ಹುಬ್ಬಳ್ಳಿ: ಇಲ್ಲಿಯ ಗೋಕುಲ ಗಾರ್ಡನ್ನಲ್ಲಿ ನಿನ್ನೆ ಬಿಜೆಪಿಯಿಂದ ಜನಸೇವಕ ಸಮಾವೇಶ ನಡೆಯಿತು. ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ನೂತನ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಧಾರವಾಡ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ಗ್ರಾಮ ಪಂಚಾಯತಿ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು. ಬಿಜೆಪಿ ಮುಖಂಡರು ಗ್ರಾಮ ಪಂಚಾಯತಿ ನೂತನ ಸದಸ್ಯರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನಿಸಿದ್ರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, …
Read More »ಉತ್ತಮ ಕೆಲಸ ಮಾಡಿದ್ರೆ ಒಬ್ಬ ಗ್ರಾಮ ಪಂಚಾಯತಿ ಸದಸ್ಯ ದೇಶದ ಪ್ರಧಾನಿಯಾಗಬಹುದು.:ನಮ್ಮ ಪಕ್ಷದಲ್ಲಿ ಮಾತ್ರ ಸಾಧ್ಯ.
ಹುಬ್ಬಳ್ಳಿ: ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ಲೀಡರ್ ಆಗುತ್ತಾರೆ. ಕಾಂಗ್ರೆಸ್ ಪಕ್ಷದ ಇಬ್ಬರು ಲೀಡರ್‌ಗಳು ರೂಮಿನಲ್ಲಿ ಒಳಗಡೆ ಹೋದ್ರೆ ಒಬ್ಬ ಲೀಡರ್ ಹುಟ್ಟುತ್ತಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಲ್ಲಿ ನಿನ್ನೆ ಭಾನುವಾರ ನಡೆದ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರಿಯಾಂಕಾ ಗಾಂಧಿಗೆ ಗಂಡು ಮಗು ಹುಟ್ಟಿದಾಗ ಲೀಡರ್ ಹುಟ್ಟಿದ್ದಾನೆಂದು ಕಾಂಗ್ರೆಸ್ ಕಾರ್ಯಕರ್ತರು ಸ್ವೀಟ್ ಹಂಚಿದ್ರು ಎಂದು ಗಾಂಧಿ …
Read More »2023ರಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುತ್ತೇನೆ:ರಮೇಶ ಜಾರಕಿಹೊಳಿ
ಬೆಳಗಾವಿ – ಜಾರಕಿಹೊಳಿ ಕುಟುಂಬ ಜನಸಂಘದಿಂದ ಬಂದಿದ್ದು, ಅನಿವಾರ್ಯ ಕಾರಣದಿಂದ ನಾವು ಕಾಂಗ್ರೆಸ್ ಗೆ ಹೋಗಬೇಕಾಯಿತು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೊಸ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಧನಂಜಯ ಜಾಧವ ಮಿತ್ರ ಪರಿವಾರ ಸಂಘಟಿಸಿದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ನಾವು ಬಂದಿದ್ದು ಜನಸಂಘದಿಂದ, ಹಾಫ್ ಚಡ್ಡಿ ಹಾಕುತ್ತಿದ್ದೆವು. ಮೊದಲು ಜನಸಂಘದಲ್ಲಿ ದೀಪದ ಚಿತ್ರ ಇದ್ದ ಕರಿ ಟೋಪಿ ಹಾಕುತ್ತಿದ್ದೆವು. ಸಂಘಟನೆಗಾಗಿ ನಮ್ಮ …
Read More »ಜನವರಿ 14ರಂದು ಬಿಡುಗಡೆಯಾಗುತ್ತಿದೆ ‘ಹೀರೋ’ ಚಿತ್ರದ ಟ್ರೈಲರ್
ಭರತ್ ರಾಜ್ ಎಂ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರದ ಟ್ರೈಲರ್ ಅನ್ನು ಜನವರಿ 14 ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಈ ಕುರಿತು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗಾನವಿ ಲಕ್ಷ್ಮಣ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ರಿಷಬ್ ಶೆಟ್ಟಿ ಫಿಲ್ಮ್ಸ್ ನಿಂದ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಇದೇ ತಿಂಗಳು 14ರಂದು ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.
Read More »ಭಾರತದಲ್ಲಿ ಬ್ಯಾನ್ಗೆ ಒಳಗಾದರೂ ಚೀನಾದ ಆಯಪ್ ಟಿಕ್ಟಾಕ್ 2020ರಲ್ಲಿ ಅತೀಹೆಚ್ಚು ಆದಾಯ ಗಳಿಸಿದ ಆಯಪ್ ಎನ್ನಿಸಿಕೊಂಡಿದೆ. ಆಯಪ್ ಟೋಪಿಯಾ
ನವದೆಹಲಿ: ಭಾರತದಲ್ಲಿ ಬ್ಯಾನ್ಗೆ ಒಳಗಾದರೂ ಚೀನಾದ ಆಯಪ್ ಟಿಕ್ಟಾಕ್ 2020ರಲ್ಲಿ ಅತೀಹೆಚ್ಚು ಆದಾಯ ಗಳಿಸಿದ ಆಯಪ್ ಎನ್ನಿಸಿಕೊಂಡಿದೆ. ಆಯಪ್ ಟೋಪಿಯಾ ಬಿಡುಗಡೆ ಮಾಡಿರುವ ಅನಾಲಿಟಿಕ್ಸ್ನಲ್ಲಿ ಟಿಕ್ಟಾಕ್ 540 ಮಿಲಿಯನ್ ಡಾಲರ್(₹39,62,43,36,000) ಆದಾಯ ಗಳಿಸುವ ಮೂಲಕ 2020ರಲ್ಲಿ ಅತೀಹೆಚ್ಚು ಆದಾಯ ಗಳಿಸಿದ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿದೆ. ಇನ್ನು ಟಿಂಡರ್ ಆಯಪ್ 513 ಮಿಲಿಯನ್ ಡಾಲರ್(₹37,64,31,19,200) ಆದಾಯ ಗಳಿಸುವ ಮೂಲಕ ನಂಬರ್ 2 ಸ್ಥಾನ ಪಡೆದಿದೆ. ಆಯಪ್ ಟೋಪಿಯಾದ ಡೇಟಾ …
Read More »ಗ್ರಾಹಕರಿಗೆ ಗುಡ್ ನ್ಯೂಸ್ : ಇಲ್ಲಿ ಸಿಲಿಂಡರ್ ಬುಕ್ ಮಾಡಿದ್ರೆ ನಿಮಗೆ ಸಿಗಲಿದೆ 50 ರೂ. ಕ್ಯಾಶ್ ಬ್ಯಾಕ್!
ನವದೆಹಲಿ : ಐಸಿಐಸಿಐ ಬ್ಯಾಂಕ್ ಎಲ್ ಪಿಜಿ ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಐಸಿಐಸಿಐ ಬ್ಯಾಂಕ್ ನ ಪಾಕೆಟ್ಸ್ ವ್ಯಾಲೆಟ್ ಮೂಲಕ ಸಿಲೆಂಡರ್ ಕಾಯ್ದಿರಿಸಿದರೆ 50 ರೂ. ಕ್ಯಾಶ್ ಬ್ಯಾಕ್ ಪಡೆಯಬಹುದು. ಹೌದು, ಕ್ಯಾಶ್ ಬ್ಯಾಕ್ ಪಡೆಯಲು, ನೀವು PMRJAN2021 ಪ್ರೋಮೋ ಕೋಡ್ ಅನ್ನು ನಮೂದಿಸಬೇಕು. 10 ಪರ್ಸೆಂಟ್ ಗೆ ಗರಿಷ್ಠ 50 ರೂಪಾಯಿ ಕ್ಯಾಶ್ ಬ್ಯಾಕ್ ನೀಡ್ತಿದೆ. ಪಾಕೆಟ್ಸ್ ಪ್ರಕಾರ, ಈ ಆಫರ್ 2021ರ ಜನವರಿ 25ರವರೆಗೆ ಮಾನ್ಯವಾಗಿರುತ್ತದೆ. ಈ …
Read More »ರಾಜ್ಯ ಸರ್ಕಾರದಿಂದ ಗ್ರಾಮೀಣಾ ಜನತೆಗೆ ಭರ್ಜರಿ ಸಿಹಿಸುದ್ದಿ : ಪ್ರತಿ ಗ್ರಾ.ಪಂಗೆ 20 ಮನೆ
ಹುಬ್ಬಳ್ಳಿ : ರಾಜ್ಯದ ಗ್ರಾಮೀಣಾ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಎಲ್ಲರಿಗೂ ಸೂರು ತಲುಪಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ವಿವಿಧ ವಸತಿಯೋಜನೆಯಡಿ ತಲಾ 20 ಮನೆ ನೀಡಲಾಗುವುದು ಎಂದು ವಸತಿ ಸಚಿ ವಿ. ಸೋಮಣ್ಣ ಹೇಳಿದ್ದಾರೆ. ರಾಜ್ಯದ ಎಲ್ಲ ಗ್ರಾಮಪಂಚಾಯಿತಿಗಳಿಗೆ ವಿವಿಧ ಯೋಜನೆಯಡಿ ತಲಾ ಮನೆ ನೀಡಲಾಗುವುದು. ಈ ಸಂಬಂಧ ಬಜೆಟ್ ನಲ್ಲಿ ಘೋಷಣೆ ಮಾಡಲಾಗವುದು ಎಂದು ಹೇಳಿದ್ದಾರೆ. ಗ್ರಾಮಪಂಚಾಯಿತಿ ಸದಸ್ಯರು ಇದೀಗ ಚೆನ್ನಾಗಿ …
Read More »ಹಾಲು ಉತ್ಪಾದಕರಿಗೆ ಭರ್ಜರಿ ಸಿಹಿಸುದ್ದಿ : ಪ್ರತಿ ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಳ!
ಬೆಂಗಳೂರು : ಸಂಕ್ರಾಂತಿ ಹಬ್ಬಕ್ಕೆ ಹಾಲು ಉತ್ಪಾದಕರಿಗೆ ಭರ್ಜರಿ ಸಿಹಿಸುದ್ದಿ ಸಿಗುವ ಸಾಧ್ಯತೆ ಇದ್ದು, ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಬಮೂಲ್ ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ 25.30 ರೂ. ನೀಡುತ್ತಿದೆ. ಅದರಲ್ಲಿ 24 ರೂ. ಹಾಲು ಉತ್ಪಾದಕರಿಗೆ ಮತ್ತು 1.30 ರೂ. ಸೊಸೈಟಿಗೆ ಸಿಗುತ್ತಿದೆ. ಬಮೂಲ್ ಸಂಕ್ರಾಂತಿ ಬಳಿಕ 1 ರೂ. …
Read More »ವಾಟ್ಸ್ ಆಪ್, ಫೇಸ್ ಬುಕ್ ನಿಷೇಧಕ್ಕೆ ಕೇಂದ್ರ ಸರ್ಕಾರಕ್ಕೆ ಸಿಎಐಟಿ ಮನವಿ
ನವದೆಹಲಿ: ವಾಟ್ಸ್ ಆಪ್ ಹೊಸ ಗೌಪ್ಯತಾ ನೀತಿಯನ್ನು ಜಾರಿಗೆ ತರಲು ಮುಂದಾಗಿರುವ ಮೆಸೇಜಿಂಗ್ ಆಪ್ ವಾಟ್ಸಪ್ ಮತ್ತು ಅದರ ಮಾತೃ ಸಂಸ್ಥೆ ಫೇಸ್ ಬುಕ್ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ವರ್ತಕರ ಸಂಘಟನೆ ಸಿಎಐಟಿ ಯು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ಭಾನುವಾರ ಪತ್ರ ಬರೆದಿದೆ. ‘ಹೊಸ ಗೌಪ್ಯತಾ ನೀತಿಯ ಮೂಲಕ ವಾಟ್ಸ್ ಆಪ್ ಬಳಸುತ್ತಿರುವ ವ್ಯಕ್ತಿಯ ಎಲ್ಲ ರೀತಿಯ ವೈಯಕ್ತಿಕ ಮಾಹಿತಿ, …
Read More »ಎಚ್ಚರ..ನಿಮ್ಮ ವಾಟ್ಸಪ್‌ಗ್ರೂಪ್ ಗೆ ‘ಅಪರಿಚಿತರು’ ಈ ರೀತಿ ಸೇರಿಕೊಳ್ತಾರಂತೆ..?
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಿಮ್ಮ ಕಚೇರಿಯ ಸಹೋದ್ಯೋಗಿಗಳನ್ನು ಒಳಗೊಂಡಿರುವ ವಾಟ್ಸ್ ಆಪ್ ಗ್ರೂಪ್ ನಲ್ಲಿ ಮಹತ್ವದ ವಿವರಗಳನ್ನು ಚರ್ಚಿಸುತ್ತಿರುವಾಗ, ಇದ್ದಕ್ಕಿದ್ದಂತೆ ಅಪರಿಚತ ವ್ಯಕ್ತಿಯು ಸೇರಿಕೊಂಡರೇ ಏನಾಗಬೇಡ ಒಮ್ಮೆ ಯೋಚನೆ ಮಾಡಿ, ಹೌದು, ಗೂಗಲ್ ಸರ್ಚ್ ಮೂಲಕ ನಿಮ್ಮ ಖಾಸಗಿ ಗ್ರೂಪ್ ಚಾಟ್‌ಗೆ ಪ್ರವೇಶ ಪಡೆಯ ಬಹುದು ಎನ್ನಲಾಗಿದ್ದು, ಇದೊಂದು ಸಮಸ್ಯೆಯಾಗಲಿದೆ ಎನ್ನಲಾಗಿದೆ. ಅಂದ ಹಾಗೇ 2019ರಲ್ಲಿ ಈ ಸಮಸ್ಯೆ ಬಗೆಹರಿಸಲಾಗಿತ್ತು ಆದರೆ ಈಗ ಮತ್ತೆ ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ವಾಟಫ್ಸ್ ನಲ್ಲಿ ಎಲ್ಲವೂ …
Read More »