ಬೆಂಗಳೂರು: ಸಿನಿಕಾನ್ ಸಿಟಿಯಲ್ಲಿ ಸುರಿದ ಧಾರಾಕಾರ ಮಳೆ ಭಾರೀ ಅವಾಂತರ ಸೃಷ್ಟಿಸಿದ್ದು, ವೃಷಭಾವತಿ ನದಿಯ ರೌದ್ರ ನರ್ತನಕ್ಕೆ ಕೆಂಗೇರಿ ಬಳಿ ತಡೆಗೋಡೆ ಸೇರಿ ಅರ್ಧ ರಸ್ತೆ ಕೊಚ್ಚಿ ಹೋಗಿದೆ. ಭಾರೀ ಪ್ರಮಾಣದ ನೀರು ರಸ್ತೆಗೆ ನುಗ್ಗಿದ್ದು, ಅರ್ಧ ಬಸ್ ಮುಳುಗಿದರೆ, ಕಾರುಗಳು ತೇಲುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಂಗೇರಿಯಲ್ಲಿ ಬರೋಬ್ಬರಿ 65.5 ಮಿಲಿ ಮೀಟರ್ ಮಳೆ ಬಿದ್ದಿದ್ದು, ಹೀಗಾಗಿ ವೃಷಭಾವತಿ ನದಿಯ ಒಳ ಹರಿವು ಹೆಚ್ಚಾಗಿದೆ. ಇದರಿಂದಾಗಿ ಮೈಸೂರು ರಸ್ತೆ ತಡೆಗೋಡೆ …
Read More »ಮಹಾಮಾರಿ ಕೊರೊನಾ ಗಲ್ಲಿಗಲ್ಲಿಗೂ ಅಟಕಾಯಿಸಿಕೊಳ್ತಿದೆ. ಬೆಂಗಳೂರಿನಲ್ಲಿ ಕಾರ್ಪೊರೇಟರ್ ದೇಹಕ್ಕೂ ವೈರಸ್
ಬೆಂಗಳೂರು: ಮಹಾಮಾರಿ ಕೊರೊನಾ ಗಲ್ಲಿಗಲ್ಲಿಗೂ ಅಟಕಾಯಿಸಿಕೊಳ್ತಿದೆ. ಬೆಂಗಳೂರಿನಲ್ಲಿ ಕಾರ್ಪೊರೇಟರ್ ದೇಹಕ್ಕೂ ವೈರಸ್ ಹೊಕ್ಕಿದೆ. ಸಿದ್ದಾಪುರ ವಾರ್ಡ್ ಕಾರ್ಪೊರೇಟರ್ ಮುಜಾಯಿದ್ ಪಾಷಾಗೆ ಸೋಂಕು ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿದ್ದ 39 ವರ್ಷದ ಕಾರ್ಪೊರೇಟರ್ ಮುಜಾಯಿದ್ ಪಾಷಾ ಕಂಟೈನ್ಮೆಂಟ್ ಝೋನ್‍ನಲ್ಲಿ ಓಡಾಡಿದ್ದರು. 4 ದಿನಗಳಿಂದ ಪುಲಕೇಶಿನಗರದ ತಂಗಿ ಮನೆಯಲ್ಲಿ ವಾಸವಿದ್ದರು. ಕಳೆದ ಒಂದು ವಾರದಿಂದ ಜ್ವರ-ಶೀತದಿಂದ ಬಳಲುತ್ತಿದ್ದ ಕಾರ್ಪೊರೇಟರ್‍ಗೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ದೃಢಪಟ್ಟಿದೆ. ಸದ್ಯಕ್ಕೆ ಕಾರ್ಪೊರೇಟರ್ ಮನೆಯವರನ್ನ ಮತ್ತು ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ …
Read More »ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭಮೋಡ ಕವಿದ ವಾತಾವರಣ………
ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ …
Read More »2ನೇ ವರ್ಷವೂ ಸ್ವಿಸ್ ಬ್ಯಾಂಕಿನಲ್ಲಿ ಜಮಾ ಆಗ್ತಿದ್ದ ಭಾರತೀಯ ಹಣ ಇಳಿಕೆ……..
ನವದೆಹಲಿ: ಸ್ವಿಸ್ ಬ್ಯಾಂಕಿನಲ್ಲಿ ಜಮೆ ಭಾರತದ ಹಣದ ಮೊತ್ತವು ಎರಡನೇ ವರ್ಷವೂ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಸ್ವಿಟ್ಜರ್ ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಭಾರತೀಯರು ಜಮೆ ಮಾಡುತ್ತಿದ್ದ ಮೊತ್ತ 2019ರಲ್ಲಿ ಕಡಿಮೆಯಾಗಿದೆ ಎಂದು ಹೇಳಿದೆ. 2019ರಲ್ಲಿ ಭಾರತೀಯರು 6625 ಕೋಟಿ ರೂ (899 ಮಿಲಿಯನ್ ಸ್ವಿಸ್ ಫ್ರ್ಯಾಂಕ್) ಜಮಾ ಮಾಡಿದ್ದಾರೆ. ಇದು 2018ರಲ್ಲಿ ಜಮೆಯಾದ ಶೇ.8ರಷ್ಟು ಕಡಿಮೆ. ಸತತ ಎರಡು ವರ್ಷಗಳಿಂದ ಭಾರತೀಯರು ಜಮೆ ಮಾಡುತ್ತಿದ್ದ ಮೊತ್ತದಲ್ಲಿ …
Read More »ಕೊರೊನಾ ರೂಲ್ಸ್ ಬ್ರೇಕ್, ಐವರ ವಿರುದ್ಧ ಕೇಸ್………….
ಚಿಕ್ಕಮಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ ಜನ ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡದೆ, ಸಂಬಂಧವೇ ಇಲ್ಲ ಎಂಬಂತೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಹೀಗೆ ಮನಸೋ ಇಚ್ಛೆ ಓಡಾಡುತ್ತಿದ್ದ ಐವರ ವಿರುದ್ಧ ಜಿಲ್ಲೆಯ ಎರಡು ಪ್ರತ್ಯೇಕ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಹೊರ ಜಿಲ್ಲೆಯಿಂದ ಬಂದವರಿಗೆ ಜಿಲ್ಲಾಡಳಿತ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಮೀರಿ ನಾಲ್ವರು …
Read More »ರಾಜ್ಯದ ಹಲವೆಡೆ ಸ್ವಯಂ ಲಾಕ್‍ಡೌನ್ ಘೋಷಣೆ……
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವ್ಯಾಪಕವಾಗಿ ಬೇರೂರಿದೆ. ಅದರಲ್ಲೂ ಅನ್‍ಲಾಕ್ ಬಳಿಕ ಸೋಂಕು ದಿನದಿನಕ್ಕೆ ಹೆಚ್ಚಳವಾಗುತ್ತಿದೆ. ಅನ್‍ಲಾಕ್ ಮಾಡಿದ ಸರ್ಕಾರ ಸೋಂಕಿಗೆ ಕಡಿವಾಣ ಹಾಕುವಲ್ಲಿ ವಿಫಲವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಕೊರೊನಾದಿಂದ ರಕ್ಷಣೆ ಮಾಡಿಕೊಳ್ಳಲು ರಾಜ್ಯದ ಹಲವೆಡೆ ಸ್ವಯಂ ಲಾಕ್‍ಡೌನ್ ಘೋಷಣೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರಿನಲ್ಲಿ 3 ದಿನ ಸೆಲ್ಫ್ ಲಾಕ್‍ಡೌನ್ ಮೈಸೂರು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಜಿಲ್ಲಾಡಳಿತ ತೀರ್ಮಾನಿಸಿದೆ. ಇಂದು ಮೊದಲ ಆಷಾಡ …
Read More »10ನೇ ತರಗತಿ ಪರಿಕ್ಷೆಗೆ ಬರುವ ಸುಮಾರು 450 ವಿಧ್ಯಾರ್ಥಿ ಗಳಿಗೆ ಸ್ಯಾನಿಟೆಜರ ಮತ್ತು ನೀರು ಕೊಡುವ ಮುಕಾಂತರ ಚಾಲನೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಗೋಕಾಕ ತಾಲೂಕಾ ಅಧ್ಯಕ್ಷರು ಸಂತೋಷ ಕಂಡ್ರಿ ಇವರ ನೇತೃತ್ವದಲ್ಲಿ 25/06/2020 ರಂದು10ನೇ ತರಗತಿ ಪರಿಕ್ಷೆಗೆ ಬರುವ ಸುಮಾರು 450 ವಿಧ್ಯಾರ್ಥಿ ಗಳಿಗೆ ಸ್ಯಾನಿಟೆಜರ ಮತ್ತು ನೀರು ಕೊಡುವ ಮುಕಾಂತರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅಧಿಕ್ಷಕರಾದ ಶ್ರೀ ಬಿ.ಬಿ.ಕಾರಗಿ, ವೈದ್ಯಾಧಿಕಾರಿ ಶ್ರೀ ಸಿ.ಕೆ.ಪಾಟೀಲ ಹಾಗೂ ಶಿಕ್ಷಕಿಯರು.ಗೈಡ್ಸ್ ಪದಾಧಿಕಾರಿ ಶ್ರೀ ಮತಿ ಎಸ್.ಎಸ್.ಪೂಜೇರಿ ಈ ಸಂದರ್ಭ ಕರಿತು ಮಾತ ನಾಡಿದರು. ಆಶಾಕಾರ್ಯಕರ್ತೆಯರು,ಆರೋಗ್ಯ ಇಲಾಖೆಯವರು …
Read More »ಆಶಾ ಕಾರ್ಯಕರ್ತೆಯಿಂದ ಸ್ಟಾಫ್ ನರ್ಸ್ ಗೂ ತಗುಲಿದ ಕೊರೊನಾ
ಹಾವೇರಿ: ಜಿಲ್ಲೆಯಲ್ಲಿ ಇವತ್ತು 10 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 54ಕ್ಕೇರಿಕೆಯಾಗಿದೆ. ಸವಣೂರು ಪಟ್ಟಣದಲ್ಲಿ ಸ್ಟಾಫ್ ನರ್ಸ್ ಸೇರಿದಂತೆ ಏಳು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸವಣೂರು ಪಟ್ಟಣದ 23 ವರ್ಷದ ಗರ್ಭಿಣಿಗೆ ರೋಗಿ 8699 ಪ್ರಾಥಮಿಕ ಸಂಪರ್ಕದಿಂದ ಏಳು ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಇನ್ನು ಸವಣೂರು ತಾಲೂಕಿನ ಕಾರಡಗಿ ಗ್ರಾಮದ 38 ವರ್ಷದ ಆಶಾ ಕಾರ್ಯಕರ್ತೆ (ರೋಗಿ-8700)ಯ ಸಂಪರ್ಕದಿಂದ ಸ್ಟಾಫ್ ನರ್ಸ್ ಗೆ ಕೊರೊನಾ ವಕ್ಕರಿಸಿದೆ. …
Read More »ಹೋಟೆಲ್, ಹಜ್ ಭವನದಲ್ಲಿ ಚಿಕಿತ್ಸೆ – ಸಿಎಂ ಸಭೆಯ ಮುಖ್ಯಾಂಶಗಳು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ಇಂದು ಬೆಂಗಳೂರು ನಗರದಲ್ಲಿ ಕೊರೊನಾ ಪರಿಸ್ಥಿತಿ ಪರಿಶೀಲನೆ ಕುರಿತು ಸಭೆ ಮಾಡಲಾಯ್ತು. ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹೆಚ್ಚುತ್ತಿದೆ. ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ಸಮುದಾಯದ ಮಟ್ಟದಲ್ಲಿ ಸ್ಫೋಟಗೊಂಡಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಹೊಸ ಹೊಸ ಏರಿಯಾಗಳಿಗೆ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಇಂದು ನಡೆದ ಸಭೆಯಲ್ಲಿ ಕೋವಿಡ್ 19 …
Read More »ಸುಲಲಿತ ವ್ಯವಹಾರಕ್ಕೆ ನೆರವಾಗಲಿದೆ ಈ ತಿದ್ದುಪಡಿ ಕಾಯ್ದೆ
ಬೆಂಗಳೂರು: ಉದ್ಯಮ ಸ್ಥಾಪನೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, “ಮೊದಲು ಉದ್ದಿಮೆ ಆರಂಭಿಸಿ, 3 ವರ್ಷದ ಬಳಿಕ ಪರವಾನಗಿ ಪಡೆಯುವ ವಿಧಾನ” ಜಾರಿಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ‘ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆ- 2002’ಕ್ಕೆ ತಿದ್ದುಪಡಿ ತರಲು ಗುರುವಾರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಉದ್ಯಮಗಳಿಗೆ ಅನುಕೂಲ ಒದಗಿಸುವ ಜತೆಗೆ ಹೊಸ ಹೂಡಿಕೆಗಳಿಗೆ ಅನುಕೂಲವಾಗುವಂತೆ ನಿಯಂತ್ರಕ ಚೌಕಟ್ಟನ್ನು ಸರಳಗೊಳಿಸಲು ರಾಜ್ಯ ಸರ್ಕಾರ, ಕರ್ನಾಟ ಕೈಗಾರಿಕ …
Read More »