ಬೆಳಗಾವಿ: ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ್ ಬಾಕಿ ಬಿಲ್ ನೀಡದ ಇರುವ ಹಿನ್ನೆಲೆಯಲ್ಲಿ ರೈತನೊಬ್ಬ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. https://www.facebook.com/105350550949710/posts/202232631261501/?sfnsn=wiwspmo ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದ ಶಿವಾನಂದ ಗೋಹಾರ್ ತನ್ನ ಸಮಾಧಿಯನ್ನು ತೋಡಿಕೊಂಡ ರೈತ ಎನ್ನಲಾಗುತ್ತಿದೆ. ಮಲಪ್ರಭಾ ಸಕ್ಕರೆ ಕಾರ್ಖಾನೆಗೆ 114 ಟನ್ ಕಬ್ಬಿನ, 85 ಸಾವಿರ ರೂಪಾಯಿ ಬಾಕಿ ಬಿಲ್ ಬರಬೇಕು . ಕಾರ್ಖಾನೆಗೆ ಈಗಾಗಲೇ 20 …
Read More »ಮೈಸೂರು ದಸರಾ ಉತ್ಸವ ತುಂಬಾ ಸರಳವಾಗಿ ನಡೆಯಲಿದೆ
ಮೈಸೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ ತುಂಬಾ ಸರಳವಾಗಿ ನಡೆಯಲಿದ್ದು, ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಮಾತ್ರ ಸೀಮಿತವಾಗಿರಲಿದೆ ಎಂಬುದು ಗೊತ್ತಿರುವ ವಿಚಾರ. ಸಂಪ್ರದಾಯದಂತೆ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ನಡೆಯಲಿದ್ದು, ಇದೀಗ ದಸರಾ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗಿದೆ. ಅಕ್ಟೋಬರ್ 17ರಿಂದ ಶರನ್ನವರಾತ್ರಿ ಆರಂಭವಾಗಲಿದ್ದು, ಅಂದು ಬೆಳಿಗ್ಗೆ 6:15ರಿಂದ 6:30ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತದೆ. 7:45ರಿಂದ 8:15ರ ಶುಭ …
Read More »ವಿದ್ಯಾಗಮ ಯೋಜನೆಯಡಿ ಪಾಠ ಕಲಿಯುತ್ತಿದ್ದ 23 ವಿದ್ಯಾರ್ಥಿಗಳಿಗೆ ಕೊರೊನಾ ಸೊಂಕು ತಗಲಿದೆ
ಬೆಳಗಾವಿ: ವಿದ್ಯಾಗಮ ಯೋಜನೆಯಡಿ ಪಾಠ ಕಲಿಯುತ್ತಿದ್ದ 23 ವಿದ್ಯಾರ್ಥಿಗಳಿಗೆ ಕೊರೊನಾ ಸೊಂಕು ತಗಲಿದೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ.ತಿಮ್ಮಾಪುರದಲ್ಲಿರುವ ಎರಡನೇ, ಮೂರನೇ, ನಾಲ್ಕನೇ ತರಗತಿಯ 23 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಆಗಿರೋದು ಕಂಡುಬಂದಿದೆ. ಅಕ್ಟೋಬರ್ 4ರಂದು ಸಾಮೂಹಿಕ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಈ ವೇಳೆ ವಿದ್ಯಾಗಮ ಯೋಜನೆಯಡಿ ಪಾಠ ಕಲಿಯುತ್ತಿದ್ದ 23 ಜನರಿಗೆ ಕೊರೊನಾ ಇರೋದು ಧೃಡಪಟ್ಟಿದೆ. Dailyhunt
Read More »ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ತಳವಾರ ಸಮಾಜದವರು ಪ್ರತಿಭಟನೆ
ಅಥಣಿ: ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ‘ತಳವಾರ ಸಮಾಜ ಎಸ್‌ಟಿ ಹೋರಾಟ ಸಮಿತಿ’ಯವರು ಇಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು. ತಲೆಗೆ ಕಪ್ಪುಪಟ್ಟಿ ಕಟ್ಟಿಕೊಂಡು, ಕಪ್ಪು ಬಾವುಟಗಳನ್ನು ಹಿಡಿದು ಪಾಲ್ಗೊಂಡಿದ್ದ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡ ವಿವಿಧ ಗ್ರಾಮಗಳ ನೂರಾರು ಜನರು ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು. ತಹಶೀಲ್ದಾರ್, ಶಾಸಕರು, ಉಪ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು, …
Read More »ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಮುಹೂರ್ತ ಫಿಕ್ಸ್ : ಚುನಾವಣೆಗಾಗಿ ಬಿ ಜೆ ಪಿ 2 ಗುಂಪು
ಬೆಳಗಾವಿ: ರಾಜ್ಯ ರಾಜಕಾರಣವನ್ನೇ ಅಲುಗಾಡಿಸಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ನೆನಪು ಮಾಸುವ ಮುನ್ನವೇ ಮತ್ತೆ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ. ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ರಮೇಶ ಕತ್ತಿ ಮತ್ತೊಮ್ಮೆ ಬ್ಯಾಂಕ್ ಮೇಲೆ ಹಿಡಿತ ಸಾಧಿಸಿ ಅಧ್ಯಕ್ಷರಾಗಲು ಪ್ರಯತ್ನ ನಡೆಸಿದ್ದಾರೆ. ಅವರಿಗೆ ಉಮೇಶ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲವಾಗಿ …
Read More »ಲಾಕ್‌ಡೌನ್ ಎಫೆಕ್ಟ್: ಪೊಲೀಸ್ ಠಾಣೆಯಲ್ಲಿ ಕೇಳೋರೇ ಇಲ್ಲ ಮಾಲೀಕರಿಲ್ಲದ ವಾಹನಗಳನ್ನು!
ಕೊರೋನಾ ವೈರಸ್ ಇನ್ನೂ ತನ್ನ ಕಬಂದಬಾಹುವನ್ನ ಚಾಚುತ್ತಲೇ ಇದೆ. ಮಾರ್ಚ್ ತಿಂಗಳ ಕೊನೆಯಲ್ಲಿ ಪ್ರಾರಂಭವಾದ ವೈರಸ್ ಅಕ್ಟೋಬರ್ ಬಂದರೂ ಕಡಿಮೆಯಾಗದೆ, ಇನ್ನೂ ಹೆಚ್ಚುತ್ತಲೆ ಇದೆ. ಮಾರ್ಚ್ ತಿಂಗಳಲ್ಲಿ ಕೊರೋನಾ ಹರಡುವಿಕೆಯ ಸರಪಳಿ ತುಂಡರಿಸಲು ಕೇಂದ್ರ ಸರ್ಕಾರ ಲಾಕ್‌ಡೌನ್ ನಿಯಮಾವಳಿಯನ್ನ ಜಾರಿಗೆ ತಂದಿತ್ತು. ಜನರು ಯಾರೂ ಅನಗತ್ಯವಾಗಿ ಓಡಾಡಬಾರದು, ಊರಿನಿಂದ ಊರಿಗೆ ಅಷ್ಟೆ ಅಲ್ಲ ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ ಹೋಗುವುದನ್ನು ಸಹ ನಿಷೇಧಿಸಿತ್ತು. ಅನಗತ್ಯ ಓಡಾಡಿದವರ ವಾಹನಗಳನ್ನ ಸಹ ಪೊಲೀಸ್ …
Read More »ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಪಡೆಯುತ್ತಿದ್ದ ಇಬ್ಬರನ್ನು ವಶ
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಪಡೆಯುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಪಾಲಿಕೆ ಆಯುಕ್ತೆ ಸಹಾಯಕ ಮಲ್ಲಿಕಾರ್ಜುನ ಮತ್ತು ಡಿ.ದರ್ಜೆ ನೌಕರ ಭಾಷ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಫಾರಂ 2. ನೀಡಲು ಐವತ್ತು ಸಾವಿರ ರುಪಾಯಿ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಕಾರ್ಯಾಚರಣೆ ನಡೆದಿದೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದವರ ವಿಚಾರಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ.
Read More »ಶಾರ್ಜಾಗೆ ವಾಪಸ್ಸಾಗಿರುವುದು ರಾಜಸ್ತಾನ ರಾಯಲ್ಸ್ಗೆ ನೆರವಾಗಲಿದೆಯೇ?
ಗೆಲ್ಲುವುದನ್ನು ಮರೆತಂತಿರುವ ರಾಜಸ್ತಾನ ರಾಯಲ್ಸ್ ಮತ್ತು ಗೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂಡಿಯನ್ ಪ್ರಿ ಮೀಯರ್ ಲೀಗ್ 13 ನೇ ಅವೃತಿಯ 23 ನೇ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿಂ ದು ನಡೆಯಲಿದೆ . ರಾಯಲ್ಸ್ಗೆ ಇವತ್ತು ಅನುಕೂಲವಾಗಬಹುದಾದಸಂಗತಿಯೆಂದರೆ ಅದು ಶಾರ್ಜಾಗೆ ವಾಪಸ್ಸಾಗಿರುವುದು. ನಿಮಗೆ ಗೊತ್ತಿರುವ ಹಾಗೆ, ಈ ಮೈದಾನದಲ್ಲಿ ತಾನಾಡಿದ ಮೊದಲೆರಡು ಪಂದ್ಯಗಳನ್ನು ಸ್ಟಿವೆನ್ ಸ್ಮಿತ್ನ ಅವರ ತಂಡ ಸುಲಭವಾಗಿ ಗೆದ್ದಿತ್ತು. ಆದರೆ. ನಂತರ, ದುಬೈ …
Read More »22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಕೊರೊನಾದಿಂದ ಮತ್ತೆ ತಾಯಿ ಮಡಲಿಗೆ ಸೇರಿರುವ ಘಟನೆ
ಗದಗ: ಸುಮಾರು 22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಕೊರೊನಾದಿಂದ ಮತ್ತೆ ತಾಯಿ ಮಡಲಿಗೆ ಸೇರಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ನಡೆದಿದೆ. ಗೋಗೇರಿ ಗ್ರಾಮದ ಮಲಿಕ್‌ಸಾಬ ಬಾಗವಾನ ಎಂಬುವವರ ಮೂರನೇ ಮಗ ಆದಂ ಮಲಿಕ್‌ಸಾಬ ಬಾಗವಾನ ಮರಳಿ ಮನೆಗೆ ಬಂದಿದ್ದಾರೆ. ಮಲಿಕ್‌ಸಾಬ ಹಾಗೂ ಬಡಿಮಾ ದಂಪತಿಗೆ ಒಟ್ಟು ನಾಲ್ವರು ಪುತ್ರರು, ಆರು ಜನ ಪುತ್ರಿಯರಿದ್ದಾರೆ. ಮನೆಯಲ್ಲಿನ ಆರ್ಥಿಕ ಸಮಸ್ಯೆ ಹಿನ್ನೆಲೆ ಆದಂ ಹೈಸ್ಕೂಲ್ ಮುಗಿಸಿದ ನಂತರ …
Read More »ವಿದ್ಯಾಗಮ ಯೋಜನೆಯಿಂದ ಸೋಂಕು ಬಂದಿದ್ದರೆ ಅದನ್ನು ನಿಲ್ಲಿಸೋಣ
ಬೆಂಗಳೂರು: ವಿದ್ಯಾಗಮ ಯೋಜನೆಯಿಂದ ಸೋಂಕು ಬಂದಿದ್ದರೆ ಅದನ್ನು ನಿಲ್ಲಿಸೋಣ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮಗೆ ಮಕ್ಕಳು, ಶಿಕ್ಷಕರ ಆರೋಗ್ಯ ಮುಖ್ಯವಾಗಿದೆ ಎಂದು ಆತಂಕದಲ್ಲಿದ್ದ ಶಿಕ್ಷಕರು, ಪೋಷಕರಿಗೆ ಸಮಾಧಾನದ ಸುದ್ದಿ ನೀಡಿದ್ದಾರೆ. ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ವಿದ್ಯಾಗಮ ಯೋಜನೆ ಕುರಿತಾಗಿ ಸರ್ಕಾರ ಚಿಂತನೆ ನಡೆಸಲಿದೆ. ತಜ್ಞರ ಸಮಿತಿ ವರದಿ …
Read More »