ಗುಂಡುಮುಣುಗು:ಕಾಲಿನಿಂದ ಮತ ಚಲಾಯಿಸುವ ಲಕ್ಷ್ಮೀ.!? ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಂಡು ಮುಣುಗು ಗ್ರಾಮದ, ವಿಶೇಷ ಚೇತನೆ ಲಕ್ಷ್ಮೀ ಇಂದು ತನ್ನ ಕಾಲಿನಿಂದ ಮತ ಹಾಕಿದಳು.ಎರಡೂ ಕೈಗಳಿಲ್ಲದ ಯುವತಿ ಲಕ್ಷ್ಮಿ ಮತದಾನದ ಹಕ್ಕು ಪಡೆದಾಗಿನಿಂದ,ಎಲ್ಲಾ ಚುನಾವಣೆಯಲ್ಲಿ ಭಾಗವಹಿಸಿ ಕಾಲಿನಿಂದಲೇ ಮತ ಚಲಾಯಿಸುತ್ತಿದ್ದಾಳೆ. ಇದು ಎಂತಹವರನ್ನೂ ನಿಬ್ಬೆರಗಾಗಿಸುವ ಸಂಗತಿ ಯಾಗಿದೆ, ಗ್ರಾಮ ಪಂಚಾಯಿತಿಗೆ ಭಾನುವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ. ಗುಂಡುಮುಣುಗು ಗ್ರಾಮದ ಮತಗಟ್ಟೆ 47ರಲ್ಲಿ ಲಕ್ಷ್ಮೀದೇವಿ ಕಾಲಿನಿಂದ ಮತದಾನ ಮಾಡಿದರು, …
Read More »ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಕನ್ನಡ ಧ್ವಜ
ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಪೊಲೀಸರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ನಡುವೆ ಹೈಡ್ರಾಮಾ ನಡೆದಿದೆ. ಪಾಲಿಕೆ ಎದುರು ಕನ್ನಡ ಧ್ವಜ ಹಾರಾಡಿಸುವ ನಿಟ್ಟಿನಲ್ಲಿ ಪೊಲೀಸರು ಹಾಗೂ ಕನ್ನಡಪರ ಹೋರಾಟಗಾರರ ನಡುವೆ ವಗವಾದ ನಡೆದಿದೆ. ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಸಾರಥ್ಯದಲ್ಲಿ ಕನ್ನಡದ ಅಭಿಮಾನಿಗಳು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಹಾರಿಸುವ ಮೂಲಕ ಕನ್ನಡಿಗರ ಬಹುದಿನಗಳ ಕನಸು ನನಸು ಮಾಡಿದ್ದಾರೆ. ಶ್ರೀನಿವಾಸ ತಾಳೂರಕರ ನೇತ್ರತ್ವದಲ್ಲಿ ಕನ್ನಡ …
Read More »ಜನವರಿ 1ರಿಂದ ಶಾಲಾ-ಕಾಲೇಜುಗಳು ಆರಂಭ:BSY
ಜನವರಿ 1ರಿಂದ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆಗಳು ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನಿಗದಿಯಂತೆ ಶಾಲೆಗಳು ಆರಂಭವಾಗಲಿದೆ. ಆದರೆ ಕೊರೊನ ಹಿನ್ನೆಲೆಯಲ್ಲಿ ಯಾವರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು. ಜನವರಿ 1ರಿಂದ ಶಾಲೆಗಳು ಆರಂಭವಾಗಲಿದ್ದು, 6-9ನೇ ತರಗಿವರೆಗೆ ವಿದ್ಯಾಗಮ ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿ ತರಗತಿಗಳು ಆರಂಭವಾಗಲಿವೆ ಎಂದರು.
Read More »ಕೆರೆಯ ದಂಡೆಯ ಮೇಲೆ ಹೋರಿ ಓಡಿಸೋ ಹಬ್ಬದಲ್ಲಿ ಈ ದುರ್ಘಟನೆ
ಹಾವೇರಿ: ಕೊಬ್ಬರಿ ಹೋರಿ ಸ್ಪರ್ಧೆಗೆ ಹಾವೇರಿ ಜಿಲ್ಲೆ ಫೇಮಸ್ಸ್. ಆದರೆ ಕೊಬ್ಬರಿ ಹೋರಿ ಅಖಾಡದಲ್ಲಿ ಮಿಂಚಿನ ಓಟ ಓಡುತ್ತಲೇ ಹೋರಿಯೊಂದು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಇರೋ ಕೆರೆಯ ದಂಡೆಯ ಮೇಲೆ ಹೋರಿ ಓಡಿಸೋ ಹಬ್ಬದಲ್ಲಿ ಈ ದುರ್ಘಟನೆ ನಡೆದಿದೆ. ಅರಳೀಕಟ್ಟಿ ಗ್ರಾಮದ ಪುಟ್ಟಪ್ಪ ಎಂಬವರಿಗೆ ಸೇರಿದ ವರದನಾಯಕ ಹೆಸರಿನ ಹೋರಿ ಇದಾಗಿದೆ. ಹೋರಿ ಕೆರೆಗೆ ಜಿಗಿಯುತ್ತಿದ್ದಂತೆ …
Read More »ಚಾಕು ಇರಿದು ಮಹಿಳೆಯ ಕೊಲೆ
ರಾಯಚೂರು: ಚಾಕು ಇರಿದು ಮಹಿಳೆಯನ್ನು ಕೊಲೆಗೈದ ಘಟನೆಯೊಂದು ರಾಯಚೂರಿನ ಲಿಂಗಸಗೂರಿನ ಮುದಗಲ್ ಪಟ್ಟಣದ ವೆಂಕಟರಾಯಪೇಟೆಯಲ್ಲಿ ನಡೆದಿದೆ. ನೇತ್ರಾವತಿ (33) ಕೊಲೆಯಾದ ಮಹಿಳೆ. ಸೋದರ ಸಂಬಂಧಿ ಶಿವರಾಜ್, ನೇತ್ರಾವತಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯ ಬಳಿಕ ಶಿವರಾಜ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಪ್ರಶಾಂತ್ ಸಂಬರಗಿ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಇವರು ಸಾಮಾಜಿಕ ಕಾರ್ಯ ಕರ್ತ ರಾ ಅಥವಾ ಬಡ್ಡಿ ವ್ಯವಹಾರ ಮಾಡೋರ..?
ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಧಿಕ ಬಡ್ಡಿ ನೀಡಿಲ್ಲವೆಂದು ವಾಟ್ಸಪ್‌ನಲ್ಲಿ ತೇಜೋವಧೆ ಮಾಡಿದ್ದರೆ ಎಂದು ಆರೋಪಿಸಿ ವೆಸ್ಟ್ ಆಫ್ ಕಾರ್ಡ್ ರೋಡ್ ನಿವಾಸಿ ವೈ.ಕೆ.ದೇವನಾಥ್ ಎಂಬುವರು ದೂರು ನೀಡಿದ್ದರು. ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್ 499(ಮಾನಹಾನಿ) 500(ಮಾನಹಾನಿಗಾಗಿ ದಂಡನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಏನಿದೆ? ಪ್ರಶಾಂತ್ ಸಂಬರಗಿ ಬಳಿ ನಾನು ಬಡ್ಡಿ ಸಾಲ …
Read More »ಗ್ರಾ.ಪಂ. ಚುನಾವಣೆ ಅಂತ್ಯ: 2ನೇ ಹಂತದಲ್ಲಿ ಶೇ. 80.71 ಮತದಾನ – ಡಿ. 30ಕ್ಕೆ ಫಲಿತಾಂಶ
ಬೆಂಗಳೂರು: ಕೆಲವೊಂದು ಕಡೆ ಗದ್ದಲ, ಮತದಾನ ಬಹಿಷ್ಕಾರಗಳ ಮಧ್ಯೆ ರಾಜ್ಯದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಡಿ. 22ರಂದು ಮೊದಲ ಹಂತದ ಮತದಾನವಾದರೆ ನಿನ್ನೆ ಭಾನುವಾರ 109 ತಾಲೂಕುಗಳಲ್ಲಿ ಎರಡನೇ ಹಂತದ ಮತದಾನ ನಡೆದಿದೆ. ನಿನ್ನೆ ಶೇ. 80.71ರಷ್ಟು ಮತದಾನ ಆಗಿರುವ ಮಾಹಿತಿ ಇದೆ. ಎರಡೂ ಹಂತಗಳಲ್ಲೂ ಶೇ. 80ಕ್ಕಿಂತ ಹೆಚ್ಚು ಮತದಾನವಾದಂತಾಗಿದೆ. ನಿನ್ನೆ 2ನೇ ಹಂತದಲ್ಲಿ 39,378 ಸದಸ್ಯರ ಆಯ್ಕೆಗೆ 2,709 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ …
Read More »ಅಪಹರಣಕ್ಕೆ ಒಳಗಾದ ಮಹಿಳೆಯನ್ನು ಪತ್ತೆ ಹಚ್ಚಲು ಯಶಸ್ವಿ
ಡಿ.25ರಂದು ಶಿರಸಿಯ ಬಸವೇಶ್ವರ ನಗರದಿಂದ ಋತಿಕಾ/ ಮಣಿಕಂಠ ಕೊಡಿಯಾ ವಯಾ ೧೮ ವರ್ಷ ಇವಳನ್ನು ಅವಳ ತಾಯಿ ರೂಪಾ ಶಿರ್ಸೆಕರ್, ಕಿರಣ ಬೆಲ್ಲದ್ ಹಾಗೂ ಇತರ ನಾಲ್ಕೈದು ಜನ ಸೇರಿ ಬಲವಂತವಾಗಿ ಅಪಹರಿಸಿಕೊಂಡು ಹೋದ ಬಗ್ಗೆ ಗಂಡ ಮಣಿಕಂಠ ಕೊಡಿಯಾ ನೀಡಿದ ದೂರಿನ ಆಧಾರದ ಮೇಲೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದ ಶಿರಸಿ ಪೊಲೀಸರು ಡಿಎಸ್ಪಿ ರವಿ ಡಿ ನಾಯ್ಕ ಸಿಪಿಐ …
Read More »ನಿರ್ಭಯಾ ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್ ಪ್ರಕರಣ ಗೃಹ ಕಾರ್ಯದರ್ಶಿ ಡಿ.ರೂಪಾ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನಡುವಿನ ಸಮರಕ್ಕೆ ಕಾರಣ
ಬೆಂಗಳೂರು: ನಿರ್ಭಯಾ ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್ ಪ್ರಕರಣ ಗೃಹ ಕಾರ್ಯದರ್ಶಿ ಡಿ.ರೂಪಾ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನಡುವಿನ ಸಮರಕ್ಕೆ ಕಾರಣವಾಗಿದೆ. ಸೇಫ್ ಸಿಟಿ ಟೆಂಡರ್ ಕುರಿತಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಡಿ.ರೂಪಾ, ಹೇಮಂತ್ ನಿಂಬಾಳ್ಕರ್, 1067 ಕೋಟಿ ಟೆಂಡರ್ ನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಈ ಟೆಂಡರ್ ನಲ್ಲಿ ಅನೇಕ ಅಕ್ರಮಗಳು ನಡೆದಿವೆ.ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಲಾಗುತ್ತಿದೆ. ನಿಂಬಾಳ್ಕರ್ ಸರ್ಕಾರದ ದಾರಿ ತಪ್ಪಿಸುವ ಕೆಲಸ …
Read More »ಸಾವಿರ ಕಷ್ಟಗಳು ಬಂದ್ರೂ ಎದುರಿಸುವ ಶಕ್ತಿ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ಯುವಕ ಪ್ರತ್ಯಕ್ಷ ಸಾಕ್ಷಿ
ಬೆಳಗಾವಿ: ಸಾಧಿಸುವ ಗುರಿಯೊಂದಿದ್ದರೆ ಸಾಕು, ಸಾವಿರ ಕಷ್ಟಗಳು ಬಂದ್ರೂ ಎದುರಿಸುವ ಶಕ್ತಿ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ಯುವಕ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ಕುಟುಂಬದ ಕಷ್ಟಗಳನ್ನೇ ತನ್ನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಫಾಸ್ಟೆಸ್ಟ್ ಸ್ಕೇಟಿಂಗ್‌ನಲ್ಲಿ ಗಿನ್ನೆಸ್ ದಾಖಲೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹೌದು, ನಗರದ ಮಾಳಮಾರುತಿ ನಿವಾಸಿ ಸಂಜಯ ಹಾಗೂ ಸುಜಾತಾ ನವಲೆ ದಂಪತಿ ಪುತ್ರ ಅಭಿಷೇಕ ನವಲೆ 12.85 ಸೆಕೆಂಡ್ಸ್ನಲ್ಲಿ 100 ಮೀಟರ್ ಕ್ರಮಿಸುವ ಮೂಲಕ …
Read More »