Breaking News

ಲೈವ್ ಬಂದು ಅಸಲಿ ವಿಚಾರ ಹೇಳಿದ ಗೋಲ್ಡ್ ಸುರೇಶ್

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೋಲ್ಡ್ ಸುರೇಶ್ ಅವರು ಎಕ್ಸಿಟ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯಿತು. ಆರಂಭದಲ್ಲಿ ಅವರ ತಂದೆ ನಿಧನ ಹೊಂದಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಅದು ಸುಳ್ಳು ಎನ್ನುವ ವಿಚಾರ ತಿಳಿಯಿತು. ಆ ಬಳಿಕ ಬಂದಿದ್ದೇ ಸಾಲಬಾಧೆ ವಿಚಾರ. ಅವರು ಸಾಲ ಮಾಡಿಕೊಂಡಿದ್ದಕ್ಕೆ ಹೊರ ಬಂದರು ಎಂದು ಹೇಳಲಾಯಿತು. ಈಗ ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​​ನಲ್ಲಿ ಬಂದ ಸುರೇಶ್ ಈ …

Read More »

ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್‌ ಬಿಲ್‌

ಡಿಸೆಂಬರ್ 19: ತುಮಕೂರಿನ ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್‌ ಬಿಲ್‌ ಪಾವತಿಸುವಂತೆ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ) ನೋಟಿಸ್ ನೀಡಿದ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಕೆಐಎಡಿಬಿ ಮಂಡಳಿಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲವೇ? ಸಿದ್ದಗಂಗಾ ಮಠಕ್ಕೆ ವಿದ್ಯುತ್‌ ಬಿಲ್‌ ನೋಟಿಸ್‌ ಏಕೆ? ‘ತ್ರಿವಿಧ ದಾಸೋಹ’ದ ಮಠಕ್ಕೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರತಿಪಕ್ಷಗಳು ಕೂಡ ಈ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿವೆ. ಕೆಐಎಡಿಬಿಗೆ ಸಿದ್ದಲಿಂಗ …

Read More »

ಬಿಜೆಪಿ ಸಂಸದರು ತಳ್ಳಿದ್ದರಿಂದ ಮೊಣಕಾಲುಗಳಿಗೆ ಗಾಯವಾಗಿದೆ: ಖರ್ಗೆ

ಸಂಸತ್ತಿನ ಹೊರಗೆ ಕಾಂಗ್ರೆಸ್​ ಪ್ರತಿಭಟನೆ ವೇಳೆ ತನ್ನನ್ನು ಬಿಜೆಪಿ ಸಂಸದರು ತಳ್ಳಿ ಬೀಳಿಸಿದ್ದಾರೆ ಎಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಬಿಜೆಪಿ ಸಂಸದರು ನನ್ನನ್ನು ತಳ್ಳಿ ಗಾಯಗೊಳಿಸಿದ್ದಾರೆ, ಸಂಸದರೊಂದಿಗೆ ಸಂಸತ್​ನ ಮಕರ ದ್ವಾರವನ್ನು ತಲುಪಿದಾಗ ನನ್ನನ್ನು ಬಿಜೆಪಿ ಸಂಸದರು ತಳ್ಳಿದ್ದಾರೆ ನಾನು ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮೊಣಕಾಲುಗಳಿಗೆ ಗಾಯವಾಗಿದೆ , ಕಾಂಗ್ರೆಸ್ ಸಂಸದರು ಕುರ್ಚಿ ತಂದು ನನ್ನನ್ನು ಕೂರಿಸಿದರು. ಬಹಳ ಕಷ್ಟದಿಂದ ಮತ್ತು …

Read More »

ಚಿರತೆ ದಾಳಿಗೆ 22 ವರ್ಷದ ಯುವತಿ ಬಲಿ

ವೆಲ್ಲೂರು,ತಮಿಳುನಾಡು: ವೆಲ್ಲೂರು ಜಿಲ್ಲೆಯ ಗುಡಿಯಾತಂನ ದುರ್ಗಮ್ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದ ಪರಿಣಾಮ 22 ವರ್ಷದ ಯುವತಿಯೊಬ್ಬರು ಬುಧವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ವೆಲ್ಲೂರು ಜಿಲ್ಲಾಧಿಕಾರಿ ಸುಬ್ಬುಲಕ್ಷ್ಮಿ, ಚಿರತೆ ದಾಳಿಯಿಂದ ಅಂಜಲಿ ಎಂಬುವವರು ಪ್ರಾಣ ಕಳೆದುಕೊಂಡಿದ್ದಾರೆ, ಚಿರತೆ ಹಿಡಿಯಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು, ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನಸಾಮಾನ್ಯರು ಭಯಮುಕ್ತರಾಗಿ ಬದುಕಲು ವ್ಯವಸ್ಥೆ ಮಾಡಲಾಗುವುದು ಎಂದು ಅಭಯ ನೀಡಿದ್ದಾರೆ. ಘಟನೆಯ ಹಿನ್ನೆಲೆ: ವೆಲ್ಲೂರಿನ ಮೆಲ್ಮಾಯಿಲ್ ಪಂಚಾಯತ್ ವ್ಯಾಪ್ತಿಯ ದುರ್ಗಂ …

Read More »

ಹೆರಿಗೆ ನೋವನ್ನೂ ಲೆಕ್ಕಿಸದೇ ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆದ ಅಭ್ಯರ್ಥಿ

ಹೈದರಾಬಾದ್​: ಸಾಧಿಸುವ ಛಲಕ್ಕೆ ಯಾವುದೇ ಸಮಸ್ಯೆಗಳು ಸವಾಲಾಗುವುದಿಲ್ಲ. ಅದೇ ರೀತಿಯ ಛಲದಿಂದ ಪ್ರಸವ ನೋವಿನ ನಡುವೆ ತುಂಬು ಗರ್ಭಿಣಿಯೊಬ್ಬರು ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ. ಸರ್ಕಾರಿ ಉದ್ಯೋಗದ ಆಪೇಕ್ಷೆ ಹೊಂದಿದ್ದ ತುಂಬು ಗರ್ಭಿಣಿ ರೇವತಿ ನಾಗರಕರ್ನೂಲ್ ಜಿಲ್ಲೆಯ ಬಲ್ಮೂರು ಮಂಡಲದ ಬಾಣಲ ಗ್ರಾಮದ ಸರ್ಕಾರಿ ಶಾಲೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಡಿಸೆಂಬರ್​​ 15ರಂದು ಭಾನುವಾರ ನಡೆದ ಗ್ರೂಪ್​-2 ಮೊದಲ ಮತ್ತು ಎರಡನೇ ಪತ್ರಿಕೆ​​ ಪರೀಕ್ಷೆಗೆ ಹಾಜರಾಗಿದ್ದಾರೆ. ಇದಾದ ಬಳಿಕ ಡಿಸೆಂಬರ್​ …

Read More »

ರಾಜ್ಯದಲ್ಲಿ ಚಳಿ ಗಾಳಿ ಜೋರಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಚಳಿ ಮತ್ತು ಮಂಜಿನ ಅಬ್ಬರ ಜೋರಾಗಿದೆ. ಮುಖ್ಯವಾಗಿ, ಉತ್ತರ ಒಳನಾಡಿನಲ್ಲಿ ಶೀತ ಗಾಳಿ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮೂರು ಜಿಲ್ಲೆಗಳಿಗೆ ಶೀತ ಗಾಳಿ ಇನ್ನೂ ಹೆಚ್ಚಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಎಲ್ಲೆಲ್ಲಿ ಕೋಲ್ಡ್ ವೇವ್ ಅಲರ್ಟ್?: ಇಂದಿನಿಂದ ಮೂರು ದಿನ ಬೀದರ್, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಿಗೆ ಕೋಲ್ಡ್ ವೇವ್ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ …

Read More »

ನನ್ನ ಸಾವಿಗೆ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಕಾರಣ’ ಎಂದು ವಿಡಿಯೋ ಮಾಡಿ ಆತ್ಮಹತ್ಯೆ

ಮಂಗಳೂರು: ಮಂಗಳೂರು ಕೆಥೋಲಿಕ್‌ ಸಹಕಾರ (ಎಂಸಿಸಿ) ಬ್ಯಾಂಕ್‌ನಿಂದ ಸಾಲ ಪಡೆದಿದ್ದ ವ್ಯಕ್ತಿಯೊಬ್ಬರು, ‘ನನ್ನ ಸಾವಿಗೆ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಕಾರಣ’ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಾಯಿಬೆಟ್ಟು ಕುಟಿನೋ ಪದವು ನಿವಾಸಿ ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿಕೊಂಡವರು. ಈ ಸಂಬಂಧ ಅನಿಲ್ ಲೋಬೋ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮನೋಹರ್ ಪಿರೇರಾ ಅವರು ಉಳಾಯಿಬೆಟ್ಟುವಿನ ಕುಟಿನೋ ಪದವಿನಲ್ಲಿರುವ ತಮ್ಮ ಮನೆಯ ಮೇಲೆ ಎಂಸಿಸಿ ಬ್ಯಾಂಕ್‌ನಲ್ಲಿ ಹತ್ತು ವರ್ಷಗಳ …

Read More »

ಭೂ ಸ್ವಾಧೀನಕ್ಕೆ ಅಧಿಸೂಚನೆ ಪ್ರಕಟವಾಗುವ ಮುನ್ನ ಭೂ ಮಾಲೀಕರು ಬಡಾವಣೆ ನಕ್ಷೆಗೆ ಮಂಜೂರು ಕೋರಿ‌ ಸಲ್ಲಿಸುವ ಅರ್ಜಿಯನ್ನು ನಗರಾಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಬೆಂಗಳೂರು: ಭೂ ಸ್ವಾಧೀನಕ್ಕೆ ಅಧಿಸೂಚನೆ ಪ್ರಕಟವಾಗುವ ಮುನ್ನ ಭೂ ಮಾಲೀಕರು ಬಡಾವಣೆ ನಕ್ಷೆಗೆ ಅನುಮತಿ ಕೋರಿದರೆ ಅಂತಹ ಅರ್ಜಿಗಳನ್ನು ಪ್ರಾಧಿಕಾರಗಳು ತಿರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿದೆ. ಭೂ ಸ್ವಾಧೀನಕ್ಕೂ ಮುನ್ನ ಬಡಾವಣೆಗೆ ನಕ್ಷೆ ಅನುಮತಿ ಕೋರಿದ್ದ ಕ್ರಮವನ್ನು ತಿರಸ್ಕರಿಸಿದ್ದ ಭೂ ಸ್ವಾಧೀನಾಧಿಕಾರಿ ಕ್ರಮವನ್ನು ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ವಿರುದ್ಧ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಆರ್‌. ದೇವದಾಸ್​ ಮತ್ತು ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ವಿಭಾಗೀಯಪೀಠ ಈ …

Read More »

ವಕ್ಫ್​ ಆಸ್ತಿ ಕಬಳಿಕೆ ವಿಚಾರ: ನಾವು ದೇವಸ್ಥಾನ, ರೈತರ ಆಸ್ತಿ ಮುಟ್ಟಲ್ಲ. ರೈತರ ಆಸ್ತಿ ಮುಟ್ಟಿದ್ರೆ ನಾನೇ ಬಂದು ತೆಗಿಸುತ್ತೇನೆ

ಬೆಳಗಾವಿ: ಶೇ.95ರಷ್ಟು ವಕ್ಫ್ ಆಸ್ತಿಯಲ್ಲಿ ಒತ್ತುವರಿ ಮಾಡಿರುವುದು ಮುಸ್ಲಿಮರೇ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು‌. ವಿಧಾನಸಭೆಯಲ್ಲಿ ಇಂದು ನಿಯಮ 69 ಅಡಿಯಲ್ಲಿ ನಡೆದ ವಕ್ಫ್​ ನೋಟಿಸ್ ಚರ್ಚೆಗೆ ಉತ್ತರಿಸಿದ ಸಚಿವ ಜಮೀರ್, ವಿಜಯಪುರದಲ್ಲಿ ನಡೆದ ವಕ್ಫ್ ಅದಾಲತ್​​ಗೆ ಯತ್ನಾಳ್ ಬರಲಿಲ್ಲ. ಬಳಿಕ ಗೊಂದಲ ಶುರು ಮಾಡಿದ್ರು. ರೈತರ ಜಮೀನು ವಕ್ಫ್ ಹೆಸರಲ್ಲಿ ಮಾಡಿ ಅಂತ ನಾನು ಸೂಚನೆ ಕೊಡಲಿಲ್ಲ. ರಾಜ್ಯದಲ್ಲಿ 1.28 …

Read More »

ಸರ್ಕಾರಿ ಶಾಲೆ, ಹಿಂದೂ ರುದ್ರಭೂಮಿ, ದೇವಸ್ಥಾನ ಇದ್ದರೆ ಅಲ್ಲಿ ವಕ್ಫ್​​ ಆಸ್ತಿ ಎಂದು ತರಲೇಬಾರದೆಂದು ಸೂಚಿಸಲಾಗಿದೆ.

ಬೆಳಗಾವಿ: ”ನಮ್ಮ ಸರ್ಕಾರ ಮುಜರಾಯಿ ದೇವಸ್ಥಾನಗಳ 10,700 ಎಕರೆ ಜಮೀನು ಖಾತೆ ಬದಲಾಯಿಸಿ ಸಂರಕ್ಷಿಸಿದ್ದರೆ, ವಕ್ಫ್​​​ಗೆ ಕೇವಲ 600 ಎಕರೆ ಜಮೀನಿನ ಖಾತೆ ಬದಲಾವಣೆ ಮಾಡಿದ್ದೇವೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯಲ್ಲಿ ವಕ್ಫ್ ನಿಲುವಳಿ ಸೂಚನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ”ಬಿಜೆಪಿ ವಕ್ಫ್ ವಿಚಾರವಾಗಿ ಸುಳ್ಳಿನ ಸರಮಾಲೆ ಹೇಳಿದೆ. 2004ರಿಂದೀಚೆಗೆ ರಾಜ್ಯದಲ್ಲಿ ಒಟ್ಟು 9,800 ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದರಲ್ಲಿ ಬಾಧಿತ ರೈತರ ಸಂಖ್ಯೆ …

Read More »