ಬ್ಯಾಂಕಾಕ್, ಫೆ.3- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನ ವೈರಸ್‍ಗೆ ಥೈಲ್ಯಾಂಡ್‍ನಲ್ಲಿ ಔಷಧಿ ಕಂಡು ಹಿಡಿಯಲಾಗಿದೆ.ಬ್ಯಾಂಕಾಕ್‍ನ ವೈದ್ಯರು ಮಾರಕ ಸಾಂಕ್ರಾಮಿಕ ರೋಗಗಳು ಹಾಗೂ ಎಚ್‍ಐವಿಗೆ ನೀಡಲಾಗುವ ಔಷಧಿಗಳನ್ನು ಮಿಶ್ರಣ ಮಾಡಿ ಕೊರೋನ ಸೋಂಕು ಪೀಡಿತ ರೋಗಿಗೆ ಚಿಕಿತ್ಸೆ ನೀಡಿದ್ದು, 48 ಗಂಟೆಯಲ್ಲಿ ವೈರಾಸ್ ನಿರ್ನಾಮವಾಗಿ ರೋಗಿ ಗುಣಮುಖರಾಗಿದ್ದಾರೆ ಎಂದು ಥೈಲ್ಯಾಂಡ್ ಸರ್ಕಾರ ಪ್ರಕಟಿಸಿದೆ. ಚೀನಾದ 71 ವರ್ಷದ ಮಹಿಳೆಯೊಬ್ಬರು ಥೈಲ್ಯಾಂಡ್‍ನಲ್ಲಿ ಪ್ರವಾಸ ಮಾಡುವಾಗ ಸೋಂಕಿನಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ …
Read More »ಧರ್ಮಸ್ಥಳ ಕಾರ್ ಮ್ಯೂಸಿಯಂಗೆ ಜರ್ಮನ್ ನಿರ್ಮಿತ ಹಳೆಯ ಕಾರು ಕೊಡುಗೆ
ಧರ್ಮಸ್ಥಳ ; ಅಸ್ಟ್ರೀಯಾದಲ್ಲಿ ಸುಮಾರು 50 ವರ್ಷಗಳಿಂದ ಅಶ್ರಮ ನಿರ್ಮಿಸಿ ಯೋಗ ಹಾಗೂ ಧರ್ಮಪ್ರಚಾರ ಮಾಡುತ್ತಿರುವ ವಿಶ್ವಗುರು ಮಹಾಮಂಡಲೇಶ್ವರ್ ಪರಮಹಂಸ ಮಹೇಶ್ವರಾನಂದ ಸ್ವಾಮೀಜಿಗಳು ಕಾರೊಂದನ್ನು ಧರ್ಮಸ್ಥಳ ಕಾರ್ ಮ್ಯೂಸಿಯಂಗೆ ಕೊಡುಗೆಯಾಗಿ ನೀಡಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಯೋಗ ಮಹಾಸಮ್ಮೇಳನಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾರ್ ಮ್ಯೂಸಿಯಂಗೆ ಭೇಟಿ ನೀಡಿ ತಮಗೆ ಆಸ್ಟ್ರೀಯಾದ ಕೌನ್ಸಿಲರ್ ಕೊಡುಗೆಯಾಗಿ ನೀಡಿದ್ದ 1972 ಮಾಡಲïನ ಮರ್ಸಿಡೀಸ್ ಬೆನ್ಜ್ ಕಂಪನಿಯ 2-80 ಎಂಬ ಸುಸ್ಥಿತಿಯಲ್ಲಿರುವ …
Read More »ಸೋನಿಯಾ ಗಾಂಧಿ ಅವರು ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನಿಯಾ ಗಾಂಧಿ ಅವರು ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಭಾನುವಾರ ಸಂಜೆ 7 ಗಂಟೆಗೆ ಅವರನ್ನು ಸೆಂಟ್ರಲ್ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋನಿಯಾ ಅವರ ಜೊತೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಕೂಡ ಆಸ್ಪತ್ರೆಯಲ್ಲಿ ಇದ್ದಾರೆ. ಸೋನಿಯಾ ಅವರಿಗೆ ರೂಟಿನ್ ಚೆಕಪ್ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ …
Read More »ಬಿಗ್ ಬಾಸ್ ಮುಕ್ತಾಯ.. ನಿರೀಕ್ಷೆಗಳೆಲ್ಲಾ ಸುಳ್ಳಾಯ್ತು.. ಗೆದ್ದವರು ಇವರೇ ನೋಡಿ..
ಬಿಗ್ ಬಾಸ್ ಮುಕ್ತಾಯ.. ನಿರೀಕ್ಷೆಗಳೆಲ್ಲಾ ಸುಳ್ಳಾಯ್ತು.. ಗೆದ್ದವರು ಇವರೇ ನೋಡಿ.. ಅಂತೂ ಬಿಗ್ ಬಾಸ್ ಸೀಸನ್ 7 ಮುಕ್ತಾಯಗೊಂಡಿದೆ.. 18 ಜನ ಸದಸ್ಯರ ಪಟ್ಟಿಯಲ್ಲಿ ಕೊನೆಯಲ್ಲಿ ಉಳಿದು ಗೆಲುವಿನ ಪಟ್ಟ ಒಬ್ಬರಿಗೆ ದಕ್ಕಾಗಿದೆ.. ಹೌದು ಬಿಗ್ ಬಾಸ್ ಸೀಸನ್ 7 ರ ಗ್ರಾಂಡ್ ಫಿನಾಲೆಯ ಸಂಪೂರ್ಣ ಶೂಟಿಂಗ್ ಮುಕ್ತಾಯಗೊಂಡಿದ್ದು ಬಿಗ್ ಬಾಸ್ ವಿನ್ನರ್ ಯಾರೆಂಬುದನ್ನು ಪ್ರಕಟಿಸಲಾಗಿದೆ. ಬಿಗ್ ಬಾಸ್ ನ ಈ ಸೀಸನ್ ಹಲವಾರು ವಿಶೇಷತೆಗಳಿಂದ ಕೂಡಿತ್ತು.. ಈ ಬಾರಿ …
Read More »ಗೆದ್ದವರಿಗೆ ಮಂತ್ರಿ ಮಾಡದೇ ಇದ್ದರೆ ರಾಜ್ಯಕ್ಕೆ ತಪ್ಪು ಸಂದೇಶ: ಶ್ರೀಮಂತ್ ಪಾಟೀಲ್
ಬೆಂಗಳೂರು : ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. 10 ಜನರಿಗೆ ಮಾತ್ರ ಮಂತ್ರಿ ಸ್ಥಾನ ಅನ್ನೋ ಸಿಎಂ ಮಾತಿಗೆ ಮಿತ್ರ ಮಂಡಳಿ ಶಾಸಕರು ಪರೋಕ್ಷವಾಗಿ ವಿರೋಧ ಮಾಡ್ತಿದ್ದು, ವಚನ ಭ್ರಷ್ಟತೆಯ ಅಸ್ತ್ರ ಹೂಡುತ್ತಿದ್ದಾರೆ. ಮತ್ತೊಬ್ಬ ಅರ್ಹ ಶಾಸಕ ಶ್ರೀಮಂತ್ ಪಾಟೀಲ್ ಗೆದ್ದವರಿಗೆ ಮಂತ್ರಿ ಸ್ಥಾನ ಕೊಡದೇ ಇದ್ದರೆ ವಚನ ಭ್ರಷ್ಟತೆ ಆಗುತ್ತೆ ಅಂತ ಸಿಎಂಗೆ ಎಚ್ಚರಿಸಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಇನ್ನು …
Read More »ನಿರ್ಭಯಾ ಪ್ರಕರಣದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ನವದೆಹಲಿ: ನಿರ್ಭಯಾ ಪ್ರಕರಣದ ದೋಷಿಗಳಿಗೆ ಶೀಘ್ರವೇ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಬಳಿಕ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ದೆಹಲಿ ಪೊಲೀಸರು ಮತ್ತು ಕೇಂದ್ರ ಗೃಹ ಸಚಿವಾಲಯ ಪಟಿಯಾಲ ಹೌಸ್ ಕೋರ್ಟ್ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದವು. ಪಟಿಯಾಲ ಕೋರ್ಟ್ ನಿರ್ಭಯಾ ಪ್ರಕರಣದ ದೋಷಿಗಳ ಡೆತ್ ವಾರೆಂಟ್ ಗೆ ತಡೆಯನ್ನು ನೀಡಿದೆ. ಈ ವೇಳೆ ವಾದ …
Read More »ನನ್ನ ಬಗ್ಗೆ ಆಗಿರೋ ಅನಾವಶ್ಯಕ ಚರ್ಚೆಗೆ ತೆರೆ ಬಿದ್ದಿದೆ : ಲಕ್ಷ್ಮಣ ಸವದಿ
ಹುಬ್ಬಳ್ಳಿ, ಫೆ.2- ರಾಷ್ಟ್ರೀಯ ನಾಯಕರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನನ್ನ ಹೆಸರು ಅಂತಿಮಗೊಳಿಸಿದ್ದು, ನನ್ನ ಬಗ್ಗೆ ಆಗಿರೋ ಅನಾವಶ್ಯಕ ಚರ್ಚೆಗೆ ತೆರೆ ಬಿದ್ದಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಪಕ್ಷದ ಅಧ್ಯಕ್ಷರು ಸೇರಿದಂತೆ ಮುಖ್ಯಮಂತ್ರಿಗಳೊಂದಿಗೆ ಭೇಟಿ ನೀಡಿ ಚರ್ಚೆ ಮಾಡಿದ್ದು, ನಾಮಪತ್ರ ಸಲ್ಲಿಕೆ ಬಗ್ಗೆಯೂ ಚರ್ಚಿಸಲಾಗಿದೆ ಎಂದರು. ಎಚ್.ವಿಶ್ವನಾಥ ಅವರನ್ನು ಮಂತ್ರಿ ಮಾಡುವ ಚಿಂತನೆ ಇದ್ದು, ಈ …
Read More »ನಾನು ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಪಕ್ಷ ಸಂಘಟನೆ ಮಾಡಿಕೊಂಡು ಇರಲು ಸಿದ್ಧ
ಬೆಂಗಳೂರು, ಫೆ.2- ನನಗೆ ಸಚಿವ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಆದರೆ ಹಿರಿಯವರಾದ ವಿಶ್ವನಾಥ್ ಅವರಿಗೆ ಮಂತ್ರಿಸ್ಥಾನ ಕೊಡಬೇಕೆಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಈಗಲೂ ಇದೆ. ಆದರೆ, ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಮಾಹಿತಿ ಕೇಳಿ ನೋವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದರು.ನಾವು ಎಲ್ಲವನ್ನು ತ್ಯಾಗ ಮಾಡಿ ಬಂದಿದ್ದೇವೆ. ಮುಖ್ಯಮಂತ್ರಿ ಬಳಿ ಇನ್ನೂ …
Read More »ಅಪಾರ ಪ್ರಮಾಣದ ಗೋವಾ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕಣಕುಂಬಿ ಬಳಿಯ ಕರ್ನಾಟಕ -ಗೋವಾ ಗಡಿಯ ಅಬಕಾರಿ ತನಿಖಾ ಠಾಣೆಯ ಸಿಬ್ಬಂದಿ ಶನಿವಾರ ಗೋವಾದಿಂದ ಗದಗ ನಗರಕ್ಕೆ ಅನಧಿಕೃತವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ತಪಾಸಣೆಯ ವೇಳೆ ಗೋವಾ ರಾಜ್ಯದ ನೊಂದಣಿ ಹೊಂದಿದ ಸ್ಕಾರ್ಪಿಯೋ ವಾಹನದಲ್ಲಿ ೧೪೬.೮೮ ಲೀ ಗೋವಾ ಮದ್ಯವನ್ನು ವಾಹನ ಸಮೇತ ವಶಕ್ಕೆ ಪಡೆದಿರುವ ಅಬಕಾರಿ ಸಿಬ್ಬಂದಿ ಈ ಮದ್ಯವನ್ನು ಸಾಗಿಸುತ್ತಿದ್ದ ಆರೋಪದಡಿ ಗದಗ ನಿವಾಸಿ ಮಾರುತಿ ಲಮಾಣಿ ಎಂಬ ವ್ಯಕ್ತಿಯನ್ನು …
Read More »ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ
ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಮಿಷನ್ ನಗರಗಳು ಪ್ರಮುಖ ಮೂಲ ಸೌಕರ್ಯಗಳನ್ನು ಒದಗಿಸುವ ಹಾಗೂ ನಾಗರಿಕರಿಗೆ ಯೋಗ್ಯವಾದ ಜೀವನ ಮಟ್ಟವನ್ನು ನೀಡುವ ಸ್ವಚ್ಚ ಮತ್ತು ಸುಸ್ಥಿರ ಪರಿಸರ ಹಾಗೂ ಉತ್ತಮ ಪರಿಹಾರಗಳಿಗೆ ಅನ್ವಯಿಸುವ ನಗರಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ಇನ್‌ಪುಟ್ ಆಧಾರಿತ ವಿಧಾನದಿಂದ ನಗರ ಆಡಳಿತಗಳು, ಫಲಿತಾಂಶ – ಆಧಾರಿತ ಯೋಜನೆಯತ್ತ …
Read More »