೋಂಕು ತಡೆಗಟ್ಟಲು ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ ಗಂಭೀರವಾಗಿ ತೆಗೆದುಕೊಳ್ಳದ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಸರ್ಕಾರದ ನಿಮಯಗಳನ್ನು ಪಾಲನೆ ಮಾಡುತ್ತಿಲ್ಲ. ಆದ ಕಾರಣ ಜಾಗೃತಿ …

Read More »

ಜಮಾತ್‍ಗೆ ಹೋಗಿಬಂದಿದ್ದ ದಂಪತಿ ಕ್ವಾರಂಟೈನ್ – 17 ಮಂದಿಗೆ ಕೊರೊನಾ ಟೆಸ್ಟ್

ಚಿಕ್ಕಬಳ್ಳಾಪುರ: ಜಿಲ್ಲೆಯಿಂದ ದೆಹಲಿಯ ಜಮಾತ್‍ಗೆ ಹೋಗಿ ಬಂದ 17 ಮಂದಿ ಪತ್ತೆಯಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಮಾರ್ಚ್ 05ರಿಂದ ಮಾರ್ಚ್ 10ರ ಒಳಗಾಗಿ ಆಗ್ರಾ, ಅಜ್ಮೀರ್ ಹಾಗೂ ದೆಹಲಿ ಪ್ರವಾಸಕ್ಕೆ ತೆರಳಿ ವಾಪಸ್ಸಾಗಿದ್ದ ದಂಪತಿಯನ್ನ ಪತ್ತೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಂಪತಿಯನ್ನ ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿದೆ. ಇದಲ್ಲದೇ ಫೆಬ್ರವರಿ 08ರಿಂದ ಫೆಬ್ರವರಿ 15ರ ಮಧ್ಯೆ ಜಮಾತ್‍ಗೆ ಹೋಗಿಬಂದಿದ್ದ 15 ಮಂದಿಯನ್ನ ಪತ್ತೆ ಮಾಡಲಾಗಿದೆ.ಈಗಾಗಲೇ ಅವರು …

Read More »

ಬೀದರ್:ಲಾಕ್‍ಡೌನ್ ಉಲ್ಲಂಘನೆ – 4 ಪ್ರಕರಣ ದಾಖಲು, 213 ವಾಹನಗಳು ಸೀಜ್

ಬೀದರ್: ಭಾರತದಲ್ಲಿ ಕೊರೊನಾ ವೈರಸ್ ಸೋಂಕು ತಡೆಯಲು 21 ದಿನಗಳ ಕಾಲ ಲಾಕ್‍ಡೌನ್ ಆಗಿದೆ. ಇದೀಗ ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದು ಓಡಾಡುತ್ತಿದ್ದವರ ಸುಮಾರು 213 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಹೋಮ್‍ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಆದೇಶ ಹೊರಡಿಸಲಾಗಿದೆ. ಆದರೆ ಕಲಂ 144 ಸಿಆರ್‌ಪಿಸಿ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯಲ್ಲಿ 4 ಪ್ರಕರಣಗಳು ದಾಖಲಾಗಿವೆ. ಕೊರೊನಾ ವೈರಸ್ ಹರಡದಂತೆ …

Read More »

ಭಾರತದಲ್ಲಿ ಕೊರೊನಾ ಯಾವ ಪ್ರಮಾಣದಲ್ಲಿ ಹರಡುತ್ತಿದೆ?- ಸಂಪೂರ್ಣ ವಿವರ

ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಈ ಏರಿಕೆ ಪ್ರಮಾಣ ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದಾಗ ತುಂಬಾ ಕಡಿಮೆ. ಇನ್‍ಸ್ಟಿಟ್ಯೂಟ್ ಆಫ್ ಮೆಥೆಮಟಿಕಲ್ ಸೈನ್ಸ್ ನ ಚೆನ್ನೈ ವಿಜ್ಞಾನಿ ಸಿತಾಭ್ರಾ ಸಿನ್ಹಾ ಪ್ರಕಾರ, ಮಾರ್ಚ್ 19ರ ವೇಳೆ ಭಾರತದಲ್ಲಿ ಕೊರೊನಾ ಪಾಸಿಟಿವ್ ರೋಗಿಯಿಂದ ಸೋಂಕು ಸರಾಸರಿ 1.7 ಜನರಿಗೆ ಹರಡುತ್ತಿತ್ತು. ಮಾರ್ಚ್ 26ಕ್ಕೆ ಈ ಸರಾಸರಿ 1.81ಕ್ಕೆ ಏರಿಕೆ ಕಂಡಿತ್ತು. ಈ ಸರಾಸರಿ …

Read More »