Breaking News

ಕರೋನಾ : ಸರ್ಕಾರದ ಆದೇಶಕ್ಕೂ ಕ್ಯಾರೇ ಅನ್ನದ ಧನದಾಹಿ ಶಿಕ್ಷಣ ಸಂಸ್ಥೆಗಳು.

ಕರೋನಾ : ಸರ್ಕಾರದ ಆದೇಶಕ್ಕೂ ಕ್ಯಾರೇ ಅನ್ನದ ಧನದಾಹಿ ಶಿಕ್ಷಣ ಸಂಸ್ಥೆಗಳು..! ಬೆಂಗಳೂರು, ಮಾ.14- ಇಡೀ ರಾಜ್ಯವೇ ಕೊರೊನಾ ಭೀತಿ ಆತಂಕ ಎದುರಿಸುತ್ತಿದೆ. ಆದರೆ, ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶುಲ್ಕ ವಸೂಲಿಯಲ್ಲಿ ತೊಡಗಿವೆ.  1 ರಿಂದ 6ನೆ ತರಗತಿವರೆಗೆ ಬೇಸಿಗೆ ರಜೆ ಘೋಷಣೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ. ಆದರೆ, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನೂ ಪರೀಕ್ಷೆ ನಡೆದಿರಲಿಲ್ಲ. ಪ್ರವೇಶ ಪತ್ರ ಕೊಡುವ ನೆಪದಲ್ಲಿ ಶುಲ್ಕ …

Read More »

ಒಂದು ವಾರ ಕರ್ನಾಟಕ‌ ಸ್ಥಬ್ದ,ತೆರೆಯಲ್ಲ ಮಾಲ್,ಥೆಯೇಟರ್,ಕ್ಲಬ್,ಪಾರ್ಕ್

ಒಂದು ವಾರ ಕರ್ನಾಟಕ‌ ಸ್ಥಬ್ದ,ತೆರೆಯಲ್ಲ ಮಾಲ್,ಥೆಯೇಟರ್,ಕ್ಲಬ್,ಪಾರ್ಕ್  : CM statement at a weekly action / news conference to prevent Karnataka bund / coronavirus infection ಬೆಂಗಳೂರು : ಕೊರೊನಾ ವೈರಸ್ ಸೊಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಬೆಂಗಳೂರಿನಲ್ಲಿ ಸುದ್ದಿಗೊಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಒಂದು ವಾರದ ವರೆಗೆ ಮಾಲ್ ಮತ್ತು ಥಿಯೆಟರ್ ಸೇರಿದಂತೆ ಕ್ಲಬ್,ಪಬ್ ಗಳು ಬಂದ್ …

Read More »

ಕೊರೊನಾ ಆತಂಕದಿಂದ ಶೇಕ್ ಹ್ಯಾಂಡ್ ಬದಲು ‘ನಮಸ್ತೆ’ಗೆ ಹೊರೆಹೋದ ಟ್ರಂಪ್

ವಾಷಿಂಗ್ಟನ್, ಮಾ.13- ವಿಶ್ವವನ್ನು ಕಂಗೆಡಿಸಿರುವ ಮಾರಕ ಕೊರೊನಾ ಆತಂಕದಿಂದ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಹೆದರಿ ಕಂಗಾಲಾಗಿದೆ. ಇದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹೊರತಾಗಿಲ್ಲ. ತಮ್ಮನ್ನು ಭೇಟಿ ಮಾಡುವ ವಿವಿಧ ದೇಶಗಳ ಅಧಿಪತಿಗಳು ಮತ್ತು ಗಣ್ಯಾತಿಗಣ್ಯರನ್ನು ಟ್ರಂಪ್ ಹಸ್ತಲಾಂಘವ ಮಾಡಿ ಆಲಂಗಿಸಿಕೊಳ್ಳುವ ಪರಿಪಾಠವಿತ್ತು. ಆದರೆ, ಕೊರೊನಾ ವೈರಾಣು ಆತಂಕದಿಂದಾಗಿ ಟ್ರಂಪ್ ಮಹಾಶಯರು ಈಗ ಶೇಕ್‍ಹ್ಯಾಂಡ್ ಮಾಡುವ ಬದಲು ಭಾರತೀಯ ಶೈಲಿಯ ನಮಸ್ತೆ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ನಿನ್ನೆ ತಮ್ಮನ್ನು ಭೇಟಿ …

Read More »

ಉನ್ನಾವೋ ಸಂತ್ರಸ್ತೆಯ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲ್‌ದೀಪ್‌ಗೆ 10 ವರ್ಷ ಜೈಲು..

ನವದೆಹಲಿ,ಮಾ.13- ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿಯ ನ್ಯಾಯಾಲಯವೊಂದು ಉಚ್ಛಾಟಿತ ಬಿಜೆಪಿ ಶಾಸಕ ಕುಲ್‍ದೀಪ್ ಸಿಂಗ್ ಸೆನಗರ್‍ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮ ಅವರು ಕುಲ್‍ದೀಪ್ ಮತ್ತು ಆತನ ಸಹೋದರ ಅತುಲ್ ಸಿಂಗ್ ಸೆನಗರ್ ಅವರಿಗೆ ಸಂತ್ರಸ್ತ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳಂತೆ 20 ಲಕ್ಷ ರೂ.ಗಳ ಪರಿಹಾರ ನೀಡುವಂತೆಯೂ …

Read More »

ಕೊರೋನಾ ಆತಂಕ : ಬೆಣ್ಣೆನಗರಿಗಿಲ್ಲ ಮಾರಕ ರೋಗದ ಭೀತಿ..!!

ಕೊರೋನಾ ಆತಂಕ : ಬೆಣ್ಣೆನಗರಿಗಿಲ್ಲ ಮಾರಕ ರೋಗದ ಭೀತಿ..!! ವಿಶ್ವದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದಿರುವ ಕಿಲ್ಲರ್ ಕೊರೋನಾ ವೈರಸ್ ಆತಂಕ ಬೆಣ್ಣೆನಗರಿ ದಾವಣಗೆರೆಯಿಂದ ದೂರಾಗಿದೆ.ಈಗ ಈ ಮಹಾಮಾರಿ ಕೊರೋನಾ ಆತಂಕದಿಂದ ದಾವಣಗೆರೆ ಜಿಲ್ಲಾಡಳಿತ ನಿರಾಳವಾಗಿದೆ.ವಿದೇಶಕ್ಕೆ ತೆರಳಿ ವಾಪಸಾಗಿದ್ದ 12 ಮಂದಿಯಲ್ಲಿ ಕೊರೋನಾ ಸೋಂಕು ನೆಗೆಟಿವ್ ಇದ್ದು, ಈ ಬಗ್ಗೆ ದಾವಣಗೆರೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.14 ಹಾಗೂ 28 ದಿನಗಳ ಅವಧಿಯ ತಪಾಸಣೆ ಮುಗಿದಿದ್ದು, 12 ಮಂದಿಗೂ ಯಾವುದೇ ಸೋಂಕಿಲ್ಲ …

Read More »

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದ್ರು.

ಬೆಳಗಾವಿ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದ್ರು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿಗೆ ನಮ್ಮನ್ನು ಪರಿಗಣಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಅದರಂತೆ ಹೈಕಮಾಂಡ್ ನಮಗೆ ಒಳ್ಳೆಯ ಜವಾಬ್ದಾರಿ ವಹಿಸಿದೆ. ಈ ಹಿನ್ನಲೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರ ದಾರಿಯಲ್ಲಿ …

Read More »

ಶಾಸಕ ಸತೀಶ್ ಜಾರಕಿಹೊಳಿ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಶುಕ್ರವಾರ ಭೇಟಿ ಮಾಡಿ, ಶುಭಾಶಯ ಕೋರಿದರು.

ಬೆಳಗಾವಿ: ಶಾಸಕ ಸತೀಶ್ ಜಾರಕಿಹೊಳಿ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಶುಕ್ರವಾರ ಭೇಟಿ ಮಾಡಿ, ಶುಭಾಶಯ ಕೋರಿದರು. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಆಗಮಿಸಿ ಕೆಲವು ಹೊತ್ತಿನ ಬಳಿಕ ಬಂದಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ , ಮಾಜಿ ಶಾಸಕ ರಾಜು ಕಾಗೆ, ರಾಜು ಸೇಠ್ ಹೂಗುಚ್ಛ ನೀಡಿದರು. ಜಿಲ್ಲೆಯ ಕಾಂಗ್ರೆಸ್ ಸಾರಥಿ ದೊರೆತ ನಂತರ ಪಕ್ಷ ಸಂಘಟನೆ ಭಿನ್ನಾಭಿಪ್ರಾಯವನ್ನು …

Read More »

ಆರ್_ಪ್ರಕಾಶ್ ರವರ ಮುಂದಾಳತ್ವದಲ್ಲಿ 100 ದಿನಗಳಲ್ಲಿ 1000 ಜನಸಭೆ…

#ಆರ್_ಪ್ರಕಾಶ್ ರವರ ಮುಂದಾಳತ್ವದಲ್ಲಿ 100 ದಿನಗಳಲ್ಲಿ 1000 ಜನಸಭೆ… #ಬೆಂಗಳೂರು_ಮಾತಾಡು #ಬೆಂಗಳೂರು_ಮಾತಾಡು ಎಂಬ ಅಭಿಯಾನದಡಿ ಜನರ ಎಲ್ಲ ಸಲಹೆ, ಸೂಚನೆ, ಮಾಹಿತಿ, ನಿರೀಕ್ಷೆಗಳನ್ನು ಒಟ್ಟುಗೂಡಿಸಿ ಜೆ ಡಿ ಎಸ್ ಪಕ್ಷದಿಂದ #ಜನರ_ಪ್ರಣಾಳಿಕೆ ಆಗಿ ಬಿಡುಗಡೆ ಆಗಲಿದೆ. ಅದು ಕಸದ ಸಮಸ್ಯೆ ಇರಬಹುದು , ನೀರಿನ ನಿರ್ವಹಣೆ ಇರಬಹುದು , ನಗರದ ಕೊಳೆಗೇರಿ ಮತ್ತು ಹೊರವಲಯದ ಹಳ್ಳಿಗಳ ಸಮಸ್ಯೆ , ಆಡಳಿತದಲ್ಲಿನ ಆರ್ಥಿಕ ಹೊಣೆಗಾರಿಕೆ ಮತ್ತು ಪಾರದರ್ಶಕತೆ,ಆರೋಗ್ಯ ಸಂರಕ್ಷಣೆ,ಆಸ್ತಿ-ಕಟ್ಟಡ ಸಂಬಂಧಿತ ವಿಷಯಗಳು, …

Read More »

*ಕಲಘಟಗಿಯಲ್ಲಿ ಕೋಳಿಗಳ ಮಾರಣಹೋಮ*.

*ಕಲಘಟಗಿಯಲ್ಲಿ ಕೋಳಿಗಳ ಮಾರಣಹೋಮ*. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸಾವಿರಾರು ಕೋಳಿಗಳನ್ನು ಮಾರಣ ಹೋಮ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ‌ ಬಿ.ಗುಡಿಹಾಳ ಗ್ರಾಮದಲ್ಲಿ ನಡೆದಿದೆ. ಕೊರೊನಾ ವೈರಸ್ ಕೋಳಿಗಳಿಂದ ಬಂದಿದೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕೋಳಿಗಳನ್ನ ಮಣ್ಣಲ್ಲಿ ಗುಂಡಿ ತಗೆದು ಮುಚ್ಚಲಾಗಿದೆ. ಪ್ರಕಾಶ ಎಂಬುವವರು ತಮ್ಮ ಕೋಳಿ ಫಾರಂನಲ್ಲಿನ ಕೋಳಿಗಳನ್ನು ಜೆಸಿಬಿಯಿಂದ ತೆಗ್ಗು ತೋಡಿ ಕೋಳಿಗಳನ್ನ ಮುಚ್ಚಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ …

Read More »

– ಸಾವಿನಲ್ಲೂ ಒಂದಾದ ತಾಯಿ,ಮಗ

ಹಾವೇರಿ: ಅನಾರೋಗ್ಯದಿಂದ ಮೃತಪಟ್ಟ ಮಗನ ನೆನಪಲ್ಲಿ ಕಣ್ಣೀರು ಹಾಕಿ ತಾಯಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ. ಮೈನಾವತಿ ತೆಪ್ಪದ (52) ಮತ್ತು ಬಸವರಾಜ್ ತೆಪ್ಪದ (31) ಮೃತ ತಾಯಿ-ಮಗ. ಗುರುವಾರ ರಾತ್ರಿ ಬಸವರಾಜ್ ಅನಾರೋಗ್ಯದಿಂದ ಮೃತಪಟ್ಟಿದ್ದನು. ಮಗನ ಸಾವಿನ ದುಃಖದಲ್ಲಿ ತಾಯಿ ಮೈನಾವತಿ ರಾತ್ರಿಯಿಡೀ ಕಣ್ಣೀರು ಹಾಕಿದ್ದಾರೆ. ಪರಿಣಾಮ ಇಂದು ಬೆಳಿಗ್ಗೆ ಹೃದಯಾಘಾತವಾಗಿ ತಾಯಿಯೂ ಮೃತಪಟ್ಟಿದ್ದಾರೆ. ಮೃತ ಮೈನಾವತಿಗೆ ನಾಲ್ವರು ಮಕ್ಕಳಿದ್ದು, ಮೂವರು ಹೆಣ್ಣು …

Read More »