ಬೆಂಗಳೂರು, ಫೆ.7: ರಾಜ್ಯ ಸರಕಾರ ಜಾರಿಗೆ ತಂದಿರುವ ವಿವಾದಿತ ಗೋಹತ್ಯೆ ನಿಷೇಧ ಕಾನೂನು ಪ್ರಶ್ನಿಸಿ ಜಮೀಯ್ಯತುಲ್ ಖುರೇಶ್ ಬೀಫ್ ಮರ್ಚೆಂಟ್ ಅಸೋಸಿಯೇಶನ್ ವತಿಯಿಂದ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠ ನಮ್ಮ ಅರ್ಜಿಯನ್ನು ಫೆ.26ರಂದು ವಿಚಾರಣೆ ನಡೆಸಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಖಾಸಿಮ್ ಇಜಾಝ್ ಖುರೇಶಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ನಮ್ಮ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡನೆ …
Read More »ಒಬ್ಬ ಅಪರಾಧಿಗೆ ಗಲ್ಲುಶಿಕ್ಷೆಯನ್ನು ಪ್ರಕಟಿಸಿದ ನಂತರ ಪೆನ್ ನಿಬ್ಬನ್ನು ಮುರಿಯುವುದೇಕೆ ಗೊತ್ತೇ
ನ್ಯಾಯಾಂಗದಲ್ಲಿ ನಮಗೆ ಗೊತ್ತಿರದ ಹಲವಾರು ವಿಷಯಗಳು ಅಡಕವಾಗಿರುತ್ತವೆ. ಅದರಲ್ಲಿ ಒಂದು ಈ ಪದ್ಧತಿಯು ಆಗಿದೆ ಕೋರ್ಟನಲ್ಲಿ ಅಪರಾಧಿಯ ವಿರುದ್ಧ ವಾದ ವಿವಾದ ಇದ್ದಮೇಲೆ ನ್ಯಾಯಾಧೀಶರು ಶಿಕ್ಷೆಯ ತೀರ್ಪನ್ನು ಪಟ್ಟಿ ಮಾಡುತ್ತಾರೆ. ಆದರೆ ಆ ಶಿಕ್ಷೆಯ ಗಲ್ಲುಶಿಕ್ಷೆ ಆಗಿದ್ದರೆ ಅಪರಾಧಿಯನ್ನು ಗಲ್ಲಿಗೇರಿಸಲು ಹೇಳಿದ ನ್ಯಾಯಾಧೀಶರು ವ್ಯಕ್ತಿಯನ್ನು ಗಲ್ಲಿಗೇರಿಸಲು ಹೇಳುವ ನ್ಯಾಯಾಧೀಶರು ವ್ಯಕ್ತಿಯ ಪೇಪರ್ ಗಳ ಮೇಲೆ ತಮ್ಮ ಸಹಿಯನ್ನು ಮಾಡಿ ಪೆನ್ನಿನ ನಿಬ್ಬನ್ನು ಮುರಿಯುತ್ತಾರೆ. ಅದು ಯಾಕೆ ಗೊತ್ತಾ? ಅದನ್ನ ಈ …
Read More »ಜೀವನಾಂಶ ಕುರಿತಾಗಿ ಹೈಕೋರ್ಟ್ ಮಹತ್ವದ ಆದೇಶ: ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಅರ್ಹಳು
ಬೆಂಗಳೂರು: ಪತ್ನಿ ವಿದ್ಯಾವಂತಳಾಗಿದ್ದಾಳೆ ಎನ್ನುವ ಕಾರಣಕ್ಕೆ ಜೀವನಾಂಶ ನಿರಾಕರಿಸುವಂತಿಲ್ಲ. ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗ ಸಿಗುತ್ತದೆ ಎಂಬ ಖಾತ್ರಿಯಿಲ್ಲ. ಹಾಗಾಗಿ ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಅರ್ಹರಾಗಿರುತ್ತಾರೆ. ಅವರು ವಿದ್ಯಾರ್ಹತೆ ಹೊಂದಿದ ಮಾತ್ರಕ್ಕೆ ಜೀವನ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಕೌಟುಂಬಿಕ ಪ್ರಕರಣವೊಂದರಲ್ಲಿ ಮೈಸೂರು ಕೌಟುಂಬಿಕ ನ್ಯಾಯಾಲಯ, ಪತಿ-ಪತ್ನಿಯ ವಿವಾಹವನ್ನು ಅನೂರ್ಜಿತಗೊಳಿಸಿದ್ದು, ಪತ್ನಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿ …
Read More »ರೈಲು ಹತ್ತುವಾಗ ಆಯ ತಪ್ಪಿದ ಅಂಗವಿಕಲನ ರಕ್ಷಿಸಿದ ರೈಲ್ವೆ ಸಿಬ್ಬಂದಿ: ಸಿಸಿಟಿವಿ ವೀಡಿಯೋ ವೈರಲ್
ಚಲಿಸುತ್ತಿದ್ದ ರೈಲು ಹತ್ತುವಾಗ ಜಾರಿ ಬಿದ್ದ ವಿಕಲಚೇತನನ್ನು ಸಮಯಪ್ರಜ್ಞೆ ತೋರಿದ ರೈಲ್ವೆ ಸುರಕ್ಷತಾ ಪಡೆ (ಆರ್ ಪಿಎಫ್) ಸಿಬ್ಬಂದಿ ರಕ್ಷಿಸಿದ ಘಟನೆ ಮಹಾರಾಷ್ಟ್ರದ ಪನ್ವಾಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಫೆಬ್ರವರಿ 5ರಂದು ಈ ಘಟನೆ ನಡೆದಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಕಲಚೇತನ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತಲು …
Read More »ಫೇಸ್ಬುಕ್ ಸುಂದರಿಯಗಾಗಿ ಪತ್ನಿಯ ಚಿನ್ನವನ್ನೂ ಮಾರಿ ₹11 ಲಕ್ಷ ಪಂಗನಾಮ ಹಾಕಿಸಿಕೊಂಡ ಪತಿಮಹಾಶಯ!
ಮುಂಬೈ: ಸಾಮಾಜಿಕ ಜಾಲತಾಣದ ವಂಚನೆ ಕುರಿತಂತೆ ನಿತ್ಯವೂ ಹತ್ತಾರು ವರದಿಗಳು ಬರುತ್ತಲೇ ಇವೆ. ಬಹುತೇಕ ಎಲ್ಲಾ ಘಟನೆಗಳಲ್ಲಿಯೂ ಒಂದೇ ತೆರನಾಗಿ ಮೋಸದ ಜಾಲ ಮಾಡಿರುವ ಬಗ್ಗೆ ವರದಿಯಾಗುತ್ತಲೇ ಇವೆ. ಮೊದಲು ಹಣ ಕೇಳುವುದು ನಂತರ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಕಾಲ್ ಮಾಡುವುದು, ನಂತರ ಮೋಸ ಮಾಡಿ ಪಂಗನಾಮ ಹಾಕುವುದು… ಹೀಗೆ ವರದಿ ಬಂದರೂ ಯುವತಿಯರ ವಿಷಯ ಬಂದಾಗ ಗಂಡಸರಿಗೆ ಯಾಕೋ ಈ ಸುದ್ದಿಗಳು ನೆನಪಾಗುವುದೇ ಇಲ್ಲದಂತೆ ಕಾಣಿಸುತ್ತದೆ! ಅಂಥದ್ದೇ ಒಂದು …
Read More »ಸರಕಾರಿ ಉದ್ಯೋಗಕ್ಕೆ ಕಾದವರಿಗೆ ಗುಡ್ ನ್ಯೂಸ್
ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ನೀಡಿದೆ. ಪ್ರಸ್ತಾವಿತ ನೇಮಕ ಪ್ರಕ್ರಿಯೆ ಪುನರಾರಂಭಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಕರೊನಾ ಕಾರಣಕ್ಕೆ ತಲೆದೂರಿದ ಆರ್ಥಿಕ ಸಂಕಷ್ಟ ಸರಿದೂಗಿಸಿ ಸುಸ್ಥಿತಿಗೆ ತರಲೆಂದು 2020-21 ನೇ ಸಾಲಿನ ಎಲ್ಲ ನೇರ ನೇಮಕ ಹುದ್ದೆಗಳ ಭರ್ತಿ ತಡೆಹಿಡಿಯಲಾಗಿತ್ತು. ಅನುಕಂಪದ ಆಧಾರದ ಮೇಲೆ ನೇಮಕವಾದ ಅಭ್ಯರ್ಥಿಗಳಿಗೆ ಷರತ್ತುಬದ್ಧ ನೇಮಕ ನೀಡಲು ಅಸ್ತು …
Read More »ಎಣ್ಣೆ ಪ್ರಿಯರಿಗೆ ಬಿಗ್ ಶಾಕ್..!
ನವದೆಹಲಿ : ಕೇಂದ್ರ ಸರ್ಕಾರವು ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದು, ಈ ಬಾರಿಯ ಬಜೆಟ್ ನಲ್ಲಿ ಮದ್ಯ ದರ ಹೆಚ್ಚಿಸಲಾಗಿದೆ. ಬರೋಬ್ಬರಿ ಶೇ. 100 ರಷ್ಟು ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಎಣ್ಣೆ ಪ್ರಿಯರಿಗೆ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಮದ್ಯದ ಮೇಲೆ ಕೃಷಿ ಸೆಸ್ ವಿಧಿಸಿದ್ದು, ಮದ್ಯದ ಮೇಲೆ ಶೇ. 100 ರಷ್ಟು ತೆರಿಗೆ ವಿಧಿಸಿದೆ. ಸದ್ಯ ಪಾವತಿ ಮಾಡುತ್ತಿರುವ …
Read More »ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಸುಲಭವಾಗಿ ಹಾಗೂ ಸರಳವಾಗಿ ಅನುಮೋದನೆ: ನಿರಾಣಿ
ಬೆಂಗಳೂರು: ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಸುಲಭವಾಗಿ ಹಾಗೂ ಸರಳವಾಗಿ ಅನುಮೋದನೆ ನೀಡಲು ಸಾಧ್ಯವಾಗುವಂಥ ‘ಏಕಗವಾಕ್ಷಿ’ ಪದ್ಧತಿ ಅಳವಡಿಸಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮುಂದಾಗಿದ್ದಾರೆ. ಆ ಮೂಲಕ, ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ದಿಮೆದಾರರಿಗೆ ಸುಲಭವಾಗಿ ಹಾಗೂ ಸುಲಲಿತವಾಗಿ ವ್ಯಾಪಾರ, ವಹಿವಾಟು ನಡೆಸಲು ಅನುಕೂಲವಾಗುವಂತೆ ಈ ಪದ್ಧತಿ ಜಾರಿಗೊಳಿಸಲು ತೀರ್ಮಾನಿಸಿದ್ದಾರೆ. ಇಲಾಖೆಯ ಅಧಿಕಾರಿಗಳು, ಉದ್ಯಮಿಗಳ ಜೊತೆ ಸಭೆ ನಡೆಸಿದ ಸಚಿವರು, ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳ …
Read More »ಇನ್ಮೂಂದೆ ಪಡಿತರ ಧಾನ್ಯಗಳನ್ನು ಪಡೆಯುವವರಿಗೆ ಗುಡ್ ನ್ಯೂಸ್ ಏನು.?
ನವದೆಹಲಿ : ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಇದೀಗ 31 ರಾಜ್ಯಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಪಡಿತರದಾರರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಗಳಿಗೆ ತೆರಳಿದ್ರೂ, ಪಡಿತರ ಧಾನ್ಯಗಳನ್ನು ಇರುವ ಸ್ಥಳದಲ್ಲಿಯೇ ಪಡೆಯಬಹುದಾಗಿದೆ..! ಈ ಬಗ್ಗೆ ಇಂದು ಕೇಂದ್ರ ಬಜೆಟ್-2021 ಮಂಡಿಸುತ್ತಾ ತಿಳಿಸಿದಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕುಟುಂಬದ ಪ್ರತಿ ಸದಸ್ಯರ ಆಧಾರದ ಮೇಲೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಯಾವುದೇ ಪಡಿತರದಾರರಿಗೂ ತೊಂದರೆಯಾಗದಂತೆ ಈಗಾಗಲೇ ಕೆಲ ರಾಜ್ಯಗಳಲ್ಲಿ …
Read More »ಗೃಹ ಸಚಿವ ಅಮಿತ್ ಶಾ ಧೌಲಿಗಂಗಾ ಪ್ರವಾಹ ಸ್ಥಳಕ್ಕೆ ಭೇಟಿ
ಉತ್ತರಾಖಂಡ: ಧೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ 150ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿದ್ದಾರೆ. ಪೋನ್ ಮೂಲಕ ದುರಂತದ ಮಾಹಿತಿ ಪಡೆದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ವೇಳೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಗೃಹ ಸಚಿವರು, ‘ಉತ್ತರಾಖಂಡದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದ ಕುರಿತು ನಾನು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಅವ್ರ ಬಳಿ ಮಾಹಿತಿ ಪಡೆದುಕೊಂಡಿದ್ದೇನೆ. …
Read More »