ಶಿವಮೊಗ್ಗ : ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದ ಇಸ್ಕಾನ್ ಮಂದಿರದಲ್ಲಿ ಕೃಷ್ಣನ ತೊಟ್ಟಿಲು ತೂಗಿ ಭಜನೆ ಮಾಡಿ ಗಮನ ಸೆಳೆದಿದ್ದಾರೆ. ಗೋವಿಂದ ಗುರುಹರಿ ಗೋಪಾಲು ಬೋಲೊ ಎಂದು ಭಜನೆ ಮಾಡುವ ಮೂಲಕ ಕೃಷ್ಣನ ನಾಮಸ್ಮರಣೆ ಮಾಡಿದ್ದಾರೆ. ಶಿವಮೊಗ್ಗ ತಾಲೂಕಿನ ಬಿದರೆಯ ಇಸ್ಕಾನ್ ಮಂದಿರದಲ್ಲಿ ಇಂದು ನಡೆದ ಕೃಷ್ಣನ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಭಾಗಿಯಾದ ಸಚಿವರು, ಕೃಷ್ಣನ ತೊಟ್ಟಿಲು ತೂಗುವ ಮೂಲಕ ತಮ್ಮ ಭಕ್ತಿಯನ್ನು ಕೃಷ್ಣನಿಗೆ ಸಮರ್ಪಿಸಿದ್ದಾರೆ. …
Read More »30 ಸಾವಿರ ಲಂಚ ಪಡೆಯುತ್ತಿರುವಾಗACB ಬಲೆಗೆ ಬಿದ್ದ DHO
ಯಾದಗಿರಿ: ಸ್ಟಾಫ್ ನರ್ಸ್ ನೇಮಕಾತಿ ವೇಳೆಯಲ್ಲಿ ಅಭ್ಯರ್ಥಿಯೊಬ್ಬರಿಂದ 30 ಸಾವಿರ ಲಂಚ ಪಡೆಯುತ್ತಿರುವಾಗ ಯಾದಗಿರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.ಸದ್ಯ ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಆರೋಗ್ಯ ಇಲಾಖೆಯ ಅಗತ್ಯ ಸಿಬ್ಬಂದಿಯ ಭರ್ತಿ ಕಾರ್ಯ ನಡೆಯುತ್ತಿತ್ತು. ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯಾಧಿಕಾರಿ ಎಸ್.ಎಂ. ಪಾಟೀಲ್ ಭರ್ತಿ ಕಾರ್ಯದ ಮುಖ್ಯಸ್ಥರಾಗಿದ್ದರು. ನೇಮಕಾತಿಗಾಗಿ ಒಬ್ಬೊಬ್ಬ ಅಭ್ಯರ್ಥಿಯಿಂದ 30 ರಿಂದ 50 …
Read More »S.S.L.C.ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಗಳಿಬ್ಬರು ಆತ್ಮಹತ್ಯೆ
ಹಾವೇರಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶ ಬಂದ ಬೆನ್ನಲ್ಲೇ ಕಡಿಮೆ ಅಂಕ ಬಂದಿದೆ ಹಾಗೂ ಅನುತ್ತೀರ್ಣನಾಗಿದ್ದೇನೆ ಎಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಣಿತ ವಿಷಯದಲ್ಲಿ ಫೇಲಾದ ಕಾರಣಕ್ಕೆ ಹಾವೇರಿಯ ದ್ಯಾಮವ್ವನ ಗುಡಿ ಓಣಿಯಲ್ಲಿ ವೈಷ್ಣವಿ ರಿತ್ತಿ (16) ಮನೆಯಲ್ಲಿ ವಿಷ ಸೇವಿಸಿದ್ದಾಳೆ. …
Read More »ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ ಅವರ ಸಹೋದರ ಬಾಳೆಕುಂದ್ರಿ ಕೆ.ಎಚ್.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಜಾಧವ ವಿರುದ್ಧ ಕ್ರಿಮಿನಲ್ ಪ್ರಕರಣ
ಬೆಳಗಾವಿ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ ಅವರ ಸಹೋದರ ಬಾಳೆಕುಂದ್ರಿ ಕೆ.ಎಚ್.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಜಾಧವ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅವರ ಸದಸ್ಯತ್ವ ರದ್ದುಪಡಿಸಬೇಕೆಂದು ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಪ್ರಶಾಂತ ಅವರು ವಿರುದ್ಧ 26,78,473 ರುಪಾಯಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ ವಿಚಾರಣೆ ನಡೆಸಿದೆ. ಅಲ್ಲದೆ ಅವರ ವಿರುದ್ಧ ಹಲವಾರು ಗಂಭೀರ ಆರೋಪಗಳ ಕೇಳಿ ಬಂದಿವೆ. ಗ್ರಾಮ ಪಂಚಾಯಿತಿಯ ಕರವಸೂಲಾತಿಯಲ್ಲಿ …
Read More »ಘಟಪ್ರಭಾ-ಮಣಗುತ್ತಿ ವಿವಾದ ಸೌಹಾರ್ದತೆ ಕಾಪಾಡುವಂತೆ ಪೋಲಿಸ್ ಕಮೀಶನರ್ ಗೆ ಕನ್ನಡ ಸೇನೆ ವತಿಯಿಂದ ಮನವಿ
ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಮತ್ತು ಸ್ಥಳಾಂತರ ಪ್ರಕರಣವನ್ನು ಶಿವಸೇನೆ ಮತ್ತು ಹೊರಗಿನಿಂದ ಬಂದ ಇತರೆ ಸಂಘಟನೆಗಳು ವಿವಾದ ಸೃಷ್ಟಿ ಮಾಡಿ ಸೌಹಾರ್ದತೆ ಹಾಳು ಮಾಡಲು ಪ್ರಯತ್ನಿಸುತ್ತಿರುವ ಕಿಡಗೇಡಿಗಳನ್ನು ಕೂಡಲೇ ಅವರನ್ನು ಬಂದಿಸಬೇಕು. ಅದರಂತೆ ಅಲ್ಲಿಯ ಜನರಿಗೆ ಸೌಹಾರ್ದತೆಯಿಂದ ಬಾಳಲು ಅನುಮಾಡಿ ಕೊಡಬೇಕು ಎಂದು ಕನ್ನಡ ಸೇನೆ ಮತ್ತು ಕರವೇ ಸಂಘಟನೆ ವತಿಯಿಂದ ಪೋಲಿಸ್ ಕಮೀಶನರ್ ಮನವಿ ಸಲ್ಲಿಸಲಾಯಿತು. ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ …
Read More »ನನ್ನ ಹೇಳಿಕೆಗೆ ನಾನು ಬದ್ಧ. ನನ್ನ ಇಡೀ ಜೀವನವನ್ನು ಜೈಲಿನಲ್ಲೇ ಕಳೆಯಲು ಸಿದ್ಧ
ಶಿವಮೊಗ್ಗ: ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳ ಜಾಗದಲ್ಲಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಈಶ್ವರಪ್ಪನವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿರುವ ಈ ಈಶ್ವರಪ್ಪ, ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಇಡೀ ಜೀವನವನ್ನು ಬೇಕಾದರೂ ಜೈಲಿನಲ್ಲೇ …
Read More »ಶಿವಮೊಗ್ಗ – ಗದಗ ರಾಜ್ಯ ಹೆದ್ದಾರಿಯಲ್ಲಿ ಭತ್ತದ ನಾಟಿ
ಹಾವೇರಿ: ಹಾವೇರಿಯಲ್ಲಿ ರಟ್ಟಿಹಳ್ಳಿ ತಾಲ್ಲೂಕಿನ ಹಳ್ಳೂರು ಗ್ರಾಮದಲ್ಲಿ ಹಾದು ಹೋಗಿರುವ ಶಿವಮೊಗ್ಗ – ಗದಗ ರಾಜ್ಯ ಹೆದ್ದಾರಿಯಲ್ಲಿ ಜನರು ಭತ್ತದ ನಾಟಿ ಮಾಡುವ ಮೂಲಕ ವಿನೂತನವಾಗಿ ಆಡಳಿತದ ಗಮನ ಸೇಳೆದರು. ಸೋಮವಾರ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಹಳ್ಳೂರು ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ 26 ರಲ್ಲಿ ಕಳೆದ ಮೂವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ರಸ್ತೆ ಕೇಸರು ಗದ್ದೆಯಾಗಿ ನಿರ್ಮಾಣವಾಗಿದೆ. ಆದರೆ ಜಿಲ್ಲಾಡಳಿತ, ತಾಲ್ಲೂಕಾಡಳಿತ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ …
Read More »SSLC ಫಲಿತಾಂಶದಲ್ಲಿ ಯಾದಗಿರಿಯ ರಮ್ಯಾ ರಾಜ್ಯಕ್ಕೆ 14ನೇ ರ್ಯಾಂಕ್
ಯಾದಗಿರಿ: ಜೂನ್ ಹಾಗೂ ಜುಲೈನಲ್ಲಿ ನಡೆದ 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 225 ಶಾಲೆಗಳ ಫಲಿತಾಂಶ ಹೊರ ಬಿದ್ದಿದೆ. ಜಿಲ್ಲೆಯ 33 ಶಾಲೆಗಳು ಎ ಗ್ರೇಡ್, 56 ಶಾಲೆಗಳು ಬಿ ಗ್ರೇಡ್ ಹಾಗೂ 136 ಶಾಲೆಗಳು ಸಿ ಗ್ರೇಡ್ ಫಲಿತಾಂಶ ಪಡೆದಿವೆ. ಅವುಗಳಲ್ಲಿ ಸರ್ಕಾರಿ ಶಾಲೆಗಳು 122, ಅನುದಾನಿತ 17, ಅನುದಾನ ರಹಿತ …
Read More »ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – 60 ಅಡಿ ಆಳದಲ್ಲಿ ಅರ್ಚಕರ ಎರಡು ಕಾರು ಪತ್ತೆ
ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್ಡಿಆರ್ಎಫ್ ತಂಡ ತೀವ್ರ ಶೋಧ ನಡೆಸುತ್ತಿದೆ. ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ಕಣ್ಮರೆಯಾದವರಿಗೆ ತೀವ್ರವಾದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮತ್ತೊಂದು ಓಮ್ನಿ ಎರಡು ಕಾರುಗಳು ಪತ್ತೆಯಾಗಿವೆ. ಎರಡು …
Read More »ಗೃಹ ಸಚಿವರ ಚಪ್ಪಲಿಯನ್ನು ಎತ್ತಿಕೊಂಡು ಹೋಗಿದ್ದ ಸಮುದ್ರದ ಚಪ್ಪಲಿಯನ್ನು ದಡಕ್ಕೆ ಎಸೆದಿದೆ
ಉಡುಪಿ: ರಾಜ್ಯ ಗೃಹ ಸಚಿವ ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಮೇಲೆ ಸಮುದ್ರ ರಾಜ ಎರಗಿದ್ದಾನೆ. ಉಡುಪಿಯ ನೆರೆಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡ ಸಂದರ್ಭ ಸಮುದ್ರದ ಅಲೆ ಸಚಿವ ಬೊಮ್ಮಾಯಿ ಅವರಿಗೆ ಬಡಿದಿದೆ. ಉಡುಪಿ ಜಿಲ್ಲೆ ಕಾಪು ತಾಲೂಕು ಪಡುಬಿದ್ರೆ ಕಡಲಕಿನಾರೆಗೆ ಬಸವರಾಜ್ ಬೊಮ್ಮಾಯಿ ಮೊದಲ ಭೇಟಿ ಕೊಟ್ಟರು. ಸಮುದ್ರ ಕೊರೆತ ವೀಕ್ಷಿಸಿದ ಬೊಮ್ಮಾಯಿ, ಅರಬ್ಬಿ ಸಮುದ್ರಕ್ಕೆ ಇಳಿದರು. ಈ ಸಂದರ್ಭ ಬೃಹತ್ ಗಾತ್ರದ ಅಲೆ ಗೃಹ ಸಚಿವ …
Read More »