Breaking News

ಬೆಳಗಾವಿಯಲ್ಲಿ ಕೊರೊನಾ ಭೀತಿ ನಡುವೆ ಡೆಂಗ್ಯೂಗೆ ಬಾಲಕ ಬಲಿ

ಬೆಳಗಾವಿ, ಜುಲೈ 6: ಕೊರೊನಾ ವೈರಸ್ ಭೀತಿ ನಡುವೆಯೇ ಬೆಳಗಾವಿಯಲ್ಲಿ ಡೆಂಗ್ಯೂ ಪ್ರಕರಣ ಕಾಣಿಸಿಕೊಂಡಿದೆ. ಬೆಳಗಾವಿಯ ವಡಗಾವಿಯ ವಿಷ್ಣು ಗಲ್ಲಿ ನಿವಾಸಿ, 12 ವರ್ಷದ ಬಾಲಕ ಡೆಂಗ್ಯೂಗೆ ಬಲಿಯಾದ್ದಾನೆ ವರದ್ ಕಿರಣ್ ಪಾಟೀಲ್ (12) ಡೆಂಗ್ಯೂಗೆ ಬಲಿಯಾದ ಬಾಲಕ. ಕೆಎಲ್‌ಎಸ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯಾಗಿದ್ದ ವರದ ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ನಿನ್ನೆ ಜುಲೈ 5ರಂದು ಸಾವನ್ನಪ್ಪಿದ್ದಾನೆ ಕೊರೊನಾ ವೈರಸ್ ನಿಂದಾಗಿ ಈಗಾಗಲೇ …

Read More »

ಕೋವಿಡ್ ಕೇರ್‌ ಕೇಂದ್ರಗಳಲ್ಲಿ 20,000 ಬೆಡ್ ಮತ್ತು ಐಸಿಯು ವ್ಯವಸ್ಥೆ

ಬೆಂಗಳೂರು: ಕೋವಿಡ್- 19 ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲಿಯೇ ಎದುರಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವ ರಾಜ್ಯ ಸರಕಾರ, ನಗರದ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿನ ಬೆಡ್‌ಗಳ ಪ್ರಮಾಣವನ್ನು ೨0 ಸಾವಿರದವರೆಗೂ ಹೆಚ್ಚಿಸಲು ನಿರ್ದರಿದೆ. ಬೆಂಗೂರಿನಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ ಕೋವಿಡ್‌ ಕೇರ್‌ ಕೇಂದ್ರಗಳ (ಸಿಸಿಸಿ) ಉಸ್ತುವಾರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಈಗಾಗಲೇ ನಮ್ಮಲ್ಲಿ 1250 ಬೆಡ್ ಗಳು ಲಭ್ಯ ಇವೆ. ಬೆಂಗಳೂರು …

Read More »

ಕೊರೋನಾ ವಾರಿಯರ್ಸ್‍ಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರದ ಚಿಂತನೆ …….

ಬೆಂಗಳೂರು –ಕೋವಿಡ್ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಡಿ’ ಗ್ರೂಪ್ ನೌಕರರಿಗೆ ವೇತನ ದುಪ್ಪಟ್ಟು ಮಾಡುವುದು ಸೇರಿದಂತೆ ಎಲ್ಲಾ ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಚಿಂತನೆ ನಡೆಸಿದ್ದು 2-3 ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಹೇಳಿದರು. ಆರೋಗ್ಯ ಯೋಧರಾಗಿ ಕೆಲಸ ಮಾಡುತ್ತಿರುವ …

Read More »

ಕೊರೋನಾ ಅಬ್ಬರಕ್ಕೆ ಜಗತ್ತು ತತ್ತರ : 1.15 ಕೋಟಿ ಸೋಂಕಿತರು, 5.36 ಲಕ್ಷ ಸಾವು..!

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜು.6- ಕೋವಿಡ್-19 ವೈರಸ್ ಅಟ್ಟಹಾಸದಿಂದ ಜಗತ್ತೇ ಹೈರಾಣಾಗಿದ್ದು, 240ಕ್ಕೂ ಹೆಚ್ಚು ದೇಶಗಳಲ್ಲಿ ರೋಗಿಗಳು ಮತ್ತು ಮೃತರÀ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರಿದಿದೆ. ಜಗತ್ತಿನಾದ್ಯಂತ ಒಟ್ಟು ಸಾವಿನ ಸಂಖ್ಯೆ 5.36 ಲಕ್ಷ ಹಾಗೂ ಸೋಂಕಿತರ ಸಂಖ್ಯೆ 1.15 ಕೋಟಿ ದಾಟಿದೆ. ಇದರ ನಡುವೆಯೂ ವಿಶ್ವದಲ್ಲಿ ಸುಮಾರು 65.39 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಜಗತ್ತಿನಾದ್ಯಂತ ನಿನ್ನೆ ಮಧ್ಯರಾತ್ರಿವರೆಗೆ 5,36,900 ಮಂದಿ ಸಾವಿಗೀಡಾಗಿದ್ದು, 1,15,64,518 ಸೋಂಕು ಪ್ರಕರಣಗಳು ವರದಿಯಾಗಿದೆ.. ಸಕ್ರಿಯ …

Read More »

ಕರೋನ ವಾರಿಯರ್ಸ್‍ಗಳಂತೆ ಕೆಲಸ ಮಾಡಿ : ಬಿಬಿಎಂಪಿ ಸದಸ್ಯರಿಗೆ ಸಚಿವ ಅಶೋಕ್ ಸಲಹೆ

ಬೆಂಗಳೂರು, ಜು.6- ನಿಮ್ಮ ನಿಮ್ಮ ವಾರ್ಡ್‍ಗಳಿಗೆ 20 ಲಕ್ಷ ರೂ. ನೀಡಿದ್ದೇವೆ. ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ. ಪಕ್ಷಾತೀತವಾಗಿ ನೀವೇ ವಾರಿಯರ್ಸ್‍ಗಳಂತೆ ಕೆಲಸ ಮಾಡಬೇಕು ಎಂದು ಪಾಲಿಕೆ ಸದಸ್ಯರಿಗೆ ಸಚಿವ ಆರ್.ಅಶೋಕ್ ಸಲಹೆ ನೀಡಿದರು. ಕೊರೊನಾ ಸಂಬಂಧ ಪಾಲಿಕೆ ಸಭೆಯಲ್ಲಿಂದು ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ವಾರ್ಡ್‍ಗೂ ತಾರತಮ್ಯ ಮಾಡುವುದಿಲ್ಲ. ಎಲ್ಲ ಪಕ್ಷವೂ ಒಂದೇ. ನಿಮಗೆ ನೀಡಿರುವ ಹಣವನ್ನು ರೋಗಿಗಳಿಗೆ ಬಳಸಿ ಎಂದರು. ಕೊರೊನಾದಿಂದಾಗಿ ಹೆಚ್ಚಿನ ಸಮಸ್ಯೆಗಳು …

Read More »

ದೊಣ್ಣೆಗಳನ್ನು ಹಿಡಿದು ಕಾವಲು ಕಾಯುತ್ತಿದ್ದಾರೆಗ್ರಾಮಸ್ಥರು

ಹಾವೇರಿ,- ಮಹಾಮಾರಿ ಕೊರೊನಾ ರಾಜ್ಯದ ಮೂಲೆ ಮೂಲೆಗೂ ಹಬ್ಬುತ್ತಿದ್ದು, ಸೋಂಕಿನಿಂದ ದೂರವಿರಲು ಹಿರೆಕೆರೂರು ತಾಲ್ಲೂಕಿನ ಚಿನ್ನಮುಳಗುಂದ ಗ್ರಾಮಸ್ಥರು ದೊಣ್ಣೆಗಳನ್ನು ಹಿಡಿದು ಸ್ವಯಂಪ್ರೇರಿತ ನಿರ್ಬಂಧ ಹೇರಿಕೊಂಡಿದ್ದಾರೆ. ನಮ್ಮ ಗ್ರಾಮದಲ್ಲಿ ಯಾವುದೇ ಸೋಂಕಿಲ್ಲ. ಬೇರೆ ಊರಿನವರು ಬಂದು ಸೋಂಕು ಹಬ್ಬಿಸುವುದು ಬೇಡ ಎಂದು ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ದೊಣ್ಣೆಗಳನ್ನು ಹಿಡಿದು ಕಾವಲು ಕಾಯುತ್ತಿದ್ದಾರೆ. ಈ ಗ್ರಾಮಕ್ಕೆ ಬೇರೆ ಊರುಗಳಿಂದ ಯಾರೂ ಬರುವಂತಿಲ್ಲ, ಯಾರೂ ಹೊರಹೋಗದಂತೆ ನೋಡಿಕೊಳ್ಳುತ್ತಿದ್ದಾರೆ.ಮನೆಗೆ ಒಬ್ಬೊಬ್ಬರು ಇಂತಿಷ್ಟು ಗಂಟೆಗಳ ಲೆಕ್ಕದಲ್ಲಿ ಊರಿನ …

Read More »

ಸರ್ಕಾರದ ನೆರವಿಲ್ಲದೆ 10 ಲಕ್ಷ ರೂ. ವೆಚ್ಚದಲ್ಲಿ 250 ಮೀಟರ್ ಉದ್ದದ ಬಂಬೂ ಬ್ರಿಡ್ಜುನಿರ್ಮಾಣ

ಅಸ್ಸಾಂ,ಜುಲೈ.6- ಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಸರ್ಕಾರದ ನೆರವಿಲ್ಲದೆ 10 ಲಕ್ಷ ರೂ. ವೆಚ್ಚದಲ್ಲಿ 250 ಮೀಟರ್ ಉದ್ದದ ಬಂಬೂ ಬ್ರಿಡ್ಜು ನಿರ್ಮಿಸಿದ್ದಾರೆ. ಬರ್ಪೆಟ್ ಜಿಲ್ಲೆಯ ಕಚುಮರ ಪ್ರದೇಶದ ಸುತ್ತಮುತ್ತಲ ಹತ್ತು ಹಳ್ಳಿಗಳ ಗ್ರಾಮಸ್ಥರು ತಮ್ಮ ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿಕೊಂಡಿದ್ದು, ಬ್ರಹ್ಮಪುತ್ರ ಉಪನದಿಯಿಂದ ಕಚುಮಾರ ಬಜರ್‍ಗೆ ಸಂಪರ್ಕ ಕಲ್ಪಿಸುವ 250 ಮೀಟರ್ ಉದ್ದದ ಸೇತುವೆಯನ್ನು ಕಟ್ಟಿಕೊಂಡಿದ್ದಾರೆ ಸೇತುವೆ ಇಲ್ಲದೆ ನಮಗೆ …

Read More »

ಬಿಜೆಪಿ ಐಟಿ ಸೆಲ್ ಮುಖ್ಯಸ್ಥನಿಗೆ ಪ್ರಿಯಾಂಕ ವಾಸವಿದ್ದ ನಿವಾಸ

ನವದೆಹಲಿ,- ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಸವಿದ್ದ ಬಂಗಲೆಯನ್ನು ಕೇಂದ್ರ ಸರ್ಕಾರವು ಬಿಜೆಪಿ ಐಟಿ ಸೆಲ್ ಮುಖ್ಯಸ್ಥನಿಗೆ ನೀಡಿದೆ. ಪ್ರಿಯಾಂಕ ಗಾಂಧಿ ವಾಸವಿದ್ದ ಬಂಗಲೆ ತನಗೆ ಬೇಕು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅನಿಲ್ ಬಾಲುನಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ಬೇಡಿಕೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿರುವುದರಿಂದ ಅನಿಲ್ ಇದೀಗ ಈ ಬಂಗಲೆಯನ್ನು ತಮದಾಗಿಸಿಕೊಂಡಿದ್ದಾರೆ. ಲೋಧಿ ಎಸ್ಟೇಟ್ ನಲ್ಲಿರುವ 35ನೇ ನಂಬರಿನ ಬಂಗಲೆಯನ್ನು ಪ್ರಿಯಾಂಕ …

Read More »

ದೆಹಲಿ ಜನತೆ ಹೆದರಬೇಡಿ, ಪ್ಲಾಸ್ಮಾ ಬ್ಯಾಂಕ್ ಆರಂಭ: ಸಿಎಂ ಕೇಜ್ರಿವಾಲ್

ನವದೆಹಲಿ: ಕೊರೊನಾಗೆ ಹೆದರುವ ಅಗತ್ಯವಿಲ್ಲ ಎಂದು ದೆಹಲಿಯ ಜನತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ದೇಶದ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿದೆ. ಆದ್ರೆ ಜನರು ಆತಂಕಕ್ಕೊಳಗಾಗೋದು ಬೇಡ. ಈಗಾಗಲೇ 1 ಲಕ್ಷ ಜನರಲ್ಲಿ ಅಂದಾಜು 72 ಸಾವಿರ ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಸಹ ಆರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು …

Read More »

81ನೇ ಹುಟ್ಟುಹಬ್ಬದಂದು 15 ಪುಶ್-ಅಪ್ ಮಾಡಿದ ಅಜ್ಜಿ- ವೈರಲ್ ವಿಡಿಯೋ

ನವದೆಹಲಿ: ಬಾಲಿವುಡ್ ನಟ, ಮಾಡೆಲ್ ಮಿಲಿಂದ್ ಸೋಮನ್ ಅವರ ತಾಯಿ ಉಷಾ ಸೋಮನ್ ಅವರು ಇತ್ತೀಚೆಗಷ್ಟೇ ತಮ್ಮ 81ನೇ ಹುಟ್ಟು ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದು, ಇದೇ ವೇಳೆ 15 ಪುಶ್ ಅಪ್ ಮಾಡಿ ಅಚ್ಚರಿಗೊಳಿಸಿದ್ದಾರೆ. ಸದ್ಯ ಉಷಾ ಸೋಮನ್ ಅವರ ಪುಶ್ ಅಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮಿಲಿಂದ್ ಸೋಮನ್ ಅವರು ತಮ್ಮ ಫಿಟ್ನೆಸ್ ಹಿಂದಿನ ಪ್ರೇರಣೆಯಾದ ವಿಡಿಯೋವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಉಷಾ ಸೋಮನ್ …

Read More »