ಸಿದ್ದರಾಮಯ್ಯರನ್ನು ಮೂಲೆ ಗುಂಪು ಮಾಡಲು ಕಾಂಗ್ರೆಸ್‌ನಲ್ಲಿ ಮಾಸ್ಟರ್ ಪ್ಲಾನ್

ಬೆಂಗಳೂರು, ಜ.21-ಸಮನ್ವಯ ಸಮಿತಿ ರಚನೆ, ಕಾರ್ಯಾಧ್ಯಕ್ಷರ ನೇಮಕಕ್ಕೆ ವಿರೋಧ, ಶಾಸಕಾಂಗ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನ ಬೇರೆ ಬೇರೆ ಮಾಡುವುದು ಸೇರಿದಂತೆ ಹಲವಾರು ಗೊಂದಲಗಳನ್ನು ಸೃಷ್ಟಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂಲೆ ಗುಂಪು ಮಾಡುವ ಪ್ರಯತ್ನ ಕಾಂಗ್ರೆಸ್‍ನಲ್ಲಿ ವ್ಯಾಪಕವಾಗಿ ನಡೆದಿದೆ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರೆಯಲು ಆಸಕ್ತಿ ಹೊಂದಿದ್ದಾರೆ. ವಿಪಕ್ಷ ಸ್ಥಾನ ಮತ್ತು ಶಾಸಕಾಂಗ ಪಕ್ಷ ನಾಯಕ ಸ್ಥಾನ ಎರಡೂ ಒಬ್ಬ …

Read More »

ಸಿದ್ದರಾಮಯ್ಯಗೆ ಎಚ್.ಕೆ.ಪಾಟೀಲ್ ಟಾಂಗ್, ಸಿಎಲ್‍ಪಿ-ವಿಪಕ್ಷ ನಾಯಕ ಸ್ಥಾನ ಬೇರ್ಪಡಿಸಲು ಸಲಹೆ

ಬೆಂಗಳೂರು, ಜ.21- ಶಾಸಕಾಂಗ ಪಕ್ಷದ ಹಾಗೂ ವಿರೋಧ ಪಕ್ಷದ ನಾಯಕ ಈ ಎರಡೂ ಸ್ಥಾನಗಳನ್ನು ಪ್ರತ್ಯೇಕಗೊಳಿಸಬೇಕೆಂದು ಹೇಳುವ ಮೂಲಕ ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. ಯುಪಿಎ ಅವಧಿಯಿಂದಲೂ ಸಂಸತ್‍ನಲ್ಲಿ ವಿಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿವೆ. ಮಹಾರಾಷ್ಟ್ರದಲ್ಲಿ ಇದೇ ರೀತಿ ಎರಡು ಹುದ್ದೆಗಳನ್ನು ಬೇರ್ಪಡಿಸಲಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಎರಡು ಹುದ್ದೆಗಳು …

Read More »

9 ನೂತನ ಶಾಸಕರಿಗೆ ಸಚಿವ ಸ್ಥಾನದ ಪಟ್ಟಿ ರೆಡಿ, ಖಾತೆ ಹಂಚಿಕೆ ಬಾಕಿ..!

ಬೆಂಗಳೂರು,ಜ.20- ಅಮಿತ್ ಷಾ ಸಿದ್ಧಪಡಿಸಿ ದ್ದಾರೆ ಎನ್ನಲಾದ ಸಚಿವರ ಪಟ್ಟಿ ಅಂತಿಮಗೊಂಡರೆ ಉಪಚುನಾವಣೆಯಲ್ಲಿ ಗೆದ್ದ 7 ಶಾಸಕರ ಜೊತೆಗೆ 2018ರ ಚುನಾವಣೆಯಲ್ಲಿ ಗೆದ್ದಿದ್ದ ಪಕ್ಷದ ಇಬ್ಬರು ಶಾಸಕರು ಯಡಿಯೂರಪ್ಪ ನವರ ಸಂಪುಟ ಸೇರ್ಪಡೆಯಾಗುವುದು ಖಚಿತವಾಗಿದ್ದು, ಅವರಿಗೆ ಯಾವ ಖಾತೆ ನೀಡಬೇಕೆಂಬು ದನ್ನೂ ಕೂಡ ಷಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ 11 ಮಂದಿ ನೂತನ ಶಾಸಕರು ಯಾವಾಗ ಸಚಿವ ಸಂಪುಟ ವಿಸ್ತರಣೆಯಾಗಿ ತಮಗೆ ಸಚಿವ ಹುದ್ದೆ ನೀಡುತ್ತಾರೊ ಎಂದು ಕಾಯುತ್ತಿದ್ದಾರೆ. …

Read More »

ಕೆಪಿಎಸ್‍ಸಿಯ ಹೈಟೆಕ್ ಭ್ರಷ್ಟಾಚಾರದ ವಿರುದ್ಧ ನ್ಯಾಯಾಂಗ ತನಿಖೆ………..

ಬೆಂಗಳೂರು, ಜ.20- ಗೆಜೆಟೆಡ್ ಪ್ರೊಬೇಷನರಿ ಹುದ್ದೆ -2015ಕ್ಕೆ ನಡೆಸಲಾದ ಮುಖ್ಯ ಪರೀಕ್ಷೆಯ ಮೌಲ್ಯ ಮಾಪನ ಸೇರಿದಂತೆ ಕೆಪಿಎಸ್‍ಸಿಯ ಹೈಟೆಕ್ ಭ್ರಷ್ಟಾಚಾರದ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿರುವ ಕೆಎಎಸ್ ನೊಂದ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆ ಸರ್ಕಾರ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಕೆಪಿಎಸ್‍ಸಿ ಲೂಟಿಕೋರರ ಸಂಘವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ, ಹಲವಾರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿರುದ್ಧ ಕಾನೂನು ಹೋರಾಟವನ್ನು …

Read More »

ದೇಶಾದ್ಯಂತ ಜ.31ರಿಂದ ಎರಡು ದಿನ ಬ್ಯಾಂಕ್ ಬಂದ್

ನವದೆಹಲಿ, ಜ.20- ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರು ಮತ್ತೆ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಸಜ್ಜಾಗುತ್ತಿದ್ದಾರೆ.ಇದೇ ಜ.31ರಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟಗಳು ಕರೆ ನೀಡಿವೆ.  ಒಂಬತ್ತು ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸುವ ಯುನೈಟೆಡ್ ಪೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ ಬಿಯು) ಈ ಮುಷ್ಕರಕ್ಕೆ ಕರೆ ನೀಡಿದ್ದು, ಮಾ.11 ರಿಂದ ಮಾ.13ರವರೆಗೆ ಮೂರು ದಿನಗಳ ಕಾಲ ಮುಷ್ಕರ ನಡೆಸುವುದಾಗಿಯೂ ಹೇಳಿಕೊಂಡಿದೆ. ಒಂದು ವೇಳೆ …

Read More »

ಚಿಕ್ಕೋಡಿ ನಗರದಲ್ಲಿ ನಡೆದ ಆರ್ ಎಸ್ ಎಸ್ ಸ್ವಯಂಸೇವಕರ ಪಥ ಸಂಚಲನ

ಚಿಕ್ಕೋಡಿ ನಗರದಲ್ಲಿ ನಡೆದ ಆರ್ ಎಸ್ ಎಸ್ ಸ್ವಯಂಸೇವಕರ ಪಥ ಸಂಚಲದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಸೌ.ಶಶಿಕಲಾ ಜೊಲ್ಲೆ,ಜಿ ಇವರೊಂದಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ,ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. …

Read More »

ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ, ಕೆ-4 ಪ್ರೇಕ್ಷೆಪಕ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಯಶಸ್ವಿ

ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ, ಕೆ-4 ಪ್ರೇಕ್ಷೆಪಕ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಯಶಸ್ವಿ ನವದೆಹಲಿ,ಜ.20- ವೈರಿ ಪಡೆಗಳ ಮೇಲೆ ಅತ್ಯಂತ ನಿಖರ ದಾಳಿ ನಡೆಸುವ ಭಾರತದ ನೌಕಾದಳ ಬತ್ತಳಿಕೆಗೆ ಮತ್ತೊಂದು ಅಘಾತ ಸಾಮಥ್ರ್ಯದ ಪ್ರಬಲ ಶಸ್ತ್ರಾಸ್ತ್ರವೊಂದು ಸೇರ್ಪಡೆಯಾಗಿದೆ. ಸಾಗರ ಗರ್ಭದಲ್ಲಿ ಜಲಾಂತರ್ಗಾಮಿಯಿಂದ ಅಣ್ವಸ್ತ್ರ ಸಾಮಥ್ರ್ಯದ ಕೆ-4 ಪ್ರೇಕ್ಷೆಪಕ ಕ್ಷಿಪಣಿ ಪರೀಕ್ಷೆಯನ್ನು ಆಂಧ್ರಪ್ರದೇಶ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. 3,500 ಕಿ.ಲೋ ದೂರದ ವೈರಿ ನೆಲೆಯನ್ನು ನಿಖರವಾಗಿ ತಲುಪ ಬಲ್ಲ ಈ ಖಂಡಾಂತರ …

Read More »

ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಆರೋಪ ಹೊತ್ತಿರುವ ಯುವತಿ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ.

ಮೈಸೂರು,ಜ.20- ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಆರೋಪ ಹೊತ್ತಿರುವ ಯುವತಿ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ. ನಳಿನಿ ಪರ ವಕಾಲತ್ತು ವಹಿಸಲು ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಿಂದ ವಕೀಲರು ಆಗಮಿಸಿ 250ಕ್ಕೂ ಹೆಚ್ಚು ಸಹಿ ಇರುವ ವಕಾಲತ್ತು ಪತ್ರವನ್ನು ಇಂದು ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಿಗೆ ಸಲ್ಲಿಸಿದ್ದಾರೆ. ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರಿನ …

Read More »

ಉಪಚುನಾ ವಣೆಯಲ್ಲಿ ಗೆದ್ದವರ ಪರಿಸ್ಥಿತಿ ಅಂತರಪಿಶಾ ಚಿಗಳಂತಾಗಿದೆ

ಬೆಂಗಳೂರು,ಜ.20- ಉಪಚುನಾ ವಣೆಯಲ್ಲಿ ಗೆದ್ದವರ ಪರಿಸ್ಥಿತಿ ಅಂತರಪಿಶಾ ಚಿಗಳಂತಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಚಿವಾಕಾಂಕ್ಷಿಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಭೇಟಿಗೂ ಅವಕಾಶ ಕೊಡಲಿಲ್ಲ. ಒಂದು ವೇಳೆ ಸಂಪುಟ ವಿಸ್ತರಣೆ ಯಾದರೆ ನನಗಿರುವ ಮಾಹಿತಿ ಪ್ರಕಾರ ಸರ್ಕಾರದಲ್ಲಿ ಸ್ಫೋಟವಾಗುತ್ತದೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ ಕೊಡೊಲ್ಲ. ಕೊಡದಿದ್ದರೆ ನೋಡಿಕೊಳ್ಳಿ ಅಂತ ಈಗಾಗಲೇ ವಿಶ್ವನಾಥ್ ಹೇಳಿದ್ದಾರೆ. ಮುಂದಿನ …

Read More »

ನಡಿಗೆಯ ಮೂಲಕ ತಿರುಪತಿ ತಲುಪಿದ ಶಾಸಕಿ ನಿಂಬಾಳ್ಕರ್ ದಂಪತಿ

ಬೆಳಗಾವಿ, ಜ.20-ರಾಜ್ಯದ ಇತಿಹಾಸದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಶಾಸಕರಾದ ಅವರ ಪತ್ನಿ 9 ದಿನಗಳ ಪಾದಯಾತ್ರೆ ಮೂಲಕ ತೀರ್ಥಯಾತ್ರೆ ಮುಗಿಸಿ ಗಮನ ಸೆಳೆದಿದ್ದಾರೆ. ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾದ (ಆಡಳಿತ) ಹೇಮಂತ ನಿಂಬಾಳ್ಕರ್ ಮತ್ತು ಅವರ ಪತ್ನಿ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕಳೆದ ಜ. 11ರಂದು ಬೆಂಗಳೂರಿಂದ ಪಾದಯಾತ್ರೆ ಹೊರಟು ಸುದೀರ್ಘ 263 ಕಿಮೀ ನಡಿಗೆಯ 9 ದಿನಗಳ ನಂತರ ಇಂದು ತಿರುಪತಿ ತಿರುಮಲ …

Read More »