Breaking News

ಕ್ವಾರಂಟೈನ್‍ಗಳಿಂದ ಬ್ರಾಂಡೆಡ್ ಬೇಡಿಕೆ – ಉಡುಪಿಯಲ್ಲಿ ಹೊಸ ತಲೆನೋವು ಶುರು

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಕ್ವಾರಂಟೈನ್‍ನಲ್ಲಿರುವ ಜನರ ಕಿರಿಕ್ ಜಾಸ್ತಿಯಾಗುತ್ತಿದೆ. ನಮಗೆ ಬ್ರಾಂಡೆಡ್ ಐಟಂ ಬೇಕು ಅಂತ ಸಿಬ್ಬಂದಿಗೆ ಒತ್ತಡ ಹಾಕುತ್ತಿದ್ದಾರೆ. ಉಡುಪಿ ಜಿಲ್ಲೆಯ ನರ್ಸ್, ಆಶಾ ಕಾರ್ಯಕರ್ತರಿಗೆ ಕ್ವಾರಂಟೈನ್‍ಗಳು ದುಂಬಾಲು ಬೀಳುತ್ತಿದ್ದಾರೆ. ವಿದೇಶದಿಂದ ಬಂದ ವ್ಯಕ್ತಿಗಳ ಕುಟುಂಬಕ್ಕೆ ಜಿಲ್ಲಾಡಳಿತ ಒಂದು ತಿಂಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಿತ್ತು. ಕುಟುಂಬದ ಯಾವ ಸದಸ್ಯರು ಹೊರಗೆ ಬಾರದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಕಾರ್ಯಕರ್ತರು ದಿಗ್ಬಂಧನ ಹಾಕಿದ್ದರು. ಒಂದು ಕುಟುಂಬಕ್ಕೆ ಬೇಕಾದ …

Read More »

ಧಾರವಾಡದಲ್ಲಿ ಕೊರೋನಾ ಪ್ರಕರಣ ಜೀರೋ ಹಂತಕ್ಕೆ ಬಂದಿದೆ; ಸಚಿವ ಜಗದೀಶ್‌ ಶೆಟ್ಟರ್ ಸಂತಸ

ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಲ್ಲಿ ಮಾತ್ರ ಕೊರೋನಾ ವೈರಸ್‌ ಪತ್ತೆಯಾಗಿತ್ತು. ಇದೀಗ ಅವರಿಗೂ ಚಿಕಿತ್ಸೆ ನೀಡಿ ಗುಣಪಡಿಸಲಾಗಿದ್ದು ಧಾರವಾಡದಲ್ಲಿ ಯಾರೂ ಕೊರೋನಾ ಸೋಂಕಿತರ ಇಲ್ಲದಿರುವುದು ಸಂತಸದ ವಿಚಾರವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್‌ ತಿಳಿಸಿದ್ದಾರೆ. ಇಂದು ಧಾರವಾಡದಲ್ಲಿ ಕರೊನಾ ಮಾನಸಿಕ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಶೆಟ್ಟರ್, “ಧಾರವಾಡದಲ್ಲಿ ಆರಂಭದಲ್ಲೇ ಒಂದು ಕೇಸ್ ಪಾಸಿಟಿವ್ ಆಗಿತ್ತು. ಆದರೆ, ಈಗ ಅವರು ಗುಣಮುಖರಾಗಿರುವುದು ಸಂತಸ ತಂದಿದೆ. ಕಿಮ್ಸ್‌ನಲ್ಲಿ ನಿರಂತರ ಚಿಕಿತ್ಸೆ ಕೊಡಿಸಿ ಗುಣಪಡಿಸಲಾಗಿದೆ. …

Read More »

ಕೊರೋನಾ ಹಿನ್ನೆಲೆಯಲ್ಲಿ ಬುಲೆಟ್ ಪ್ರಕಾಶ್ ಅಂತಿಮ ದರ್ಶನಕ್ಕೆ ಅವಕಾಶವಿಲ್ಲ: ಸಚಿವ ಆರ್​ ಅಶೋಕ್

ಬೆಂಗಳೂರು(ಏ. 06): ಕೊರೋನಾ ವೈರಸ್ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ​ನಟ ಬುಲೆಟ್ ಪ್ರಕಾಶ್ ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕೆ  ಅವಕಾಶ ನಿರಾಕರಿಸಲಾಗಿದೆ. ಇದೇ ರೀತಿಯಾಗಿ ಸೆಲೆಬ್ರಿಟಿಗಳು ಸಹ ಅಂತಿಮ ದರ್ಶನ ಪಡೆಯುವಂತಿಲ್ಲ. ಆದರೆ, ಸಂಬಂಧಿಕರಿಗಷ್ಟೇ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಚಿವ ಆರ್​ ಅಶೋಕ್​​​ ತಿಳಿಸಿದ್ದಾರೆ. ಲಾಕ್ ಡೌನ್ ಮುಗಿದ ನಂತರ ಕಡಿಮೆ ಜನರು ಪೂಜೆ ಸಂಸ್ಕಾರದಲ್ಲಿ ಭಾಗಿಯಾಗಬಹುದು. ದೂರದಿಂದಲೇ ನಟ ಬುಲೆಟ್​​ ಪ್ರಕಾಶ್​ ಅವರಿಗೆ ನಮನ ಸಲ್ಲಿಸುವಂತೆ ಅಭಿಮಾನಿಗಳಲ್ಲಿ …

Read More »

ಭಾರತ ಸರ್ಕಾರ ಶಿಫಾರಸು ಮಾಡಿದ ಔಷಧಿಗೆ ವಿಶ್ವಾದ್ಯಂತ ಭಾರೀ ಬೇಡಿಕೆ

ನವದೆಹಲಿ(ಏ. 06): ಕೊರೋನಾ ವೈರಸ್ ಸೋಂಕು ನಿವಾರಣೆಗೆ ಇನ್ನೂ ಆಧಿಕೃತವಾಗಿ ಮದ್ದು ಘೋಷಿಸಿಲ್ಲ. ಈಗಲೂ ವಿಶ್ವಾದ್ಯಂತ ಔಷಧಿ ಕಂಡುಹಿಡಿಯಲು ಪ್ರಯೋಗಗಳಾಗುತ್ತಿವೆ. ಒಂದೆರಡು ದೇಶಗಳಲ್ಲಿ ಔಷಧಿ ಕಂಡು ಹಿಡಿದು ಮಾನವರ ಮೇಲೆ ಪ್ರಯೋಗಗಳು ಮಾತ್ರ ಬಾಕಿ ಇವೆ. ಸದ್ಯಕ್ಕೆ ಇರುವ ಕೊರೋನಾ ರೋಗಿಗಳಿಗೆ ಆಯಾ ದೇಶದ ವೈದ್ಯರು ಬೇರೆ ಬೇರೆ ಕಾಯಿಲೆಗಳಿಗೆ ಬಳಕೆಯಲ್ಲಿರುವ ಔಷಧಗಳನ್ನು ಪ್ರಯೋಗಾತ್ಮಕವಾಗಿ ನೀಡುತ್ತಿದ್ದಾರೆ. ಭಾರತ ಸರ್ಕಾರ ಕೆಲ ದಿನಗಳ ಹಿಂದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧವನ್ನು ಕೊರೋನಾ ಸೋಂಕಿತರ …

Read More »

ಹಾವೇರಿ: ಅನಗತ್ಯ ತಿರುಗಾಟ- ಬುದ್ಧಿ ಹೇಳಿದ್ದಕ್ಕೆ ಪೇದೆ ಮೇಲೆಯೇ ಹಲ್ಲೆ

ಹಾವೇರಿ: ಕೊರೊನಾ ವಿರುದ್ಧ ಹೋರಾಡಲು ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ. ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಧಾನಿ ಮೋದಿ ಸಹ ಎಲ್ಲ ರಾಜ್ಯಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಆದರೂ ಇಲ್ಲೊಬ್ಬ ಯುವಕ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ದರ್ಪ ತೋರಿದ್ದಾನೆ. ಹಾವೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ಯುವಕ ಪ್ರಕಾಶ್ ಕರಿಗಾರ(35) ಪೇದೆ ಮೇಲೆ ಹಲ್ಲೆ ಮಾಡಿದ್ದು, ಬಸಾಪುರ ಗ್ರಾಮದಲ್ಲಿ ಕರ್ತವ್ಯದ ಮೇಲಿದ್ದ ಕಾನಸ್ಟೇಬಲ್ ಗುರುರಾಜ್ ಮೈಲಾರ …

Read More »

ಕರ್ನಾಟಕಕ್ಕೆ ತಲೆನೋವಾದ ಮಂಗಳೂರು ಕೊರೊನಾ ಸೋಂಕಿತ

ಮಂಗಳೂರು: ದೆಹಲಿಯ ನಿಜಾಮುದ್ದೀನ್ ಜಮಾತ್ ಪ್ರಕರಣದಂತೆ ಮಂಗಳೂರಿನ ಒಂದು ಪ್ರಕರಣ ಇದೀಗ ಕರ್ನಾಟಕಕ್ಕೆ ಕಗ್ಗಂಟಾಗಿದೆ. ಸಂಘಟನೆಯೊಂದಕ್ಕೆ ಸೇರಿರುವ ದಕ್ಷಿಣ ಕನ್ನಡ ಜಿಲ್ಲೆಯ (ರೋಗಿ ನಂ.144)ಈ ಸೋಂಕಿತ ವ್ಯಕ್ತಿ, ದೆಹಲಿಯಲ್ಲಿ ಮಾರ್ಚ್ 13ರಿಂದ 18ರವರೆಗೆ ತಂಗಿದ್ದರು. ಈ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯ ಶಾಹೀನ್‍ಭಾಗ್‍ನಲ್ಲಿ ನಡೆದ ಪ್ರತಿಭಟನೆಯಲ್ಲೂ ಭಾಗಿಯಾಗುವುದರ ಜೊತೆಗೆ ಹಲವರನ್ನು ಭೇಟಿಯಾಗಿರೋದು ತಲೆ ನೋವಾಗಿ ಪರಿಣಮಿಸಿದೆ. ಈ 52 ವರ್ಷದ ವ್ಯಕ್ತಿ ಹಲವರ ಸಂಪರ್ಕದಲ್ಲಿದ್ದು, ಅವರಿಗೂ ಸೋಂಕು ತಗಲಿರೋ …

Read More »

ಮೈಸೂರಿನಲ್ಲಿ 35 ಪ್ರಕರಣ ಪತ್ತೆಯಾದರೂ ಡೋಂಟ್ ಕೇರ್,ತಂಡೋಪತಂಡವಾಗಿ ಮಾರುಕಟ್ಟೆಗೆ

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35ಕ್ಕೆ ತಲುಪಿದರೂ ಜನ ಬುದ್ಧಿ ಕಲಿಯುತ್ತಿಲ್ಲ. ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ತಂಡೋಪತಂಡವಾಗಿ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಜನರ ನಿಯಂತ್ರಣ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ ಸದ್ಯ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 35ಕ್ಕೆ ಏರಿಯಾಗಿದೆ. ಈ ಸಂಖ್ಯೆ ಇನ್ನೂ ದುಪ್ಪಟ್ಟಾಗುವ ಆತಂಕವಿದೆ. ಹೀಗಾಗಿ, ಜನರು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳಲು ಮೈಸೂರು ಜಿಲ್ಲಾಡಳಿತ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಇದರ ಭಾಗವಾಗಿ ಅವಶ್ಯಕ ಸಾಮಾಗ್ರಿಗಳನ್ನು ಅವರ ಮನೆ ಬಾಗಿಲಿಗೆ …

Read More »

ಬೆಂಗಳೂರು: ಕೊರೊನಾ ಆತಂಕದ ನಡುವೆ ಸೋಮವಾರ ವರುಣದೇವ ಅಬ್ಬರಿಸಿದ್ದಾರೆ. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಇಂದಿನಿಂದ ಎರಡು ದಿನ ಭಾರೀ ಮಳೆಯಾಗಲಿದ್ದು, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಬೆಂಗಳೂರಲ್ಲಿ ಸೋಮವಾರ ರಾತ್ರಿ ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಶಿವಾಜಿನಗರ, ರಾಜಾಜಿನಗರ, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ. ನಗರದಲ್ಲಿ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು: ಕೊರೊನಾ ಆತಂಕದ ನಡುವೆ ಸೋಮವಾರ ವರುಣದೇವ ಅಬ್ಬರಿಸಿದ್ದಾರೆ. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಇಂದಿನಿಂದ ಎರಡು ದಿನ ಭಾರೀ ಮಳೆಯಾಗಲಿದ್ದು, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಬೆಂಗಳೂರಲ್ಲಿ ಸೋಮವಾರ ರಾತ್ರಿ ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಶಿವಾಜಿನಗರ, ರಾಜಾಜಿನಗರ, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ. ನಗರದಲ್ಲಿ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ …

Read More »

ಲಾಕ್‌ಡೌನ್ :ದೇಶದ ಶೇ.42ರಷ್ಟು ವಲಸೆ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್

ಬೆಂಗಳೂರು, ಏಪ್ರಿಲ್ 6: ಸಮೀಕ್ಷೆಯೊಂದರ ಪ್ರಕಾರ 3,196 ವಲಸೆ ಕಟ್ಟಡ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕಾರಣ ಏಪ್ರಿಲ್ 14ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿತ್ತು. ಇನ್ನೂ ಲಾಕ್‌ಡೌನ್ ಮುಂದುವರೆದರೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಲಿದೆ. ಕಟ್ಟಡ ಕಾರ್ಮಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ , ಅವರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಇದುವರೆಗೆ ಶೇ.42ರಷ್ಟು ವಲಸಿಗ …

Read More »

ಕೊನೆಗೂ ಭೇಟಿಯಾಗಲು ಸಾಧ್ಯವಾಗಿಲ್ಲ- ಬುಲೆಟ್ ನಿಧನಕ್ಕೆ ಕಿಚ್ಚ ಸಂತಾಪ

ಬೆಂಗಳೂರು: ಸ್ಯಾಂಡಲ್‍ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ನಿಧನಕ್ಕೆ ನಟ ಕಿಚ್ಚ ಸುದೀಪ್ ಸಂತಾಪ ಸೂಚಿಸಿದ್ದು, ಕೊನೆಯ ಬಾರಿಗೆ ಅವರನ್ನು ನೋಡಲು ಆಗಲಿಲ್ಲ ಎಂದು ಬೆಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ನನ್ನ ಸ್ನೇಹಿತ ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂದು ಕೇಳಿದಾಗ ಬೇಸರವಾಯಿತು. ಇನ್ನೂ ಹೆಚ್ಚು ದುಃಖಕರವಾದ ಸಂಗತಿಯೆಂದರೆ ಸಿನಿಮಾ ಉದ್ಯಮದ ಸ್ನೇಹಿತರು ಕೊನೆಯ ಬಾರಿಗೆ ಅವರನ್ನು ನೋಡಲು ಅವರ ಮನೆಗೆ ಭೇಟಿ ನೀಡಲು ಸಾಧ್ಯವಿಲ್ಲ. …

Read More »