Breaking News

ಪುಲ್ವಾಮಾದಲ್ಲಿ ಗ್ರೆನೇಡ್ ದಾಳಿ ನಡೆಸಿದ್ದು 12 ಮಂದಿ ನಾಗರಿಕರು ಗಾಯ

: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದಾರೆ. ಸೈನಿಕರ ವಾಹನವನ್ನು ಗುರಿಯಾಗಿಸಿ ಗ್ರೆನೇಡ್ ದಾಳಿ ನಡೆಸಿದ್ದು 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಪುಲ್ವಾಮಾದ ಕಾಕಾಪೋರದಲ್ಲಿ ಸಿಆರ್‌ಪಿಎಫ್‌ ಮತ್ತು ಪೊಲೀಸರ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಆದರೆ ಗ್ರೆನೇಡ್‌ ಗುರಿ ತಪ್ಪಿ ರಸ್ತೆಯ ಮೇಲೆ ಬಿದ್ದ ಪರಿಣಾಮ 10 ಮಂದಿ ನಾಗರಿಗರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಆರೋಗ್ಯ …

Read More »

ಕೆಲ ಸಚಿವರ ಪಾಲಿಗೆ ಇದೇ ಕೊನೆ ಕ್ಯಾಬಿನೆಟ್ ಆಗಬಹುದು ಯಾರನ್ನಾದ್ರೂ ಕೈಬಿಟ್ಟರೆ ಬೇಸರ ಮಾಡಿಕೊಳ್ಳಬೇಡಿ.:B.S.Y.

ಬೆಂಗಳೂರು: ಸಂಪುಟ ವಿಸ್ತರಣೆ ಸಂಬಂಧ ಸಿಎಂ ಯಡಿಯೂರಪ್ಪ ಇಂದು ದೆಹಲಿಗೆ ತೆರಳುವ ಮೊದಲು ಕ್ಯಾಬಿನೆಟ್ ಸಭೆ ನಡೆಸಿದರು ಕೇವಲ 15 ನಿಮಿಷದಲ್ಲೇ ಮುಗಿದ ಸಭೆಯಲ್ಲಿ ಸಚಿವರ ಜೊತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂಪುಟ ವಿಸ್ತರಣೆ ಬದಲು ಪುನಾರಚನೆ ಆಗಬಹುದು. 8 ರಿಂದ 9 ಮಂದಿ ಹೊಸಬರು ಸಂಪುಟ ಸೇರಬಹುದು ಎಂಬುದಾಗಿ  ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಸಿಎಂ ಹೇಳಿದ್ದೇನು? ಕೆಲ ಸಚಿವರ ಪಾಲಿಗೆ ಇದೇ ಕೊನೆ ಕ್ಯಾಬಿನೆಟ್ ಆಗಬಹುದು. ಯಾರಿಗೆ …

Read More »

ರಾಜ್ಯ ಹೆದ್ದಾರಿ 65ರಲ್ಲಿ ಎರಡು ಖಾಸಗಿ ಬಸ್ ಗಳು ಮುಖಾಮುಖಿ ಡಿಕ್ಕಿ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಹಾಳು ಗ್ರಾಮದ ಬಳಿಯ ರಾಜ್ಯ ಹೆದ್ದಾರಿ 65ರಲ್ಲಿ ಎರಡು ಖಾಸಗಿ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿವೆ.ಒಂದು ಬಸ್ ಚನ್ನಗಿರಿಯಿಂದ ಭದ್ರಾವತಿಯತ್ತ ಹೊರಟಿತ್ತು. ಮತ್ತೊಂದು ಬಸ್ ಭದ್ರಾವತಿಯಿಂದ ಚನ್ನಗಿರಿ ಕಡೆಗೆ ಹೋಗುತ್ತಿತ್ತು. ಜೋಳದಹಾಳು ಗ್ರಾಮದ ಬಳಿಯ ತಿರುವಿನಲ್ಲಿಎರಡೂ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿವೆ. ಬಸ್ ಹಿಂದೆ ಬರುತ್ತಿದ್ದ ವ್ಯಾನ್ ದಿಢೀರ್ ಬ್ರೇಕ್ ಹಾಕಿದ್ದರಿಂದ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಇಳಿದಿದೆ. ಬಸ್ ಗಳಲ್ಲಿದ್ದ 40 …

Read More »

ಕ್ರೈಸ್ತರಲ್ಲೂ ಬಹಳಷ್ಟು ಮಂದಿ ಬಡವರಿದ್ದಾರೆ. ಹೀಗಾಗಿ ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರವನ್ನು ತಕ್ಷಣ ರಚನೆ ಮಾಡಬೇಕು: ಐವಾನ್ ಡಿಸೋಜಾ

ಮಂಗಳೂರು: ರಾಜ್ಯದಲ್ಲಿರುವ ಕ್ರೈಸ್ತರಲ್ಲೂ ಬಹಳಷ್ಟು ಮಂದಿ ಬಡವರಿದ್ದಾರೆ. ಹೀಗಾಗಿ ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರವನ್ನು ತಕ್ಷಣ ರಚನೆ ಮಾಡಬೇಕು ಎಂದು ಮಾಜಿ ಎಂಎಲ್‌ಸಿ, ಕೆಪಿಸಿಸಿ ವಕ್ತಾರ ಐವಾನ್ ಡಿಸೋಜಾ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದ್ದಾರೆ. ಅವರಲ್ಲಿರುವ ಬಡವರಿಗೆ ಸಹಕಾರಿಯಾಗುತ್ತೆ ಎಂದಿದ್ದಾರೆ. ನಮ್ಮ ಕ್ರೈಸ್ತರಲ್ಲೂ ಬಡವರಿದ್ದಾರೆ. ಹೀಗಾಗಿ ಪ್ರಾಧಿಕಾರ ರಚಿಸಿ ಎಂದು ಹೇಳಿದ್ದಾರೆ.ಸರ್ಕಾರ ನಮ್ಮ ಮನವಿಗೆ …

Read More »

ಕಾಲೇಜು ಪ್ರಾರಂಭದ ಎರಡನೇ ದಿನವೂ ನೀರಸ ಪ್ರತಿಕ್ರಿಯೆ ಸಿಕ್ಕಿದೆ.

ಬೆಂಗಳೂರು: ಪದವಿ ಕಾಲೇಜು ಪ್ರಾರಂಭದ ಎರಡನೇ ದಿನವೂ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಎರಡನೇ ದಿನವಾದ ಇಂದು ಕೂಡಾ ವಿದ್ಯಾರ್ಥಿಗಳು ಕಾಲೇಜಿಗೆ ಬರೋದಕ್ಕೆ ಹಿಂದೇಟು ಹಾಕಿದ್ದಾರೆ. ಮೊದಲ ದಿನಕ್ಕೆ ಹೋಲಿಸಿದ್ರೆ ಸ್ವಲ್ಪ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ.ಕೊರೊನಾ ನಡುವೆಯೂ ಎರಡನೇ ದಿನ ಕಡಿಮೆ ವಿದ್ಯಾರ್ಥಿಗಳಿಗೆ ಬಹುತೇಕ ಕಾಲೇಜುಗಳಲ್ಲಿ ತರಗತಿ ನಡೀತು. ಮಹಾರಾಣಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ನಿನ್ನೆಗಿಂತ ಇಂದು ಹೆಚ್ಚು ವಿದ್ಯಾರ್ಥಿನಿಯರು ಆಗಮಿಸಿದ್ದರು. ಸರ್ಕಾರದ ಮಾರ್ಗಸೂಚಿಯಂತೆ ಕಾಲೇಜಿನಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ವ್ಯವಸ್ಥೆ, …

Read More »

ಬಾಲಿವುಡ್ ನಟಿ ಕಂಗನಾ ರನಾವತ್ ಹಾಗೂ ಆಕೆಯ ಸಹೋದರಿ ರಂಗೋಲಿಗೆ ಮುಂಬೈ ಪೊಲೀಸರು ಸಮನ್ಸ್

ಮುಂಬೈ, ನ.18- ಸಮಾಜದ ಶಾಂತತೆಯನ್ನು ಕದಡುವಂತಹ ಫೋಸ್ಟ್ ಮಾಡಿದ್ದರ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರನಾವತ್ ಹಾಗೂ ಆಕೆಯ ಸಹೋದರಿ ರಂಗೋಲಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 23 ರಂದು ನಟಿ ಕಂಗನ ರನಾವತ್ ಹಾಗೂ ಆಕೆಯ ಸಹೋದರಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಸಾಮಾಜಿಕ ಜಾಲಗಳಲ್ಲಿ ದ್ವೇಷ ಹರಡುವಂತಹ ಟ್ವಿಟ್ ಮಾಡುವ ಸಂಬಂಧ ಕಂಗನಾಗೆ ಅಕ್ಟೋಬರ್ 21 ಹಾಗೂ ನವೆಂಬರ್ …

Read More »

ಕೋಟಿ ಗೆದ್ದು ಕರೋಡ್‍ಪತಿಯಾದ ಐಪಿಎಸ್‍ ಅಧಿಕಾರಿ..!

ಮುಂಬೈ,ನ.18- ಬಾಲಿವುಡ್‍ನ ಬಿಗ್‍ಬಿ ಅಮಿತಾಬ್‍ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್‍ಪತಿಗೆ ಈಗ 12ರ ಸಂಭ್ರಮ. ಕಾರ್ಯಕ್ರಮ ಶುರುವಾದಾಗಿನಿಂದಲೂ ಕೋಟಿ ಗೆದ್ದ ವೀರರ ಸಂಖ್ಯೆಯ ಪಟ್ಟಿ ಹೆಚ್ಚಾಗಿದೆ. ಆದರೆ ಈ ಬಾರಿಯ ರಿಯಾಲ್ಟಿ ಶೋನಲ್ಲಿ ಇಬ್ಬರು ಮಹಿಳೆಯರು ಕೋಟಿ ಪ್ರಶ್ನೆಗೆ ಉತ್ತರಿಸಿ ಕರೋಡ್‍ಪತಿಗಳಾಗಿದ್ದಾರೆ. ಕಳೆದ ರಾತ್ರಿ ಈ ಕಾರ್ಯಕ್ರಮದ ಹಾಟ್‍ಸೀಟ್‍ನಲ್ಲಿ ಕುಳಿತಿದ್ದ ಐಪಿಎಸ್ ಅಧಿಕಾರಿ ಮೋಹಿತಾಶರ್ಮಾ ಕೋಟಿ ಗೆಲ್ಲುವ ಮೂಲಕ ಸಂಭ್ರಮಿಸಿದರಾದರೂ 7 ಕೋಟಿ ಪ್ರಶ್ನೆಗೆ ಉತ್ತರಿಸಲು ಹಿಂಜರಿದರು. ಕೌನ್‍ಬನೇಗಾ ಕರೋಡ್‍ಪತಿಯ …

Read More »

ಬ್ಯಾಲೆಟ್ ಪೇಪರಿನಲ್ಲಿ ಉಪಚುನಾವಣೆ ನಡೆಸಿ ಗೆದ್ದು ತೋರಿಸಲಿಶಿವರಾಜ್ ತಂಗಡಗಿ ಬಿಜೆಪಿಗೆ ಬಹಿರಂಗ ಸವಾಲು

ಕೊಪ್ಪಳ: ಬಸವಕಲ್ಯಾಣ ಮತ್ತು ಮಸ್ಕಿಯ ಕ್ಷೇತ್ರದದಲ್ಲಿ ಬ್ಯಾಲೆಟ್ ಪೇಪರಿನಲ್ಲಿ ಉಪಚುನಾವಣೆ ನಡೆಸಿ ಗೆದ್ದು ತೋರಿಸಲಿ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿಗೆ ಬಹಿರಂಗ ಸವಾಲು ಎಸೆದಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿಯ ಸ್ವಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ತಂಗಡಗಿ, ತಾಕತ್ತಿದ್ದರೆ ಇವಿಎಂ ಯಂತ್ರ ಇಲ್ಲದೆ ಗೆದ್ದು ತೋರಿಸಲಿ ಎಂದು ಬಿಜೆಪಿಯವರಿಗೆ ಸವಾಲು ಹಾಕಿದರು. ರಾಜ್ಯದಲ್ಲಿ ಗ್ರಾ.ಪಂ, ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆದರೆ ಎಂಪಿ ಎಂಎಲ್‍ಎ ಚುನಾವಣೆಗಳಲ್ಲಿ ಬಿಜೆಪಿ …

Read More »

ಧಾರವಾಡದವರೆಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಾದಿಯನ್ನು ಬದಲಾವಣೆ ಮಾಡಬೇಕೆಂದು ಗ್ರಾಮಸ್ಥರ ಮನವಿ

ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿಗೆ ಗ್ರಾಮಸ್ಥರ ಮನವಿ ಬೆಳಗಾವಿ: ದೇಸೂರು ಇದ್ದಲಹೊಂಡ ಗ್ರಾಮದಿಂದ ಧಾರವಾಡದವರೆಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಾದಿಯನ್ನು ಬದಲಾವಣೆ ಮಾಡಬೇಕೆಂದು ನಂದಿಹಳ್ಳಿ, ಗರ್ಲಗಂಜಿ ಹಾಗೂ ನಾಗೇನಹಳ್ಳಿ ಗ್ರಾಮಸ್ಥರು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.  ರೈಲ್ವೇ ಇಲಾಖೆಯ ಸರ್ವೇ ಕಾರ್ಯದ ಪ್ರಕಾರ ಧಾರವಾಡಕ್ಕೆ ನಂದಿಹಳ್ಳಿ, ಗರ್ಲಗಂಜಿ ಹಾಗೂ ನಾಗೇನಹಳ್ಳಿ ಮುಖಾಂತರ ರೈಲ್ವೆ ಹಾದಿ ಹಾದು ಹೋಗುತ್ತಿದೆ. ಇದ್ದರಿಂದ ನಮ್ಮ ಫಲವತ್ತಾದ …

Read More »

ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ.

ಧಾರವಾಡ: ಜಿಪಂ ಯೋಗೀಶಗೌಡ ಹತ್ಯೆ ಪ್ರಕರಣದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಸಿಬಿಐ ತಕರಾರು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಗುರುವಾರ ವಿಚಾರಣೆ ನಡೆಯಲಿದೆ. ಧಾರವಾಡದ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಎಂ.ಪಂಚಾಕ್ಷರಿ ಈ ಆದೇಶ ಹೊರಡಿಸಿದ್ದಾರೆ. ಸಿಬಿಐ ತಕರಾರು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಗುರುವಾರ ವಿಚಾರಣೆ ನಡೆಯಲಿದೆ. ಸಿಬಿಐ …

Read More »