ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ಷರತ್ತಿನ ಪ್ರಕಾರ ಇಂದು (ಶುಕ್ರವಾರ) ಬೆಂಗಳೂರಿನ ಸಿಸಿಹೆಚ್ 57ರ ನ್ಯಾಯಾಲಯದ ಮುಂದೆ ಹಾಜರಾದರು. ದರ್ಶನ್, ಪವಿತ್ರಾ ಗೌಡ, ಪ್ರದೋಶ್, ನಾಗರಾಜ್ ಸೇರಿದಂತೆ ಎಲ್ಲ 17 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಪ್ರತಿ ತಿಂಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಅದರಂತೆ, ಎಲ್ಲಾ ಆರೋಪಿಗಳು ನ್ಯಾಯಾಧೀಶರೆದುರು ಹಾಜರಾಗಿದ್ದಾರೆ. ಆರೋಪಿಗಳ ಹಾಜರಿ ಪಡೆದುಕೊಂಡ ನ್ಯಾಯಾಧೀಶರು …
Read More »ಶರಣಾದ ನಕ್ಸಲರ ಶಸ್ತ್ರಾಸ್ತ್ರಗಳೆಲ್ಲಿ? ‘ಪೊಲೀಸರು ಪತ್ತೆ ಹಚ್ತಾರೆ’- ಜಿ.ಪರಮೇಶ್ವರ್
ಬೆಂಗಳೂರು: ”ಶರಣಾಗತರಾದ ನಕ್ಸಲರು ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಬಿಸಾಕಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮವದವರ ಜೊತೆ ಮಾತನಾಡಿದ ಅವರು, ಸರ್ಕಾರವು ನಕ್ಸಲರಿಗೆ ಪರಿಹಾರ ಮತ್ತು ಪುನರ್ ವಸತಿ ಕಲ್ಪಿಸುವ ವಿಚಾರದಲ್ಲಿ ತೋರಿದ ಮುತುವರ್ಜಿಯನ್ನು ಶಸ್ತ್ರಾಸ್ತ್ರ ಹುಡುಕುವುದರಲ್ಲಿ ತೋರುತ್ತಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ”ನಾವು ಮಾಡುವ ಕೆಲಸ ಮಾಡುತ್ತೇವೆ. ಕಾಡಲ್ಲಿ ಎಲ್ಲಿ ಶಸ್ತ್ರಾಸ್ತ್ರ ಇಟ್ಟಿದ್ದಾರೆ …
Read More »ಗುಂಡಿನ ದಾಳಿಗೊಳಗಾದ ಕಾರು, ಉದ್ಯಮಿ ಪ್ರಪುಲ್ ಬಾಲಕೃಷ್ಣ ಪಾಟೀಲ
ಬೆಳಗಾವಿ: ಕಾರಿನಲ್ಲಿ ಹೋಗುತ್ತಿದ್ದ ಉದ್ಯಮಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿರುವ ಘಟನೆ ಬೆಳಗಾವಿಯ ಗಣೇಶಪುರದ ಹಿಂದು ನಗರದ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ, ಶಾಹುನ ನಗರದ ನಿವಾಸಿ ಪ್ರಪುಲ್ ಬಾಲಕೃಷ್ಣ ಪಾಟೀಲ (30) ಎಂಬವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಕಾರಿನ ಗ್ಲಾಸ್ಗೆ ಗುಂಡು ತಗುಲಿದ್ದು, ಅದೃಷ್ಟವಶಾತ್ ಪ್ರಪುಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಗಾಜು ಪ್ರಪುಲ್ ಅವರ ತಲೆ, ಮುಖಕ್ಕೆ ಸಿಡಿದು ಗಾಯವಾಗಿದೆ. …
Read More »ಪಾರ್ಟಿ ವೇಳೆ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಕಾರಣವಾಗಿದ್ದ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿದ್ದ 7 ಜನ ಆರೋಪಿಗಳನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಶಾಲ್ (24) ಎಂಬಾತನ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿ ಆತನ ಸಾವಿಗೆ ಕಾರಣರಾಗಿದ್ದ ಆರೋಪದಡಿ ಸಾಗರ್, ದಿಲೀಪ್, ಗಂಗಾಧರ್, ವಿಜಯ್, ಮಾದೇಶ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಲಾಗಿದೆ. ಡಿಸೆಂಬರ್ 31ರಂದು ರಾತ್ರಿ ಕುಶಾಲ್ ಹಾಗೂ ಆರೋಪಿಗಳು ಭುವನೇಶ್ವರಿ ನಗರದ ಗಾಂಧಿ ಬ್ರಿಡ್ಜ್ …
Read More »Big breaking: ಭದ್ರಾ ಮೇಲ್ದಂಡೆ ಯೋಜನೆ; ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಭರ್ಜರಿ ಗುಡ್‌ನ್ಯೂಸ್..!
ಕೇಂದ್ರ ಸರ್ಕಾರದಿಂದ ಕರ್ನಾಟಕದ ಜನರಿಗೆ ಸಿಹಿಸುದ್ದಿ ಸಿಕ್ಕಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯವಾದ ಅರಣ್ಯ ಭೂಮಿ ಬಳಕೆ ಮಾಡಲು ಷರತುಬದ್ಧ ಒಪ್ಪಿಗೆ ನೀಡಿದೆ. 128 ಎಕರೆ ಅರಣ್ಯ ಬಳಕೆಗೆ ಅನುಮತಿ 128 ಎಕರೆ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಒಪ್ಪಿಗೆ ನೀಡಿದೆ. ಜೊತೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಶಿರಾ ತಾಲೂಕಿನ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿ ಧಾಮದ 128 ಎಕರೆ …
Read More »ಭೀಕರ ರಸ್ತೆ ಅಪಘಾತ.. ಬೆಳಗಾವಿ ಯೋಧ ರವಿ ಯಲ್ಲಪ್ಪ ಹುತಾತ್ಮ
ಬೆಳಗಾವಿ: ನಾಗಾಲ್ಯಾಂಡ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸೇನಾ ವಾಹನ ಕಂದಕಕ್ಕೆ ಉರುಳಿ ಬಿದ್ದಿದೆ. ಸೇನಾ ವಾಹನದಿಂದ ಯೋಧರು ಕೆಳಗೆ ಜಿಗಿದಿದ್ದು, ಯೋಧರ ಮೇಲೆಯೇ ವಾಹನ ಪಲ್ಟಿಯಾಗಿದೆ. ಸೇನಾ ವಾಹನದ ಈ ದುರಂತದಲ್ಲಿ ಬೆಳಗಾವಿ ಯೋಧ ರವಿ ಯಲ್ಲಪ್ಪ ತಳವಾರ (35) ಹುತಾತ್ಮರಾಗಿದ್ದಾರೆ. ರವಿ ಯಲ್ಲಪ್ಪ ತಳವಾರ ಅವರು ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದವರು. ರವಿ ಯಲ್ಲಪ್ಪ ತಳವಾರ ಅವರಿದ್ದ ಸೇನಾ ವಾಹನ ರಸ್ತೆ ಮಾರ್ಗವಾಗಿ ಹೊರಟಿದ್ದಾಗ …
Read More »ಅಣ್ಣಾವ್ರ ಬಗ್ಗೆ ಸುದೀಪ್ ಅಂದು ಹೇಳಿದ್ದ ಮಾತು ಇಂದು ವೈರಲ್, ಕಾಮೆಂಟ್ಸ್ ಸುರಿಮಳೆ!
ಕಿಚ್ಚ ಸುದೀಪ್ ಅವರು ಡಾ ರಾಜ್‌ಕುಮಾರ್ () ಬಗ್ಗೆ ಮಾತನ್ನಾಡಿದ್ದಾರೆ. ಅವರು ಅಣ್ಣಾವ್ರ ಬಗ್ಗೆ ಅದೇನು ಹೇಳಿದ್ದಾರೆ ಅನ್ನೋದು ಇಲ್ಲಿದೆ. ಜೊತೆಗೆ, ಅವರು ಹೇಳಿದ್ದು ಯಾವಾಗಲೋ ಇರಬಹುದು. ಆದರೆ ಅದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಿದ್ದರೆ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಮೇರುನಟ ಡಾ ರಾಜ್‌ಕುಮಾರ್ ಬಗ್ಗೆ ಅದೇನು ಹೇಳಿದ್ದಾರೆ? ಬಹುಶಃ ನೀವು ಊಹಿಸಿರಲಿಕ್ಕೂ ಸಾಧ್ಯವಿಲ್ಲ. ಅಂತಹ ಮಾತನ್ನು ಸುದೀಪ್ ಹೇಳಿದ್ದಾರೆ. ಅದಕ್ಕೆ ತುಂಬಾ …
Read More »ಹಿರಿಯ ಪತ್ರಕರ್ತ ಶಹೀದ್ ಧಾರವಾಡಕರ್ ವಿಧಿವಶ
ಗೋಕಾಕ; ಗೋಕಾಕ ನಿವಾಸಿಯಾಗಿರುವ ಹಿರಿಯ ಪತ್ರಕರ್ತರಾದ ಶಹೀದ್ ಧಾರವಾಡಕರ್ (80) ಶುಕ್ರವಾರ ವಿಧಿವಶರಾಗಿದ್ದಾರೆ. ದಿ.ಶಹೀದ್ ಧಾರವಾಡಕರ್ ಅವರು, 1970 ರ ದಶಕದಲ್ಲಿ ಕಮ್ಯೂನಿಷ್ಟೆ ಚಳುವಳಿ ಹಾಗೂ ಸಮದರ್ಶಿ ಪತ್ರಿಕೆ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾದರು. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿ.ಶಹೀದ್ ಧಾರವಾಡಕರ್ ಅವರು, ಇಂದು ಬೆಳಗಿನ ಜಾವ ಇಹಲೋಕ ತಳ್ಳಿಸಿದ್ದಾರೆ. ಮೃತರು, ಪತ್ನಿ, ಪುತ್ರರು, ಪುತ್ರಿಯರು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
Read More »ಹಾರೂಗೇರಿ : ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿ ; ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ರಾಯಬಾಗ : ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೂಡಂಗಡಿಗಳ ಮೇಲೆ ಪಲ್ಟಿ ಆಗಿರುವ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ ಆಗಿದೆ. ಹಾರೂಗೇರಿ – ರಾಯಬಾಗ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, …
Read More »ರೊಕ್ಕ ಕೊಟ್ಟರ ಹೆಂಡ್ತಿ ಆಗ್ತಾರ, ಕೈ ಕೊಟ್ಟ ಓಡಿ ಹೋಗ್ತಾರ ;ಸಿಂಗಲ್ಸ್ ಹುಡುಗರೇ ಹುಷಾರ್….!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ ವಯಸ್ಸಿನ ಔಟ್ ಡೇಟೆಡ್ ಹುಡುಗರಿಗೆ ಕಾಟವಾಗಿದೆ ಈ ಕಹಾನಿ ಕೇಳಿದ್ರೆ ನಿಜವಾಗಲೂ ಜಗತ್ತಿನ ಮತ್ತೊಂದು ವಿಸ್ಮಯದ ದರ್ಶನವಾದಂತಾಗುತ್ತದೆ. ನೀವು ಯಾದಿ ಮೇ ಶಾದಿ ಬಗ್ಗೆ ಕೇಳಿದ್ದೀರಾ ನೋಡಿದ್ದೀರಾ,ಅರೇಂಜ್ ಮ್ಯಾರೇಜ್, ಲವ್ ಮ್ಯಾರೇಜ್ ಗಳನ್ನೂ ಸಹ ನೋಡಿದ್ದೀರಾ ಆದ್ರೆ ಈಗ ವೀಕ್ಲಿ ಮ್ಯಾರೇಜ್ ಜಮಾನಾ ಶುರುವಾಗಿದೆ, ಇದರ ಹೆಸರು …
Read More »