ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಈ ಮಧ್ಯೆ ಹಾಸನ ಮತ್ತು ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದೆ. ಹಾಸನ ನಗರ ಸೇರಿದಂತೆ ಹಲವೆಡೆ ಬೆಳಗ್ಗೆಯಿಂದಲೇ ಸೋನೆ ಮಳೆ ಆರಂಭವಾಗಿದೆ. ಈ ಮೂಲಕ ಸಂಡೇ ಲಾಕ್‍ಡೌನ್‍ಗೆ ಹಾಸನದಲ್ಲಿ ಮಳೆಯ ಸಪೋರ್ಟ್ ನೀಡಿದಂತಾಗಿದೆ. ಬೆಳ್ಳಂಬೆಳಗ್ಗೆಯೇ ಜಿಟಿಜಿಟಿ ಮಳೆ ಆರಂಭವಾಗಿರುವುದರಿಂದ ಮನೆಯಿಂದ ಜನರು ಹೊರಬರುತ್ತಿಲ್ಲ. ಇನ್ನೂ ಅಗತ್ಯ ವಸ್ತುಕೊಳ್ಳಲು ಮನೆಯಿಂದ ಹೊರಬಂದವರು ಮಳೆಯಿಂದಾಗಿ ಅಂಗಡಿಗಳ ಬಳಿಯೇ ವಾಸ್ತವ್ಯ ಮಾಡುತ್ತಿದ್ದಾರೆ. ಕೆಲವರು …
Read More »ಬೀದರ್‌ನಲ್ಲಿ ಕೊರೊನಾ ಸಾವಿನ ರಣಕೇಕೆ ಹಾಕಿದೆ. ಒಂದೇ ದಿನ 6 ಜನ ಬಲಿ…….
ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಕೊರೊನಾ ಸಾವಿನ ರಣಕೇಕೆ ಹಾಕಿದೆ. ಒಂದೇ ದಿನ 6 ಜನರನ್ನು ಬಲಿ ಪಡೆದಿದ್ದು, ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ. ಬೀದರ್ ನ ಹಳೆ ನಗರದ 55 ವರ್ಷದ ವ್ಯಕ್ತಿ ಹಾಗೂ 70 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಭಾಲ್ಕಿ ಪಟ್ಟಣದ 50 ಹಾಗೂ 31 ವರ್ಷದ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಬಸವಕಲ್ಯಾಣ ಪಟ್ಟಣದ 24 ವರ್ಷದ ಯುವತಿ ಹಾಗೂ ಹುಮ್ನಬಾದ್ ಪಟ್ಟಣದ 70 ವರ್ಷದ ವೃದ್ಧೆ ಕೊರೊನಾ …
Read More »ಚಾರ್ಮಾಡಿ ಘಾಟ್‍ನಲ್ಲಿ ವಾಹನ ನಿಲುಗಡೆ ನಿಷೇಧ…………
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‍ನಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಚಾರ್ಮಾಡಿ ಘಾಟಿಯಲ್ಲಿ ವಾಹನಗಳನ್ನು ನಿಲ್ಲಿಸಿದರೆ ಕೇಸ್ ಬೀಳೋದು ಗ್ಯಾರಂಟಿಯಾಗಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಣಕಲ್ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ನಾಮಫಲಕ ಕೂಡ ಹಾಕಿದೆ. ಮಳೆಯ ನಡುವೆ ವಾಹನ ನಿಲ್ಲಿಸಿ ಅಪಾಯ ಸ್ಥಳಗಳಲ್ಲಿ ಜನ ಓಡಾಟ ಮಾಡುವುದು ಹೆಚ್ಚಾಗಿದೆ. ಈ ಹಿಂದೆ …
Read More »ವೈದ್ಯ, ಕಂಡಕ್ಟರ್, ಪೇದೆಗೆ ಕೊರೊನಾಜನರ ಆತಂಕ ಕೂಡ ಹೆಚ್ಚಾಗುತ್ತಿದೆ.
ಚಿಕ್ಕಮಗಳೂರು: ಕಳೆದ 45 ದಿನಗಳಿಂದ ಬರುತ್ತಿರುವ ಒಂದು-ಎರಡು ಕೇಸ್ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85ರ ಗಡಿ ತಲುಪಿದ್ದು, ದಿನ ಕಳೆದಂತೆ ಜಿಲ್ಲೆಯ ಜನರ ಆತಂಕ ಕೂಡ ಹೆಚ್ಚಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮೂರು ಹೊಸ ಪ್ರಕರಣಗಳಲ್ಲಿ ಓರ್ವ ವೈದ್ಯ, ಮತ್ತೋರ್ವ ಸರ್ಕಾರಿ ಬಸ್ ಕಂಡಕ್ಟರ್, ಮಗದೊಬ್ಬ ಬೆಂಗಳೂರಿನಿಂದ ಹಿಂದಿರುಗಿದ ಪೇದೆ. ವೈದ್ಯ ಹಾಗೂ ಕಂಡಕ್ಟರ್ ಈ ಎರಡೂ ಪ್ರಕರಣಗಳು ಜಿಲ್ಲಾಡಳಿತ ಹಾಗೂ ಜನರ …
Read More »ಸಿಲಿಕಾನ್ ಸಿಟಿಯ ಸ್ಥಿತಿ ದಿನದಿನಕ್ಕೆ ಘನಘೋರು, ಒಂದೇ 24 ಮಂದಿ ಕೊರೊನಾಗೆ ಬಲಿ
ಬೆಂಗಳೂರು: ಸಿಲಿಕಾನ್ ಸಿಟಿಯ ಸ್ಥಿತಿ ದಿನದಿನಕ್ಕೆ ಘನಘೋರವಾಗುತ್ತಿದೆ. ದೆಹಲಿ, ಮುಂಬೈನಂತೆ ಬೆಂಗಳೂರು ಕೂಡ ಕೊರೊನಾ ಸಾವಿನ ಕೂಪವಾಗುತ್ತಾ ಅನ್ನೊ ಅನುಮಾನ ಶುರುವಾಗಿದೆ. ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಬೆಂಗಳೂರೇ ಬಹುಪಾಲು ಪಡೆದಿದೆ. ಮಹಾನಗರಿ ಬೆಂಗಳೂರಲ್ಲಿ ಶತಕದಾಚೆಗೆ ಜಿಗಿದಿರೋ ಕೊರೊನಾ ಹೆಮ್ಮಾರಿ ಬರೋಬ್ಬರಿ 1,172 ಮಂದಿಗೆ ವಕ್ಕರಿಸಿದೆ. ಸಾವುಗಳ ಸಂಖ್ಯೆ ಸಹ ಎಲ್ಲಾ ದಾಖಲೆ ಮುರಿದಿದೆ. ಬೆಂಗಳೂರಲ್ಲಿಂದು 24 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾಗೆ ಹೆದರಿ ಜನ ಬೆಂಗಳೂರು ಬಿಡುತ್ತಿರುವಾಗಲೇ ಕೊರೊನಾ …
Read More »ಪ್ರಸಕ್ತ ವರ್ಷದ ಮೂರನೇ ಚಂದ್ರಗ್ರಹಣ
ಬೆಂಗಳೂರು: ಪ್ರಸಕ್ತ ವರ್ಷದ ಮೂರನೇ ಚಂದ್ರಗ್ರಹಣ ಅಂದ್ರೆ ಗುರು ಪೂರ್ಣಿಮೆ ದಿನವೇ ಸಂಭವಿಸಲಿದೆ. ಅರೆನೆರಳಿನ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ, ಬೆಳಗ್ಗೆ 9.59ಕ್ಕೆ ಪೂರ್ಣ ಗೋಚರ ಕಂಡು, ಬೆಳಗ್ಗೆ 11.37ಕ್ಕೆ ಗ್ರಹಣ ಮೋಕ್ಷ ಕಾಣಲಿದೆ. ಒಟ್ಟು 2 ಗಂಟೆ 45 ನಿಮಿಷಗಳ ಕಾಲ ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಆದರೆ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರಿಸುವುದಿಲ್ಲ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ. ಜೋತಿಷ್ಯ ಶಾಸ್ತ್ರದ …
Read More »ಮಾನವೀಯತೆ ಮೆರೆದ ಶಾಸಕ ಯು.ಟಿ ಖಾದರ್
ಮಂಗಳೂರು: ಅಂಬುಲೆನ್ಸ್ ನಲ್ಲಿ ಅರ್ಧ ಗಂಟೆ ಕಾದು ಕೂತಿದ್ದ ಕೊರೊನಾ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಶಾಸಕ ಯು.ಟಿ ಖಾದರ್ ಮಾನವೀಯತೆ ಮೆರೆದಿದ್ದಾರೆ. ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದು ನಂತರ ಜಿಲ್ಲಾಡಳಿತ ಅನುಮತಿ ಇರದ ಕಾರಣ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಹೀಗಾಗಿ ಕೋವಿಡ್-19 ಸೋಂಕಿತ ಕರೆತಂದ ಆಂಬ್ಯುಲೆನ್ಸ್‍ನಲ್ಲೇ ಅರ್ಧ ಗಂಟೆಯಿಂದ ಬಾಕಿಯಾಗಿದ್ದ. ಈ ವೇಳೆ ಇದೇ ಮಾರ್ಗವಾಗಿ ಬರುತ್ತಿದ್ದ ಮಾಜಿ …
Read More »ಭಾನುವಾರ ಮೊದಲ ದೇಶಿ ಆ್ಯಪ್ ಅಲಾಯಿಮೆಂಟ್ಸ್ ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ
ನವದೆಹಲಿ: ಭಾನುವಾರ ಮೊದಲ ದೇಶಿ ಆ್ಯಪ್ ಅಲಾಯಿಮೆಂಟ್ಸ್ ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಲಿದ್ದಾರೆ. ಭಾರತದಲ್ಲಿ ಸುಮಾರು 50 ಕೋಟಿಗಿಂತ ಹೆಚ್ಚಿನ ಜನರು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ. ಆದ್ರೆ ಬಳಕೆ ಮಾಡುವ ಬಹುತೇಕ ಆ್ಯಪ್ ಗಳು ವಿದೇಶಿಯ ಮೂಲದ್ದು ಆಗಿರುತ್ತವೆ. ವಿದೇಶಿ ಆ್ಯಪ್ ಬಳಕೆಯಿಂದಾಗಿ ಬಳಕೆದಾರರ ಮಾಹಿತಿಯನ್ನು ಕದಿಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ನಾಳೆ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ದೇಶಿಯ ಆ್ಯಪ್‍ಗೆ …
Read More »ಬೆಳಗಾವಿ :ಕೋವಿಡ್ ಔಷಧ ಪ್ರಯೋಗಕ್ಕೆ ಜೀವನರೇಖಾ ಆಸ್ಪತ್ರೆ ಆಯ್ಕೆ
ಬೆಳಗಾವಿ: ಕೋವಿಡ್ ಮಹಾಮಾರಿ ದೇಶದ ಎಲ್ಲ ಕಡೆ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಸಮಾಧಾನಕರ ಸಂಗತಿಯೊಂದು ಹೊರಬಂದಿದೆ. ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿರುವ ಕೋವ್ಯಾಕ್ಸಿನ್ ಔಷಧಿ ಈಗ ಪ್ರಯೋಗಕ್ಕೆ ಸಿದ್ಧವಾಗಿದ್ದು, ಎಲ್ಲ ಅಂದುಕೊಂಡಂತೆ ಯಶಸ್ವಿಯಾದರೆ ಮುಂದಿನ ತಿಂಗಳು ಸಾರ್ವಜನಿಕರಿಗೆ ಲಭ್ಯವಾಗುವ ನಿರೀಕ್ಷೆ ಇದೆ. ಇದರ ಮಧ್ಯೆ ದೇಶದ 13 ಕಡೆಗಳಲ್ಲಿ ಜನರ ಮೇಲೆ ಇದರ ಪ್ರಯೋಗ ನಡೆಯಲಿದ್ದು, ಈ 13 ನಗರಗಳಲ್ಲಿ ಬೆಳಗಾವಿ ಸಹ ಆಯ್ಕೆಯಾಗಿರುವುದು ಹೊಸ ಬೆಳವಣಿಗೆಯಾಗಿದೆ. ಬೆಳಗಾವಿಯಲ್ಲಿ ಮುಂದಿನ ವಾರದಿಂದ …
Read More »ರಾಜ್ಯದಲ್ಲಿ ಇಂದು 1839 ಜನರಿಗೆ ಕೊರೋನಾ
ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು 1839 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 21549ಕ್ಕೆ ಏರಿಕೆಯಾಗಿದೆ. ಇವರಲ್ಲಿ 9244 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 11966 ಆಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ …
Read More »