Breaking News

ಇಂದು 170 ಜನರಿಗೆ ಕೊರೊನಾ ಸೋಂಕು ಧೃಡ

ಉಡುಪಿ : ಜಿಲ್ಲೆಯಲ್ಲಿ ಇಂದು 170 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 4970 ಕ್ಕೆ ಏರಿಕೆಯಾಗಿದೆ. ಅಂತೆಯೇ ಜಿಲ್ಲೆಯಲ್ಲಿ ಇಂದು 1522 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 170 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಜಿಲ್ಲೆಯಲ್ಲಿ ಇಂದಿನ 170 ಹೊಸ ಸೋಂಕು ಪ್ರಕರಣಗಳಿಂದ ಒಟ್ಟು ಸೋಂಕಿತರ ಸಂಖ್ಯೆ 4970 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 2948 ಜನರು ಗುಣಮುಖರಾಗಿದ್ದಾರೆ. …

Read More »

32 ಸೆಕೆಂಡುಗಳ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ ರಾಮ ಮಂದಿರ ಭೂಮಿ ಪೂಜೆ

ಕೋಟ್ಯಂತರ ಭಕ್ತರು ಎದುರು ನೋಡ್ತಿದ್ದ ರಾಮ ಮಂದಿರದ ಭೂಮಿ ಪೂಜೆಯ ದಿನವು ಬಂದೇ ಬಿಟ್ಟಿದೆ. ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ಸಜ್ಜಾಗಿರೋ ಅಯೋಧ್ಯೆ ನಗರ ಈಗಾಗಲೇ ಝಗಮಗಿಸುತ್ತಿದೆ.. ಮನೆ ಮನೆಯಲ್ಲಿ ದೀಪ ಹಚ್ಚಿ ಸಂಭ್ರಮಿಸಲಾಗ್ತಿದೆ. ಬೀದಿ ಬೀದಿಯಲ್ಲಿ ಬಣ್ಣ ಹಚ್ಚಿ ಸಿಂಗಾರ ಮಾಡಲಾಗಿದೆ. ಗಲ್ಲಿ ಗಲ್ಲಿಯಲ್ಲಿ ಪ್ರಭು ಶ್ರೀ ರಾಮ ಪೋಸ್ಟರ್​ಗಳನ್ನ ಅಂಟಿಸಲಾಗಿದೆ. ದೀಪಾವಳಿ ಸಂಭ್ರಮದಂತೆ ಇಡೀ ಅಯೋಧ್ಯೆ ನಗರ ಕಂಗೊಳಿಸುತ್ತಿದೆ. ಭೂಮಿ ಪೂಜೆಗೆ 32 ಸೆಕೆಂಡ್​ಗಳ ಮೂಹೂರ್ತ ಭೂಮಿ …

Read More »

24ಗಂಟೆಯಲ್ಲಿ ಪತ್ತೆಯಾದ ಹೊಸ ಕರೊನಾ ಪ್ರಕರಣಗಳಿಗಿಂತ ಡಿಸ್​​ಚಾರ್ಜ್​ ಆದವರೇ ಹೆಚ್ಚು; 110 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಕರೊನಾದಿಂದ ಚೇತರಿಕೆ ಕಾಣುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಸಮಾಧಾನ ಮೂಡಿಸಿದೆ. ಕಳೆದ 24 ಗಂಟೆಯಲ್ಲಿ ಹೊಸ ಕರೊನಾ ಪ್ರಕರಣಗಳಿಗಿಂತ, ಸೋಂಕಿನಿಂದ ಮುಕ್ತರಾಗಿ ಡಿಸ್​ಚಾರ್ಜ್ ಆದವರ ಸಂಖ್ಯೆಯೇ ತುಸು ಜಾಸ್ತಿ ಇದೆ. 24 ಗಂಟೆಯಲ್ಲಿ 6,259 ಹೊಸ ಕರೊನಾ ಕೇಸ್​​ಗಳು ಪತ್ತೆಯಾಗಿದ್ದು, ಒಟ್ಟು 6,777 ಮಂದಿ ಗುಣಮುಖರಾಗಿ, ಡಿಸ್​​ಚಾರ್ಜ್​ ಆಗಿದ್ದಾರೆ. 110 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗಿನ ಕರೊನಾ ಸೋಂಕಿತರ ಸಂಖ್ಯೆ 1,45.830ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 2704. ಹಾಗೇ ಡಿಸ್​​ಚಾರ್ಜ್​ …

Read More »

ಆಲದ ಮರವೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ

ಚಾಮರಾಜನಗರ: ರಸ್ತೆ ಬದಿಯಲ್ಲಿದ್ದ ಬೃಹತ್ ಆಲದ ಮರವೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಹನೂರು ಪಟ್ಟಣದ ಹೊರ ವಲಯದ ಮಲೆಮಹದೇಶ್ವರ ಕ್ರೀಡಾಂಗಣದ ಬಳಿ ಇಂದು ಬೆಳಿಗ್ಗೆ ನಡೆದಿದೆ. ಗಾಯಗೊಂಡವರನ್ನು ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕೀರೆಪಾತಿ ಗ್ರಾಮದ ಜೋಸೆಫ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಇಂದು ಬೆಳಗ್ಗೆ 6:30ರ ಸುಮಾರಿಗೆ ಮಾರ್ಟಳ್ಳಿಯಿಂದ ಹನೂರಿಗೆ ಬೈಕಿನಲ್ಲಿ ಹೊರಟಿದ್ದರು. ಬೈಕ್ ಅಜ್ಜೀಪುರ ರಸ್ತೆಯ ಕ್ರೀಡಾಂಗಣದ …

Read More »

ಗೋಕಾಕ್ , ಮೂಡಲಗಿ ತಾಲ್ಲೂಕಿನಲ್ಲಿ ಮಂಗಳವಾರ ಒಂದೇ ದಿನ 65 ಜನರಿಗೆ ಕೊರೊನಾ ಸೋಂಕು

ಗೋಕಾಕ್:  ಗೋಕಾಕ್ , ಮೂಡಲಗಿ ತಾಲ್ಲೂಕಿನಲ್ಲಿ  ಮಂಗಳವಾರ ಒಂದೇ ದಿನ 65 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ. ಇಂದು ಮಾಹಿತಿ ನೀಡಿರುವ ಅವರು , ಮೂಡಲಗಿ ಸಿಡಿಪಿಓ ಸೇರಿ ಎರಡು ತಾಲ್ಲೂಕಿನಲ್ಲಿ 65 ಜನರಿಗೆ ಕೊರೊನಾ ದೃಢಪಟ್ಟಿದೆ. ಗೋಕಾಕಿನ ಸಂಗಮ ನಗರದ 65 ವರ್ಷದ ವೃದ್ದೆ ಸೋಂಕಿಗೆ ಬಲಿಯಾಗಿದ್ದಾರೆ. ಗೋಕಾಕ ನಗರದಲ್ಲಿ-49 , ಕರಗುಪ್ಪಿ -1 , ಮೂಡಲಗಿ -2 , …

Read More »

ಚಿಕ್ಕೋಡಿ ಪೊಲೀಸ ಠಾಣೆ ಯನ್ನು ಸೀಲ್‍ಡೌನ್ ಮಾಡಲಾಗಿದೆ.

ಚಿಕ್ಕೋಡಿ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಇದೀಗ ಚಿಕ್ಕೋಡಿ ಪೊಲೀಸ ಠಾಣೆಗೂ ವಕ್ಕರಿಸಿಕೊಂಡಿದ್ದು, ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೊಂಕು ಧೃಢಪಟ್ಟಿದ್ದು,  ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.

Read More »

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ  ಪ್ರತಿಭಾನ್ವಿತ  ನಾಲ್ಕು ಜನರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಅಭಿನಂದನೆ

ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ  ಪ್ರತಿಭಾನ್ವಿತ  ನಾಲ್ಕು ಜನರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲೆಯ ಹೆಮ್ಮೆ ಪುತ್ರರಾದ ಅಥಣಿ ತಾಲ್ಲೂಕಿನ ಮೋಳೆ ಗ್ರಾಮದ ಜಗದೀಶ್ ಅಡಹಳ್ಳಿ 440ನೇ ಸ್ಥಾನ, ಹುಕ್ಕೇರಿ ತಾಲ್ಲೂಕಿನ ಯರನಾಳದ ಪ್ರಭುಲ್ ದೇಸಾಯಿ 532ನೇ ಸ್ಥಾನ, ರಾಯಬಾಗ ತಾಲ್ಲೂಕಿನ ಗಜಾನನ ಬಾಲೆಯವರು 663ನೇ ರ್ಯಾಂಕ್, ಚಿಕ್ಕೋಡಿಯ ಪ್ರಿಯಾಂಕ …

Read More »

ಬೆಡ್ ಖಾಲಿ ಇದೆ, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ” ಎಂದು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಭರ್ಜರಿ ಆಫರ್ ಕೊಟ್ಟಿದೆ.

ಬೆಂಗಳೂರು: “ಬೆಡ್ ಖಾಲಿ ಇದೆ, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ” ಎಂದು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಭರ್ಜರಿ ಆಫರ್ ಕೊಟ್ಟಿದೆ. ನಗರದಲ್ಲಿ ಶೇ.50ರಷ್ಟು ಬೆಡ್ ಬಿಟ್ಟು ಕೊಡುವುದಕ್ಕೆ ಕಳ್ಳಾಟ ವಾಡುತ್ತಿರುವ ಖಾಸಗಿ ಆಸ್ಪತ್ರೆಯ ಮಧ್ಯೆ ಲಗ್ಗೆರೆಯ ‘ಬೆಥಲ್ ಮೆಡಿಕಲ್ ಮಿಷನ್’ ಆಸ್ಪತ್ರೆ ಸೇವಾ ಮನೋಭಾವ ಹೊಂದಿದೆ. ಈ ಡಿಸೆಂಬರಿನಲ್ಲಿ ಉದ್ಘಾಟನೆಯಾಗಬೇಕಾಗಿದ್ದ ಆಸ್ಪತ್ರೆಯನ್ನು ಸಂಪೂರ್ಣ ಕೊರೊನಾ ರೋಗಿಗಳಿಗೆ ಮೀಸಲಿಟ್ಟಿದೆ. ಬರೋಬ್ಬರಿ 400 ಬೆಡ್, 12 ಐಸಿಯು ವೆಂಟಿಲೇಟರ್ ಬೆಡ್ …

Read More »

ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸೋಮವಾರ ರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ದಾಖಲಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೊವಿಡ್ ತಗುಲಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ಕೇಳಿ ಮನಸ್ಸಿಗೆ ಘಾಸಿಯಾಯಿತು. ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೂ …

Read More »

ಐವಾನ್ ಡಿಸೋಜಾ ಜೊತೆ ಸುತ್ತಾಡಿದ ಡಿಕೆಶಿಗೆ ಯಾಕಿಲ್ಲ ಕ್ವಾರಂಟೈನ್?

ಮಂಗಳೂರು: ಮಾಜಿ ಎಂಎಲ್‍ಸಿ ಐವಾನ್ ಡಿಸೋಜಾಗೆ ಕೊರೊನಾ ಪಾಸಿಟಿವ್ ಆಗಿದ್ರೂ ಅವರ ಜೊತೆ ದಿನವಿಡೀ ಸುತ್ತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಇಂದು ಕೂಡಾ ಜನರ ಮಧ್ಯೆ ಸುತ್ತಾಡುತ್ತಿದ್ದಾರೆ. ಕಾನೂನು, ನಿಯಮಗಳು ಜನಪ್ರತಿನಿಧಿಗಳಿಗೆ ಅನ್ವಯ ಆಗಲ್ವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಜುಲೈ 31 ರಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ಸ್ವಾಗತಿಸಲು ಐವಾನ್ ಡಿಸೋಜಾ ಅವರು ಹೋಗಿದ್ದರು. ಯಾವುದೇ ಸಾಮಾಜಿಕ ಅಂತರವಿಲ್ಲದೆ ಜೊತೆಯಲ್ಲಿದ್ದು ಬಳಿಕ ಕಾಂಗ್ರೇಸ್ …

Read More »