Breaking News

ಅಹಿಂದ ನಾಯಕರು ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ ಖರ್ಗೆಯನ್ನೇ:ಡಿಕೆ ಶಿ

ಬೆಂಗಳೂರು, ಜನವರಿ 16: ಕರ್ನಾಟಕ ಕಾಂಗ್ರೆಸ್​ನಲ್ಲಿ ಮತ್ತೆ ಭುಗಿಲೆದ್ದಿರುವ ನಾಯಕತ್ವ ಬದಲಾವಣೆ ವಿಚಾರವಾಗಿ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷ ಸ್ಥಾನದ ವಿಚಾರ ಸ್ಪಷ್ಟಪಡಿಸಬೇಕಾಗಿರುವುದು ನಾನಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಲಿ. ಇವರು (ಅಹಿಂದ ನಾಯಕರು) ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ, ಖರ್ಗೆ ಅವರನ್ನು ಎಂದಿದ್ದಾರೆ. …

Read More »

ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಗೆಳೆಯನ ಮನೆಯಲ್ಲೇ ಪ್ರಿಯಕರ ದುರಂತ ಸಾವು

ಪ್ರೇಯಸಿಗೆ ಹೆದರಿಸಲು ಹೋಗಿ ಪ್ರಿಯಕರ ದುರಂತ ಸಾವು ಕಂಡಿದ್ದಾನೆ. ಪ್ರೇಯಸಿ ಸಿಟ್ಟು ಮಾಡಿಕೊಂಡು ಹೋಗಿದ್ದಕ್ಕೆ ಪ್ರಿಯಕರ ದುಡುಕಿನ ನಿರ್ಧಾರ ಕೈಗೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಹೌದು…ಪ್ರೇಯಸಿ ಬರಲಿಲ್ಲವೆಂದು ಅಜಯ್ ಎನ್ನುವಾತ, ಸ್ನೇಹಿತನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಜಯಪುರ ಜಿಲ್ಲೆಯ ಬೀಳಗಿ ತಾಲೂಕಿನ ನಿಂಗಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಜಯ್ ಹಾಗೂ ಅನುಪಮ(ಹೆಸರು ಬದಲಾಯಿಸಲಾಗಿದೆ) ಇಬ್ಬರು‌ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರ ನಿವಾಸಿಗಳು. ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದು, …

Read More »

ಕುರುಕ್ಷೇತ್ರ ನಾಟಕದ ಭೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ

ಹಾಸನ, ಜನವರಿ 16: ಶಾಸಕ ಶಿವಲಿಂಗೇಗೌಡ ಕುರುಕ್ಷೇತ್ರ ನಾಟಕದ ಭೀಮನ ಪಾತ್ರದ ಡೈಲಾಗ್ ಹೇಳಿ ಗಮನ ಸೆಳೆದರು. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಕುರುಕ್ಷೇತ್ರ ನಾಟಕ ಅಭಿನಯಿಸಿದ್ದರು. ನಾಟಕ ಉದ್ಘಾಟನೆಗೆ ತೆರಳಿದ್ದ ಶಿವಲಿಂಗೇಗೌಡ, ಭೀಮನ ಪಾತ್ರ ಅಭಿನಯ ಮಾಡಿ ತೋರಿಸಿದರು. ಈ ಹಿಂದೆ ಶಿವಲಿಂಗೇಗೌಡ ಪೌರಾಣಿಕ ನಾಟಕದಲ್ಲಿ ಭೀಮನ ಪಾತ್ರ ನಟಿಸುತ್ತಿದ್ದರು. ಹೀಗಾಗಿ ಉದ್ಘಾಟನಾ ಸಮಾರಂಭದ ವೇಳೆ, ಭೀಮನ ಡೈಲಾಗ್ ಹೇಳುವಂತೆ ಜನ ಒತ್ತಾಯಿಸಿದ್ದರು. ಇದೇ …

Read More »

ಓಂಶಕ್ತಿ ಮಾಲಾಧಾರಿಗಳಿಗೆ ಶಾಸಕ ವೀರೇಂದ್ರ ಪಪ್ಪಿ ಕಾರು ಡಿಕ್ಕಿ

ಚಿತ್ರದುರ್ಗದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಬೆಂಜ್ ಕಾರು ರಸ್ತೆ ದಾಟುತ್ತಿದ್ದ ಓಂ ಶಕ್ತಿ ಮಾಲಾಧಾರಿಗಳಿಗೆ ಡಿಕ್ಕಿ ಹೊಡೆದಿದೆ. ನೆಲಮಂಗಲದಲ್ಲಿ ಘಟನೆ ನಡೆದಿದ್ದು, ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಅಪಘಾತಕ್ಕೀಡಾದ ಕಾರನ್ನು ಜಪ್ತಿ ಮಾಡಲಾಗಿದೆ. ಶಾಸಕ ಕೆ.ಸಿ.ವೀರೇಂದ್ರ (kc veerendra) ಪಪ್ಪಿ ಕಾರು ಡಿಕ್ಕಿ ಹೊಡೆ ಪರಿಣಾಮ ಇಬ್ಬರು ಓಂಶಕ್ತಿ ಮಾಲಾಧಾರಿಗಳು ಗಂಭೀರ …

Read More »

ಜಾತಿಗಣತಿ ವರದಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಂಡ ಸಚಿವ ಸಂಪುಟ

ಬೆಂಗಳೂರು, ಜನವರಿ 16: ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಅಂತ್ಯವಾಗಿದ್ದು, ಈ ಸಭೆಯಲ್ಲಿ ಬಹುನಿರೀಕ್ಷಿತ ಜಾತಿ ಗಣತಿ ವರದಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಜಾತಿಗಣತಿ ವರದಿ ಮುಚ್ಚಿದ ಲಕೋಟೆಯಲ್ಲಿರುವುದನ್ನು ತೆರೆಯಲು ತೀರ್ಮಾನಸಲಾಗಿದೆ. ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂದಿಡಲು ನಿರ್ಧರಿಸಲಾಗಿದೆ. ಆ ಮೂಲಕ ಕರ್ನಾಟಕವೇ ಎದುರು ನೋಡುತ್ತಿದ್ದ ಜಾತಿಗಣತಿ ವರದಿ ಬಗ್ಗೆ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಹೆಜ್ಜೆ ಇಟ್ಟಿದೆ.ಇಂದಿನ ಸಚಿವ ಸಂಪುಟದಲ್ಲೇ ಜಾರಿಗಣತಿ ವರದಿ …

Read More »

ಸೈಫ್ ಅಲಿ ಖಾನ್​ಗೆ ಚಾಕು ಇರಿತ: ಶಂಕಿತ ವ್ಯಕ್ತಿಯ ಫೋಟೋ ಬಹಿರಂಗ

ಬಾಲಿವುಡ್ ನಟ ಸೈಫ್ ಅಲಿ ಖಾನ್​ ಅವರ ಮನೆಗೆ ನುಗ್ಗಿ, ಚಾಕು ಇರಿದ ಪ್ರಕರಣದಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳನ್ನು ಮುಂಬೈ ಪೊಲೀಸರು ಗುರುತಿಸಿದ್ದಾರೆ. ಆ ಪೈಕಿ ಓರ್ವ ಶಂಕಿತನ ಫೋಟೋ ಕೂಡ ಲಭ್ಯವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಸೈಫ್ ಕುಟುಂಬ ವಾಸವಾಗಿರುವ ಅಪಾರ್ಟ್​ಮೆಂಟ್​ನ ಮೆಟ್ಟಿಲುಗಳನ್ನು ಹತ್ತಿ ಬರುವಾಗ ಸಿಸಿಟಿವಿಯಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ. ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಸೈಫ್ ಅಲಿ ಖಾನ್ ಅವರ …

Read More »

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: 8ನೇ ವೇತನ ಆಯೋಗ ರಚನೆಗೆ ಅನುಮೋದನೆ

ನೌಕರರ ವೇತನ ಹಾಗೂ ಪಿಂಚಣಿದಾರರ ಭತ್ಯೆ ಪರಿಷ್ಕರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8ನೇ ವೇತನ ಆಯೋಗ ರಚಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

Read More »

ನೋಟಿಸ್​ ಕೊಡುವ ಅಧಿಕಾರ ಅವರಿಗಿದೆ. ಕೊಟ್ಟಿದ್ದರೆ, ನೋಟಿಸ್​ಗೆ ನಾನು ಉತ್ತರ ಕೊಡುತ್ತೇನೆ. ನೋಟಿಸ್ ಕೊಟ್ಟ ಕೂಡಲೇ ದೊಡ್ಡ ಅನಾಹುತ ಏನೂ ಆಗುವುದಿಲ್ಲ.

ಬೆಂಗಳೂರು: ಕೆಪಿಸಿಸಿಯಿಂದ ನೋಟಿಸ್​ ಕೊಟ್ಟಾಕ್ಷಣ ಯಾವುದೇ ದೊಡ್ಡ ಅನಾಹುತ ಆಗುವುದಿಲ್ಲ. ಅದಕ್ಕೆ ಸ್ಪಷ್ಟ ಉತ್ತರವನ್ನು ಅಧ್ಯಕ್ಷರ ಮುಂದೆ ನೀಡಲಾಗುವುದು ಎಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿ ಅವರು, ನೋಟಿಸ್​ ಕೊಡುವ ಅಧಿಕಾರ ಅವರಿಗಿದೆ. ಕೊಟ್ಟಿದ್ದರೆ, ನೋಟಿಸ್​ಗೆ ನಾನು ಉತ್ತರ ಕೊಡುತ್ತೇನೆ. ನೋಟಿಸ್ ಕೊಟ್ಟ ಕೂಡಲೇ ದೊಡ್ಡ ಅನಾಹುತ ಏನೂ ಆಗುವುದಿಲ್ಲ. ಕೆಪಿಸಿಸಿ ಆಕಾಂಕ್ಷಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಈ ಕುರಿತು ವಿಡಿಯೋ ಕೂಡ ನಮ್ಮ ಬಳಿ …

Read More »

ಚಲಿಸುತ್ತಿರುವ ಆಟೋದ ಟಾಪ್‌ ಮೇಲೆ ಮಲಗಿ ಯುವಕನ ಕಸರತ್ತು

ಯುವಕರು ತಮ್ಮ ಹುಚ್ಚಾಟಗಳಿಗಾಗಿ, ಲೈಕ್ಸ್‌ ವೀವ್ಸ್‌ಗಳಿಗಾಗಿ ಡೇಂಜರಸ್‌ ಸ್ಟಂಟ್‌ಗಳನ್ನು ಮಾಡುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಎದೆ ಝಲ್‌ ಎನ್ನಿಸುವ ದೃಶ್ಯವೊಂದು ವೈರಲ್‌ ಆಗಿದ್ದು, ಯುವಕನೊಬ್ಬ ಚಲಿಸುತ್ತಿರುವ ಆಟೋದ ಟಾಪ್‌ ಮೇಲೆ ಮಲಗಿ ಪ್ರಯಾಣಿಸಿದ್ದಾನೆ. ಈತನ ಹುಚ್ಚಾಟಕ್ಕೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಕೆಲ ಬಿಸಿ ರಕ್ತದ ಯುವಕರು ಇವೆಲ್ಲಾ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತವೆ ಎಂದು ಗೊತ್ತಿದ್ದರೂ ಕೂಡಾ ರಸ್ತೆಗಿಳಿದು ಬೈಕ್‌, ಕಾರ್‌ಗಳಲ್ಲಿ …

Read More »

ಆತ್ಮರಕ್ಷಣೆಗಾಗಿ ಗನ್ ಬೇಕು: ದರ್ಶನ್ ತೂಗುದೀಪ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಅರೋಪದಲ್ಲಿ ಚಿತ್ರನಟ ದರ್ಶನ್ ಬಂಧನವಾದಾಗಲೇ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿರುವ ಪಿಸ್ಟಲ್ ಮುಟ್ಟುಗೋಲು ಹಾಕಿಕೊಂಡು ಗನ್ ಲೈಸೆನ್ಸ್ ರದ್ದು ಮಾಡಬೇಕೆಂಬ ನಿರ್ಧಾರವನ್ನು ಪೊಲೀಸರು ತೆಗೆದುಕೊಂಡಿದ್ದರು. ಅವರು ಜೈಲಲ್ಲಿದ್ದ ಕಾರಣ ವಿಷಯ ಕೊಂಚ ನೆನೆಗುದಿಗೆ ಬಿದ್ದಿದ್ದು ಸತ್ಯ. ಈಗ ಅವರು ಜಾಮೀನು ಪಡೆದು ಹೊರಬಂದಿರುವ ಹಿನ್ನೆಲೆಯಲ್ಲಿ ತಮ್ಮ ಬಳಿಯಿರುವ ಪಿಸ್ಟಲ್ ಬಳಸಿ ಸಾಕ್ಷಿಗಳನ್ನು ಹೆದರಿಸುವ ಸಾಧ್ಯತೆ ಇದೆ, ಹಾಗಾಗಿ ಅವರ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು ಎಂದು ಜನವರಿ …

Read More »