ಬೆಳಗಾವಿ: ಕಳೆದ 10 ತಿಂಗಳಿನಿಂದ ಸರ್ಕಾರ ವಿಧವಾ, ಅಂಗ್ಯವಿಕಲ, ವೃದ್ಯಾಪ್ಯ ವೇತನ ನೀಡದಿರುವುದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ತಕ್ಷಣ ಪರಿಹಾರ ಕೊಡಿಸುವಂತೆ ಅಗಸಗಿ ಗ್ರಾಮಸ್ಥರು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಕಾಂಗ್ರೆಸ್ ನೂತನ ಕಚೇರಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ತಮ್ಮ ಅಳಲುತೋಡಿಕೊಂಡರು. ಕೊರೊನಾ ಲಾಕ್ ಡೌನ್ ನಿಂದಾಗಿ ಸಾಕಷ್ಟು ತೊಂದರೆಯಾಗಿದೆ. ಜೀವನಕ್ಕೆ ಆಧಾರವಾಗಿದ್ದ ಪಿಂಚಣಿ ಹಣ ಕಳೆದ …
Read More »ಹಿಡಕಲ್ ಡ್ಯಾಂ ಶೇ 95 ರಷ್ಟು ಭರ್ತಿ:
ಬೆಳಗಾವಿ: ಹಿಡಕಲ್ ಜಲಾಶಯ ಭಾಗಶಃ ಶೇ. 95 ರಷ್ಟು ಭರ್ತಿಯಾದ ಹಿನ್ನೆಲೆಯಲ್ಲಿ 10 ಕ್ರಸ್ಟ್ ಗೇಟ್ ಗಳ ಮೂಲಕ 5 ಸಾವಿ ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಜಲಾಯನ ಪ್ರದೇಶದಲ್ಲಿ ಮತ್ತೆ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ಒಳ ಹರಿವು ಹೆಚ್ಚಳವಾಗಿದೆ. ಘಟಪ್ರಭಾ ನದಿಯ ಗೋಕಾಕ ಹಾಗೂ ಹುಕ್ಕೇರಿ ತಾಲೂಕಿನ ಗ್ರಾಮದ ನದಿ ಪಾತ್ರದ ಜನರಿಗೆ ಸುರಕ್ಷಿತ ಇರುವಂತೆ ಸೂಚನೆ ನೀಡಲಾಗಿದೆ. …
Read More »ಮತ್ತೆ ಮೇಲುಗೈ ಸಾಧಿಸಿದ ವಿದ್ಯಾರ್ಥಿನಿಯರು
ಬೆಂಗಳೂರು: ವರ್ಷ ಕೊರೋನಾ ಭೀತಿಯ ನಡುವೆಯೂ ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಮುಂದಾಗಿತ್ತು. ಪರೀಕ್ಷೆಯನ್ನು ಯಶಸ್ವಿಯಾಗಿಯೂ ನಡೆಸಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಫಲಿತಾಂಶ ಕಡಿಮೆಯಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಶೇ.73.70ರಷ್ಟು ಫಲಿತಾಂಶ ಬಂದಿತ್ತು. ಆದರೆ, ಈ ವರ್ಷ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಹೆದರಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಿರಲಿಲ್ಲ. ಅಲ್ಲದೆ, ಕೆಲವು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದ್ದು ಚಿಕಿತ್ಸೆಗೆ ಒಳಗಾಗಿದ್ದಾರೆ. ಪರಿಣಾಮ …
Read More »ಎಸ್ಎಸ್ಎಲ್ ಸಿ ಫಲಿತಾಂಶ: ಚಿಕ್ಕೋಡಿ 30, ಬೆಳಗಾವಿಗೆ 31 ನೇ ಸ್ಥಾನ
ಬೆಳಗಾವಿ: ಬಹುನಿರೀಕ್ಷಿತ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 30 ನೇ ಸ್ಥಾನ ಲಭಿಸಿದರೆ, ಬೆಳಗಾವಿ ಜಿಲ್ಲೆಗೆ 31 ನೇ ಸ್ಥಾನ ಪಡೆದಿದೆ. ಕೊರೊನಾ ಸೋಂಕು ಭೀತಿಯ ಮಧ್ಯೆಯೂ ವಿದ್ಯಾರ್ಥಿಗಳು ಎಸ್ಎಸ್ ಎಲ್ ಸಿ ಪರೀಕ್ಷೆ ಎದುರಿಸಿದ್ದರು. ಚಿಕ್ಕೋಡಿಯ ಎಂ.ಕೆ. ಕವಟಗಿಮಠ ಕನ್ನಡ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡರ, ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಘಟಪ್ರಭಾದ ಕೆ.ಆರ್. ಹುಕ್ಕೇರಿ ಪ್ರೌಢಶಾಲೆಯ ಶ್ರುತಿ ಬಸಗೌಡ ಪಾಟೀಲ …
Read More »ಕಲಾವಿದರೊಬ್ಬರು ಗಣೇಶನನ್ನು ಕೊರೊನಾ ವಾರಿಯರ್ ಆಗಿ ರೂಪಿಸಿದ್ದಾರೆ
ಚೆನ್ನೈ: ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರಲಿದ್ದು, ಈ ಬಾರಿ ಕೊರೊನಾ ವೈರಸ್ ಕಾಟದಿಂದ ಜನ ಹಬ್ಬಗಳನ್ನು ಸರಳವಾಗಿ ಆಚರಿಸುತ್ತಿದ್ದಾರೆ. ಅಂತೆಯೇ ಈ ಬಾರಿ ಮೂರ್ತಿ ತಯಾರಕರು ಕೂಡ ಗಣೇಶನನ್ನು ಸ್ವಲ್ಪ ವಿಭಿನ್ನವಾಗಿ ರೂಪಿಸುತ್ತಿದ್ದಾರೆ. ಹೌದು. ಕೊಯಂಬತ್ತೂರು ಮೂಲದ ಕಲಾವಿದರೊಬ್ಬರು ಗಣೇಶನನ್ನು ಕೊರೊನಾ ವಾರಿಯರ್ ಆಗಿ ರೂಪಿಸಿದ್ದಾರೆ. ಗಣೇಶ ಬಂದು ಕೊರೊನಾವನ್ನು ಹೊಡೆದು ಸಾಯಿಸುವಂತೆ ಮೂರ್ತಿಯನ್ನು ತಯಾರಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ರಾಜಾ, ಮಹಾಮಾರಿ ಕೋವಿಡ್ 19 …
Read More »ಗೋಕಾಕ್ ಫಾಲ್ಸ್ ಬಳಿ ಯುವಕರ ಸೆಲ್ಫಿ ಹುಚ್ಚಾಟ………
ಗೋಕಾಕ್: ಜಿಲ್ಲೆಯ ಗೋಕಾಕ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ನೀರಿನ ಭಯವಿಲ್ಲದೆ ಯುವಕರು ತಮ್ಮ ಹುಚ್ಚಾಟ ಮೆರೆಯುತ್ತಿದ್ದಾರೆ.ಹೌದು. ಜಲಪಾತದ ತುದಿಗೆ ಹೋಗಿ ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಮಳೆ ತಗ್ಗಿದರೂ ಅಪಾಯದ ಮಟ್ಟ ಮೀರಿ ಘಟಪ್ರಭಾ ನದಿ ಹರಿಯುತ್ತಿದೆ. 180 ಅಡಿಯಿಂದ ಧುಮ್ಮುಕ್ಕುತ್ತಿರುವ ಜಲಪಾತದ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಯುವಕರು ಮಜಾ ಮಾಡುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ ಹೌದು. ಜಲಪಾತದ ತುದಿಗೆ ಹೋಗಿ ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಮಳೆ ತಗ್ಗಿದರೂ ಅಪಾಯದ …
Read More »ಸಾಮಾಜಿಕ ಅಂತರ ಕಾಪಾಡಲು ಹೊಸ ಪ್ಲಾನ್ ಮಾಡಿದ ತುಮಕೂರು C.E,O.
ತುಮಕೂರು : ಸಾಮಾಜಿಕ ಅಂತರ ಕಾಪಾಡಿಕೊಂಡು ರಾಜ್ಯ ವಿಧಾನ ಸಭಾ ಅಧಿವೇಶನ ಹೇಗೆ ನಡೆಸೋದು? ಒಂದು ಆಸನ ಬಿಟ್ಟು ಇನ್ನೊಂದು ಆಸನದಲ್ಲಿ ಕುಂತರೂ ಕ್ರಮೇಣ ಅಂತರ ಮರೆಯಾಗುತ್ತದೆ. ಇದರಿಂದ ಮತ್ತೆ ಸೋಂಕು ಹರಡುವ ಭೀತಿ ಕಾಡುತ್ತದೆ. ಆದರೆ ತುಮಕೂರು ಜಿಲ್ಲಾ ಪಂಚಾಯತಿ ಸಿಇಒ ಶುಭಾ ಕಲ್ಯಾಣ್ ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿಭಿನ್ನ ಆಲೋಚನೆಯೊಂದನ್ನು ಮಾಡಿದ್ದಾರೆ. ಸಾಮಾಜಿಕ ಅಂತರದಿಂದ ಕೊರೋನಾ ಮಟ್ಟ ಹಾಕಬಹುದು ಅಂತಾ ಸರ್ಕಾರ ಘೋಷಿಸಿದೆ. ಸಚಿವರು, ಶಾಸಕರು …
Read More »ವಿದ್ಯಾರ್ಥಿಗಳು ಫಲಿತಾಂಶವನ್ನು ತಾಳ್ಮೆ ಮತ್ತು ಧೈರ್ಯದಿಂದ ಸ್ವೀಕರಿಸಬೇಕು.: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
ಬೆಳಗಾವಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ನೀಡಿರುವ ಮೊಬೈಲ್ ಸಂಖ್ಯೆಗಳಿಗೆ ಫಲಿತಾಂಶ ಬರಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು (33180+40834) 74,014 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಫಲಿತಾಂಶ ಏನೇ ಬರಲಿ; ಧೃತಿಗೆಡಬೇಡಿ: ವಿದ್ಯಾರ್ಥಿಗಳು ಫಲಿತಾಂಶವನ್ನು ತಾಳ್ಮೆ ಮತ್ತು ಧೈರ್ಯದಿಂದ ಸ್ವೀಕರಿಸಬೇಕು. ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನೋಬಲ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ. ಕೋವಿಡ್-19 …
Read More »ಕ್ವಿಟ್ ಇಂಡಿಯಾ ಚಳುವಳಿ ಸ್ಮರಣಾರ್ಥ ಹೋರಾಟಗಾರರಿಗೆ ರಾಷ್ಟ್ರಪತಿಗಳ ಪರವಾಗಿ ಸನ್ಮಾನ
ಧಾರವಾಡ/ಹುಬ್ಬಳ್ಳಿ: ಕ್ವಿಟ್ ಇಂಡಿಯಾ ಚಳುವಳಿ ಸ್ಮರಣಾರ್ಥ ಹೋರಾಟಗಾರರಿಗೆ ರಾಷ್ಟ್ರಪತಿಗಳ ಪರವಾಗಿ ಸನ್ಮಾನ ಮಾಡಲಾಗಿದೆ.ಭಾರತೀಯ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿರುವ ಆಗಸ್ಟ್ 9ರ ಕ್ವಿಟ್ ಇಂಡಿಯಾ ಚಳುವಳಿ ಅಂಗವಾಗಿ ಭಾರತದ ರಾಷ್ಟ್ರಪತಿಗಳು ಧಾರವಾಡ ಜಿಲ್ಲೆಯ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಿಗೆ ತಮ್ಮ ಕಚೇರಿಯಿಂದ ಶಾಲು, ಹಾರ ಮತ್ತು ಸಂದೇಶಪತ್ರಗಳನ್ನು ಅವರಿಗೆ ತಲುಪಿಸಿ ಗೌರವಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿದ್ದರು ರಾಷ್ಟ್ರಪತಿಗಳ ಸಂದೇಶದೊಂದಿಗೆ ಜಿಲ್ಲಾಧಿಕಾರಿಗಳ ಪ್ರತಿನಿಧಿಯಾಗಿ ಉಪವಿಭಾಗಾಧಿಕಾರಿ ಮಹ್ಮದ ಜುಬೇರ್ ಅವರು ಇಂದು ಬೆಳಗ್ಗೆ ಹುಬ್ಬಳ್ಳಿಯ ಉಣಕಲ್ …
Read More »ತುಂಬಿ ಹರಿಯೋ ನದಿ ನೀರಲ್ಲಿ ಜಿಗಿದು ಈಜಾಡುವ ಮೂಲಕ ಯುವಕರು ಹುಚ್ಚಾಟ
ಹಾವೇರಿ: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಮಳೆರಾಯ ಎರಡು ದಿನಗಳಿಂದ ಕೊಂಚ ವಿಶ್ರಾಂತಿ ನೀಡಿದ್ದಾನೆ. ಆದರೆ ನದಿಗೆ ಹರಿದು ಬರುತ್ತಿರುವ ನೀರು ಮಾತ್ರ ಕಡಿಮೆಯಾಗಿಲ್ಲ. ಸೇತುವೆ ಮೇಲಿಂದ ತುಂಬಿ ಹರಿಯೋ ನದಿ ನೀರಲ್ಲಿ ಜಿಗಿದು ಈಜಾಡುವ ಮೂಲಕ ಯುವಕರು ಹುಚ್ಚಾಟ ಪ್ರದರ್ಶಿಸಿದ್ದಾರೆ.ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ವರದಾ ನದಿಯಲ್ಲಿ ಘಟನೆ ನಡೆದಿದ್ದು, ಕಳೆದ ಒಂದು ವಾರದಿಂದ ವರದಾ ನದಿ ಭರಪೂರ ತುಂಬಿ ಹರಿಯುತ್ತಿದೆ. ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. …
Read More »