ಬೆಂಗಳೂರು, ಡಿ.28- ಪ್ರತಿ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂಗೀಕರಿಸಲ್ಪಟ್ಟಿದ್ದ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸುವ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ನಾಳೆ ರಾಜ್ಯಪಾಲ ವಿ.ಆರ್.ವಾಲಾ ಅವರ ಅಂಕಿತಕ್ಕೆ ಕಳುಹಿಸಿಕೊಡಲಿದೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು …
Read More »ನಾನು ದನದ ಮಾಂಸ ತಿನ್ನುತ್ತೇನೆ. ಬೇಡ ಎನ್ನಲು ನೀನು ಯಾವನು: ಸಿದ್ದರಾಮಯ್ಯ
ಬೆಂಗಳೂರು, ಡಿ.28- ನಾನು ದನದ ಮಾಂಸ ತಿನ್ನುತ್ತೇನೆ. ಅದನ್ನು ಬೇಡ ಎನ್ನಲು ನೀನು ಯಾವನು ಎಂದು ಪ್ರಶ್ನಿಸುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾನೂನನ್ನು ಬಲವಾಗಿ ವಿರೋಧಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್‍ನ 136ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಹೊಸದಲ್ಲ. 1964ರಲ್ಲೆ ಕಾಂಗ್ರೆಸ್ ಜಾರಿಗೆ ತಂದಿತ್ತು. ಈಗ ಅದನ್ನು ಪರಿಷ್ಕರಣೆ ಮಾಡಿ …
Read More »ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಸುರೇಶ್‍ಕುಮಾರ್
ಬೆಂಗಳೂರು,ಡಿ.28 – ಈ ನೆಲದ ನಂಬಿಕೆಗಳಿಗೆ ಅವಮಾನ ಮಾಡುವುದರಿಂದ ಏನು ಸಾಧಿಸುತ್ತಾರೆ, ನೆಲಕ್ಕೆ ಅವಮಾನ ಮಾಡುವುದನ್ನೇ ಕೆಲವರು ಜಾತ್ಯಾತೀತತೆ ಎಂದು ನಂಬಿದ್ದಾರೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. ನಿನ್ನೆ ಗ್ರಾಮಪಂಚಾಯತ್ ಮತದಾನ ಮಾಡಿದ ಬಳಿಕ ಮೈಸೂರಿನ ಆಪ್ತರ ಮನೆಯಲ್ಲಿ ಬಾಡೂಟ ಸವಿಯುತ್ತಿದ್ದ ವೇಳೆ ಸಿದ್ದರಾಮಯ್ಯ ಅವರಿಗೆ ಬೆಂಬಲಿಗನೊಬ್ಬ ಇಂದು ಹನುಮ ಜಯಂತಿ ಎಂದು ನೆನಪಿಸಿದ್ದ. ಇದಕ್ಕೆ ಎಂದಿನಂತೆ ತಮ್ಮ …
Read More »ಬಿಜೆಪಿಯವರು 7 ವರ್ಷದಲ್ಲೇ ಮಾರಿದ್ರು: ಶಾಸಕ ಸತೀಶ ಜಾರಕಿಹೊಳಿ ವಾಗ್ದಾಳಿ ಕಾಂಗ್ರೆಸ್ ಏನು ಮಾಡದಿದ್ರೆ ಸಂಸ್ಥೆಗಳನ್ನು ಹೇಗೆ ಮಾರಾಟ ಮಾಡುತಿದ್ರು?
ಗೋಕಾಕ: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ನಿರಂತರ ಶ್ರಮಪಟ್ಟು ಅಭಿವೃದ್ದಿಗೊಳಿಸಿದ ದೇಶವನ್ನು ಬಿಜೆಪಿಯವರು ಕೇವಲ 7 ವರ್ಷದಲ್ಲಿ ಮಾರಾಟ ಮಾಡಿದ್ದಾರೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136 ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಪೆಟ್ರೋಲಿಯಂ, ಬಿಎಸ್ಎನ್ ಎಲ್ ಎಲ್ಲವನ್ನು ಕಾಂಗ್ರೆಸ್ ನವರು 70ವರ್ಷಗಳ …
Read More »ಬಿಬಿಎಂಪಿ ಚುನಾವಣಾ ಅಖಾಡಕ್ಕಿಳಿಯಲು ಓವೈಸಿ ತಯಾರಿ..!
ಬೆಂಗಳೂರು,ಡಿ.28-ಬಿಬಿಎಂಪಿ ಚುನಾವಣೆಗೆ ಇನ್ನು ಮುಹೂರ್ತ ನಿಗಧಿಯಾಗದಿದ್ದರೂ ಅಸಾದುದ್ದಿನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಈಗಾಗಲೇ ಪಕ್ಷದ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದೆ. ಗ್ರೇಟರ್ ಹೈದ್ರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅದ್ಭುತ ಸಾಧನೆ ಮಾಡಿ ಬೀಗುತ್ತಿರುವ ಓವೈಸಿ ತನ್ನ ಮುಂದಿನ ಗುರಿಯನ್ನು ಕರ್ನಾಟಕದ ಮೇಲೆ ಇಟ್ಟಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿರುವ ಓವೈಸಿ ಇದರ ಜತೆಗೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಚುನಾವಣೆ ವಿಚಾರ ಸುಪ್ರೀಂ ಕೋರ್ಟ್ …
Read More »ರೂಪಾಂತರ ವೈರಸ್ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲೇ ಬಂದಿರಬಹುದು. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
,ಡಿ.28- ಒಂದು ವೈರಸ್ ರೂಪಾಂತರಗೊಳ್ಳುವುದು ಅದರ ಸಾಮಾನ್ಯ ನಡವಳಿಕೆ. ಇದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ತಿಳಿಸಿದ್ದಾರೆ. ಕೊರೊನಾ ವೈರಸ್ ನಮ್ಮ ದೇಶಕ್ಕೆ ಕಾಲಿಟ್ಟು 10 ತಿಂಗಳು ಮುಗಿದಿದೆ. ಒಂದು ವೈರಸ್ ರೂಪಾಂತರಗೊಳ್ಳುವುದು ಅದರ ಸಾಮಾನ್ಯ ನಡವಳಿಕೆ. ಇದರ ಬಗ್ಗೆ ಆತಂಕಪಡಬೇಕಾಗಿಲ್ಲ. ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೊರೊನಾ ವೈರಸ್ ಬಂದಾಗ ನಮ್ಮ ದೇಶ ಸಮರ್ಥವಾಗಿ ನಿಭಾಯಿಸಿದೆ ಎಂದರು. ಫೆಬ್ರವರಿ, ಮಾರ್ಚ್‍ನಲ್ಲಿ 2ನೇ ಅಲೆ …
Read More »ಎರಡೂ ಕೈಗಳಿಲ್ಲದಿದ್ದರೂತನ್ನ ಕಾಲಿನಿಂದ ಮತ ಹಾಕಿದಲಕ್ಷ್ಮೀ
ಗುಂಡುಮುಣುಗು:ಕಾಲಿನಿಂದ ಮತ ಚಲಾಯಿಸುವ ಲಕ್ಷ್ಮೀ.!? ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಂಡು ಮುಣುಗು ಗ್ರಾಮದ, ವಿಶೇಷ ಚೇತನೆ ಲಕ್ಷ್ಮೀ ಇಂದು ತನ್ನ ಕಾಲಿನಿಂದ ಮತ ಹಾಕಿದಳು.ಎರಡೂ ಕೈಗಳಿಲ್ಲದ ಯುವತಿ ಲಕ್ಷ್ಮಿ ಮತದಾನದ ಹಕ್ಕು ಪಡೆದಾಗಿನಿಂದ,ಎಲ್ಲಾ ಚುನಾವಣೆಯಲ್ಲಿ ಭಾಗವಹಿಸಿ ಕಾಲಿನಿಂದಲೇ ಮತ ಚಲಾಯಿಸುತ್ತಿದ್ದಾಳೆ. ಇದು ಎಂತಹವರನ್ನೂ ನಿಬ್ಬೆರಗಾಗಿಸುವ ಸಂಗತಿ ಯಾಗಿದೆ, ಗ್ರಾಮ ಪಂಚಾಯಿತಿಗೆ ಭಾನುವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ. ಗುಂಡುಮುಣುಗು ಗ್ರಾಮದ ಮತಗಟ್ಟೆ 47ರಲ್ಲಿ ಲಕ್ಷ್ಮೀದೇವಿ ಕಾಲಿನಿಂದ ಮತದಾನ ಮಾಡಿದರು, …
Read More »ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಕನ್ನಡ ಧ್ವಜ
ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಪೊಲೀಸರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ನಡುವೆ ಹೈಡ್ರಾಮಾ ನಡೆದಿದೆ. ಪಾಲಿಕೆ ಎದುರು ಕನ್ನಡ ಧ್ವಜ ಹಾರಾಡಿಸುವ ನಿಟ್ಟಿನಲ್ಲಿ ಪೊಲೀಸರು ಹಾಗೂ ಕನ್ನಡಪರ ಹೋರಾಟಗಾರರ ನಡುವೆ ವಗವಾದ ನಡೆದಿದೆ. ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಸಾರಥ್ಯದಲ್ಲಿ ಕನ್ನಡದ ಅಭಿಮಾನಿಗಳು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಹಾರಿಸುವ ಮೂಲಕ ಕನ್ನಡಿಗರ ಬಹುದಿನಗಳ ಕನಸು ನನಸು ಮಾಡಿದ್ದಾರೆ. ಶ್ರೀನಿವಾಸ ತಾಳೂರಕರ ನೇತ್ರತ್ವದಲ್ಲಿ ಕನ್ನಡ …
Read More »ಜನವರಿ 1ರಿಂದ ಶಾಲಾ-ಕಾಲೇಜುಗಳು ಆರಂಭ:BSY
ಜನವರಿ 1ರಿಂದ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆಗಳು ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನಿಗದಿಯಂತೆ ಶಾಲೆಗಳು ಆರಂಭವಾಗಲಿದೆ. ಆದರೆ ಕೊರೊನ ಹಿನ್ನೆಲೆಯಲ್ಲಿ ಯಾವರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು. ಜನವರಿ 1ರಿಂದ ಶಾಲೆಗಳು ಆರಂಭವಾಗಲಿದ್ದು, 6-9ನೇ ತರಗಿವರೆಗೆ ವಿದ್ಯಾಗಮ ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿ ತರಗತಿಗಳು ಆರಂಭವಾಗಲಿವೆ ಎಂದರು.
Read More »ಕೆರೆಯ ದಂಡೆಯ ಮೇಲೆ ಹೋರಿ ಓಡಿಸೋ ಹಬ್ಬದಲ್ಲಿ ಈ ದುರ್ಘಟನೆ
ಹಾವೇರಿ: ಕೊಬ್ಬರಿ ಹೋರಿ ಸ್ಪರ್ಧೆಗೆ ಹಾವೇರಿ ಜಿಲ್ಲೆ ಫೇಮಸ್ಸ್. ಆದರೆ ಕೊಬ್ಬರಿ ಹೋರಿ ಅಖಾಡದಲ್ಲಿ ಮಿಂಚಿನ ಓಟ ಓಡುತ್ತಲೇ ಹೋರಿಯೊಂದು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಇರೋ ಕೆರೆಯ ದಂಡೆಯ ಮೇಲೆ ಹೋರಿ ಓಡಿಸೋ ಹಬ್ಬದಲ್ಲಿ ಈ ದುರ್ಘಟನೆ ನಡೆದಿದೆ. ಅರಳೀಕಟ್ಟಿ ಗ್ರಾಮದ ಪುಟ್ಟಪ್ಪ ಎಂಬವರಿಗೆ ಸೇರಿದ ವರದನಾಯಕ ಹೆಸರಿನ ಹೋರಿ ಇದಾಗಿದೆ. ಹೋರಿ ಕೆರೆಗೆ ಜಿಗಿಯುತ್ತಿದ್ದಂತೆ …
Read More »