15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಕರ್ನಾಟಕದ ತಂಡ… ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಬೆಳಗಾವಿಯ ದೇಹದಾರ್ಢ್ಯಪಟುಗಳು… ಇದೇ ತಿಂಗಳು ನಡೆಯಲಿರುವ 15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆ 2025ರಲ್ಲಿ ಕರ್ನಾಟಕದ ತಂಡವು ಭಾಗವಹಿಸಲಿದ್ದು, ಈ ತಂಡಕ್ಕೆ ಬೆಳಗಾವಿ ಸೇರಿದಂತೆ ವಿವಿಧೆಡೆ ದೇಹದಾರ್ಢ್ಯಪಟುಗಳು ಆಯ್ಕೆಯಾಗಿದ್ದಾರೆ. ಇದೇ ತಿಂಗಳ 29 ಮತ್ತು 30 ರಂದು ಛತ್ತೀಸಗಢದ ಬಿಲಾಸಪುರದಲ್ಲಿ ನಡೆಯಲಿರುವ 15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆ 2025ರಲ್ಲಿ ಕರ್ನಾಟಕ …
Read More »ಬೆಳಗಾವಿಯಲ್ಲಿ ಎ.ಟಿ.ಎಂ ಕಳ್ಳತನಕ್ಕೆ ವಿಫಲ ಯತ್ನ !!!
ಬೆಳಗಾವಿಯಲ್ಲಿ ಎ.ಟಿ.ಎಂ ಕಳ್ಳತನಕ್ಕೆ ವಿಫಲ ಯತ್ನ !!! ಬೆಳಗಾವಿ ನಗರದ ನರ್ತಕಿ ಚಿತ್ರಮಂದಿರದ ಹತ್ತಿರವಿರುವ ಎ.ಟಿ.ಎಂ. ವೊಂದರಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಇಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ. ಎಚ್. ಡಿ. ಎಫ್. ಸಿ ಬ್ಯಾಂಕ್ ಎ.ಟಿ.ಎಂ ಶೇಟರ್ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಪತ್ರಿಕೆ ಹಾಕುವ ಯುವಕರ ವಾಹನದ ಸದ್ದು ಕೇಳಿ ಕಳ್ಳರು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Read More »ಮೈಸೂರು: ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಮೂವರಿಗೆ 20 ವರ್ಷ ಜೈಲು ಶಿಕ್ಷೆ
ಮೈಸೂರು: ಆಶ್ರಯ ಬೇಡಿ ಬಂದ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಮಹಿಳೆ ಸೇರಿ ಮೂವರಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸಿ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆನಂದ ಪಿ.ಹೊಗಾಡೆ ತೀರ್ಪು ನೀಡಿದ್ದಾರೆ. ಕೆ.ಆರ್.ಪೇಟೆ ತಾಲೂಕು ಚಿಕ್ಕನಹಳ್ಳಿಪುರ ಗ್ರಾಮದ ರೇಖಾ, ಶ್ರೀರಂಗಪಟ್ಟಣದ ರಾಘವೇಂದ್ರ, ಪುರ ಗ್ರಾಮದ ಉಮೇಶ್ ಶಿಕ್ಷೆಗೆ ಗುರಿಯಾದವರು. ಇತರ ಆರೋಪಿಗಳಾದ ಲೀಲಾವತಿ ಮತ್ತು ಲಲಿತಾ …
Read More »ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಕೆಲವು ಮಾರ್ಗಗಳ ಬಸ್ ಅಂಕಣಗಳನ್ನು ಮರು ಹೊಂದಾಣಿಕೆ ಮಾಡಲಾಗಿದೆ.
ಹುಬ್ಬಳ್ಳಿ: ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡುತ್ತಿದ್ದ ಉಪನಗರ ಸಾರಿಗೆ ಬಸ್ಗಳನ್ನು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿಯ ನೂತನ ನಗರ-ಉಪನಗರ ಸಾರಿಗೆ ಬಸ್ ನಿಲ್ದಾಣಕ್ಕೆ (ಹಳೇ ಬಸ್ ನಿಲ್ದಾಣ) ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸೂರು ನಿಲ್ದಾಣದಲ್ಲಿನ ಲಭ್ಯ ಸ್ಥಳವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿಂದ ಹೊರಡುವ ಕೆಲ ಮಾರ್ಗಗಳ ಬಸ್ಗಳ ಅಂಕಣಗಳನ್ನು ಮರು ಹೊಂದಾಣಿಕೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಹೊಸೂರು …
Read More »ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ದೆಹಲಿ ಭೇಟಿ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: “ಪೆನ್ನಾರ್ ನದಿ ನೀರು ಹಾಗೂ ಕೋಲಾರ ಭಾಗದಿಂದ ತಮಿಳುನಾಡು ಕಡೆಗೆ ಹರಿಯುವ ನೀರಿನ ವಿವಾದದ ಕುರಿತು ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ನಡೆಸಲು ದೆಹಲಿಗೆ ಭೇಟಿ ನೀಡುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಪೆನ್ನಾರ್ ನದಿ ನೀರಿನ ವಿಚಾರವಾಗಿ ಎರಡು ರಾಜ್ಯಗಳ ಪ್ರತಿನಿಧಿಗಳನ್ನು ಸೇರಿಸಿ ನಿಮ್ಮಲ್ಲೇ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವಿತ್ತು. ಆದರೆ ಸೋಮವಾರ …
Read More »ಪೋಕ್ಸೋ ಕೇಸ್ : ಜಾಮೀನು ಷರತ್ತು ಸಡಿಲಿಕೆ, ಆದೇಶ;B.S.Y.
ಬೆಂಗಳೂರು : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ತೆಗೆದುಕೊಂಡಿದ್ದ ಕಾಗ್ನಿಜೆನ್ಸ್ ಅನ್ನು ರದ್ದುಪಡಿಸಿ, ಮತ್ತೆ ಹೊಸದಾಗಿ ಪರಿಗಣಿಸುವಂತೆ ಸೂಚನೆ ನೀಡಿರುವ ಆದೇಶದ ಕುರಿತು ಸ್ಪಷ್ಟನೆ ಮತ್ತು ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್ಗೆ ಎರಡು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, …
Read More »ಬೆಳಗಾವಿ ಮಾರುಕಟ್ಟೆಗೆ ವಿವಿಧ ತಳಿಗಳ ಮಾವಿನ ಹಣ್ಣುಗಳು
ಬೆಳಗಾವಿ: ಮಾವಿನ ಹಣ್ಣಿನ ಸೀಸನ್ ಶುರುವಾಗಿದ್ದು, ಜನರು ಮಾವಿನ ರುಚಿ ಸವಿಯಲು ಕಾತುರರಾಗಿದ್ದಾರೆ. ಆದರೆ, ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಕಾರಣ ದರ ಕೇಳಿ ಗ್ರಾಹಕರು ಹೌಹಾರುತ್ತಿದ್ದಾರೆ. ತರಹೇವಾರಿ ಮಾವು ಮಾರುಕಟ್ಟೆಗೆ ಬಂದಿವೆ. ಪ್ರಮುಖವಾಗಿ ರತ್ನಗಿರಿ, ದೇವಗಡ, ಆಪೂಸ್ (ಆಲ್ಫೊನ್ಸೋ), ರಸಪುರಿ, ಫೈರಿ ಸೇರಿದಂತೆ ವಿವಿಧ ತಳಿಯವು ಮಾರುಕಟ್ಟೆಯಲ್ಲಿವೆ. ಸದ್ಯಕ್ಕೆ ಆಪೂಸ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ದುಬಾರಿಯಾಗಿದೆ. ಒಂದು ಡಜನ್ ಮಾವಿನ ಹಣ್ಣಿನ ಬೆಲೆ 1,000 ದಿಂದ 3700 ರೂ.ವರೆಗೂ …
Read More »ರಾಜ್ಯ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್ ಜಾರಕಿಹೊಳಿ ಅಧಿಕಾರ ಸ್ವೀಕಾರ
ಬೆಂಗಳೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ ನೂತನ ಕಾರ್ಯದರ್ಶಿಯಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಪದಗ್ರಹಣ ಮಾಡಿದರು. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ನ ನೂತನ ಪದಾಧಿಕಾರಿಗಳು ಇದೇ ವೇಳೆ ಪದಗ್ರಹಣ ಮಾಡಿದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಹಿಳೆಯರೂ ಪಕ್ಷಕ್ಕಾಗಿ ದುಡಿಯಬೇಕು, ಈ ನಿಟ್ಟಿನಲ್ಲಿ 74 ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡುತ್ತೇವೆ …
Read More »ಸಾವರ್ಕರ್ ಪರವಾದ ವಕಾಲತ್ತು ವಹಿಸುವ @BJP4Karnataka ಅಂಬೇಡ್ಕರ್ ರವರ ವಿರುದ್ಧದ ಸಾವರ್ಕರ್ ಸಂಚಿನ ಹೊಣೆಯನ್ನೂ ಹೊತ್ತುಕೊಳ್ಳಲಿ
ಬ್ರಿಟಿಷರಿಗೆ ಮಾಫಿ ಪತ್ರ ಬರೆದಿದ್ದ ಸಾವರ್ಕರ್ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಸತ್ ಪ್ರವೇಶಿಸದಂತೆ ತಡೆಯುವ ಸಂಚು ರೂಪಿಸಿದ್ದರು ಎನ್ನುವುದು ಸ್ವತಃ ಬಾಬಾ ಸಾಹೇಬರ ಕೈಬರಹದಲ್ಲೇ ದಾಖಲಾಗಿದೆ. ಸಾವಿರಾರು ವರ್ಷಗಳಿಂದ ಶೋಷಿತರ ತಲೆಯ ಮೇಲೆ ಕಾಲಿಟ್ಟುಕೊಂಡು ಬಂದಿದ್ದ ಮನುವಾದಿಗಳಿಗೆ ಅಂಬೇಡ್ಕರ್ ರವರು ಪರಮ ಶತ್ರುವಾಗಿ ಕಂಡಿದ್ದರಲ್ಲಿ ಯಾವುದೇ ವಿಶೇಷತೆ ಇಲ್ಲ. ಬಾಬಾ ಸಾಹೇಬರನ್ನು ಸೋಲಿಸಿದ್ದು ಕಾಂಗ್ರೆಸ್ ಎನ್ನುವ ಬಿಜೆಪಿಯ ಆಧಾರವಿಲ್ಲದ ಸುಳ್ಳು ನರೇಟಿವ್ ನ್ನು ಇಂದು ಸದನದಲ್ಲಿ ಚಾರಿತ್ರಿಕ …
Read More »ಬೆಳಗಾವಿ ಬೆಕ್ಕೇರಿ ಗ್ರಾಮದಲ್ಲಿ ಹೈ ಅಲರ್ಟ್ ಸಮುದಾಯಗಳ ನಡುವೆ ಘರ್ಷಣೆ, ಕಲ್ಲು ತೂರಾಟ:
ಸಮುದಾಯಗಳ ನಡುವೆ ಘರ್ಷಣೆ, ಕಲ್ಲು ತೂರಾಟ: ಬೆಳಗಾವಿ ಬೆಕ್ಕೇರಿ ಗ್ರಾಮದಲ್ಲಿ ಹೈ ಅಲರ್ಟ್ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಅದ್ದೂರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಇದೇ ಹೋಳಿ ಕುರಿತು ಓರ್ವ ಯುವಕ ವಾಟ್ಸಾಪ್ ಸ್ಟೇಟಸೊಂದನ್ನು ಹಾಕಿಕೊಂಡಿದ್ದಾನೆ. ಅದರಲ್ಲಿ ಅಂಬೇಡ್ಕರ್ ಕುರಿತು ಕೂಡ ಬರೆದು ಹಾಕಿದ್ದು, ಬೇರೊಂದು ಸಮುದಾಯದ ಯುವಕರನ್ನು ಕೆರಳಿಸುವಂತೆ ಮಾಡಿದೆ. ಇದರಿಂದ ಇಂದು ಇಡೀ ಗ್ರಾಮದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಆಗಿದ್ದೇನು ಎಂಬ ಮಾಹಿತಿ ಇಲ್ಲಿದೆ. …
Read More »
Laxmi News 24×7