ಹುಬ್ಬಳ್ಳಿ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ರೂ ಉನ್ನತ ಖಾಕಿ ಅಧಿಕಾರಿಗಳ ನಡುವಣ ಒಳಜಗಳ ನಿಲ್ಲುತ್ತಿಲ್ಲ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ದಿಲೀಪ್ ಮತ್ತು ಡಿಸಿಪಿ ಕೃಷ್ಣಕಾಂತ್ ನಡುವೆ ಒಳಜಗಳ ಮುಂದುವರಿದಿದೆ. ಮತ್ತೆ ಡಿಸಿಪಿಗೆ ನೋಟಿಸ್ ನೀಡಿದ ಕಮಿಷನರ್ ದಿಲೀಪ್! ಭ್ರಷ್ಟಾಚಾರ ಆರೋಪ ಮಾಡಿ ಯುಟರ್ನ್ ತೆಗೆದುಕೊಂಡಿದ್ಯಾಕೆ? ನೀವು ಮತ್ತೋರ್ವ ಡಿಸಿಪಿ ವಿರುದ್ಧವೂ ಆರೋಪ ಮಾಡಿದ್ದೀರಿ. ಇನ್ನೂ ಕೆಲವು ಅಧಿಕಾರಿಗಳ ವಿರುದ್ಧವೂ ಆರೋಪಿಸಿ ಸುಮ್ಮನಿದ್ದೀರಿ. ಹಾಗಾಗಿ, ಆ ಬಗ್ಗೆ ವರದಿ ನೀಡುವಂತೆ ನಿಮಗೆ …
Read More »ವಿದ್ಯಾಗಮ ಬದಲು ಕೊರೊನಾ ಬಂತು.. ವಠಾರ ಶಾಲೆಯಲ್ಲಿ ಶಿಕ್ಷಕರು, ಮಕ್ಕಳಿಗೆ ಸೋಂಕು
ಕಲಬುರಗಿ: ಶಾಲೆ ಓಪನ್ ಮಾಡ್ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದ ರಾಜ್ಯ ಸರ್ಕಾರ ಮತ್ತ ಪೋಷಕರಿಗೆ ಈ ಸುದ್ದಿ ಆಘಾತ ತಂದೊಡ್ಡಿದೆ. ಯಾಕಂದ್ರೆ, ವಠಾರ ಶಾಲೆಗೆ ಹೋಗಿದ್ದ 4 ಮಕ್ಕಳಿಗೆ ಕೊರೊನಾ ದೃಢವಾಗಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ್ ಗ್ರಾಮದಲ್ಲಿ ನಡೆದಿದೆ. ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಯನ್ನು ಪ್ರಾರಂಭಿಸಿದ್ದು ಸುಮಾರು 250 ಮಕ್ಕಳು ಶಾಲೆಗೆ ಬರುತ್ತಿದ್ದರು ಎಂದು ಹೇಳಲಾಗಿದೆ. ಈ ಹಿಂದೆ ಶಾಲೆಯ ಮುಖ್ಯ ಶಿಕ್ಷಕನಿಗೆ ಸೋಂಕು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ …
Read More »ರಮೇಶ ಜಾರಕಿಹೊಳಿ ಮತ್ತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ
ಬೆಳಗಾವಿ: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮತ್ತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ಉಭಯ ನಾಯಕರ ಭೇಟಿ ಅಚ್ಚರಿಗೆ ಕಾರಣವಾಗಿದ್ದು, ಮಹಾರಾಷ್ಟ್ರದಲ್ಲಿಯೂ ಆಪರೇಷನ್ ಕಮಲಕ್ಕೆ ಕಸರತ್ತು ನಡೆದಿದೆಯಾ? ಎಂಬ ಕುತೂಹಲ ಕೆರಳಿಸಿದೆ. ಕಳೆದ ತಿಂಗಳಷ್ಟೇ ಫಡ್ನವಿಸ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಬಂದಿದ್ದ ರಮೇಶ ಜಾರಕಿಹೊಳಿ, ಕೋವಿಡ್ ಹಾವಳಿ, ಲಾಕ್ ಡೌನ್ ನಿಂದಾಗಿ ಸಚಿವ ಸ್ಥಾನ ದೊರೆತ ಬಳಿಕ ಫಡ್ನವಿಸ್ …
Read More »ಕಾರ್ಯಕರ್ತರನ್ನ ಕೇಳದೇ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ.ಸ್ಪಷ್ಟನೆ ನೀಡಿದ ವಿನಯ್ ಕುಲಕರ್ಣಿ
ಧಾರವಾಡ: ಬಿಜೆಪಿ ಸೇರ್ಪಡೆ ಸುದ್ದಿಗೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ.ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ವಿನಯ್ ಕುಲಕರ್ಣಿ, ನಾನು ಯಾವ ಬಿಜೆಪಿ ನಾಯಕರನ್ನೂ ಭೇಟಿಯಾಗಿಲ್ಲ. ಬಿಜೆಪಿ ಸೇರುವ ಯಾವುದೇ ಪ್ರಸ್ತಾಪವೂ ನನ್ನ ಮುಂದೆ ಬಂದಿಲ್ಲ. ಎಲ್ಲವೂ ಮಾಧ್ಯಮಗಳ ಉಹಾಪೋಹ. ನಾನು ಬೆಳೆದ ಬಂದ ದಾರಿಯೇ ಬೇರೆ ಎಂದು ಹೇಳಿದರು. ಮೊದಲ ಬಾರಿಗೆ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದು, ಹೀಗಾಗಿ ಕಾರ್ಯಕರ್ತರು ಮತ್ತು ಎಲ್ಲ ಸಮಾಜದ …
Read More »ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ
ಹೈದರಾಬಾದ್: ವಿದ್ಯಾರ್ಥಿನಿಯೊಬ್ಬಳ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಮೀರ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರ್ರಾಮ್ ಗುಡಾದಲ್ಲಿರುವ ಗೋ-ಕಾರ್ಟಿಂಗ್ ಪ್ಲೇ ಝೋನ್ ನಲ್ಲಿ ಈ ಅವಘಡ ಸಂಭವಿಸಿದೆ. ಮೃತ ದುರ್ದೈವಿಯನ್ನು ವರ್ಷಿಣಿ ಎಂದು ಗುರುತಿಸಲಾಗಿದ್ದು, ಈಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಗುರುವಾರ ಸಂಜೆ ಗುರ್ರಾಮ್ ಗುಡಾದ ಗೋ-ಕಾರ್ಟಿಂಗ್ ಪ್ಲೇ ಝೋನ್ ಗೆ ತೆರಳಿದ್ದಳು. ಅಲ್ಲದೆ ಗೋ-ಕಾರ್ಟಿಂಗ್ ಮಾಡುತ್ತಿದ್ದ ವೇಳೆ ಅದರ ಚಕ್ರಕ್ಕೆ …
Read More »ಪೊದೆಯ ಬದಿಯಲ್ಲಿ ಕಂತೆ ಕಂತೆ ಹಣ – ಚಿತ್ರದುರ್ಗದಲ್ಲಿ ಅಚ್ಚರಿಯ ಘಟನೆ
ಚಿತ್ರದುರ್ಗ: ಪಾಳುಬಿದ್ದ ಜಮೀನಿನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿ ಅಚ್ಚರಿ ಮೂಡಿಸಿರುವ ಪ್ರಕರಣ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬುಕ್ಲಾರಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಚಾನಕ್ಕಾಗಿ ತಳುಕು ಪೊಲೀಸರಿಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೋರ್ವ ಜಮೀನಿನಲ್ಲಿ ಕಂತೆ ಕಂತೆ ಹಣ ಬಿದ್ದಿರುವ ಮಾಹಿತಿ ತಿಳಿಸಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರುವ ತಳುಕು ಠಾಣೆಯ ಪೊಲೀಸರಿಗೆ ನಿಜಕ್ಕೂ ಅಲ್ಲಿ ಅಚ್ಚರಿ ಕಾದಿತ್ತು. ಸ್ಥಳಕ್ಕೆ ಬಂದ …
Read More »ಚಿರು ಮತ್ತೆ ಉದಯಿಸುತ್ತಿದ್ದಾರೆ,: ಚಿರಂಜೀವಿ ಸರ್ಜಾ ಪತ್ನಿ ಮೇಘನಾ
ಬೆಂಗಳೂರು: ಇತ್ತೀಚೆಗಷ್ಟೆ ದಿವಗಂತ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನಡೆದಿದೆ. ಇದರ ಬೆನ್ನಲ್ಲೆ ನಟಿ ಮೇಘನಾ ಚಿರು ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ಶಿವಾರ್ಜುನ. ಈ ಸಿನಿಮಾ ಇದೇ ಅಕ್ಟೋಬರ್ 16ರಂದು ಶುಕ್ರವಾರ ಮತ್ತೆ ಬಿಡುಗಡೆಯಾಗುತ್ತಿದೆ. ಈ ಸಿಹಿಸುದ್ದಿಯನ್ನು ಚಿರು ಪತ್ನಿ ಮೇಘನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಚಿರು ಮತ್ತೆ ಉದಯಿಸುತ್ತಿದ್ದಾರೆ, ಅದಕ್ಕೆ ಕಾರಣ ಅಕ್ಟೋಬರ್ 16ರಂದು ಶಿವಾರ್ಜುನ …
Read More »ನೆಲಮಂಗಲ ಬಳಿ ಕಂಟೈನರ್ ಲಾರಿ ಪಲ್ಟಿ- ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು: ಬೃಹತ್ ಕಂಟೈನರ್ ಲಾರಿ ಪಲ್ಟಿಯಾಗಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಬಳಿ ನಡೆದಿದೆ. ನೆಲಮಂಗಲ ತಾಲೂಕಿನ ಎಡೆಹಳ್ಳಿ ಸಮೀಪ ಬೃಹತ್ ಕಂಟೈನರ್ ಲಾರಿಯೊಂದು ಪಲ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ವಾಹನ ಸವಾರರು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಸುಮಾರು 5 ಗಂಟೆ ಹೊತ್ತಿಗೆ ಕಂಟೈನರ್ ಪಲ್ಟಿಯಾಗಿದ್ದು, ಬರೋಬ್ಬರಿ 20 ನಿಮಿಷಗಳ ಕಾಲ ವಾಹನಗಳು ನಿಂತಲ್ಲೇ ನಿಂತಿದ್ದವು. ಇದರಿಂದಾಗಿ ನೂರಾರು …
Read More »ಹಾಸನಾಂಬೆಯ ದರ್ಶನಕ್ಕೆ ಜನ-ಪ್ರತಿನಿಧಿಗಳ ಇಬ್ಬಗೆ ನೀತಿ ಹಾಸನ ಜನರ ಕೋಪಕ್ಕೆ ಕಾರಣವಾಗಿದೆ.
ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಕೊರೊನಾದಿಂದಾಗಿ ಈ ವರ್ಷ ಹಾಸನಾಂಬ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿಲ್ಲ. ಆದರೆ ಈ ವಿಷಯದಲ್ಲಿ ಜನ-ಪ್ರತಿನಿಧಿಗಳ ಇಬ್ಬಗೆ ನೀತಿ ಹಾಸನ ಜನರ ಕೋಪಕ್ಕೆ ಕಾರಣವಾಗಿದೆ. ಹಾಸನ ನಗರದ ಹೊಸಲೈನ್ ರಸ್ತೆಯಲ್ಲಿರುವ ಹಾಸನಾಂಬ ದೇವಾಲಯದ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆರೆದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವುದು ಬಹಳ …
Read More »ಸಚಿವರೊಬ್ಬರ ಮನೆ ಮುಂದೆ ಮಾತ್ರ ಹೈಟೆಕ್ ರಸ್ತೆ, ಮಹಾನಗರದ ರಸ್ತೆಗಳನೋಡಿದ್ರೂ ಬರೀ ಹಳ್ಳಬಿದ್ದ ರಸ್ತೆಗಳು,
ಹುಬ್ಬಳ್ಳಿ: ಜಿಲ್ಲೆಯ ಸಚಿವರೊಬ್ಬರ ಮನೆ ಮುಂದೆ ಮಾತ್ರ ಹೈಟೆಕ್ ರಸ್ತೆ ನಿರ್ಮಾಣ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ರಸ್ತೆಗಳನ್ನ ರಿಪೇರಿ ಮಾಡದ ಅಧಿಕಾರಿಗಳು, ಸಚಿವರ ಮನೆ ಮುಂದೆ ಮಾತ್ರ ಹೈಟೆಕ್ ರಸ್ತೆ ನಿರ್ಮಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎಲ್ಲಿ ನೋಡಿದ್ರೂ ಬರೀ ಹಳ್ಳಬಿದ್ದ ರಸ್ತೆಗಳು, ತಗ್ಗು ಗುಂಡಿ ಕಾಣ ಸಿಗುತ್ತವೆ. ಆದರೆ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಮನೆ ಮುಂದಿನ ರಸ್ತೆಗೆ …
Read More »