Breaking News

ಬಳ್ಳಾರಿ: ಪ್ರತಿ ಮನೆಗೆ ಬರಲಿದೆ ತರಕಾರಿ ಸಂಚಾರಿ ವಾಹನ

ಬಳ್ಳಾರಿ: ಕೊರೊನಾ ಮಾಹಾಮಾರಿಗೆ ಈಡಿ ವಿಶ್ವವೇ ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ಅನೇಕ ದಾನಿಗಳು ಬಡವರಿಗೆ ನೆರವಾಗುತ್ತಿದ್ದಾರೆ. ಬಳ್ಳಾರಿಯ ಆರ್ಯವೈಶ್ಯ ಅಸೋಸಿಯೇಶನ್ ಮತ್ತು ಬಳ್ಳಾರಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಜಿಲ್ಲಾಡಳಿತ ಸಹಾಯಕ್ಕೆ ದಾವಿಸಿದ್ದು, ಈ ಎರಡು ಸಂಸ್ಥೆಗಳು ಜೊತೆಗೂಡಿ ತಲಾ 400 ರೇಷನ್ ಕಿಟ್‍ಗಳಂತೆ ಒಟ್ಟು 800 ರೇಷನ್ ಕಿಟ್‍ಗಳನ್ನು ಬಳ್ಳಾರಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಪ್ರತಿ ಒಂದು ಕಿಟ್‍ನಲ್ಲಿ ದಿನ ನಿತ್ಯ ಬೇಕಾಗುವ ವಿವಿಧ ಬಗೆಯ ಧಾನ್ಯಗಳ ಇದ್ದು, ಜಿಲ್ಲಾಧಿಕಾರಿ …

Read More »

ಇಂದಿನಿಂದ ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್: ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಖಾಸಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೂ ದಿನಸಿ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಸ್ಥಳೀಯ ಅಂಗಡಿಗಳಲ್ಲಿ ಮಾತ್ರ ದಿನಸಿ, ತರಕಾರಿ ಖರೀದಿಸಬಹುದಾಗಿದೆ. ತಮ್ಮ ವಾಹನಗಳಲ್ಲಿ ಬೇರೆ ಕಡೆ …

Read More »

ದೀಪ ಹಚ್ಚಿದ್ರೆ ವೈರಸ್ ದೀಪದ ಬಳಿ ಬಂದು ಶಾಖಕ್ಕೆ ಸಾಯುತ್ತೆ: ರಾಮ್‍ದಾಸ್

ಮೈಸೂರು: ದೀಪ ಹಚ್ಚಿದ್ರೆ ವೈರಸ್ ದೀಪದ ಬಳಿ ಬರುತ್ತೆ. ಈ ವೇಳೆ ದೀಪದ ಶಾಖಕ್ಕೆ ವೈರಸ್ ಸಾಯುತ್ತೆ ಎಂದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಹೇಳಿದ್ದಾರೆ. ಮೈಸೂರಿನಲ್ಲಿ ದೀಪದ ಕುರಿತು ವಿಶೇಷ ವ್ಯಾಖ್ಯಾನ ನೀಡಿದ ಅವರು, ಮೋದಿಯವರ ದೀಪ ಬೆಳಗುವ ಕರೆಯ ಹಿಂದೆ ವೈಜ್ಞಾನಿಕ ಕಾರಣ ಇದೆ. ಅದಕ್ಕಾಗಿಯೇ ದೀಪ ಹಚ್ಚಲು ದೇಶಾದ್ಯಾಂತ ಕರೆ ನೀಡಿದ್ದಾರೆ ಎಂದರು. ಕತ್ತಲಿನಲ್ಲಿ ದೀಪ ಹಚ್ಚಿದರೆ ಎಲ್ಲೆ ಇದ್ದರೂ ವೈರಸ್ ದೀಪದ ಬಳಿ ಬರುತ್ತೆ. …

Read More »

ಬಾಗಲಕೋಟೆಯಲ್ಲಿ ಕೊರೊನಾಗೆ ಮೊದಲ ಬಲಿ………….

ಬಾಗಲಕೋಟೆ: ಕೊರೊನಾ ವೈರಸ್ ಗೆ ಜಿಲ್ಲೆಯಲ್ಲಿ ಮೊದಲ ಬಲಿ(ರೋಗಿ ನಂಬರ್. 125)ಯಾಗಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. 75 ವರ್ಷದ ವೃದ್ಧ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಿರಾಣಿ ಹಾಗೂ ಅಡುಗೆ ಎಣ್ಣೆ ವರ್ತಕರಾಗಿದ್ದ ವೃದ್ಧ ಮಾರ್ಚ್ 31ರಂದು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೃದ್ಧ ಯಾವುದೇ ವಿದೇಶ, ರಾಜ್ಯ, ಪರ ಜಿಲ್ಲೆಗೂ ಪ್ರವಾಸ ಮಾಡಿರಲಿಲ್ಲ. ಗುರುವಾರ ವೃದ್ಧನಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ವೃದ್ಧನ ಮಗ ಮತ್ತು ಮಗಳು ಹತ್ತು …

Read More »

ಬೆಂಗಳೂರು:ಉಚಿತ ಹಾಲಿಗಾಗಿ ಮುಗಿಬಿದ್ದ ಜನ

ಬೆಂಗಳೂರು: ಲಾಕ್‍ಡೌನ್ ಮುಗಿಯುವರೆಗೂ ಬಡವರಿಗೆ ಉಚಿತ ಹಾಲು ವಿತರಣೆ ಮಾಡುವಂತೆ ಸಿಎಂ ಯಡಿಯೂರಪ್ಪ ಫೋಷಣೆ ಮಾಡಿದ್ದರು. ಆದರೆ ಸಿಲಿಕಾನ್ ಸಿಟಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಉಚಿತ ಹಾಲಿಗಾಗಿ ಜನರು ಮುಗಿಬಿದ್ದಿದ್ದಾರೆ. ಬೆಂಗಳೂರಿನ ಪಂತರಪಾಳ್ಯ, ಕಮಲನಗರದಲ್ಲಿ ತಂಡೋಪ ತಂಡವಾಗಿ ಜನರು ಬಂದು ಉಚಿತವಾಗಿ ಹಾಲು ಪಡೆಯುತ್ತಿದ್ದಾರೆ. ಅಲ್ಲದೇ ಹಾಲಿಗಾಗಿ ಕಿಲೋ ಮೀಟರ್‌ಗಟ್ಟಲೇ ಕ್ಯೂನಲ್ಲಿ ಜನರು ನಿಂತಿದ್ದಾರೆ. ಹಾಲು ಪಡೆಯಲು ಬಂದವರು ಮಾಸ್ಕ್ ಹಾಕಿಲ್ಲ, ಜೊತೆಗೆ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ. ಜನರು …

Read More »

ಹುಬ್ಬಳ್ಳಿಯಲ್ಲಿ ಕೊರೊನಾ ಶಂಕಿತ ಟೆಕ್ಕಿ ಸಾವು……….

ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಸ್ವಗ್ರಾಮಕ್ಕೆ ಆಗಮಿಸಿದ್ದ ಎಂಜಿನಿಯರ್ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿ ಮೃತ ದುರ್ದೈವಿ. ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನ ವ್ಯಕ್ತವಾಗಿದೆ. ಟೆಕ್ಕಿ ಜ್ವರ, ನೆಗಡಿ, ಕೆಮ್ಮ, ನ್ಯೂಮೋನಿಯಾ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕಿಮ್ಸ್ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಕ್ತ ಮಾದರಿ ಹಾಗೂ ಥ್ರೋಟ್ ಸ್ವ್ಯಾಬ್ ಅನ್ನು ಶಿವಮೊಗ್ಗಕ್ಕೆ ರವಾನೆ …

Read More »

ಚಿಕ್ಕಬಳ್ಳಾಪುರ: ಸಂಕಷ್ಟಕ್ಕೆ ಸಿಲುಕಿದ್ದ ಈ ಕೂಲಿ ಕಾರ್ಮಿಕರ ಸ್ಥಳಗಳಿಗೆ ಭೇಟಿ ಉಚಿತವಾಗಿ ತರಕಾರಿ ವಿತರಣೆ”

ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಹಗಲು ರಾತ್ರಿ ಅನ್ನದೆ ಆರಕ್ಷಕರು ಹಾಗೂ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದೀಗ ತಮ್ಮ ಕೆಲಸದ ಒತ್ತಡದ ನಡುವೆಯೂ ಚಿಕ್ಕಬಳ್ಳಾಪುರ ತಹಶೀಲ್ದಾರ್ ಹಾಗೂ ನಂದಿಗಿರಿಧಾಮ ಪೊಲೀಸ್ ಠಾಣೆಯ ಪಿಎಸ್‍ಐ, ನಿರ್ಗತಿಕರಿಗೆ ಉಚಿತ ತರಕಾರಿ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ತಾಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿ ಗ್ರಾಮದ ಬಳಿ 40ಕ್ಕೂ ಹೆಚ್ಚು ಮಂದಿ ಟೈಲ್ಸ್ ಕೆಲಸ ಮಾಡುತ್ತಾರೆ. ಇವರು ಮಧ್ಯ …

Read More »

ದೆಹಲಿ ಜಮಾತ್‍ನಿಂದ ಬಂದಿದ್ದ 17 ಜನರ ವರದಿ ನೆಗೆಟಿವ್: ಬೀದರ್ ಜಿಲ್ಲಾಧಿಕಾರಿ

ಬೀದರ್: ದೆಹಲಿ ಜಮಾತ್‍ನಿಂದ ಬಂದಿದ್ದ 17 ಜನರ ಕೊರೊನಾ ವೈದ್ಯಕೀಯ ವರದಿ ನೆಗಟಿವ್ ಬಂದಿದೆ ಎಂದು ಬೀದರ್ ಜಿಲ್ಲಾಧಿಕಾರಿ ಹೆಚ್.ಆರ್.ಮಹಾದೇವ್ ಕೊರೊನಾ ಮಹಾಮಾರಿಗೆ ಗಡಿ ಜಿಲ್ಲೆ ಬೀದರ್ ತತ್ತರಿಸಿ ಹೋಗಿದೆ. ಜಮಾತ್ ಧಾರ್ಮಿಕ ಕಾರ್ಯಕ್ರಮ ಕಂಟವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿ, ಜಮಾತ್ ಗೆ ಹೋಗಿದ್ದ ಬೀದರ್ ಮೂಲದ 28 ಜನರಲ್ಲಿ 10 ಜನರಿಗೆ ಈಗಾಗಾಲೇ ಕೊರೊನಾ ಸೋಂಕು ಧೃಡ ಪಟ್ಟಿದೆ. ಅನುಮಾವಿದ್ದ ಕಾರಣ ಇನ್ನೊಬ್ಬರ ವರದಿ ಬಾಕಿಯಿದೆ. …

Read More »

ಕೊರೊನಾ ಆತಂಕ ಮಧ್ಯೆ ಕೊಡಗು, ಹಾಸನದಲ್ಲಿ ಲಘು ಭೂಕಂಪನ

ಹಾಸನ/ಕೊಡಗು: ಕೊರೊನಾ ಆತಂಕದ ನಡುವೆ ಕೊಡಗು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿ ಜನ ಭಯಭೀತರಾಗಿದ್ದಾರೆ. ಕಾಳೇನಹಳ್ಳಿ, ಗರುಡನಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಭೂಮಿ ಕಂಪನದ ಅನುಭವವಾಗಿದೆ. ಇಂದು ಸಂಜೆ 5.20ರ ಸಮಯದಲ್ಲಿ ಭೂಮಿ ಕಂಪಿಸಿ ನಡುಗಿದ ಅನುಭವವಾಗಿದ್ದು, ಬೆಚ್ಚಿಬಿದ್ದ ಜನ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ, ಕೂಡಿಗೆ, ಹೆಬ್ಬಾಲೆ ಸೇರಿದಂತೆ …

Read More »

ಲಾಕ್‍ಡೌನ್ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ- 15 ಜನರ ಬಂಧನ

ಕಾರವಾರ: ಲಾಕ್‍ಡೌನ್ ಎಚ್ಚರಿಕೆಯ ನಡುವೆಯೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಎರಡು ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದ 15 ಜನರನ್ನು ಮಸೀದಿಯಲ್ಲಿಯೇ ದಸ್ತಗಿರಿ ಮಾಡಲಾಗಿದೆ. ಹುನಗುಂದದ ಅಬ್ದುಲ್ ಮುನಾಫ್, ಮಕ್ತುಮಸಾಬ್, ಅಬ್ದುಲ್ ಖಾದರ್ ಅಬ್ದುಲ್ ರೇಹಮಾನ್ ಮುಲ್ಲಾ, ಅಬ್ದುಲ್ ಖಾದರ್ ಅಬ್ದುಲ್ ಗಫಾರ್ ಮುಲ್ಲಾ, ಫೀರ ಅಹ್ಮದ್, ದಾದಾಪೀರ್ ಮತ್ತು ಹಜರತ ಅಲಿ ಹಾಗೂ ವೀರಾಪುರದ ಅಬ್ದುಲ್ ರಜಾಕ್, ಇಮ್ತಿಯಾಜ್, ಮಲ್ಲಿಕ್ ರೆಹಾನ್, ಮೊಹಮ್ಮದ್ ರಫಿಕ್, ಮೊಹಮ್ಮದ್ ಬಸೀರುಲ್, ಮುಸ್ತಾಕ್, …

Read More »