Breaking News

ಮಳೆಯ ಅವಾಂತರ – ಮನೆಗಳಿಗೆ ನುಗ್ಗಿದ ನೀರು, ಹತ್ತಾರು ಎಕರೆ ಬಾಳೆ ನಾಶ

ರಾಯಚೂರು/ಕೋಲಾರ: ಅನೇಕ ದಿನಗಳಿಂದ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಇದರಿಂದ ಜನರ ಜೀವನ ಅಸ್ತವ್ಯಸ್ತವಾಗುತ್ತಿದೆ. ರಾಯಚೂರಿನಲ್ಲಿ ಇಡೀ ರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಮಳೆಗೆ ಚರಂಡಿ ನೀರು ಮನೆಯೊಳಗೆ ನುಗ್ಗಿದೆ. ನಗರದ ಮಡ್ಡಿಪೇಟೆ, ಬಂದರಗಲ್ಲಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮನೆಗಳಿಗೆ ಮಳೆಯ ನೀರಿನೊಂದಿಗೆ ಕೊಳಚೆ ನೀರು ನುಗ್ಗಿದೆ. ಇದರಿಂದ ಜನರು ರಾತ್ರಿಯೆಲ್ಲಾ ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕಿದ್ದಾರೆ. …

Read More »

ಸಂತಸದ ಸುದ್ದಿ: ಕೊರೊನಾ ಕಾರಣ ನೌಕರಿ ಹೋದರು ಕೂಡ ಚಿಂತಿಸುವ ಅಗತ್ಯವಿಲ್ಲ

ನವದೆಹಲಿ: ನೌಕರಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ಚಟುವಟಿಕೆಗಳು ತೀವ್ರಗೊಂಡಿವೆ. ಲಾಕ್ ಡೌನ್ ಹಿನ್ನೆಲೆ ಹಲವು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆಯಲ್ಲಿಯೂ ಕೂಡ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಕಾರ್ಮಿಕ ಸಚಿವಾಲಯ ಲಾಕ್ ಡೌನ್ ಮಧ್ಯೆಯೇ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ (NCS) ಅಡಿಯಲ್ಲಿ 76 ಆನ್ಲೈನ್ ಉದ್ಯೋಗ ಮೇಳಗಳನ್ನು ನಡೆಸಿ ಇದುವರೆಗೆ ಒಟ್ಟು 73 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳಿದೆ, ಅಷ್ಟೇ ಅಲ್ಲ ಇಂತಹ …

Read More »

ಪ್ರತಿಪಕ್ಷಗಳು ಹಗಲುಗನಸು ಬಿಡಲಿ, 2023ರ ನಂತರವೂ ನಮ್ಮದೇ ಸರ್ಕಾರ: ಡಾ. ಅಶ್ವತ್ಥನಾರಾಯಣ

ರಾಮನಗರ: ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಮೂಡಿದೆ ಎಂಬ ಊಹಾಪೋಹಗಳ ಕುರಿತು ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ಬತ್ಥನಾರಾಯಣ (Dr CN Ashwathnarayan) ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಸರ್ಕಾರ ಉರುಳುವ ಬಗ್ಗೆ ಪ್ರತಿಪಕ್ಷಗಳು ಹಗಲುಗನಸು ಕಾಣುವುದನ್ನು ಮೊದಲು ಬಿಡಲಿ. 2023ರವರೆಗೆ ಮಾತ್ರವಲ್ಲ, 2023ರ ನಂತರವೂ ನಮ್ಮದೇ ಸರ್ಕಾರ  ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾಮನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ …

Read More »

ನ್ಯೂಜಿಲೆಂಡ್ ಈಗ ಜಗತ್ತಿನ ಕೊರೊನಾ ಮುಕ್ತವಾದ ಮೊದಲ ದೇಶ…….

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಈಗ ಜಗತ್ತಿನ ಕೊರೊನಾ ಮುಕ್ತವಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನ್ಯೂಜಿಲೆಂಡಿನಲ್ಲಿ 1,504 ಪ್ರಕರಣಗಳು(836 ಹೆಂಗಸರು, 668 ಗಂಡಸರು) ಬೆಳಕಿಗೆ ಬಂದಿದ್ದು 22 ಮಂದಿ ಸಾವನ್ನಪ್ಪಿದ್ದಾರೆ. ಇಂದು ಕೊನೆಯ ರೋಗಿ ಆಸ್ಪತ್ರೆಯಿಂದ ಗುಣಮುಖವಾಗುವ ಮೂಲಕ ಕೊರೊನಾ ಮುಕ್ತ ದೇಶವಾಗಿ ಹೊರಹೊಮ್ಮಿದೆ. ಮುಕ್ತವಾಗಿದ್ದು ಹೇಗೆ? ಕೊರೊನಾ ವೈರಸ್ ಹಾವಳಿ ವ್ಯಾಪಕವಾಗಲಿದೆ ಎಂಬುದನ್ನು ಮೊದಲೇ ತಿಳಿದು ಮಾರ್ಚ್ 14ರಂದು ವಿದೇಶದಿಂದ ಬಂದವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರಬೇಕೆಂದು ಸರ್ಕಾರ ಸೂಚಿಸಿತ್ತು. …

Read More »

ಕ್ವಾರಂಟೈನ್ ಮುಗಿಸಿ ಬಂದವರಿಗೆ ಬುದ್ಧಿ ಹೇಳಿದ್ದಕ್ಕೆ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ……..

ಮಂಡ್ಯ: ಕ್ವಾರಂಟೈನ್ ಮುಗಿಸಿ ಬಂದವರಿಗೆ ಬುದ್ಧಿ ಹೇಳಿದ್ದಕ್ಕೆ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಲಾಗಿದೆ. ಆಶಾ ಕಾರ್ಯಕರ್ತೆ ಕೆ.ವೈ ಶೋಭಾ ಅವರ ಮೇಲೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕೊಡಗಹಳ್ಳಿ ಗ್ರಾಮದಲ್ಲಿ ಹಲ್ಲೆ ನಡೆದಿದೆ. ಅದೇ ಗ್ರಾಮದ ಮಂಜೇಗೌಡ, ರುದ್ರೇಶ, ಪ್ರಿಯಾಂಕಾ, ಗೀತಾ ಮತ್ತು ನಿಖಿಲ್ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಹಲ್ಲೆ ಆರೋಪ ಎದುರಿಸುತ್ತಿರುವ ನಾಲ್ವರು ಕ್ವಾರಂಟೈನ್ ನಲ್ಲಿದ್ದು ಬಿಡುಗಡೆಯಾಗಿ ಕೊಡಗಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ …

Read More »

ಕಿಮ್ಸ್ ಕರ್ಮಕಾಂಡ: ಸ್ಟ್ರೆಚರ್ ಇಲ್ಲದೇ ಮಗುವನ್ನು ಹೊತ್ತುಕೊಂಡು ಹೋದ ತಂದೆ!

ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಆಕ್ಸಿಜನ್ ನೀಡಿದ್ದ ಸಂದರ್ಭದಲ್ಲಿ ಯಾವುದೇ ಸ್ಟ್ರೆಚರ್ ಸಹಾಯ ಇಲ್ಲದಿರುವುದರಿಂದ ತಂದೆಯೇ ಹೊತ್ತುಕೊಂಡು ಹೋಗಿರುವ ಘಟನೆಯೊಂದು ಹುಬ್ಬಳ್ಳಿ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಕಿಮ್ಸ್ ಸಿಬ್ಬಂದಿಗಳ ನಿಷ್ಕಾಳಜಿಯನ್ನು ಎತ್ತಿ ತೋರುವ ದೃಶ್ಯವೊಂದು ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಾರ್ವಜನಿಕ ಸೇವೆಗೆ ಕೈ ಜೋಡಿಸಿದ್ದು, ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಧನ್ವಂತರಿ ಎಂಬುವಂತ ಹೆಗ್ಗಳಿಕೆ ಪಾತ್ರವಾಗಿರುವ ಕಿಮ್ಸ್ ಮಹತ್ವದ …

Read More »

ಸರಕಾರ ಜೂನ್ 1ರಿಂದ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿದ್ದು, ದೇವರ ದರ್ಶನ ಭಾಗ್ಯ ಮತ್ತೆ ಸಿಗಲಿದೆ.

ಮಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ದೇವಾಲಯಗಳನ್ನು ಬಂದ್ ಮಾಡಿ ಭಕ್ತರ ಪ್ರವೇಶವನ್ನು ನಿಷೇಧ ಮಾಡಲಾಗಿತ್ತು. ಆದರೆ ಈಗ ಲಾಕ್‍ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಸರಕಾರ ಜೂನ್ 1ರಿಂದ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿದ್ದು, ದೇವರ ದರ್ಶನ ಭಾಗ್ಯ ಮತ್ತೆ ಸಿಗಲಿದೆ. ದೇವಾಲಯ ತೆರೆದರೂ ದೇವರ ದರ್ಶನ ಹಿಂದಿನಂತೆ ಇರದೇ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳಿಗೆ ನೀಡಿದ ಮಾರ್ಗದರ್ಶನಗಳನ್ನು ಪಾಲಿಸಬೇಕಾಗುತ್ತದೆ. ಜೂನ್ 1ರಂದು ದೇವಾಲಯಗಳಿಗೆ ಭಕ್ತರಿಗೆ ಪ್ರವೇಶ ನೀಡಿದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಎಲ್ಲಾ …

Read More »

ಕೋವಿಡ್-೧೯: 12 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

  ಬೆಳಗಾವಿ, ಮೇ 29(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ 12 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಒಬ್ಬರು ಸೇರಿದಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಸಂಕೇಶ್ವರ, ರಾಯಬಾಗ ಮತ್ತು ಅಥಣಿ ತಾಲ್ಲೂಕಿನ 12 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಪಿ-574 ಪಿ-723 ಪಿ- …

Read More »

ಕೋವಿಡ್ 19 ಪರಿಹಾರ ನಿಧಿಗೆ ಶಿವರಾಮೇಗೌಡರು ನೀಡಿದ 2ಲಕ್ಷರೂಗಳ ಸಹಾಯ ಧನದ ಚೆಕ್ಕನ್ನು ಸ್ವೀಕರಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ವಿ. ಆರ್.ಶೈಲಜಾ

ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಉಧ್ಯಮಿಗಳು ಹಾಗೂ ಸಮಾಜಸೇವಕರು ಹಾಗೂ ಯಶಸ್ವಿನಿ ಸಮುದಾಯ ಭವನದ ಮಾಲೀಕರಾದ ಶಿವರಾಮೇಗೌಡ ಅವರು. ಮುಖ್ಯಮಂತ್ರಿಗಳ.ಕೋವಿಡ್-19 ಪರಿಹಾರ ನಿಧಿಗೆ 2ಲಕ್ಷರೂ ಪರಿಹಾರ ಧನದ ಚೆಕ್ಕನ್ನು ವಿತರಿಸಿದರು. ಕೋವಿಡ್ 19 ಪರಿಹಾರ ನಿಧಿಗೆ ಶಿವರಾಮೇಗೌಡರು ನೀಡಿದ 2ಲಕ್ಷರೂಗಳ ಸಹಾಯ ಧನದ ಚೆಕ್ಕನ್ನು ಸ್ವೀಕರಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ವಿ. ಆರ್.ಶೈಲಜಾ ಸಮಾಜದಲ್ಲಿ ಉಳ್ಳವರು ದಾನ ಧರ್ಮ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಉಧ್ಯಮಿಗಳಾದ ಶಿವರಾಮೇಗೌಡ ಅವರು ಈಗಾಗಲೇ ಸಾಂಸ್ಥಿಕ ಹೋಂ ಕ್ವಾರಂಟೈನ್ …

Read More »

ಸರ್ಕಾರಕ್ಕೆ ಕಂಟಕವಾಗುತ್ತಾ ಬೆಳಗಾವಿ ಪಾಲಿಟಿಕ್ಸ್? – ರೆಬೆಲ್ ಹಿಂದಿನ ಇನ್‍ಸೈಡ್ ಸುದ್ದಿ ಇಲ್ಲಿದೆ

ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಮೊದಲು ಬಂಡಾಯ ಕಾಣಿಸಿಕೊಂಡಿದ್ದೇ ಬೆಳಗಾವಿಯಲ್ಲಿ. ಇದೀಗ ಬಿಎಸ್‍ವೈ ಸರ್ಕಾರದ ವಿರುದ್ಧವೂ ಬಂಡಾಯ ಹೊಗೆ ಮೊದಲು ಕಾಣಿಸಿಕೊಂಡಿರೋದು ಬೆಳಗಾವಿಯಲ್ಲಿ ಎನ್ನುವುದು ವಿಶೇಷ. ಅಂದು ರಮೇಶ್ ಜಾರಕಿಹೊಳಿ ಬಂಡಾಯ ಎದ್ದಿದ್ರೆ ಇಂದು ಉಮೇಶ್ ಕತ್ತಿ ಬಂಡೆದ್ದಿದ್ದಾರೆ. ಇವರಿಗೆ ರಮೇಶ್ ಜಾರಕಿಹೊಳಿ ತೆರೆಮರೆಯಲ್ಲಿ ಬೆಂಬಲ ನೀಡ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಹೊರಗಡೆ ಮಾತ್ರ ರಮೇಶ್ ಜಾರಕಿಹೊಳಿ, ಹೈಕಮಾಂಡ್ ಅವಕಾಶ ಕೊಟ್ರೆ ಮತ್ತೆ ಆಪರೇಷನ್ ಕಮಲ ನಡೆಸುತ್ತೇನೆ. ಕಾಂಗ್ರೆಸ್‍ನ …

Read More »