Breaking News

ದೇಶದ ಅಭಿವೃದ್ಧಿಗೆ ಖಾಸಗೀಕರಣ ಅನಿವಾರ್ಯ: ನಿರ್ಮಲಾ ಸೀತಾರಾಮನ್

ಬೆಂಗಳೂರು: ‘ಉತ್ತಮವಾಗಿ ಕಾರ್ಯ ನಿರ್ವಹಿಸದೇ ಇರುವ ಸಾರ್ವಜನಿಕ ಸಂಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಮಾಡಲು ಮತ್ತು ದೇಶದ ಅಭಿವೃದ್ಧಿ ಸಾಧಿಸಲು ಖಾಸಗೀಕರಣ ಅನಿವಾರ್ಯ’ ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು. ಬಿಜೆಪಿ ಆರ್ಥಿಕ ಪ್ರಕೋಷ್ಠವು ಕೇಂದ್ರ ಬಜೆಟ್‌ ಕುರಿತು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಭಾರತವೆಂದರೆ ಮೂಲಸೌಕರ್ಯಗಳ ಕೊರತೆ ಇರುವ ದೇಶ ಎಂಬ ಮಾತಿತ್ತು. ದೀನದಯಾಳ್‌ ಉಪಾಧ್ಯಾಯರ ‘ಅಂತ್ಯೋದಯ’ ಚಿಂತನೆಗಳೊಂದಿಗೆ ಇಂತಹ ಮಾತುಗಳನ್ನು ತೊಡೆದು ಹಾಕಲು …

Read More »

ಮೀಸಲಾತಿ ದೊರಕದೇ ಪೀಠಕ್ಕೆ ಮರಳುವುದಿಲ್ಲ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ‘ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಅಡಿಯಲ್ಲಿ ಮೀಸಲಾತಿ ಸೌಲಭ್ಯ ಸಿಗುವವರೆಗೂ ಪೀಠಕ್ಕೆ ಮರಳುವುದಿಲ್ಲ’ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದರು. ಮೀಸಲಾತಿಗಾಗಿ ಆಗ್ರಹಿಸಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಮಗೆ ನಿಗಮ, ಮಂಡಳಿ ಅಥವಾ ಅನುದಾನ ಬೇಡ. ‘2ಎ’ ಮೀಸಲಾತಿಯೇ ನಮ್ಮ ಬೇಡಿಕೆ. ಅದು ದೊರೆಯುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದರು. ಮೀಸಲಾತಿಗಾಗಿ 2012ರಿಂದಲೂ …

Read More »

ವಿದ್ಯಾರ್ಥಿಗಳು ಬಸ್‌ಪಾಸ್‌ ಇದ್ದರೂ ಹಣ ನೀಡಿ ಟಿಕೆಟ್‌ ಖರೀದಿಸಬೇಕಾದ ಪರಿಸ್ಥಿತಿ

ಚಿಂತಾಮಣಿ: ಪ್ರಸಿದ್ಧ ವಾಣಿಜ್ಯ ಮತ್ತು ಶೈಕ್ಷಣಿಕ ಕ್ಷೇತ್ರ ಚಿಂತಾಮಣಿಯ ಗ್ರಾಮೀಣ ಮತ್ತು ಪಟ್ಟಣ ವಿದ್ಯಾರ್ಥಿಗಳು ಬಸ್‌ಪಾಸ್‌ ಇದ್ದರೂ ಹಣ ನೀಡಿ ಟಿಕೆಟ್‌ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯಿಂದ ತಾಲೂಕಿನ ಬಸ್‌ ನಿಲ್ದಾಣಕ್ಕೆಬರುವ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಬಳಿ ಪಾಸ್‌ ಇದ್ದರೂ ಹಣ ಪಡೆದು ಟಿಕೆಟ್‌ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಅಳಲೇನು?: ತಾಲೂಕಿನಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರಿಗೆವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ತೆರಳುತ್ತಾರೆ.ಆದರೆ, ಬಸ್‌ ನಿಲ್ದಾಣದಲ್ಲಿ …

Read More »

ಫಾಸ್ಟ್ಯಾಗ್ ಎಂಬುದು ಖಾಸಗಿ ಕಂಪನಿಗಳ ಕ್ರಿಮಿನಲ್ ‍ಷಡ್ಯಂತ್ರ..!

ಬೆಂಗಳೂರು, ಫೆಬ್ರವರಿ 22: ಫಾಸ್ಟ್ಯಾಗ್ ಎಂಬುದು ಖಾಸಗಿ ಕಂಪನಿಗಳ ಕ್ರಿಮಿನಲ್ ‍ಷಡ್ಯಂತ್ರ..! ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಟಟ್ಟು ದಂಡ ಎಂಬುದು ದಂಡದ ಹೆಸರಿನಲ್ಲಿ ಮಾಡುತ್ತಿರುವ ದಂಧೆ..! ವಾಸ್ತವದಲ್ಲಿ ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ದಂಡ ಹಾಕಲಿಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ! ಸಂವಿಧಾನದತ್ತವಾಗಿ ಪ್ರಜೆಗಳಿಗೆ ಸಿಕ್ಕಿರುವ ಮೂಲಭೂತ ಹಕ್ಕುಗಳ ದಮನ. ಇದರ ವಿರುದ್ಧ ಜನರು ಧ್ವನಿಯೆತ್ತದಿದ್ದರೆ ಭವಿಷ್ಯದ ದಿನಗಳು ಇನ್ನೂ ಕರಾಳವಾಗಲಿವೆ..! ಫಾಸ್ಟ್ಯಾಗ್ ಕಡ್ಡಾಯ, ಫಾಸ್ಟ್ಯಾಗ್ ಇಲ್ಲದಿದ್ದರೆ ದಂಡ ವಿಧಿಸುತ್ತಿರುವ ಖಾಸಗಿ ಕಂಪನಿಗಳ ನೀತಿ, …

Read More »

ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಬರೋ ಸವಾರರ ಬಳಿ ದುಪ್ಪಟ್ಟು ಹಣ ವಸೂಲಿ, ಗುತ್ತಿಗೆದಾರನ ಆಟಟೋಪಕ್ಕೆ ಇಲ್ವಾ ಬ್ರೇಕ್?

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ರಾಜಧಾನಿಯ ಜನ ಸೇರಿದಂತೆ ಸಾವಿರಾರು ಪ್ರವಾಸಿಗರು ನಿತ್ಯ ಲಗ್ಗೆ ಇಡ್ತಾರೆ. ಹೀಗೆ ಗಿರಿಧಾಮಕ್ಕೆ ಬರುವ ಬೈಕ್ ಸವಾರ ಪ್ರವಾಸಿಗಳಿಂದ ಗಿರಿಧಾಮದಲ್ಲಿ ಅಕ್ರಮ ವಸೂಲಿ ನಡೆಯುತ್ತೆ ಅನ್ನೋ ಮಾಹಿತಿ ಟಿವಿ9ಗೆ ಸಿಕ್ಕಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಗುತ್ತಿಗೆದಾರ ಸತ್ಯನಾರಾಯಣ, ಹೆಲ್ಮೆಟ್ ಸಂಗ್ರಹ ನೆಪದಲ್ಲಿ ಬೈಕ್ ಸವಾರರಿಂದ ನಿಗದಿಗಿಂತ ಐದಾರು ಪಟ್ಟು ಹೆಚ್ಚು ಹಣ ವಸೂಲಿ ಮಾಡ್ತಿರುವ ದೃಶ್ಯ …

Read More »

ಅಪಘಾತ ತಡೆಗೆ ಕೆಎಸ್ ಆರ್ ಟಿಸಿ ಹೊಸ ಕ್ರಮ

ಬೆಂಗಳೂರು : ಅಪಘಾತ ತಡೆಗೆ ಕೆಎಸ್ ಆರ್ ಟಿಸಿ ಹೊಸ ಕ್ರಮವೊಂದನ್ನು ಕೈಗೊಂಡಿದ್ದು, ದೂರ ಮಾರ್ಗಗಳಿಗೆ ಬಸ್ ಚಲಾಯಿಸುವ ಕೆಎಸ್ ಆರ್ ಟಿಸಿ ಚಾಲಕರು ಮಾರ್ಗಮಧ್ಯೆ ವಿಶ್ರಾಂತಿ ಪಡೆಯಲು ತನಿಖಾ ಬಿಂದುಗಳನ್ನು ಸ್ಥಾಪಿಸಲಾಗಿದೆ. ದೂರದ ಮಾರ್ಗಗಳಿಗೆ ಸಂಚರಿಸುವ ವಾಹನಗಳ ಚಾಲಕರಿಗೆ ವಿಶ್ರಾಂತಿಯಿಲ್ಲದ ಕಾರಣ ರಾತ್ರಿ ವೇಳೆ ಅಪಘಾತ ಸಂಭವಿಸುತ್ತಿದೆ. ಹೀಗಾಗಿ ಚಾಲಕರು ಮಾರ್ಗಮಧ್ಯೆ 15 ನಿಮಿಷ ಕಡ್ಡಾಯವಾಗಿ ವಿಶ್ರಾಂತಿ ಪಡೆಯಲು ಕೆಎಸ್‌ಆರ್ ಟಿಸಿ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ. ಕೆಎಸ್‌ಆರ್ ಟಿಸಿ …

Read More »

ಮಠಾಧಿಪತಿಗಳೇ ಪಾದಯಾತ್ರೆ ಮಾಡಿ ಎಂದು ಹೇಳಿ ಜಾತಿಯ ವಿಷ ಬೀಜ ಬಿತ್ತಿದ್ದಾರೆ : ವಾಟಾಳ್ ನಾಗರಾಜ್

ಮೈಸೂರು : ರಾಜ್ಯದಲ್ಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಮಠಾಧೀಶರ ವಿರುದ್ಧ ವಾಟಾಳ್ ನಾಗರಾಜ್ ಗರಂ ಆಗಿದ್ದು, ಇಂದು ಮೈಸೂರಿನ ಹಾಡಿರ್ಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಾಧಿಪತಿಗಳು ಮೀಸಲಾತಿಗಾಗಿ ಹೋರಾಟ ಮಾಡಿ ರಾಜ್ಯವನ್ನು ಜಾತಿಗೆ ಸೀಮಿತಗೊಳಿಸಬಾರದು. ಮಠಾಧಿಪತಿಗಳು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪಾಲಿಸಿ ಮಠದಲ್ಲಿಯೇ ಇರಿ. ಮೀಸಲಾತಿ ಹಾಗೂ ಜಾತಿಗಾಗಿ ಹೋರಾಟಕ್ಕೆ ಬಂದರೆ ನಿಮ್ಮ ಶಕ್ತಿ ಕುಂದುತ್ತದೆ ಎಂದು ಮನವಿ ಮಾಡಿಕೊಂಡರು. …

Read More »

ಹೈಕಮಾಂಡ್ ಬುಲಾವ್: ರಾತ್ರೋರಾತ್ರಿ ದೆಹಲಿಗೆ ತೆರಳಿದ ಯತ್ನಾಳ್

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು ದಿಢೀರ್ ದೆಹಲಿಗೆ ತೆರಳಿದ್ದಾರೆ. ರಾತ್ರಿಯೇ ಬಸವನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ತೆರಳಿದ್ದಾರೆ. ಪದೇ ಪದೇ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಯತ್ನಾಳ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೂಡಲೇ ದೆಹಲಿಗೆ ಆಗಮಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆ ನೀಡಿದ್ದಾರೆ. ತುರ್ತಾಗಿ …

Read More »

ಪತಂಜಲಿ ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಸಿಕ್ಕಿದೆ ಎಂಬುದು ಸುಳ್ಳು

ಪತಂಜಲಿ ಸಂಸ್ಥೆಯು ಕೊರೊನಾ ವೈರಸ್​ ಸೋಂಕು ನಿಗ್ರಹಕ್ಕೆಂದು ಹೊರತಂದಿರುವ ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ ಎಂಬ ಪೋಸ್ಟ್​ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಯುರ್ವೇದ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ವಿಶ್ವ ಆರೋಗ್ಯ ಸಂಸ್ಥೆ ಕೊರೊನಿಲ್​ಗೆ ಮಾನ್ಯತೆ ನೀಡಿದೆ ಎಂದು ವೈರಲ್ ಪೋಸ್ಟ್ ನಲ್ಲಿ ಹೇಳಲಾಗಿದೆ. ಕೋವಿಡ್-19 ತಡೆಯಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊರೊನಿಲ್ ಸಹಕಾರಿ ಎಂದು ಪತಂಜಲಿ ಸಂಸ್ಥೆ ಹೇಳಿತ್ತು. ಇದಕ್ಕೆ ಆಯುಷ್ …

Read More »

ಜನರು ಮಾಸ್ಕ್ ಧರಿಸದಿದ್ದರೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ :ಎಚ್ಚರಿಕೆ ನೀಡಿದ ಮಹಾ ಸಿಎಂ

ಮುಂಬೈ : ಜನರು ಮಾಸ್ಕ್ ಧರಿಸದಿದ್ದರೆ ರಾಜ್ಯದಲ್ಲಿ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ. ಅಗತ್ಯ ಇರುವ ಕಡೆಗಳಲ್ಲಿ ನಾಳೆ ಸಂಜೆಯಿಂದಲೇ ಲಾಕ್ ಡೌನ್ ಮಾಡಲಾಗುವುದು ಎಂದು ತಿಳಿಸಿದರು. ‘ಲಾಕ್ ಡೌನ್ ಇದ್ದಕ್ಕಿದ್ದಂತೆ ಪ್ರಾರಂಭವಾಗುವುದಿಲ್ಲ. ನಾವು ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ಹಾಕುತ್ತಿಲ್ಲ. ನಾಳೆ ಸಂಜೆಯಿಂದಲೇ ಅಗತ್ಯವಿರುವೆಡೆ ಲಾಕ್ …

Read More »