Breaking News

ಬೆಳಗಾವಿಯ  ನಗರದ ಪೊಲೀಸ್ ಆಯುಕ್ತರಾಗಿ ಡಾ.ಕೆ. ತ್ಯಾಗರಾಜನ್ ಅವರು ಸೋಮವಾರ ಅಧಿಕಾರಿ ಸ್ವೀಕರಿಸಿದರು.

ಬೆಳಗಾವಿ:  ಬೆಳಗಾವಿಯ  ನಗರದ ಪೊಲೀಸ್ ಆಯುಕ್ತರಾಗಿ ಡಾ.ಕೆ. ತ್ಯಾಗರಾಜನ್ ಅವರು ಸೋಮವಾರ ಅಧಿಕಾರಿ ಸ್ವೀಕರಿಸಿದರು. ಭಾನುವಾರ ಸಂಜೆಗೆ ಬೆಳಗಾವಿ ನಗರಕ್ಕೆ ಆಗಮಿಸಿದ ಅವರು, ಇಂದು ಅಧಿಕಾರ ಸ್ವೀಕರಿಸಿದರು. ಪೊಲೀಸ್ ಆಯುಕ್ತರಾಗಿ ಸೇವೆಗೈದಿದ್ದ ಲೋಕೇಶ್ ಕುಮಾರ್ ಅವರು ತ್ಯಾಗರಾಜನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಡಾ.ಕೆ. ತ್ಯಾಗರಾಜನ್ ಅವರನ್ನು ಬೆಳಗಾವಿಯ ಆಯುಕ್ತರಾಗಿ ಸರ್ಕಾರ ವರ್ಗಾವಣೆ ಆದೇಶ ನೀಡಿ ಎರಡನೇ ದಿನವೇ ಅಧಿಕಾರಿಕ್ಕೆ ಹಾಜರಾಗಿದ್ದಾರೆ.

Read More »

ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಕಮಾಂಡರ್ ಸೇರಿ 3 ಉಗರ ಹತ್ಯೆ ………….

ಶ್ರೀನಗರ, ಜೂ.29-ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ಮತ್ತು ವಿಧ್ಯಂಸಕ ಕೃತ್ಯಗಳ ಯತ್ನ ಮುಂದುವರಿದಿದ್ದು, ಇವರನ್ನು ನಿಗ್ರಹಿಸುವ ಕಾರ್ಯಾಚರಣೆಯನ್ನು ಭಾರತೀಯ ಭದ್ರತಾಪಡೆ ಮತ್ತಷ್ಟು ತೀವ್ರಗೊಳಿವೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಹಿಜ್ಬುಲ್ ಉಗ್ರಗಾಮಿ (ಎಚ್‍ಎಂ) ಸಂಘಟನೆಯ ಕುಖ್ಯಾತ ಕಮಾಂಡರ್ ಸೇರಿದಂತೆ ಮೂವರು ಉಗ್ರಗಾಮಿಗಳನ್ನು ಭದ್ರತಾಪಡೆಗಳು ಹೊಡೆದುರುಳಿಸಿವೆ. ಹಲವಾರು ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾಗಿದ್ದ ಕಮಾಂಡರ್ ಮಸೂದ್ ಅಹಮದ್ ಭಟ್ ಹಾಗೂ ಲಷ್ಕರ್-ಎ-ತೈಬಾ ಉಗ್ರಗಾಮಿ …

Read More »

ದಿನದಿಂದ ದಿನಕ್ಕೆ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಳವಾಗತೊಡಗಿದೆ.

ಶಿವಮೊಗ್ಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಳವಾಗತೊಡಗಿದೆ. ಭಾನುವಾರ ನಾಲ್ವರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆತಂಕದ ಸಂಗತಿ ಎಂದರೆ ಈ ನಾಲ್ವರು ಒಂದೇ ಕುಟುಂಬವರಾಗಿದ್ದಾರೆ. ಸೋಂಕಿತರಲ್ಲಿ 19 ವರ್ಷದ ಮಹಿಳೆ (ಪಿ-11963), 80 ವರ್ಷದ ವೃದ್ಧೆ (ಪಿ-11964), 56 ವರ್ಷದ ಪುರುಷ (ಪಿ-11965) ಹಾಗೂ 20 ವರ್ಷದ ಯುವತಿ (ಪಿ- 11966) ಇದ್ದಾರೆ. ಭಾನುವಾರ ಪತ್ತೆಯಾದ ನಾಲ್ವರು ಸೋಂಕಿತರಿಗೂ ತಮ್ಮ ಸಂಬಂಧಿಯಿಂದಲೇ ಕೊರೋನಾ ತಗುಲಿರುವ ಸಾಧ್ಯತೆ …

Read More »

ಬೆಂಗಳೂರಿನಲ್ಲಿ ಕೊರೊನಾ ಕಂಟ್ರೋಲ್‍ಗೆ 2 ಟಾಸ್ಕ್ ಫೋರ್ಸ್ ರಚನೆ

ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಸರ್ಕಾರ ಎರಡು ಹೊಸ ಕಾರ್ಯತಂಡಗಳನ್ನು ರಚಿಸಿ ಆದೇಶ ಹೊರಡಿಸಿದೆ. ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಲು ಎರಡು ಹೊಸ ಕಾರ್ಯತಂಡವನ್ನು ರಚಿಸಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಜೋಡಿಸಲಾದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮತ್ತು ಚಿಕಿತ್ಸೆಯ ವ್ಯವಸ್ಥೆ ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ/ಅರೆ ವೈದ್ಯಕೀಯ ಸಿಬ್ಬಂದಿ …

Read More »

ಕೊರೊನಾಗೆ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಬಲಿ………

ಬಾಲಗಕೋಟೆ: ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರಿದಿದ್ದು, ಕೋವಿಡ್‍ಗೆ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಬಲಿಯಾಗಿದ್ದಾರೆ. 59 ವರ್ಷದ ಸಮುದಾಯ ಆರೋಗ್ಯ ಕೇಂದ್ರದ (ಸರ್ಕಾರಿ ಆಸ್ಪತ್ರೆ) ಡಿ ದರ್ಜೆ ನೌಕರ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯ ಗುಳೇದಗುಡ್ಡ ನೌಕರ ಕಳೆದ ನಾಲ್ಕು ದಿನದ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 27 ರಂದು ಕೊರೊನಾ ದೃಢಪಟ್ಟಿತ್ತು. ಒಂದು ದಿನದಿಂದ ವೆಂಟಿಲೇಟರ್ ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. …

Read More »

ಸಿಂಧೂರ ಲಕ್ಷ್ಮಣನಾಗಿ ಅಬ್ಬರಿಸಲಿದ್ದಾರೆ ಡಿ ಬಾಸ್……………..

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೌರಾಣಿಕ ಪಾತ್ರಗಳಿಗೆ ಹೇಳಿ ಮಾಡಿಸಿದ ನಟ ಎನ್ನುವಂತಾಗಿದ್ದು, ಅದರಂತೆ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಸಿನಿಮಾಗಳಲ್ಲಿ ತಮ್ಮ ಖದರ್ ತೋರಿಸಿದ್ದಾರೆ. ಅದೇ ರೀತಿ ರಾಜ ವೀರ ಮದಕರಿ ಸಿನಿಮಾದ ಚಿತ್ರೀಕರಣ ಸಹ ಆರಂಭವಾಗಿದೆ. ಹೀಗಿರುವಾಗಲೇ ಡಿ ಬಾಸ್‍ಗಾಗಿ ಮತ್ತೊಂದು ಐತಿಹಾಸಿಕ ಸಿನಿಮಾ ಸಿದ್ಧವಾಗುತ್ತಿದೆ. ಹೌದು ರಾಬರ್ಟ್ ಸಿನಿಮಾ ಚಿತ್ರೀಕಣ ಬಹುತೇಕ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಡಿ ಬಾಸ್ ರಾಜ ವೀರ ಮದಕರಿ …

Read More »

ಸಾರಿಗೆ ಸಿಬ್ಬಂದಿ ವೇತನ ತಡೆ ಹಿಡಿಯಲ್ಲ,ಕಟ್ ಮಾಡಲ್ಲ.

ಬಾಗಲಕೋಟೆ: ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿ ವೇತನ ತಡೆ ಹಿಡಿಯಲ್ಲ. ಸಂಬಳ ಕಟ್ ಮಾಡಲ್ಲ. ಪೂರ್ಣ ಸಂಬಳ ಕೊಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದಾಗಿ ಸಾರಿಗೆ ಸಂಸ್ಥೆಗೆ ಬಹಳ ಹಾನಿಯಾಗಿದೆ. ಎರಡು ತಿಂಗಳು ಸಾರಿಗೆ ಸಿಬ್ಬಂದಿಗೆ ಸರ್ಕಾರ ಸಂಬಳ ಕೊಟ್ಟಿದೆ. ಸಿಬ್ಬಂದಿ ಸಂಬಳಕ್ಕಾಗಿ ರಾಜ್ಯ ಸರ್ಕಾರ 651 ಕೋಟಿ ರೂ. ಕೊಟ್ಟಿದೆ. ಮುಂದಿನ ತಿಂಗಳು ಸಂಬಳ ಕೊಡಲು ಕಷ್ಟಸಾಧ್ಯವಾಗಬಹುದು. …

Read More »

ಕೊರೊನಾಗೆ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಬಲಿ

ಬಾಲಗಕೋಟೆ: ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರಿದಿದ್ದು, ಕೋವಿಡ್‍ಗೆ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಬಲಿಯಾಗಿದ್ದಾರೆ. 59 ವರ್ಷದ ಸಮುದಾಯ ಆರೋಗ್ಯ ಕೇಂದ್ರದ (ಸರ್ಕಾರಿ ಆಸ್ಪತ್ರೆ) ಡಿ ದರ್ಜೆ ನೌಕರ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯ ಗುಳೇದಗುಡ್ಡ ನೌಕರ ಕಳೆದ ನಾಲ್ಕು ದಿನದ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 27 ರಂದು ಕೊರೊನಾ ದೃಢಪಟ್ಟಿತ್ತು. ಒಂದು ದಿನದಿಂದ ವೆಂಟಿಲೇಟರ್ ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. …

Read More »

ನಿಯಂತ್ರಣ ತಪ್ಪಿ 30 ಅಡಿಯ ಪ್ರಪಾತಕ್ಕೆ ಉರುಳಿದ ಕಾರ್- ಮೂವರು ಸಾವು

ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕಾರ್ 30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರಿಗೆ ಗಂಭೀರ ಗಾಯವಾಗಿದೆ. ಜಿಲ್ಲೆಯ ಶಿರಾ ತಾಲೂಕಿನ ಹೊನ್ನೇಹಳ್ಳಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಎದುರಿನಿಂದ ಏಕಾಏಕಿ ವಾಹನ ಬಂದಿದೆ. ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಕಾರ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಹ್ಯೂಂಡೈ ಐ-20 ಕಾರ್ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಬಸವರಾಜು ಸೇರಿದಂತೆ ಒಟ್ಟು …

Read More »

ಹಿರಿಯ ಸಾಹಿತಿ ಗಿತಾ ನಾಗಭೂಷಣ್ (78) ಹೃದಯಾಘಾತದಿಂದ ನಿಧನ…..

ಕಲಬುರಗಿ: ಹಿರಿಯ ಸಾಹಿತಿ ಗಿತಾ ನಾಗಭೂಷಣ್ (78) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೀತಾ ನಾಗಭೂಷಣ್ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಗೀತಾ ನಾಗಭೂಷಣ ನಿಧನಾರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಗೀತಾ ನಾಗಭೂಷಣ್ ಕಲಬುರಗಿಯ ಸ್ವಸ್ತಿಕ ನಗರದಲ್ಲಿ ವಾಸವಾಗಿದ್ದರು. ಶೋಷಿತರ ಪರವಾಗಿ ಬರವಣಿಗೆ ಮೂಲಕ ಗೀತಾ ನಾಗಭೂಷಣ್ ಧ್ವನಿ ಎತ್ತಿದ್ದರು. ಅದರಲ್ಲಿ ಶೋಷಿತ ಮಹಿಳೆಯರ ಪರವಾಗಿ ಧ್ವನಿ ಎತ್ತಿ ಸರ್ಕಾರದ ಕಣ್ಣತೆರಸುವ …

Read More »