Breaking News

ನಿನ್ನೆ ಪರೀಕ್ಷೆಗೊಳಪಟ್ಟವರ ಪೈಕಿ 9 2ಜನರಿಗೆ ಕೊರೋನಾ ಸೋಂಕು

ಬೆಳಗಾವಿ – ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡುವ ಮುನ್ನವೇ ಬೆಳಗಾವಿ ಜಿಲ್ಲೆಯ ಕೊರೋನಾ ಸೋಂಕಿತರ ವಿವರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಪ್ರಕಾರ ನಿನ್ನೆ ಪರೀಕ್ಷೆಗೊಳಪಟ್ಟವರ ಪೈಕಿ 92ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.  ಇದು ಈವರೆಗಿನ ಎಲ್ಲ ದಾಖಲೆಗಳನ್ನು ಹೊಸಕಿ ಹಾಕಿದ್ದು, ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪಟ್ಟಿಯಲ್ಲಿ ಸೋಂಕಿತರ ಹೆಸರು, ವಿಳಾಸ, ಸಂಪರ್ಕ ಸಂಖೆಯ ಎಲ್ಲವೂ ನಮೂದಾಗಿದ್ದು, ಎಲ್ಲ ನಿಯಮಗಳನ್ನು ಮೀರಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ. …

Read More »

ಎಲ್ಲೂ ಬೆಡ್ ಸಿಗ್ತಿಲ್ಲವೆಂದು ಪತ್ನಿ, ಮಕ್ಕಳ ಸಮೇತ ಸಿಎಂ ಮನೆ ಬಳಿ ಬಂದ ಸೋಂಕಿತ

ಬೆಂಗಳೂರು: ನನಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಕರೆ ಮಾಡಿ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಎಲ್ಲೂ ಬೆಡ್ ಸಿಗುತ್ತಿಲ್ಲವೆಂದು ಕೊರೊನಾ ಸೋಂಕಿತರೊಬ್ಬರು ಸಿಎಂ ನಿವಾಸ ಕಾವೇರಿ ಬಳಿ ಗೋಳಿಟ್ಟಿದ್ದಾರೆ. ಕುಟುಂಬ ಸಮೇತರಾಗಿ ಸಿಎಂ ಮನೆ ಬಳಿ ಬಂದ ಸೋಂಕಿತ, ನನಗೆ ಎಲ್ಲೂ ಬೆಡ್ ಸಿಗುತ್ತಿಲ್ಲ. ತುಂಬಾ ಸುಸ್ತು ಆಗುತ್ತಿದೆ, ನನಗೆ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ಎಂದು ತನ್ನ ಪತ್ನಿ ಹಾಗೂ ಮಕ್ಕಳ ಜೊತೆಯಲ್ಲಿ ಕೊರೊನಾ ಸೋಂಕಿತ ಕಾವೇರಿ …

Read More »

ಬೆಡ್ ಸಿಗದೆ ಕೊರೊನಾಗೆ ಪೌರ ಕಾರ್ಮಿಕ ಮಹಿಳೆ ಸಾವು

ಬೆಂಗಳೂರು: ಕೊರೊನಾ ವೈರಸ್ ಭಯ, ಲಾಕ್‍ಡೌನ್ ನಡುವೆಯೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದ ಪೌರ ಕಾರ್ಮಿಕ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ 5-6 ಆಸ್ಪತ್ರೆಗಳಿಗೆ ಅಲೆದಾಡಿದರೂ, ಬೆಡ್ ಸಿಕ್ಕಿಲ್ಲ. ಹೀಗಾಗಿ ಕೊರೊನಾ ವಾರಿಯರ್ ಕೊನೆಯುಸಿರೆಳೆದಿದ್ದಾರೆ. ಹೆಬ್ಬಾಳದ ವಿಶ್ವನಾಥ ನಾಗನಹಳ್ಳಿಯ 30 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಕಲಿದ್ದು, ಚಿಕಿತ್ಸೆಗಾಗಿ ಮಹಿಳೆ ಐದಾರು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೂ ಎಲ್ಲಿಯೂ ಬೆಡ್ ಸಿಕ್ಕಿಲ್ಲ. ಐದು ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲ ಎಂದು ಹೇಳಿ ಕಳುಹಿಸಲಾಗಿದೆ. …

Read More »

ಇಂದಿನ ಸಂಜೆಯ ಹೆಲ್ತ ಬುಲೆಟಿನ್ ನಲ್ಲಿ ಬೆಳಗಾವಿಗೆ ಕಾದಿದೆಯ ಬಿಗ್ ಶಾಕ….?

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಚೆಲ್ಲಾಟ ಮುಂದುವರೆದಿದೆ ಈ ವರೆಗೆ ಕಿಲ್ಲರ್ ಕೊರೋನಾ ಬೆಳಗಾವಿ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದು ಇಂದು ಗುರುವಾರವೂ ಮಹಾಮಾರಿಯ ಸಂಕಟ ಮುಂದುವರೆಯಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ 602 ಸೊಂಕಿತರು ಪತ್ತೆಯಾಗಿದ್ದಾರೆ,ಇಂದು ಗುರುವಾರ ಸಂಜೆ ಬಿಡುಗಡೆಯಾಗುವ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ 70 ಕ್ಕೂ ಹೆಚ್ಚು ಜನ ಸೊಂಕಿತರು ಪತ್ತೆಯಾಗುವ ಸಾದ್ಯತೆ ಇದೆ. https://youtu.be/B9KE2v3hacw   ಬೆಳಗಾವಿ …

Read More »

ಕೊರೋನಾ ಸೋಂಕಿತರಿಗೆ ಇನ್ನು ಮುಂದೆ ಸಾರ್ವಜನಿಕ ಆಸ್ಪತ್ರೆ ಗೋಕಾಕದಲ್ಲಿ ಚಿಕಿತ್ಸೆ ಪ್ರಾರಂಭ

ಗೋಕಾಕ :ನಾಳೆ ಶುಕ್ರವಾರದಿಂದ ಕೊರೋನಾ ಸೋಂಕಿತರಿಗೆ ಗೋಕಾಕ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುವದು ಸರಕಾರ ಹಾಗೂ ಇಲಾಖೆಯ ನಿರ್ದೇಶನದಂತೆ ತಾಲೂಕಿನ ಕೊರೋನಾ ಸೋಂಕು ದೃಡಪಟ್ಟವರನ್ನು ಶುಕ್ರವಾರದಿಂದ ಸ್ಥಳೀಯ ಗೋಕಾಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವದು ಇದಕ್ಕಾಗಿ ಈಗಾಗಲೇ ಎಲ್ಲ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಆರೋಗ್ಯ ಸಿಬ್ಬಂದಿಗಳಿಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ. ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ 100 ಹಾಸಿಗೆ ಉಳ್ಳ ಸುಸಜ್ಜಿತ ಪ್ರತ್ಯೇಕ ವಾರ್ಡನ್ನು ಸಿದ್ದಗೊಳಿಸಲಾಗಿದ್ದು, …

Read More »

ದ್ರೋಣ್ ಮೂಲಕ ರಾಸಾಯನಿಕ ಸಿಂಪಡಣೆ ಮಾಡುವ ಕಾರ್ಯಾಚರಣೆಗೆ ಇಂದು ಚಾಲನೆ

ಬೆಂಗಳೂರು,ಜು.16- ನಗರದಲ್ಲಿ ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ದ್ರೋಣ್ ಮೂಲಕ ರಾಸಾಯನಿಕ ಸಿಂಪಡಣೆ ಮಾಡುವ ಕಾರ್ಯಾಚರಣೆಗೆ ಇಂದು ಚಾಲನೆ ನೀಡಲಾಯಿತು. ಕಂದಾಯ ಸಚಿವ ಆರ್.ಅಶೋಕ್ ಹಾಗೂ ಬಿಬಿಎಂಪಿ ಅಧಿಕಾರಿಗಲು ಇಂದು ದ್ರೋಣ್ ಮೂಲಕ ಸ್ಯಾನಿಟೈಸರ್ ಮಾಡುವ ಕಾರ್ಯಾಚರಣೆಗೆ ವಿದ್ಯುಕ್ತವಾಗಿ ಚಾಲನೆ ಕೊಟ್ಟರು. ಮೊದಲ ಹಂತದಲ್ಲಿ ಬೆಂಗಳೂರಿನ ಯಾವ ಯಾವ ಭಾಗದಲ್ಲಿ ಹೆಚ್ಚಿನ ಸೋಂಕಿನ ಪ್ರಕರಣಗಳಿವೆಯೋ ಅಂತಹ ಕಡೆ ದ್ರೋಣ್ …

Read More »

ಕರ್ನಾಟಕವನ್ನು ದೇವರೇ ಕಾಪಾಡಬೇಕು ಎಂದಶ್ರೀರಾಮುಲು ರಾಜೀನಾಮೆ ನೀಡಲಿ:ಡಿ.ಕೆ. ಶಿ

ಬೆಂಗಳೂರು:  ಕರ್ನಾಟಕವನ್ನು ದೇವರೇ ಕಾಪಾಡಬೇಕು ಎಂದ ಆರೋಗ್ಯ ಸಚಿವ ಶ್ರೀರಾಮುಲು ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಂಡಿಸಿದ್ದು,  ಸರ್ಕಾರ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಕರ್ನಾಟವನ್ನು ದೇವರೆ ಕಾಪಾಡಬೇಕು ಎಂದು ಶ್ರೀರಾಮುಲು ಹೇಳಿದ್ದಂತೆ ಅಲ್ಲ, ಒಂದು ಸರ್ಕಾರ ಹೇಳಿದಂತೆ. ಯಡಿಯೂರಪ್ಪ ನೇತೃತ್ವದ ಟೀಂ ಅಧಿಕಾರ ಬೇಕು ಅಂತಾ ಬಹಳ ಶ್ರಮವಹಿಸಿ ಬಂದು ಈಗ ದೇವರು ಕಾಪಾಡಬೇಕು ಅನ್ನುವುರಾದರೆ, ಒಂದು ಕ್ಷಣವೂ ಅಧಿಕಾರದಲ್ಲಿರು ಸಾಧ್ಯವಿಲ್ಲ. ಈ ಸರ್ಕಾರ ಕೂಡಲೇ …

Read More »

ಗುಡಿ ಗಂಡಾರಗಳಲ್ಲಿ ದೇವರಿಲ್ಲ. ಈ ದೇಶವನ್ನು ಕಟ್ಟಿದ ಶ್ರಮಜೀವಿಗಳೇ ನಿಜವಾದ ದೇವರುಗಳು: ಆರ್.ಎಸ್.ದರ್ಗೆ

ಬೆಳಗಾವಿ: ಗುಡಿ ಗಂಡಾರಗಳಲ್ಲಿ ದೇವರಿಲ್ಲ. ಈ ದೇಶವನ್ನು ಕಟ್ಟಿದ ಶ್ರಮಜೀವಿಗಳೇ ನಿಜವಾದ ದೇವರುಗಳು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಹೇಳಿದ್ದಾರೆ. ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ವತಿಯಿಂದ ಜುಲೈ 27 ರÀವರೆಗೆ ಹಮ್ಮಿಕೊಂಡಿರುವ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನದ ಅಂಗವಾಗಿ ಗುರುವಾರದಂದು ಅಲೆಮಾರಿ ಬುಡಕಟ್ಟು ಜನಾಂಗದ ಹೋರಾಟಗಾರ ಮಲ್ಲೇಶ ಹೆಳವರ ಅವರನ್ನು ಶ್ರೀನಗರದಲ್ಲಿಯ ಅವರ ನಿವಾಸದಲ್ಲಿ ಸತ್ಕರಿಸಿ ಅವರು ಮಾತನಾಡಿದರು. …

Read More »

ಪೊಲೀಸರ ಕಂಡರೆ ಭಯವೇ ಇಲ್ಲ:ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಮೊದಲು ಪೊಲೀಸರು ಅಂದ್ರೆ ಜನರಿಗೆ ಭಯ ಇರುತಿತ್ತು. ಆದರೆ ಇತ್ತೀಚೆಗೆ ಜನರಿಗೆ ಪೊಲೀಸರ ಕಂಡರೆ ಭಯವೇ ಇಲ್ಲದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿಯವರೆಗೆ ಹಾಫ್ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಇಂದು ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಸಿಪಿಐ ಹಾಗೂ ಸಿಪಿಐ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಚಿವರು ಕೊರೊನಾ …

Read More »

ಬೆಂಗಳೂರಿನಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ತೆರೆಯಲು ಮುಂದಾದ ಸರ್ಕಾರ

ಬೆಂಗಳೂರು,ಜು.16- ಕೊರೋನಾ ಮಟ್ಟಹಾಕಲು ಕಠಿಣ ಕ್ರಮಗಳನ್ನು ತೆಗೆದುಕೊಂಡು ದಿಟ್ಟ ಹೋರಾಟ ಮಾಡುತ್ತಿರುವ ರಾಜ್ಯ ಸರ್ಕಾರ ಇದೀಗ ನಗರದಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕೋವಿಡ್-19 ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ನಿನ್ನೆಯಷ್ಟೇ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ್ದು, ಸಭೆಯಲ್ಲಿ ಬೆಂಗಳೂರು ನಗರದಲ್ಲಿ 2 ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ನಗರದಲ್ಲಿ 8 ಕೋವಿಡ್ ಕೇರ್ ಕೇಂದ್ರಗಳು ಅಸ್ತಿತ್ವದಲ್ಲಿದ್ದು, …

Read More »