Breaking News

ಹೆಲಿಕಾಪ್ಟರ್, ವಿಮಾನದ ಇಂಧನದಲ್ಲೂ ಕಬ್ಬಿನ ಉಪ ಉತ್ಪನ್ನ ”ಎಥೆನಾಲ್”

ಬೆಂಗಳೂರು: ಕಬ್ಬಿನ ಉಪ ಉತ್ಪನ್ನಗಳಲ್ಲಿ ಒಂದಾದ ”ಎಥೆನಾಲ್” ಅನ್ನು ಇನ್ನು ಮುಂದೆ ವಿಮಾನಗಳು ಮತ್ತು ಹೆಲಿಕಾಪ್ಟರ್​​ನಲ್ಲಿ ಬಳಸಲಾಗುವ ಇಂಧನಕ್ಕೂ ಮಿಶ್ರಣ ಮಾಡಲಾಗುತ್ತದೆ ಎಂದು ದಕ್ಷಿಣ ಭಾರತ ಸಕ್ಕರೆ ಕೈಗಾರಿಕೆಗಳ ಸಂಘ (ಸಿಸ್ಮಾ) ದ ಅಧ್ಯಕ್ಷರಾಗಿರುವ ಕೈಗಾರಿಕೋದ್ಯಮಿ ಮುರುಗೇಶ ನಿರಾಣಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಎಥೆನಾಲ್ ಅನ್ನು ವಿಮಾನ ಮತ್ತು ಹೆಲಿಕಾಪ್ಟರ್​ನಲ್ಲಿ ಬಳಸಲಾಗುವ ಇಂಧನಕ್ಕೆ ಶೇ.5 ರಷ್ಟು ಮಿಶ್ರಣ ಮಾಡಲು ಪರವಾನಗಿ ನೀಡಿದೆ. ಈ ಬೆಳವಣಿಗೆಯಿಂದ ಎಥೆನಾಲ್ ದರವು ಹೆಚ್ಚಾಗಿ ಕಬ್ಬು ಬೆಳೆಯುವ …

Read More »

ಮಾನವ ಕಲ್ಯಾಣಕ್ಕೆ ಮಹಾವೀರ, ಪಾರ್ಶ್ವನಾಥರ ವಿಚಾರಗಳು ಮಾರ್ಗದರ್ಶಿ: ಸ್ಪೀಕರ್ ಓಂ ಬಿರ್ಲಾ

ಹುಬ್ಬಳ್ಳಿ: “ಮಾನವ ಕಲ್ಯಾಣಕ್ಕೆ ಮಹಾವೀರ, ಪಾರ್ಶ್ವನಾಥರ ವಿಚಾರಗಳು ಮಾರ್ಗದರ್ಶಿಯಾಗಿವೆ. ಅಹಿಂಸಾ ತತ್ವ, ಸೇವಾ ತ್ಯಾಗ ವಿಶ್ವಕ್ಕೆ ಮಾದರಿಯಾಗಿದ್ದು, ಮನುಷ್ಯ ಜೀವನಕ್ಕೆ ಮಹಾವೀರರು ಆದರ್ಶಪ್ರಾಯವಾಗಿದ್ದಾರೆ” ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದರು. ಹುಬ್ಬಳ್ಳಿಯ ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಜೈನ ಸಂತ, ಆಚಾರ್ಯ ಮುನಿಗಳು ಮಹಾವೀರರ ವಿಚಾರಗಳನ್ನು ಜನತೆಗೆ ಮುಟ್ಟಿಸುತ್ತಿದ್ದಾರೆ. ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿ ಬಂದಾಗ ಸಂತರ ಬಳಿ ಹೋಗಲು ಪಾರ್ಶ್ವನಾಥರು ಹೇಳಿದ್ದರು. ಅಹಿಂಸಾ …

Read More »

ಬಿಜೆಪಿ ನಾಯಕ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಮನಸ್ತಾಪ ಶಮನಕ್ಕೆ ಪ್ರಹ್ಲಾದ್​ ಜೋಶಿ ಅವರಿಗೆ ಜವಾಬ್ದಾರಿವಹಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಒಂದೆಡೆ ಬಣ ಬಡಿದಾಟ, ಮತ್ತೊಂದೆಡೆ ಬಿಜೆಪಿ ನಾಯಕರಾದ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ಮನಸ್ತಾಪದ ಸ್ಫೋಟದ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಇಬ್ಬರ ನಡುವೆ ಸಂಧಾನ ನಡೆಸಲು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ವರದಿಯಾಗಿದೆ. ದೆಹಲಿಗೆ ಇಂದು ತೆರಳಿದ ವಿಜಯೇಂದ್ರ ಅವರು, ಪಕ್ಷದ ಕೆಲ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಪ್ರಸಕ್ತ …

Read More »

ಬೆಂಗಳೂರು: ಆಂಬ್ಯುಲೆನ್ಸ್​​​​ಗೆ ದಾರಿ ಬಿಡದ ಆಟೋ ಚಾಲಕನ ಬಂಧನ, ಬಿಡುಗಡೆ

ಬೆಂಗಳೂರು: ರಸ್ತೆಯಲ್ಲಿ ಸಂಚರಿಸುವಾಗ ನಿರಂತರವಾಗಿ ಹಾರ್ನ್ ಮಾಡಿ ಸಂದೇಶ ರವಾನಿಸಿದರೂ ಆಂಬ್ಯುಲೆನ್ಸ್​​ಗೆ ದಾರಿ ಬಿಡದೆ, ಮೊಂಡಾಟ ತೋರಿದ್ದ ಆರೋಪಿ ಆಟೋ ಚಾಲಕನನ್ನು ಬೆಳ್ಳಂದೂರು ಸಂಚಾರ ಠಾಣೆ ಪೊಲೀಸರು ಬಂಧಿಸಿ, ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ. ಪರಮೇಶ್ ಎಂಬಾತನೆ ಬಂಧಿತನಾಗಿದ್ದ ಆಟೋ ಚಾಲಕ. ಕೂಡ್ಲುನಲ್ಲಿ ವಾಸವಾಗಿರುವ ಈತ ನೆರೆಮನೆಯ ವ್ಯಕ್ತಿಯೋರ್ವರಿಂದ ಆಟೋ ಪಡೆದು ಜ.21ರಂದು ಹರಳೂರು ಮಾರ್ಗವಾಗಿ ಚಲಾಯಿಸುತ್ತಿದ್ದ. ಈ ವೇಳೆ ಹಿಂಬದಿಯಿಂದ ಸೈರನ್ ಮೊಳಗಿಸಿ ಆಂಬ್ಯುಲೆನ್ಸ್ ಬಂದರೂ ಚಾಲಕ ದಾರಿ ಬಿಟ್ಟಿರಲಿಲ್ಲ. …

Read More »

ರಾಯಚೂರು: ಜೆಡಿಎಸ್ ಶಾಸಕಿ ಮನೆಗೆ ನುಗ್ಗಿ ಆತಂಕ ಹುಟ್ಟಿಸಿದ ಅಪರಿಚಿತರು

ರಾಯಚೂರು: ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಮನೆಗೆ ಅಪರಿಚಿತರು ನುಗ್ಗಿ ಆತಂಕ ಹುಟ್ಟಿರುವ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ಶಾಸಕರ ನಿವಾಸದಲ್ಲಿ 2025 ಜ. 23ರಂದು ಘಟನೆ ಜರುಗಿದೆ. ಶಾಸಕರ ಮನೆಯ ಕೂಗಳತೆ ದೂರದಲ್ಲಿ ಬೈಕ್ ನಿಲ್ಲಿಸಿದ ಅಪರಿಚಿತರು ಮನೆಯ ಹಿಂಬಾಗಿಲಿನಿಂದ ನುಗ್ಗಿದ್ದಾರೆ. ಈ ವೇಳೆ ಅಕ್ಕಪಕ್ಕದವರು ಕೂಗಿದಾಗ ಅಪರಿಚಿತರು ಪರಾರಿಯಾಗಿದ್ದಾರೆ. ಘಟನೆ ಬಳಿಕ ನಿನ್ನೆ ದೇವದುರ್ಗ ಪೊಲೀಸರಿಗೆ ಘಟನೆಯ …

Read More »

ಅರಮನೆ ಮೈದಾನದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರಿಯ ವಾಣಿಜ್ಯ, ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ರೈತರು ದೇಶಿ ತಳಿಗಳ ಮಹತ್ವದ ಕುರಿತು ರೈತರಿಗೆ ತಿಳಿಸುತ್ತಿದ್ದಾರೆ.

ಬೆಂಗಳೂರು : ಹೈಬ್ರಿಡ್ ಅಬ್ಬರಕ್ಕೆ ಸಿಲುಕಿ ದೇಸಿ ತಳಿಗಳು ಕಣ್ಮರೆಯಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದಿಂದಲೂ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅದೇ ರೀತಿ ರೈತರು ಸಹ ದೇಸಿ ತಳಿಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕಿನ ಗುಂಡ್ಯಾನಟ್ಟಿ ಗ್ರಾಮದ ರೈತ ಶಂಕರ ಹನುಮಂತ ಲಂಗಟಿ ಹಾಗೂ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಅವರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರಿಯ …

Read More »

ಜನವರಿ 26ರಂದ 31ರವರೆಗೆ ಜಾತ್ರೆ ಮಹೋತ್ಸವ

ಮೈಸೂರು: ದಕ್ಷಿಣ ಕರ್ನಾಟಕದ ಹೆಸರಾಂತ ಸುತ್ತೂರು ಜಾತ್ರೆಗೆ ದಿನಗಣನೆ ಆರಂಭವಾಗಿದೆ. ವೈವಿಧ್ಯತೆಗಳಿಂದ ಕೂಡಿರುವ ಸುತ್ತೂರು ಜಾತ್ರೆ ‌ಗ್ರಾಮೀಣ ಸೂಗಡಿನ ಅದ್ಧೂರಿ ಹಾಗೂ ಸಂಭ್ರಮದ ಜಾತ್ರೆಯಾಗಿದೆ. ಈ ಬಾರಿ ಜನವರಿ 26ರಂದ 31ರವರೆಗೆ ಜಾತ್ರೆ ಮಹೋತ್ಸವ ನಡೆಯಲಿದ್ದು, ಈ ವೈಭಯ ಜಾತ್ರೆಯ ಹಿನ್ನೆಲೆ ಏನು? ಇಲ್ಲಿದೆ ಸ್ಟೋರಿ.. ಮೈಸೂರಿನ ನಂಜನಗೂಡು ಕಪಿಲಾ ನದಿತೀರದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಳೆ ಮೈಸೂರು ಭಾಗದಲ್ಲಿ ಶ್ರೀ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ …

Read More »

ಎಸ್​ಸಿ-ಎಸ್​ಟಿ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ, ಅದನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ನೀಡಿದೆ.

ಬೆಂಗಳೂರು: ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ವೊಬ್ಬರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ (ಎಸ್​ಸಿ-ಎಸ್​ಟಿ) ಯಡಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ತಮ್ಮ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿ ಹೂಡಿರುವ ಪ್ರಕರಣ ರದ್ದು ಕೋರಿ ಬೆಂಗಳೂರಿನ ಗಿರಿನಗರದ ಕೆ.ಎಸ್‌.ವಿಶ್ವಕಿರಣ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಇದು ದುರ್ಬಲರ ರಕ್ಷಣೆಗಾಗಿ …

Read More »

ಫೈನಾನ್ಸ್​​ನವರ ಜತೆ ಮಾತಾಡಿ ಮನೆ ವಾಪಸ್​​ ಕೊಡಿಸಿದ ಸಚಿವೆ

ಬೆಳಗಾವಿ : ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಸಾಲ ತುಂಬದ ಹಿನ್ನೆಲೆ ಮನೆಗೆ ಬೀಗ ಜಡಿದು ಬಾಣಂತಿ, ಹಸುಗೂಸು ಮತ್ತು ಮನೆಯವರನ್ನೆಲ್ಲ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೊರ ಹಾಕಿದ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಆ ಕುಟುಂಬಕ್ಕೆ ವಾಪಸ್​ ಮನೆಯನ್ನು ಹಸ್ತಾಂತರಿಸಲಾಗಿದೆ. ತಾರಿಹಾಳ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಗಣಪತಿ ರಾಮಚಂದ್ರ ಲೋಹಾರ್ ಅವರ ಮನೆ ಜಪ್ತಿ ಪಡಿಸಿಕೊಂಡಿದ್ದ ಫೈನಾನ್ಸ್ …

Read More »

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದೇ ದಾವಣಗೆರೆಯಲ್ಲಿ 14 ಹೆಣ್ಣು ಮಗು ಜನನ

ದಾವಣಗೆರೆ: ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ. ಭಾರತದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಶಿಕ್ಷಣ, ಪೋಷಣೆ, ಬಾಲ್ಯವಿವಾಹ, ಕಾನೂನು ಹಕ್ಕುಗಳು ಮತ್ತು ವೈದ್ಯಕೀಯ ಆರೈಕೆ, ರಕ್ಷಣೆ, ಗೌರವದಂತಹ ಸಮಸ್ಯೆಗಳ ಜಾಗೃತಿಯನ್ನು ಉತ್ತೇಜಿಸುವುದೇ ಹೆಣ್ಣು ಮಕ್ಕಳ ದಿನದ ಉದ್ದೇಶ. ಇಂತಹ ಸಂಭ್ರಮದ ದಿನದಂದೇ ದಾವಣಗೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 14 ಹೆಣ್ಣುಮಕ್ಕಳ ಜನನವಾಗಿದ್ದು, ಆಸ್ಪತ್ರೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಜ. 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಶುಭ …

Read More »