ಬೆಂಗಳೂರು: ರಾಜ್ಯದಲ್ಲಿ ಇಂದು ಅತಿ ಹೆಚ್ಚು 248 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆಯಾಗಿದೆ. ಈ ಮೂಲಕ ಕೋವಿಡ್-19 ಮತ್ತೊಮ್ಮೆ ರಾಜ್ಯದಲ್ಲಿ ದ್ವಿಶತಕ ಸಿಡಿಸಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ ರಾಯಚೂರು 62, ಕಲಬುರಗಿ 61, ಯಾದಗಿರಿ 60, ಉಡುಪಿ 15, ಬೆಂಗಳೂರು 12, ಬಳ್ಳಾರಿ 9, ಚಿಕ್ಕಬಳ್ಳಾಪುರ 5, ದಾವಣಗೆರೆ, ವಿಜಯಪುರ, ಹಾಸನ ಜಿಲ್ಲೆಯಲ್ಲಿ …
Read More »ಶಾಸಕರ ಸಂಬಳ ಕಡಿತ, ಅಧಿಕೃತ ಘೋಷಣೆ – ವೇತನ, ಭತ್ಯೆ ಎಷ್ಟಿದೆ?
ಬೆಂಗಳೂರು: ಕೋವಿಡ್ 19 ನಿಂದಾಗಿ ಶಾಸಕರ ಸಂಬಳಕ್ಕೂ ಈಗ ಸರ್ಕಾರ ಕತ್ತರಿ ಹಾಕಿದೆ. ಸಂಬಳ ಕಡಿತದ ಬಗ್ಗೆ ಅಧಿಕೃತವಾಗಿ ಇಂದು ಸ್ಪಷ್ಟೀಕರಣ ನೀಡಿದೆ. ಏಪ್ರಿಲ್ 1 ರಿಂದ ಒಂದು ವರ್ಷ ಅವಧಿಗೆ ಶೇ.30ರಷ್ಟು ಶಾಸಕರ ಸಂಬಳ ಕಡಿತವಾಗಲಿದೆ. ಶಾಸಕರ ವೇತನ, ಪಿಂಚಣಿ, ಇತರೆ ಭತ್ಯೆ, ದೂರವಾಣಿ ವೆಚ್ಚ, ಚುನಾವಣೆ ಕ್ಷೇತ್ರ ಭತ್ಯೆ, ಅಂಚೆ ವೆಚ್ಚ, ಕೊಠಡಿ ಸೇವಕರ ಭತ್ಯೆ, ಚುನಾವಣಾ ಕ್ಷೇತ್ರ ಪ್ರಯಾಣ ಭತ್ಯೆ, ನಿಗಧಿತ ವಿಮಾನ, ರೈಲ್ವೆ ಪ್ರಯಾಣ …
Read More »ಬಿಜೆಪಿ ಹೈಕಮಾಂಡ್ ಅನುಮತಿ ನೀಡಿದರೆ ನಾನು ಈಗಲೂ 5 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇನೆ
ಚಾಮರಾಜನಗರ: ಬಿಜೆಪಿ ಹೈಕಮಾಂಡ್ ಅನುಮತಿ ನೀಡಿದರೆ ನಾನು ಈಗಲೂ 5 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಇಪ್ಪತ್ತೆರಡು ಮಂದಿ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಟ್ರಯಲ್ ಬೇಸ್ ಆಗಿ ಐದು ಮಂದಿ ಶಾಸಕರ ರಾಜೀನಾಮೆ ಕೊಡಿಸಲು ಸಿದ್ಧ. ಬಿಜೆಪಿ ಹೈಕಮಾಂಡ್ ಅನುಮತಿ ನೀಡಿದರೆ ಒಂದು ವಾರದೊಳಗೆ ಅವರ ರಾಜೀನಾಮೆ ಕೊಡಿಸಿ ಬಿಜೆಪಿ …
Read More »ರಾಜ್ಯದಲ್ಲಿ ಸಂಜೆ ವೇಳೆ ಮತ್ತೆ 70 ಮಂದಿಗೆ ಕೊರೊನಾ
ಬೆಂಗಳೂರು: ರಾಜ್ಯದಲ್ಲಿ ಸಂಜೆ ವೇಳೆ ಮತ್ತೆ 70 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಸೋಂಕಿತರ 2781 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 248 ದಾಖಲೆ ಪ್ರಮಾಣದ ಕೇಸ್ ಗಳು ದಾಖಲಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ವೇಳೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಚಿಕ್ಕಬಳ್ಳಾಪುರದಲ್ಲಿ ಅಡ್ಮಿಟ್ ಆಗಿದ್ದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಹೀಗಾಗಿ ಈವರೆಗೂ ಸೋಂಕಿನಿಂದಾಗಿ ಒಟ್ಟು …
Read More »ಸುಮಾರು 15-20 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ: ಲಕ್ಷ್ಮಣ ಸವದಿ ಹೊಸ ಬಾಂಬ್
ಹಾವೇರಿ: ಬಿಜೆಪಿ ಸಂಪರ್ಕದಲ್ಲಿ ಸುಮಾರು 15-20 ಶಾಸಕರು ಇದಾರೆ. ಅವರೆಲ್ಲರೂ ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತ ನೋಡುತ್ತಿರುವ ಸುಮಾರು 15-20 ಜನ ಕಾಂಗ್ರೆಸ್ – ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ಮೂಲಕ ಜಲಸಂಪನ್ಮೂಲ ಸಚಿವ …
Read More »ಉಡುಪಿಯ ಕ್ಯಾಬಿನೆಟ್ ದರ್ಜೆಯ ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಇದೇ ಕೊರೊನಾ ಕಂಡಕ್ಟರ್ ಮಾಡಿದೆ.
ಉಡುಪಿ: ಕಿಡಿಗೇಡಿ ಕೊರೊನಾ ವಿಶ್ವದಲ್ಲಿ ಏನೇನೋ ಅವಾಂತರ ಸೃಷ್ಟಿ ಮಾಡಿದೆ. ಉಡುಪಿಯ ಕ್ಯಾಬಿನೆಟ್ ದರ್ಜೆಯ ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಇದೇ ಕೊರೊನಾ ಕಂಡಕ್ಟರ್ ಮಾಡಿದೆ. ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಉಡುಪಿ ನಗರದಲ್ಲಿ ಸಿಟಿ ಬಸ್ಸಿನಲ್ಲಿ ಕಂಡಕ್ಟರ್ ಆಗಿ ರೈಟ್ ರೈಟ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಾಸಕ ರಘುಪತಿ ಭಟ್ ನೇತೃತ್ವದ ಕಡಿಯಾಳಿ ಗಣೇಶೋತ್ಸವ ಸಮಿತಿ ಖಾಸಗಿ ಬಸ್ ಮಾಲೀಕರೊಂದಿಗೆ ಸೇರಿ ಏಳು ದಿನಗಳ ಕಾಲ ಉಚಿತ ಬಸ್ …
Read More »ಸಾಯಿಬಾಬಾ ಮಂದಿರ ಆಶ್ರಮದ ಸೂಪರ್ ವೈಸರ್‌ಗೆ ಕೊರೊನಾ
ಚಿಕ್ಕಬಳ್ಳಾಪುರ: ನಗರ ಹೊರವಲಯದ ಹಾರೋಬಂಡೆ ಬಳಿಯ ಸಾಯಿಬಾಬಾ ಮಂದಿರ ಆಶ್ರಮದಲ್ಲಿನ 68 ವರ್ಷದ ಸೂಪರ್ ವೈಸರ್ ಗೂ ರೋಗಿ 2,653 ಕೊರೊನಾ ದೃಢವಾಗಿದೆ. ಆಶ್ರಮದಲ್ಲಿ ಸೂಪರ್ ವೈಸರ್ ಆಗಿದ್ದ ಇವರು ಇತ್ತೀಚೆಗೆ ಬೆಂಗಳೂರಿನ ಎಸ್.ಪಿ.ರೋಡ್‍ಗೆ ಹೋಗಿ ಬಂದಿದ್ದರು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಹೀಗಾಗಿ ಗುರುವಾರ ಇವರ ಗಂಟಲು ದ್ರವ ಮಾದರಿಯನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ 50-50 …
Read More »ಎರಡನೇ ಮದ್ವೆಯಾದ ಪತಿ- ಪ್ರಶ್ನಿಸಿದ ಮೊದಲ ಪತ್ನಿ ಮೇಲೆ ಹಲ್ಲೆ………
ಬಾಗಲಕೋಟೆ: ಮೊದಲ ಪತ್ನಿ ಇದ್ದರೂ ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಮೊದಲ ಪತ್ನಿಯ ಮೇಲೆ ಪಾಪಿ ಪತಿಯೋರ್ವ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿ ನಡೆದಿದೆ. ಬಾದಮಿಯ ಚಿಂಚಲಕಟ್ಟಿ ತಾಂಡಾದ ನಿವಾಸಿ ಶಂಕರ್ ಪಮ್ಮಾರ ಹಲ್ಲೆ ಮಾಡಿದ ಪತಿ ಎಂದು ಗುರುತಿಸಲಾಗಿದೆ. ಮೊದಲ ಪತ್ನಿ ಭಾರತಿ ಪಮ್ಮಾರಳನ್ನು ಮನಬಂದಂತೆ ಎಳೆದಾಡಿ ಥಳಿಸಿದ್ದಾನೆ. ಇದರ ಜೊತೆಗೆ ಪತ್ನಿ ಜೊತೆಗೆ ಇದ್ದ 15 ವರ್ಷದ ಮಗಳು ಸುಪ್ರೀತಾ ಮೇಲೂ ಹಲ್ಲೆ …
Read More »ಕುಡಿಯಲು ನೀರಿಲ್ಲದೇ ಗ್ರಾಮಸ್ಥರು ಪರದಾಟ……….
ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಕೊರೊನಾ ಅಟ್ಟಹಾಸ, ಮತ್ತೊಂದು ಕಡೆ ನೀರಿಗೆ ಹಾಹಾಕಾರ ಉಂಟಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಾಸಿನಕಲ್ಲು ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆ ಉಂಟಾಗಿದೆ. ಗ್ರಾಮಕ್ಕೆ ತೆರಳಲು ರಸ್ತೆ ಇಲ್ಲ, ಕುಡಿಯಲು ನೀರಿಲ್ಲದೆ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೇ ಮಳೆಯ ನೀರಿನ ಆಶ್ರಯದಲ್ಲೇ ದಿನದ ಬದುಕು ಸಾಗಿಸುತ್ತಿದ್ದಾರೆ. ಸಣ್ಣ ಕೆರೆಯ ನೀರನ್ನು ನಂಬಿ ಜೀವನ ನಡೆಸುತ್ತಿರುವ ಗ್ರಾಮದ ಜನರು ದಿನನಿತ್ಯದ ಬಳಕೆಗೆ ಕೊಳಕು ನೀರು ಆಧಾರವಾಗಿದೆ …
Read More »ಆರ್‌ಎಸ್‌ಐ ನೇಣಿಗೆ ಶರಣು- ವಿಪರೀತ ಹೊಟ್ಟೆ, ತಲೆ ನೋವಿನಿಂದ ಆತ್ಮಹತ್ಯೆ ಶಂಕೆ
ಉಡುಪಿ: ಸಶಸ್ತ್ರ ಮೀಸಲುಪಡೆಯ ಆರ್‌ಎಸ್‌ಐ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಸಶಸ್ತ್ರ ಮೀಸಲು ಪಡೆಯ ಆರ್‌ಎಸ್‌ಐ ಆಗಿದ್ದ ಕಲಬುರಗಿಯ ನೌರುಗಂಜ್ ನಿವಾಸಿ ಮಲ್ಲಿಕಾರ್ಜುನ್ ಗುಬ್ಬಿ (56) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ. ಮಲ್ಲಿಕಾರ್ಜುನ ಗುಬ್ಬಿ ಮೂಲತಃ ಕಲಬುರಗಿಯವರಾಗಿದ್ದು, ಉಡುಪಿ ಜಿಲ್ಲೆಯ ನಕ್ಸಲ್ ಬಾಧಿತ ಅಮಾಸೆಬೈಲು ಠಾಣಾ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಸುಮಾರು 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ, ಕಳೆದ ಮೂರು ತಿಂಗಳ ಹಿಂದಷ್ಟೇ ಕೊಪ್ಪಳ ಜಿಲ್ಲೆಯ …
Read More »