Breaking News

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು: ರಮೇಶ್ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯಬಿದ್ದರೆ ಹೆಚ್ಚುವರಿ ರಸಗೊಬ್ಬರ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು. ಗೊಬ್ಬರ ಕೊರತೆಯಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ  ಕರೆಯಲಾಗಿದ್ದ ಕೃಷಿ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದ್ಯಕ್ಕೆ ಇರುವ ದಾಸ್ತಾನು ರೈತರಿಗೆ ಸಮರ್ಪಕವಾಗಿ ವಿತರಿಸಬೇಕು. ಒಂದು ವೇಳೆ ಜಿಲ್ಲೆಗೆ …

Read More »

ಶೇ. 50 ಖಾಸಗಿ ಆಸ್ಪತ್ರೆಯ ಬೆಡ್ ಗಳು ಕೊರೊನಾ ಸೋಂಕಿತರಿಗೆ ಮೀಸಲಿಡಬೇಕು: ಸತೀಶ ಜಾರಕಿಹೊಳಿ

ಗೋಕಾಕ:  ಶೇ. 50 ಖಾಸಗಿ ಆಸ್ಪತ್ರೆಯ ಬೆಡ್ ಗಳು ಕೊರೊನಾ ಸೋಂಕಿತರಿಗೆ ಮೀಸಲಿಡಬೇಕು ಎಂಬ ಸರ್ಕಾರದ  ನಿಯಮದಿಂದ ಹಿಂದೆ  ಸರಿಯಬೇಕು.  ಬೇಕಿದ್ದರೆ  ಸರ್ಕಾರಿ ಆಸ್ಪತ್ರೆಗಳಿಗೆ   ಖಾಸಗಿ ವೈದ್ಯರನ್ನು ಕರೆಸಿಕೊಂಡು ಸೇವೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಲಹೆ ನೀಡಿದ್ದಾರೆ. ನಿನ್ನೆಯಷ್ಟೇ ಕೋವಿಡ್ ನಿರ್ವಹಣೆ ವಿಚಾರವಾಗಿ  ಸತೀಶ ಜಾರಕಿಹೊಳಿ ಅವರು  ಸರ್ಕಾರಕ್ಕೆ  ಕೆಲವು ಸಲಹೆಗಳನ್ನು ನೀಡಿದ್ದರು. ಅದೇ ವಿಚಾರವಾಗಿ ಸೋಮವಾರ ಗೋಕಾಕ ನಗರದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದರು.  …

Read More »

ಕೊರೊನಾ ಸೋಂಕಿತರ ಶವ ಅದಲು  ಬದಲು ಮಾಡಿದ:ಬಿಮ್ಸ್ ಆಸ್ಪತ್ರೆ

ಬೆಳಗಾವಿ: ಸದಾ ಒಂದಿಲ್ಲದೊಂದು ವಿವಾದಗಳಿಂದ ಹೆಸರುವಾಸಿಯಾಗುತ್ತಿರುವ ಇಲ್ಲಿನ ಬಿಮ್ಸ್ ಆಸ್ಪತ್ರೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಕೊರೊನಾ ಸೋಂಕಿತರ ಶವ ಅದಲು  ಬದಲು ಮಾಡಿ ಮತ್ತೆ ಸುದ್ದಿಯಾಗಿದೆ. ಕ್ಯಾಂಪ್ ನಗರದ 57 ವರ್ಷದ ವೃದ್ದೆ ಶವ ಅದಲು ಬದಲಾಗಿದೆ. ಕಳೆದ ಶನಿವಾರ  ಮೃತ ವೃದ್ದೆಯ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆದ್ರೆ ಆಸ್ಪತ್ರೆ ಸಿಬ್ಬಂದಿ  ಮತ್ತೆ ಕರೆ ಮಾಡಿ,   ಯಾಕೆ ಇನ್ನು ನೀವು ಶವ ತಗೆದುಕೊಂಡು ಹೋಗಿಲ್ಲ?. ಕೂಡಲೇ ಬಂದು ಶವ …

Read More »

ಚಳಿಗಾಲದಲ್ಲಿ ಹೆಚ್ಚಾಗಲಿದೆ ಕೊರೋನಾ ಅಟ್ಟಹಾಸ,

ನವದೆಹಲಿ, ಜು.20- ಮಾರಣಾಂತಿಕ ಕೊರೊನಾ ವೈರಸ್ ಈಗಾಗಲೇ ದೇಶದಲ್ಲಿ ಸಾಮೂದಾಯಿಕವಾಗಿ ಹರಡಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಈ ನಡುವೆ ಮಳೆ ಮತ್ತು ಚಳಿಗಾಲದ ಸಂದರ್ಭದಲ್ಲಿ ವೈರಸ್ ಹರಡುವ ವೇಗ ಪಾದರಸದಂತೆ ಮತ್ತಷ್ಟು ಹೆಚ್ಚಾಗಲಿದೆ ಎಂಬ ಮತ್ತೊಂದು ಆಘಾತಕಾರಿ ವಿಚಾರವನ್ನು ಭುವನೇಶ್ವರ್ ಐಐಟಿ ಮತ್ತು ಏಮ್ಸ್ ಸಂಶೋಧಕರು ಜಂಟಿಯಾಗಿ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಐಐಟಿ ಭುವನೇಶ್ವರ ಮತ್ತು ಏಮ್ಸ್ ವಿಜ್ಞಾನಿಗಳು ನಡೆಸಿದ ಅಧ್ಯಯನವು ಮಾನ್ಸೂನ್ ಮತ್ತು ಚಳಿಗಾಲದಲ್ಲಿ ಕೊರೊನಾ ವೈರಸ್ ಕೋವಿಡ್ …

Read More »

ಅಂತ್ಯಕ್ರಿಯೆ ಮಾಡಲು ಜನರಿಗೆ ತೊಂದರೆಆದರೆ ತಹಶೀಲ್ದಾರ್ ಮನೆ ಮುಂದೆ ಶವ ತಂದು ಇಡುತ್ತೇವೆ: ಉಮೇಶ ಕತ್ತಿ

ಚಿಕ್ಕೋಡಿ: ಅಂತ್ಯಕ್ರಿಯೆ ಮಾಡಲು ಜನರಿಗೆ ತೊಂದರೆ ಆಗಬಾರದು. ತೊಂದರೆ ಆದರೆ ತಹಶೀಲ್ದಾರ್ ಮನೆ ಮುಂದೆ ಶವ ತಂದು ಇಡುತ್ತೇವೆ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಹುಕ್ಕೇರಿ ತಹಶೀಲ್ದಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಆಯೋಜಿಸಿದ್ದ ಕೊರೊನಾ ನಿಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಅಂತ್ಯಕ್ರಿಯೆ ಮಾಡಲು ಯಾವುದೇ ಸಮಸ್ಯೆ ಆಗಬಾರದು. ಸರ್ಕಾರಿ ಜಮೀನುಗಳಿದ್ದರೆ ಅವುಗಳನ್ನು ಸ್ಮಶಾನಗಳಿಗಾಗಿ ಮೀಸಲಿಡಬೇಕು …

Read More »

ಅಳಿಯನೊಂದಿಗೆ ಮೂರು ಮಕ್ಕಳ ತಾಯಿ ಸಂಬಂಧ – ಪತಿಗೆ ತಿಳಿಯುತ್ತಿದ್ದಂತೆ ಆತ್ಮಹತ್ಯೆ

ಹೈದರಾಬಾದ್: ಅಕ್ರಮ ಸಂಬಂಧದ ವಿಚಾರ ಪತಿಗೆ ತಿಳಿಯುತ್ತಿದ್ದಂತೆ ಮಹಿಳೆ ತಾನು ಸಂಬಂಧ ಹೊಂದಿದ್ದ ಯುವಕನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ನಡೆದಿದೆ. ದೇವಮ್ಮ (30) ಮತ್ತು ಶಿವ ನಾಯಕ್ (20) ಆತ್ಮಹತ್ಯೆ ಮಾಡಿಕೊಂಡವರು. ಸಂಬಂಧದಲ್ಲಿ ಅಳಿಯನಾಗಬೇಕಿದ್ದ ಯುವಕನೊಂದಿಗೆ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ಪತಿಗೆ ತಿಳಿಯುತ್ತಿದ್ದಂತೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   https://www.facebook.com/105350550949710/posts/182529756565122/?sfnsn=wiwspwa&extid=lWaxzjRYmeP37MlU&d=w&vh=e   ಮೃತ ದೇವಮ್ಮ 10 ವರ್ಷಗಳ ಹಿಂದೆ ರಾಜು ಜೊತೆ …

Read More »

ತಿರುಪತಿ ಯಲ್ಲಿ ಇಳಿಯ ಬೇಕಾದ ವಿಮಾನ ಬೆಂಗಳೂರಿನಲ್ಲಿ ಇಳಿದು ಜನರ ಪ್ರಾಣ ಉಳಿಸಿದೆ..!

ತಿರುಪತಿ: ಪೈಲಟ್ ಒಬ್ಬರ ಸಮಯ ಪ್ರಜ್ಞೆಯಿಂದ 75 ಜನ ಪ್ರಯಾಣಿಕರ ಜೀವ ಉಳಿದಿರುವ ಘಟನೆ ತಿರುಪತಿಯಲ್ಲಿ ಭಾನುವಾರ ನಡದಿದೆ. ಹೈದರಾಬಾದ್‌-ತಿರುಪತಿ-ಬೆಂಗಳೂರು ಮಧ್ಯೆ ಸಂಚಿಸಲಿರುವ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನವೊಂದು ಭಾರಿ ಅಪಘಾತಕ್ಕೆ ಈಡಾಗುವ ಸಂಭವವಿತ್ತು. ಈ ಮಧ್ಯೆಯೇ ಪೈಲಟ್‌ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿದಿದೆ. ತಿರುಪತಿಯಲ್ಲಿ ಇಳಿಯಬೇಕಿದ್ದ ವಿಮಾನವನ್ನು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ತಂದು ಇಳಿಸಲಾಗಿದೆ. ನಿನ್ನೆ ಬೆಳಗ್ಗೆ ಈ ವಿಮಾನವು  ಪ್ರಯಾಣಿಕರನ್ನು ಇಳಿಸುವ ಸಂಬಂಧ ತಿರುಪತಿ ಅಂತಾರಾಷ್ಟ್ರೀಯ …

Read More »

ಕೋವಿಡ್ ಪರಿಕರಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ:ಕಾಂಗ್ರೆಸ್ ನಾಯಕರು, 

ಬೆಂಗಳೂರು:  ಕೋವಿಡ್ ಪರಿಕರಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕರು,  ಈ  ಹಿಂದೆ ಲೆಕ್ಕ ಕೊಡಿ ಎಂಬ ಅಭಿಯಾನ ಆರಂಭಿಸಿದ್ದರು. ಇದೀಗ ಈ ವಿಚಾರದಲ್ಲಿ ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸೋಮವಾರ  ನಡೆದ ಸಭೆಯಲ್ಲಿ ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾದ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸಿದರು. ಕೊರೊನಾ ಹೆಸರಲ್ಲಿ ರಾಜ್ಯ ಸರ್ಕಾರ ಲೂಟಿ …

Read More »

ಅಮವಾಸ್ಯೆ ಹೂ, ಹಣ್ಣಿಗೆ ಮುಗಿಬಿದ್ದ ಜನ- ಲಾಕ್‍ಡೌನ್ ಮಧ್ಯೆ ಭಕ್ತರಿಂದ ತುಂಬಿದ ದೇವಾಲಯ

ರಾಯಚೂರು: ಭೀಮನ ಅಮವಾಸ್ಯೆ ಹಾಗೂ ಶ್ರಾವಣ ಆರಂಭ ಹಿನ್ನೆಲೆ ರಾಯಚೂರಿನಲ್ಲಿ ಕೊರೊನಾ ಹರಡುವಿಕೆ ಭೀತಿ ಮರೆತು ಭಕ್ತರು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ನಗರದ ಉರುಕುಂದಿ ಈರಣ್ಣ ದೇವಾಲಯದಲ್ಲಿ ಭಕ್ತರ ದಂಡು ಹರಿದು ಬಂದಿದೆ. ಲಾಕ್‍ಡೌನ್ ಮಧ್ಯೆ ಅಮವಾಸ್ಯೆ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು, ಇದರಿಂದ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಎಲ್ಲವನ್ನೂ ಮರೆತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕೆಯಾಗಿ ಕೆಲ …

Read More »

ಕೊರೊನಾ ತಡೆಗಟ್ಟಲು ಲಾಕ್ ಡೌನ್ ವೊಂದೆ ಮಾರ್ಗವಲ್ಲ:ರಮೇಶ ಜಾರಕಿಹೊಳಿ

ಬೆಳಗಾವಿ:  ಕೊರೊನಾ ತಡೆಗಟ್ಟಲು ಲಾಕ್ ಡೌನ್ ವೊಂದೆ ಮಾರ್ಗವಲ್ಲ.  ಜನರು ಸ್ವ ಪ್ರೇರಣೆಯಿಂದ ಸಹಕರಿಸಿದೆ ಮಾತ್ರ ಸೋಂಕು ತಡೆಗಟ್ಟಬಹುದು.  ಮುಂದಿನ ದಿನ  ಸಾಧಕ, ಬಾಧಕಗಳ ಕುರಿತು  ಚರ್ಚಿಸಿ ಲಾಕ್ ಡೌನ್  ಬಗ್ಗೆ ಮಾಹಿತಿ ನೀಡಲಾಗುವುದು ಎಂದು  ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ಸರ್ಕಾರ ಕೋವಿಡ್ ನಿರ್ವಹಣೆಗೆ ನಿರಂತರ ಶ್ರಮಿಸುತ್ತಿದೆ. ಬಿಮ್ಸ್ ಆಸ್ಪತ್ರೆಯಲ್ಲಿ  …

Read More »