ಬೆಂಗಳೂರು (ಜ. 4): ಸರ್ಕಾರದ ಮುದ್ರೆ ಬಳಸಿ ನಕಲಿ AADHAR ಕಾರ್ಡ್, PAN ಕಾರ್ಡ್, ನಕಲಿ ವೋಟರ್ ಐಡಿ ತಯಾರಿಸಿದ್ದ ಖತರ್ನಾಕ್ ಕಳ್ಳರ ತಂಡವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಾವಿರಾರು ನಕಲಿ ಐಡಿ ಕಾರ್ಡ್ಗಳನ್ನು ಬಳಸಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟುಮಾಡಿರುವ ಅನುಮಾನವೂ ವ್ಯಕ್ತವಾಗಿದೆ. ರಾಜಸ್ಥಾನದಿಂದ Bangaloreಗೆ ಬಂದಿದ್ದ ಈ ಗ್ಯಾಂಗ್ ಈಗ ಪೊಲೀಸರ ವಶದಲ್ಲಿದೆ. ಸರ್ಕಾರದ ಮುದ್ರೆಗಳನ್ನು ಬಳಸಿ ಬೃಹತ್ ವಂಚನೆ ಮಾಡುತ್ತಿದ್ದ ಗ್ಯಾಂಗ್ ಈಗ ಪೊಲೀಸರ …
Read More »ರಾತ್ರಿ ರಿಸೆಪ್ಷನ್ಗೆ ಇದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆ; ಛತ್ರದಲ್ಲೇ ವಧುವಿನ ಕೈಹಿಡಿದ ಮತ್ತೋರ್ವ ಯುವಕ
ಚಿಕ್ಕಮಗಳೂರು(ಜ.04): ರಾತ್ರಿ ಆರತಕ್ಷತೆಗೆ ಇದ್ದ ವರ ಬೆಳಗ್ಗೆ ಪ್ರೀತಿಸಿದ ಯುವತಿ ಬೆದರಿಕೆಗೆ ಹೆದರಿ ಮುಹೂರ್ತಕ್ಕೆ ನಾಪತ್ತೆಯಾಗಿ, ಮಧುಮಗಳಾಗಿ ನಿಂತಿದ್ದ ಯುವತಿಯನ್ನ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈ ಹಿಡಿದ ಅಪರೂಪದ ಮದುವೆಗೆ ತರೀಕೆರೆ ಸಾಕ್ಷಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಎಂಬ ಅಣ್ಣತಮ್ಮಂದಿರಿಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೆಣ್ಣಿನೊಂದಿಗೆ ಮದುವೆ ನಿಶ್ಚಯವಾಗಿತ್ತು. ಎರಡು ಕಡೆಯವರು ಒಪ್ಪಿ ಕೂಡ ಮದುವೆ ನಿಶ್ಚಯ ಮಾಡಿದ್ರು. ಅದರಂತೆ …
Read More »ಕೃಷಿ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಯತ್ತ ಹೊರಟ ಹರಿಯಾಣ ರೈತರ ಮೇಲೆ ಅಶ್ರುವಾಯು ದಾಳಿ
ರೆವಾರಿ : ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರಟುಭಟನೆಯಲ್ಲಿ ಭಾಗಿಯಾಗಲು ಸಾಗುತ್ತಿದ್ದ ಹರ್ಯಾಣದ ರೈತರನ್ನು ರವಿವಾರ ಪೊಲೀಸರು ತಡೆದಿದ್ದಾರೆ. ಈ ವೇಳೆ ಘರ್ಷಣೆ ಉಂಟಾಗಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ ಘಟನೆಯೂ ನಡೆಯಿತು. ರೆವಾರಿ- ಅಲ್ವಾರ್ ಗಡಿಯಲ್ಲಿ ಈ ಘರ್ಷಣೆ ನಡೆದಿದ್ದು, ಪೊಲೀಸರ ತಡೆಯನ್ನು ಮುರಿದು ಮುಂದೆ ಹೋಗಲು ಯತ್ನಿಸಿದ್ದ ರೈತರ ಮೇಲೆ ಪೊಲೀಸರು ಕೆಲವು ಸುತ್ತು ಅಶ್ರುವಾಯು ಸಿಡಿದ್ದಾರೆ. ನಂತರ ಪೊಲೀಸರು ರೈತರನ್ನು ಮಾಸನಿ ಎಂಬಲ್ಲಿನ ಮೇಲ್ಸೇತುವೆಯಲ್ಲಿ ತಡೆದಿದ್ದಾರೆ. …
Read More »ಚುನಾವಣೆ ಸೋತವರಿಂದ ಗೆದ್ದವರ ಮೇಲೆ ಹಲ್ಲೆ , ನಿವೃತ್ತ ಶಿಕ್ಷಕ ಸಾವು
ದಾವಣಗೆರೆ : ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಸೋಲು ಗೆಲುವಿನ ಸಂಬಂಧ ನಡೆದ ಮಾರಾಮಾರಿಯಲ್ಲಿ ನಿವೃತ್ತ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮೀನಿಗರಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮೀನಿಗರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಕೃಷ್ಣಪ್ಪ (70) ಮೃತಪಟ್ಟಿದ್ದು, ಮೃತರ ಮಗ ವಿರೇಂದ್ರ ಎಂಬುವರಿಗೆ ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ …
Read More »ನೌಕರರೇ, 7ನೇ ವೇತನ ಆಯೋಗದಲ್ಲಿ ನಿಮ್ಗೆ ಅನುಕೂಲವಾಗೋದೇನು ಗೊತ್ತಾ? ಇಲ್ಲಿದೆ ನೋಡಿ ಹೊಸ ಸುಧಾರಣೆಗಳ ವಿವರ..!
ನವದೆಹಲಿ: 7ನೇ ವೇತನ ಆಯೋಗದ (7ನೇ ವೇತನ) ಅನ್ವಯ ನೌಕರರಿಗೆ ಲಾಭದಾಯಕವಾಗಲಿದೆ ಎಂದು ಕೇಂದ್ರ ಸರ್ಕಾರ ತನ್ನ ಎಲ್ಲ ನೌಕರರಿಗೆ ‘ಅಂಗವಿಕಲ ವೇತನ’ ನೀಡಲು ನಿರ್ಧರಿಸಿದೆ. ಅವರು ಕರ್ತವ್ಯದ ರೇಖೆಯಲ್ಲಿ ಅಂಗವಿಕಲರಾಗಿದ್ದರೆ ಮತ್ತು ಅವರು ಅಂಗವೈಕಲ್ಯ ಹೊಂದಿದ್ದರೂ ಸೇವೆಯಲ್ಲಿಯೇ ಉಳಿದಿದ್ದರೆ ಅಂತಹವರಿಗೆ ಈ ನಿಯಮ ಅನ್ವಯವಾಗಲಿದೆ. ನಿಯಮಗಳನ್ನು ಸರಳೀಕರಿಸಿ, ತಾರತಮ್ಯದ ಕಲಮುಗಳನ್ನ ಸರಿಪಡಿಸುವ ಸರಕಾರದ ಪ್ರಯತ್ನಗಳಿಗೆ ಇದು ಅನುಗುಣವಾಗಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ (ಜ.1) ಕೇಂದ್ರ ಮೀಸಲು …
Read More »ಕಿತ್ತೂರು ಸಮೀಪದ ಕುಲ್ಲಹಳ್ಳಿ ಜಂಗಲ್ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ತಲೆಮರಿಸಿಕೊಂಡಿದ್ದ ಬೇಟೆಗಾರನ ಮನೆಗೆ ಇಂದು ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ದಾಳಿ
ಬೆಳಗಾವಿ- ಕಿತ್ತೂರು ಸಮೀಪದ ಕುಲ್ಲಹಳ್ಳಿ ಜಂಗಲ್ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ತಲೆಮರಿಸಿಕೊಂಡಿದ್ದ ಬೇಟೆಗಾರನ ಮನೆಗೆ ಇಂದು ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿಯ ಅಶೋಕ ನಗರದಲ್ಲಿ ಮೆಹಮೂದ್ ಅಲಿ ಖಾನ್ (50) ವರ್ಷದ ಬೇಟೆಗಾರನ ಮನೆಗೆ ದಾಳಿ ಮಾಡಿರುವ ಅರಣ್ಯ ಅಧಿಕಾರಿಗಳು ಬೇಟೆ ಆಡಲು ಬಳಿಸುವ ರೈಫಲ್,ಜೀವಂತ ಗುಂಡು,ಚಾಕೂ,ಚೂರಿ,ಟಾರ್ಚ್..ವಾಕಿ ಟಾಕಿ,ಮತ್ತು ದುರ್ಬಿನ್,ಮತ್ತು ವಾಹನಕ್ಕೆ ಅಳವಡಿಸುವ ಸರ್ಚ ಲೈಟ್ ,ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಇಂದು ಬೆಳಗ್ಗೆ ಬೇಟೆಗಾರನ ಮನೆಯಲ್ಲೇ …
Read More »ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 16,505 ಹೊಸ ಕೊರೋನಾ ಪ್ರಕರಣಗಳು ಪತ್ತೆ
ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 16,505 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.03 ಕೋಟಿ ಏರಿಕೆಯಾಗಿದೆ. ದೇಶದಲ್ಲಿ ಸದ್ಯ ಒಟ್ಟು ಸೋಂಕಿತರ ಸಂಖ್ಯೆ 1,03,40,470ಕ್ಕೆ ಏರಿಕೆಯಾಗಿದ್ದು, ಇನ್ನು ನಿನ್ನೆ 19,557 ಸೋಂಕಿತರು ಗುಣಮುಖರಾಗಿದ್ದಾರೆ. ಆ ಮೂಲಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 99,46,867ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 2,43,953 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 214 …
Read More »ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ರಾಜ್ಯಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಸದ್ಯಕ್ಕೆ ಶಿಕ್ಷಕರ ವರ್ಗಾವಣೆಗೆ ಬ್ರೇಕ್ ಹಾಕಲಾಗಿದೆ.
ಬೆಂಗಳೂರು : ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ರಾಜ್ಯಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಸದ್ಯಕ್ಕೆ ಶಿಕ್ಷಕರ ವರ್ಗಾವಣೆಗೆ ಬ್ರೇಕ್ ಹಾಕಲಾಗಿದೆ. ವರ್ಗಾವಣೆಯಲ್ಲಿ ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ವರ್ಗಾವಣೆಗೆ ಬ್ರೇಕ್ ಹಾಕಲಾಗಿದೆ. 2019-20 ನೇ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ಒಳಗಾದ ಶಿಕ್ಷಕರಿಗೆ ಪ್ರಸಿದ್ಧ ವರ್ಗಾವಣೆ ಸಂದರ್ಭದಲ್ಲಿ ವಿಶೇಷ ಆದ್ಯತೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಕೆಎಟಿ ಆದೇಶ ನೀಡಿದೆ. ವರ್ಗಾವಣೆಗೆ 75 ಸಾವಿರ ಶಿಕ್ಷಕರು ಅರ್ಜಿ …
Read More »ಕೃಷಿ ಮಸೂದೆ ರದ್ದು ಮಾಡುವವರೆಗೆ ಪ್ರತಿಭಟನೆ ಮುಂದುವರಿಯಲಿದೆ : ಇಂದು ಮತ್ತೆ ರೈತ ಸಂಘದ ಜೊತೆ ಕೇಂದ್ರದ ಮಾತುಕತೆ
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಕೃಷಿ ಮಸೂದೆ ರದ್ಧಾಗುವವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ರೈತರು ಕಿಡಿ ಕಾರಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿರುವ ನೂತನ ಕೃಷಿ ಕಾನೂನುಗಳ ರದ್ದತಿಗಾಗಿ ದೆಹಲಿಯ ಗಡಿಯಲ್ಲಿ ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದು,ಈಗಾಗಲೇ 6 ಸುತ್ತಿನ ಮಾತುಕತೆ ನಡೆಸಿದರೂ ಕೂಡ ಕೇಂದ್ರದಿಂದ ನಿರೀಕ್ಷಿತ ಫಲ ಸಿಕ್ಕಿಲ್ಲ. ರೈತರು ಕಳೆದ 39 ದಿನಗಳಿಂದ ಪ್ರತಿಭಟನೆ …
Read More »ಸಿಲಿಕಾನ್ ಸಿಟಿ ಜನರಿಗೆ ಭರ್ಜರಿ ಸಿಹಿಸುದ್ದಿ ವಿಮಾನ ನಿಲ್ದಾಣಕ್ಕೆ ಹೋಗಲು ಇನ್ಮುಂದೆ ಕೇವಲ 10-15 ರೂ. ನೀಡಿ ಪ್ರಯಾಣಿಸಬಹುದು.
ಬೆಂಗಳೂರು : ಸಿಲಿಕಾನ್ ಸಿಟಿ ಜನರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಮೆಜೆಸ್ಟಿಕ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಇನ್ಮುಂದೆ ಕೇವಲ 10-15 ರೂ. ನೀಡಿ ಪ್ರಯಾಣಿಸಬಹುದು. ಇಂದಿನಿಂದ ಮೆಜೆಸ್ಟಿಕ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಶೇಷ ರೈಲು ಸೇವೆ ಲಭ್ಯವಾಗಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯಿರುವ ದೇವನಹಳ್ಳಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗಿರುವ ಜೊತೆಗೆ ನಗರದಿಂದ ನಿಲ್ದಾಣಕ್ಕೆ ಓಡಾಡುವ ರೈಲು ಸಂಖ್ಯೆಯನ್ನು ಹೆಚ್ಚಿಸಲಾಗಿದೆ.ಪ್ರಯಾಣ ದರ ಕೇವಲ 10-15 …
Read More »