Breaking News

ಬೆಳಗಾವಿಯಲ್ಲಿ ಅಬ್ಬರವಿಲ್ಲದೆ ಗಣೇಶ ಮೂರ್ತಿಗಳಿಗೆ ವಿದಾಯ

ಬೆಳಗಾವಿ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮವು ಸರಳ, ಸಾಂಪ್ರದಾಯಿಕ ಹಾಗೂ ಶ್ರ‌ದ್ಧಾ- ಭಕ್ತಿಯಿಂದ ಮಂಗಳವಾರ ನೆರವೇರಿತು. ಕೊರೊನಾ ಕಾರಣದಿಂದ ಅದ್ಧೂರಿ ಮೆರವಣಿಗೆ ಮತ್ತು ಸೌಂಡ್ ಸಿಸ್ಟಂಗಳ ಅಬ್ಬರವಿರಲಿಲ್ಲ. 300ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಮೊದಲ ದಿನವೇ ಕೆಲವು ಮಂಡಳದವರು ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದರು. ಬಹುತೇಕ ಮೂರ್ತಿಗಳಿಗೆ ಮಂಗಳವಾರ ವಿದಾಯ ಹೇಳಲಾಯಿತು. ಗಣೇಶೋತ್ಸವ ಮಂಡಳದವರು, ಸ್ಥಳೀಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲವರು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು …

Read More »

ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನ ಸೆ.30ರವರೆಗೆ ನಿಷೇಧ

ಉಗರಗೋಳ: ‘ಶ್ರೀಕ್ಷೇತ್ರ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನವನ್ನು ಸೆ.30ರವರೆಗೆ ನಿಷೇಧಿಸಲಾಗಿದೆ. ಕೊರೊನಾ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಭಕ್ತರು ಸಹಕಾರ ನೀಡಬೇಕು’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು. ಕೊರೊನಾ ನಿಯಂತ್ರಣಕ್ಕೆ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು. ‘ದೇಶದ ನಾನಾ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಈ ಕಾರಣದಿಂದ ಕೋವಿಡ್ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಜನರ ಹಿತದೃಷ್ಟಿಯಿಂದ ಅವಕಾಶ ಕೊಡುತ್ತಿಲ್ಲ’ ಎಂದು …

Read More »

ನೀರಾವರಿ ಯೋಜನೆಗಳಿಗೆ 1699 ಕೋಟಿ

ರಾಯಬಾಗ: ಮತಕ್ಷೇತ್ರದ ರೈತರ ಬಹುದಿನಗಳ ಬೇಡಿಕೆಯ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರು ರೂ.1699 ಕೋಟಿ ಹಣ ಮಂಜೂರು ಮಾಡಿದ್ದಾರೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. ಸೋಮವಾರ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಯಬಾಗ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ, ಸತತ ಬರಗಾಲ ಅನುಭವಿಸುತ್ತಿರುವ ಗ್ರಾಮಗಳ ರೈತರ ಬೆಳೆಗಳಿಗೆ ಹಾಗೂ ಜನ-ಜಾನುವಾರುಗಳಿಗೆ ಕುಡಿಯಲು ಕಾಯಂ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ …

Read More »

ಬುಡಕಟ್ಟು ವೇಷ ಧರಿಸಿ ಪ್ರತಿಭಟನೆ.

ವಿಜಯಪುರ: ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆಯ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ತಳವಾರ-ಪರಿವಾರ ಸಮುದಾಯದ ಜನರು ಬೇವು, ಲೆಕ್ಕಿಗಿಡದ ತಪ್ಪಲು ಸುತ್ತಿಕೊಂಡು ಬುಡಕಟ್ಟು ವೇಷಧರಿಸಿ ಅರೆಬೆತ್ತಲೆಯಾಗಿ ವಿನೂತನ ಪ್ರತಿಭಟನೆ ನಡೆಸಿದರು. ಸೋಮವಾರ ನಗರದ ಹೊರ ವಲದಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ನಗರದ ದರಬಾರ್‌ ಮೈದಾನಕ್ಕೆ ಬಂದು ಸಮಾವೇಶಗೊಂಡರು. ಮುಖಕ್ಕೆ, ಮೈಗೆಲ್ಲ ಕಪ್ಪು ಬಣ್ಣದಿಂದ ಪಟ್ಟಿಗಳನ್ನು ಬರೆದುಕೊಂಡು, ಮೈಗೆ ಬೇವು ಹಾಗೂ ಲೆಕ್ಕಿ ಗಿಡದ ತಪ್ಪಲು ಸುತ್ತಿಕೊಂಡು, …

Read More »

ಕನ್ನಡ ಭಾಷೆಯ ಮೇಲಿನ ಉದ್ಧಟತನ ಸರಿಯಲ್ಲ – ಕನ್ನಡ ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷಕ ಟಿ.ಎಸ್.ನಾಗಾಭರಣ ಎಚ್ಚರಿಕೆ

ಬೆಂಗಳೂರು : ಹೊರನಾಡು/ಗಡಿನಾಡು ಕನ್ನಡಗರಿಗೆ ರಾಜ್ಯ ಸರ್ಕಾರದ ಆದೇಶದನ್ವಯ ಶೇ.5ರಷ್ಟು ಸೀಟುಗಳನ್ನು ಕಾಯ್ದಿರಿಸಬೇಕೆಂಬ ಆದೇಶವಿದ್ದರೂ ಸಹ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಉಲ್ಲಂಘಿಸಿರುವುದು ರಾಜ್ಯಭಾಷಾನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕನ್ನಡದ ನೆಲದಲ್ಲಿ ಹೀಗೆ ಉದ್ಧಟತನ ತೋರಿದ ಅಧಿಕಾರಿ/ನೌಕರರ ಮೇಲೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಹೇಳಿದರು. ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ …

Read More »

ರೌಡಿಸಂಗೆ ಹುಬ್ಬಳ್ಳಿ ಜನರ ತತ್ತರ

ಹುಬ್ಬಳ್ಳಿ- ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅರುಣ ಹಚಡದ ಎಂಬುವರ ಮೇಲೆ ರೌಡಿಗಳನ್ನು ಕರೆದುಕೊಂಡು ಮಾರಕಾಸ್ತ್ರಗಳಿಂದ ಮನೆಗೆ ಬಂದು ಆವಾಜ್ ಹಾಕುವ ದ್ರಶ್ಯಗಳು ಸಿಸಿ ಟಿವಿಯಲ್ಲಿ ದೃಶ್ಯಗಳು ಕಂಡು ಬಂದಿವೆ. ಇನ್ನು ಇದರ ಬಗ್ಗೆ ಸಂಬಂದಿಸಿದ ಹಾಗೆ ಕಮರಿಪೇಟ್ ಪೊಲೀಸ್ ಠಾಣೆಗೆ ದೂರನ್ನು ಕೊಡಲು ಹೋದ್ರು ಕೂಡಾ, ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎಂದು ಸಂತ್ರಸ್ತ ಅರುಣ್ ಮಾಧ್ಯಮದವರ ಮುಂದೆ ತಮಗೆ ಆಗುವ ಅನ್ಯಾಯದ ಬಗ್ಗೆ ಹೇಳಿದರು. ಯಲ್ಲಪ್ಪ ಬದ್ದಿ ಹಾಗೂ ಅವನ ಸಹಚರರು …

Read More »

ಮುಂದಿನ ತಿಂಗಳು ಗ್ರಾಮ ಪಂಚಾಯತಿ ಚುನಾವಣೆ

ಬೆಂಗಳೂರು: ಅವಧಿ ಮುಗಿದರೂ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಕಾಲ ಕೂಡಿ ಬಂದಿದೆ. ಅಕ್ಟೋಬರ್ ಮೊದಲ ವಾರ ಇಲ್ಲವೇ ಎರಡನೇ ವಾರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬಹುದು. ಸಾರ್ವತ್ರಿಕವಾಗಿ ಏಕಕಾಲಕ್ಕೆ ಚುನಾವಣೆ ನಡೆಸುವ ಬದಲು ಬಹುಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿಗಳು ಈ ಕುರಿತಾಗಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕೊರೋನಾ ನಿಯಮಗಳನ್ನು ಪಾಲಿಸುವ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗ ಕ್ರಮಕೈಗೊಂಡಿದೆ. …

Read More »

ಸಚಿವ ಕೆಎಸ್ ಈಶ್ವರಪ್ಪಗೂ ಕೊರೋನಾ ಪಾಸಿಟಿವ್

ಬೆಂಗಳೂರು : ಕಳೆದ ನಿನ್ನೆಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಯವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಈ ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಕುರಿತಂತೆ ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನಗೆ ಇಂದು ಕರೊನಾ ಸೋಂಕು ದೃಡ ಪಟ್ಟಿದ್ದು, ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ …

Read More »

ಪ್ರಥಮ ದರ್ಜೆ ಕಾಲೇಜ್ 2ನೇ ಹಂತದ ಕಟ್ಟಡ ಕಾಮಗಾರಿಗೆ ಕುಲಪತಿ ಪ್ರೋ.ಎಂ ರಾಮಚಂದ್ರಗೌಡ ಸೋಮವಾರ ಚಾಲನೆ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜ್ 2ನೇ ಹಂತದ ಕಟ್ಟಡ ಕಾಮಗಾರಿಗೆ ಕುಲಪತಿ ಪ್ರೋ.ಎಂ ರಾಮಚಂದ್ರಗೌಡ ಸೋಮವಾರ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿ, ಸಂಗೊಳ್ಳಿ ರಾಯಣ್ಣ  ಪ್ರಥಮ ದರ್ಜೆ ಕಾಲೇಜ್ ಸುಸಜ್ಜಿತವಾದ ಮೂಲ ಸೌಕರ್ಯದೊಂದಿಗೆ  ಗ್ರಾಮೀಣ ಪ್ರತಿಭೆಗಳ ಉನ್ನತ ವ್ಯಾಸಂಗದ ಕನಸನ್ನು ನನಸು ಮಾಡುವ ಉದ್ದೇಶ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹೊಂದಿದೆ. ಸುಮಾರು 9.8 ಕೋಟಿ ವೆಚ್ಚದಲ್ಲಿ  ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. …

Read More »

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯಲ್ಲಿಉತ್ತರ ಕರ್ನಾಟಕ ಭಾಗದ ಶಾಸಕರ ಪುತ್ರನ ವಿರುದ್ಧ ಡ್ರಗ್ಸ್​ ಸೇವನೆ ಆರೋಪ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯಲ್ಲಿ ಎನ್ ಸಿಬಿ ಅಧಿಕಾರಿಗಳು  ನಿರಂತರ ತನಿಖೆ ಕೈಗೊಂಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರತಿದೆ. ಮೈಸೂರು ಭಾಗದ ಓರ್ವ ಶಾಸಕರ ಪುತ್ರ ಹಾಗೂ ಉತ್ತರ ಕರ್ನಾಟಕ ಭಾಗದ ಮತ್ತೋರ್ವ ಶಾಸಕರ ಪುತ್ರನ ವಿರುದ್ಧ ಡ್ರಗ್ಸ್​ ಸೇವನೆ ಆರೋಪ ಕೇಳಿಬಂದಿದೆ. ಇಬ್ಬರು ತಾವು ಮಾತ್ರವಲ್ಲದೆ ತಮ್ಮದೆಯಾದ ಗುಂಪು ಕಟ್ಟಿಕೊಂಡು ಡ್ರಗ್ಸ್ ಸೇವೆನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇವರ ವಿಚಾರಣೆ ಮತ್ತು ತನಿಖೆಗೆ ಮುಂದಾಗಿದ್ದು, ಸೂಕ್ತ …

Read More »