Breaking News

ಫೇಸ್‍ಬುಕ್ ಮೂಲಕ ಮದ್ಯ ಮಾರಾಟ: ಜಾಹೀರಾತಿಗೆ ಮರುಳಾದ್ರೆ ಪಂಗನಾಮ ಫಿಕ್ಸ್

ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿರುವುದು ಎಣ್ಣೆ ಪ್ರಿಯರನ್ನ ಚಡಪಡಿಸುವಂತೆ ಮಾಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಆನ್‍ಲೈನ್ ವಂಚನೆಗೆ ಮುಂದಾಗಿದ್ದಾರೆ. ಎಲ್ಲಿ ಹೇಳಿದ್ರೂ ಮದ್ಯವನ್ನು ಹೋಂ ಡೆಲಿವರಿ ಮಾಡುತ್ತೇವೆ ಅಂತ ಜಾಹೀರಾತು ಹಾಕಿಕೊಂಡಿದ್ದಾರೆ. ಇದನ್ನು ನಂಬಿ ಅವರ ಖಾತೆಗೆ ಹಣ ಹಾಕಿದ್ರೆ ಪಂಗನಾಮ ಗ್ಯಾರಂಟಿ. ರಾಯಚೂರಿನ ಅಮೃತ ವೈನ್‍ಶಾಪ್‍ನಿಂದ ಎಲ್ಲಾ ಬ್ರಾಂಡ್‍ನ ಮದ್ಯ ಹೋಂ ಡೆಲಿವರಿ ಇದೆ. ನಗರದ ಕೆ.ಇ.ಬಿ ಕಾಲೋನಿ, ನಿಜಲಿಂಗಪ್ಪ ಕಾಲೋನಿ …

Read More »

ಅಂಬುಲೆನ್ಸ್‌ನಲ್ಲಿ ಮದ್ಯ ಸಾಗಣೆ- ನಾಲ್ವರು ಅಂದರ್……..

ಚಿತ್ರದುರ್ಗ: ಅಂಬುಲೆನ್ಸ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ನಾಲ್ವರನ್ನು ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲೇ ಇಂತಹ ಕೃತ್ಯ ನಡೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಂಬುಲೆನ್ಸ್ ಚಾಲಕ ಸುಬಾನ್, ಲ್ಯಾಬ್ ಟೆಕ್ನಿಶಿಯನ್ ಸಂತೋಷ್, ಶಿವಗಂಗಾ ಗ್ರಾಮದ ಜೀವನ್ ಹಾಗೂ ಗಿರೀಶ್ ಬಂಧಿತರು. ಆರೋಪಿಗಳು ಮದ್ಯವನ್ನುಅಂಬುಲೆನ್ಸ್‌ನಿಂದ ಓಮಿನಿ ವ್ಯಾನ್‍ಗೆ ಶಿಫ್ಟ್ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಿಎಸ್‍ಐ …

Read More »

ಜಮೀರ್ ಅಹಮ್ಮದ್‍ರನ್ನ ಗೂಂಡಾ ಕಾಯ್ದೆಯಡಿ ಬಂಧಿಸಿ: ಕಟೀಲ್

ಮಂಗಳೂರು: ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಾದರಾಯನಪುರ ಗಲಾಟೆ ವಿಚಾರದಲ್ಲಿ ಶಾಸಕ ಜಮೀರ್ ಅಹ್ಮದ್ ನೀಡಿದ ಹೇಳಿಕೆ ವಿಚಾರ ಹಾಗೂ ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಘಟನೆ ನಡೆದಾಗ ಶಾಸಕ ಜಮೀರ್ ತೆಗೆದುಕೊಂಡ ನಿರ್ಧಾರ ಮತ್ತು ವರ್ತನೆ ಕಾನೂನು ಬಾಹಿರವಾಗಿದೆ. ಅಲ್ಲಿನ ಗೂಂಡಾಗಿರಿಗೆ ಶಾಸಕನಾಗಿ ಬೆಂಗಾವಲಾಗಿ ನಿಂತಿರುವುದು …

Read More »

ಪಾದರಾಯನಪುರದ ಗಲಭೆ ಮುಂದಿನ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವೇ ನೇರ ಹೊಣೆ.

ಬೆಂಗಳೂರಿನ ಪಾದರಾಯನಪುರದ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಐವತ್ತನಾಲ್ಕು ಮಂದಿ ಪುಂಡರನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸುವುದರಿಂದಾಗುವ ಮುಂದಿನ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವೇ ನೇರ ಹೊಣೆ. ಬೆಂಗಳೂರಿನಲ್ಲಿ ಕ್ವಾರಂಟೈನ್ ಗೆ ಒಳಗಾಗಬೇಕಿದ್ದ ಗಲಭೆಕೋರರನ್ನು ಕರೋನ ಸೋಂಕಿನ ವಿಷಯದಲ್ಲಿ ಹಸಿರು ವಲಯವಾಗಿರುವ ರಾಮನಗರದ ಜೈಲಿನಲ್ಲಿರಿಸುವುದು ವಿವೇಕಯುತ ನಿರ್ಧಾರವಲ್ಲ. ಚೋದ್ಯವೆಂದರೆ ರಾಮನಗರ ಜೈಲಿನ ಖೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿ, ಪಾದರಾಯನಪುರದ ಪುಂಡರನ್ನು ರಾಮನಗರದ ಕಾರಗೃಹದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿಯನ್ನು …

Read More »

ಸಂಗೀತ ಮಾಂತ್ರಿಕ ಹಂಸಲೇಖ ಅವರು ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ಸಂಗೀತ ಮಾಂತ್ರಿಕ ಹಂಸಲೇಖ ಅವರು ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ಹಂಸಲೇಖ ಅವರ ಮನೆ ಪಕ್ಕದಲ್ಲಿರುವ ಪಾರ್ಕಿಗೆ ಬಿಬಿಎಂಪಿಯವರು ಪೈಪ್ ಲೈನ್ ಹಾಕಲು ರಸ್ತೆಯಲ್ಲಿ ಗುಂಡಿ ತೆಗೆದಿದ್ದರು. ಕಾಮಗಾರಿ ಮುಗಿದ ಬಳಿಕ ಮಣ್ಣು ಹಾಕಲಾಗಿತ್ತು. ಆದರೆ ಗುಂಡಿ ಹಾಗೆ ಉಳಿದಿದ್ದರಿಂದ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. ಅಷ್ಟೇ ಅಲ್ಲದೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸಿದ ಹಂಸಲೇಖ …

Read More »

ನಾಳೆಯಿಂದ ಗೋಕಾಕನಗರದಲ್ಲಿ ಮನೆ ಮನೆಗೆ ಬರಲಿದೆ ಆರೋಗ್ಯ ತಪಾಸಣಾ ತಂಡ

ಗೋಕಾಕ:ಗೋಕಾಕನಗರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಮನೆಯ ಪ್ರತಿ ವ್ಯಕ್ತಿಯ ವೈದ್ಯಕೀಯ ತಪಾಸಣೆ ಕಾರ್ಯವನ್ನು ನಾಳೆಯಿಂದ ಪ್ರಾರಂಭಿಸಲಾಗುವುದು. ನಿರಂತರ ಆರೋಗ್ಯ ತಪಾಸಣೆಯನ್ನು ನಗರದ ವಾರ್ಡ್ ವಾರು ಕಾರ್ಯಪಡೆಯ ಸದಸ್ಯರು ಪ್ರತಿ ಮನೆಗೆ ಬೇಟಿ ಕೊಟ್ಟು ಎಲ್ಲ ರೀತಿಯ ಅನಾರೋಗ್ಯದ ಬಗ್ಗೆ ತಪಾಸಣೆ ಮಾಡಿ ವಿವರಗಳನ್ನು ದಾಖಲಿಸಿಕೊಳ್ಳಲು ತಿಳಿಸಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಕ್ಷಕರನ್ನು ಒಳಗೊಂಡ ತಂಡವು ತಪಾಸಣಾ ಕಾರ್ಯವನ್ನು ಜರುಗಿಸಲಿದ್ದು, 3 ದಿನಗಳ ಒಳಗಾಗಿ ಪೂರ್ಣಗೊಳಿಸಲು ತಿಳಿಸಲಾಗಿದೆ. ಈ ಬಗ್ಗೆ ಇಂದು …

Read More »

ತಕ್ಷಣ ಎಲ್ಲ ಪತ್ರಕರ್ತರಿಗಾಗಿ ಅಗತ್ಯ ತಪಾಸಣಾ ಶಿಬಿರ ಏರ್ಪಡಿಸುವಂತೆ ಸೂಚನೆ ನೀಡಿದ್ದಾರೆ:B.S.Y

ಬೆಂಗಳೂರು: ಕೊರೊನಾ ವೈರಸ್ ಮಾಧ್ಯಮದವರ ಮೇಲೂ ತನ್ನ ವಕ್ರದೃಷ್ಟಿ ಬೀರಿದೆ. ನಿನ್ನೆ ಮುಂಬೈನಲ್ಲಿ 53 ಪತ್ರಕರ್ತರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಇತರೆ ನಗರಗಳ ಪತ್ರಕರ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ರಿಸ್ಕ್​ ತೆಗೆದುಕೊಂಡು ವರದಿ ಮಾಡುವ ಪತ್ರಕರ್ತರು ಬಹಳ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಮುಂಬೈ ಘಟನೆ ಬಳಿಕ ಇದೀಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಜ್ಯದ ಎಲ್ಲಾ ಮಾಧ್ಯಮ ಸಿಬ್ಬಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಮುಂದಾಗಿದೆ. ಮುಂಬೈ ಪ್ರಕರಣದ ಬಗ್ಗೆ ಪರ್ತಕರ್ತರಿಂದ ಮಾಹಿತಿ …

Read More »

20 ವರ್ಷದ ಯುವತಿಯಲ್ಲಿ ಸೊಂಕು ಪತ್ತೆಯಾಗಿದೆಸಂತಸದ ಮದ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೋರ್ವ ಸೊಂಕಿತ ಪತ್ತೆಯಾಗಿದ್ದಾನೆ

ಬೆಳಗಾವಿ- ಸಂತಸದ ಮದ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೋರ್ವ ಸೊಂಕಿತ ಪತ್ತೆಯಾಗಿದ್ದಾನೆ ಬೆಳಗಾವಿ ಜಿಲ್ಲೆಯಲ್ಲಿ ಮೂವರು ಗುಣಮುಖರಾಗಿ ಡಿಶ್ಚಾರ್ಜ ಆದ ಬೆನ್ನಲ್ಲಿಯೇ ಮತ್ತೋರ್ವ ಸೊಂಕಿತ ಪತ್ತೆಯಾಗಿದ್ದಾನೆ ಮಂಗಳವಾರ ಸಂಜೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ಬಿಡುಗಡೆಯಾಗಿದ್ದು ಸಂಕೇಶ್ವರದಲ್ಲಿ ಈ ಹಿಂದೆ ಪತ್ತೆಯಾಗಿದ್ದ ಸೊಂಕಿತನ ಸಂಪರ್ಕಕ್ಕೆ ಬಂದಿದ್ದ ಶಂಕಿತನಿಗೆ ಸೊಂಕು ತಗಲಿದ್ದು ದೃಡವಾಗಿದೆ. ಸಂಕೇಶ್ವರದ 20 ವರ್ಷದ ಯುವತಿಯಲ್ಲಿ ಸೊಂಕು ಪತ್ತೆಯಾಗಿದೆ

Read More »

ಕೋವಿಡ್-೧೯: ಮತ್ತೇ ಇಬ್ಬರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್: .ಎಸ್.ಬಿ.ಬೊಮ್ಮನಹಳ್ಳಿ

ಬೆಳಗಾವಿ, ಏ.೨೧(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಇಬ್ಬರು ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ೨೦ ವರ್ಷದ ಯುವಕ(ಪಿ-೧೨೮) ಹಾಗೂ ರಾಯಬಾಗ ತಾಲ್ಲೂಕು ಕುಡಚಿಯ ೪೦ ವರ್ಷದ ವ್ಯಕ್ತಿ (ಪಿ-೧೪೮)ಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಈ ಇಬ್ಬರೂ ಏಪ್ರಿಲ್ ೧ ರಂದು ಆಸ್ಪತ್ರೆಗೆ …

Read More »

ಬಾಗಲಕೋಟ ಜಿಲ್ಲೆಯ ಇಬ್ಬರು ಕೊರೋನಾ ಸೋಂಕಿನಿಂದ ಗುಣಮುಖ*

:- ಮಹಾಮಾರಿ‌ ಕೊರೋನಾ ತಡೆಗಟ್ಟುವ ಹಿನ್ನಲೆ ಲಾಕ್ ಡೌನ. ಬಾಗಲಕೋಟ ಜಿಲ್ಲೆಯ ಇಬ್ಬರು ಕೊರೋನಾ ಸೋಂಕಿನಿಂದ ಗುಣಮುಖ ಕೊರೋನಾ ಸೋಂಕಿನಿಂದ ಮೃತ್ತಪಟ್ಟಿದ ವ್ಯಕ್ತಿಯ ಪತ್ನಿ ಹಾಗೂ ಸಹೋದರ ಗುಣಮುಖ ಬಾಗಲಕೋಟ ಜಿಲ್ಲಾ ಕೋವಿಡ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ‌ ಬಿಡುಗಡೆ ಆದ್ರೂ ೧೪ ದಿನಗಳ ಕಾಲ ಹೋಮ್ ಕ್ವಾರಂಟೈನ ಇರಲು ಸೂಚನೆ ಬಾಗಲಕೋಟ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ, ಕೆ ರಾಜೇಂದ್ರ ಹೇಳಿಕೆ‌ ಕೋವಿಡ್ ಗುಣಮುಖರನ್ನು ಸಸಿ ನೀಡುವ ಮೂಲಕ ಕಳುಹಿಸಿಕೊಟ್ಟ ಜಿಲ್ಲಾ …

Read More »