ಕಲಬುರಗಿ: ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದಿದ್ದಲ್ಲದೆ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊನೆಗೆ ಶವವನ್ನು ಗುಂಡಿಯೊಂದಕ್ಕೆ ಹಾಕಿ ಹೋಗಿದ್ದಾರೆ. ಕಲಬುರಗಿ ನಗರದ ದುಬೈ ಕಾಲನಿ ನಿವಾಸಿ ವೀರೇಶ್ ಬೀಮಳ್ಳಿ (28) ಕೊಲೆಯಾದ ಯುವಕ. ನಗರದ ಸೂಪರ್ ಮಾರ್ಕೆಟ್ನ ಬಾಂಡೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೀರೇಶ್, ನಿನ್ನೆ ಮುಂಜಾನೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದರೆ ಸಂಜೆ ಮನೆಗೆ ಮರಳಿರಲಿಲ್ಲ. ನಿನ್ನೆ ಮಧ್ಯಾಹ್ನದಿಂದಲೇ ಆತ ನಾಪತ್ತೆಯಾಗಿದ್ದ ಎನ್ನಲಾಗಿದ್ದು, ಚೌಕ್ ಠಾಣಾ ಪೊಲೀಸರಿಗೆ …
Read More »ಬಾಲಕಿಯ ಮನೆಯ ಮುಂದೆ ಚುಡಾಯಿಸಿದ ಪ್ರಕರಣಕ್ಕೆ ತಂದೆ ಮಗ ಸೇರಿ ಮೂವರಿಗೆ ಜೈಲು ಶಿಕ್ಷೆ
ಚಾಮರಾಜನಗರ: ಅಪ್ರಾಪ್ತ ಶಾಲಾ ಬಾಲಕಿಯನ್ನು ಹಿಂಬಾಲಿಸಿ ಬಾಲಕಿಯ ಮನೆಯ ಮುಂದೆ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮಗ ಸೇರಿ ಮೂವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್‌ಸ್ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಜಿಲ್ಲೆಯ ರಾಮಾಪುರ ಠಾಣಾ ವ್ಯಾಪ್ತಿಯ ಗ್ರಾಮದ ಆನಂದ ಮತ್ತು ನಾಗೇಂದ್ರ ಅವರಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ಆನಂದನ ತಂದೆ ಮಾದಪ್ಪ ಅವರಿಗೆ 1 ವರ್ಷದ ಜೈಲು ಶಿಕ್ಷೆ …
Read More »ಮೋದಿ ಏಳು ಸುತ್ತಿನ ಕೋಟೆ ಕಟ್ಟಿಕೊಂಡು ತನ್ನ ಪಾಡಿಗೆ ತಾನು ದೆಹಲಿಯಲ್ಲಿ ಇದ್ದಾರೆ. ಮೋದಿ ಇಲ್ಲಿಗೆ ಬಂದು ಕೆಲಸ ಮಾಡುತ್ತಾರಾ:. ಸಿದ್ದರಾಮಯ್ಯ
ಬಾಗಲಕೋಟೆ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿದೆ. ಇದು ಶತಃಸಿದ್ದ. ನಾನು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿ ತಾಲೂಕು ಗೋವನಕೊಪ್ಪದಲ್ಲಿ 2 ಕೋಟಿ ವೆಚ್ಚದಲ್ಲಿ ಪ್ರವಾಹದಿಂದ ಹಾನಿಯಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. …
Read More »ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ರಕ್ತದಲ್ಲಿ ಮುಖ್ಯಮಂತ್ರಿಗೆ ಪತ್ರ
ವಿಜಯಪುರ: ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ನೀಡಲು ಸಮಾಜದ ಎರಡು ಪೀಠಗಳ ಜಗದ್ಗುರುಗಳು ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದಾರೆ. ಈ ಹಂತದಲ್ಲೇ ವಿಜಯಪುರ ನಗರದ ಯುವಕನೊಬ್ಬ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದು, ಸಮಾಜದ ಜಗದ್ಗುರುಗಳ ಮೂಲಕ ಸರ್ಕಾರಕ್ಕೆ ರವಾನಿಸಿ ಗಮನ ಸೆಳೆದಿದ್ದಾನೆ. ನಗರದ ಗ್ಯಾಂಗ್‍ಬಾವಡಿ ನಿವಾಸಿ ಮಂಜುನಾಥ ನಿಡೋಣಿ ಎಂಬ ಯುಕನೇ ತಮ್ಮ ರಕ್ತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ …
Read More »ರಾಜ್ಯದ ಪ್ರೌಢಶಾಲೆಗಳಲ್ಲಿ 3473 ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿಗೆ ಅಸ್ತು.!
ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. 3473 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರ ಹುದ್ದೆಗೆ ಶಾಲಾವಾರು ವೃಂದ ಮಂಜೂತಿ ಜಿಲ್ಲಾ ಹಂತದಲ್ಲಿ ನಿಯಮಾನುಸಾರ ಕೈಗೊಳ್ಳಲಾಗಿದೆ. ಎಲ್ಲೆಲ್ಲಿ ಖಾಲಿ ಹುದ್ದೆಗಳು ಇವೆಯೋ ಅಂತಹ ಸ್ಥಳದಲ್ಲಿ ದೈಹಿಕ ಮತ್ತು ವೃತ್ತಿ …
Read More »ಮಾ. 1ರಿಂದ ಎಲ್ಲರಿಗೂ ಶಾಲೆ? 6-8 ನೇರ ತರಗತಿ ಆರಂಭ ಇಂದು ನಿರ್ಧಾರ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ಎಲ್ಲ ತರಗತಿಗಳು ಮಾ. 1ರಿಂದ ಆರಂಭ ವಾಗುವ ಸಾಧ್ಯತೆ ನಿಚ್ಚಳವಾಗಿದೆ. ಈ ಸಂಬಂಧ ಫೆ. 12ರಂದು ಬೆಂಗಳೂರಿನಲ್ಲಿ ನಡೆಯುವ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಟಾಸ್ಕ್ಫೋರ್ಸ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಇದರೊಂದಿಗೆ 6ರಿಂದ 8ರ ವಿದ್ಯಾರ್ಥಿಗಳಿಗೆ ಮಾ. 1ಕ್ಕಿಂತ ಮುನ್ನವೇ ತರಗತಿ ಆರಂಭಿಸಬೇಕೇ ಬೇಡವೇ ಎಂಬುದರ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ. ಪದವಿ, ಪದವಿಪೂರ್ವ, ಎಸೆಸೆಲ್ಸಿ ಮತ್ತು 9ನೇ ವಿದ್ಯಾರ್ಥಿಗಳಿಗೆ ಈಗಾಗಲೇ ನೇರ ತರಗತಿ …
Read More »ತ್ವರಿತವಾಗಿ ಸಾಲ ವಿತರಣೆ ಮಾಡದಿದ್ದರೆ ಕ್ರಮ: ಮುಖ್ಯಮಂತ್ರಿ ಸೂಚನೆ
ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಮತ್ತು ಸ್ವನಿಧಿ ಯೋಜನೆಗಳಡಿ ತ್ವರಿತವಾಗಿ ಸಾಲ ವಿತರಣೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ವಸತಿ ಮತ್ತು ಸ್ವೋದ್ಯೋಗ ಯೋಜನೆಗಳ ಫಲಾನುಭವಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ಗಳು ವಿಳಂಬ ಧೋರಣೆ ತಾಳುತ್ತಿರುವುದು ಸರಿಯಲ್ಲ. ಇದರಿಂದ ಬಡವರಿಗೆ ಸೂರು ಕಲ್ಪಿಸುವ ಉದ್ದೇಶ ಸಕಾಲದಲ್ಲಿ ಅನುಷ್ಠಾನವಾಗದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ …
Read More »ಇನ್ನು ಮುಂದೆ ರೈಲಿನ ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿ
ನವ ದೆಹಲಿ : ಇನ್ನು ಮುಂದೆ ರೈಲಿನ ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಸಚಿವ ಪಿಯೂಶ್ ಗೊಯಲ್ ಹೇಳಿದ್ದಾರೆ. ಮಹಿಳೆಯರ ಸುರಕ್ಷತಾ ಕ್ರಮವಾಗಿ ರೈಲುಗಳಿಗೆ ಹೈ ಟೆಕ್ ಟಚ್ ನೀಡಲಾಗುತ್ತಿದೆ. ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿ ಅಳವಡಿಸುವುದರ ಜೊತೆಗೆ ಟಾಕ್ ಬ್ಯಾಕ್ ಸಿಸ್ಟಮನ್ನು ಕೂಡ ಹಾಕಲಾಗುತ್ತದೆ. ಇಲ್ಲಿಯ ತನಕ 2391 ಹೊಸ ಬೋಗಿ ಮತ್ತು 668 ರೈಲ್ವೆ ನಿಲ್ದಾಣಗಳಲ್ಲಿ …
Read More »EPFO ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್: ಮನೆ ಬಾಗಿಲಲ್ಲೇ ಸಿಗಲಿದೆ ಜೀವನ ಪ್ರಮಾಣ ಪತ್ರ
ಜೀವನ ಪ್ರಮಾಣ ಪತ್ರ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಫೆಬ್ರವರಿ 28ಕ್ಕೆ ವಿಸ್ತರಿಸಿದ್ದು, ಆ ದಿನವೂ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿದಾರರಿಗೆ ಹೆಚ್ಚು ಸಮಯವೇ ಉಳಿದಿಲ್ಲ. ಆದರೆ ಪಿಂಚಣಿದಾರರಿಗೆ ನೆಮ್ಮದಿ ಕೊಡುವ ನಡೆಯೊಂದರಲ್ಲಿ, ಜೀವನ ಪ್ರಮಾಣ ಪತ್ರವನ್ನು (ಡಿಎಲ್‌ಸಿ) ಡಿಜಿಟಲ್ ಆಗಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಇಪಿಎಫ್‌ಓ. ಆಧಾರ್ ಚಾಲಿತ ಬಯೋಮೆಟ್ರಿಕ್ ಅಥೆಂಟಿಕೇಶನ್ ಮೂಲಕ ಡಿಎಲ್‌ಸಿ ಜನರೇಟ್ ಮಾಡಬಹುದಾಗಿದೆ. ಬಯೋಮೆಟ್ರಿಕ್ ಆಧರಿತ ಡಿಜಿಟಲ್ ಸೇವೆಯಾದ ಡಿಎಲ್‌ಸಿ ಬಳಸಿಕೊಂಡು ಕೇಂದ್ರ ಹಾಗೂ ರಾಜ್ಯ …
Read More »ಮಗುವನ್ನು ಅಪಹರಿಸಿದ್ದ ಖತರನಾಕ್ ಗ್ಯಾಂಗ್ ನ್ನು ನಾಲ್ಕೇ ದಿನದಲ್ಲಿ ಪೊಲೀಸರು ಪತ್ತೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ.
ಬೆಳಗಾವಿ – ಅಥಣಿ ತಾಲೂಕಿನ ಸಂಕೋನಟ್ಟಿಯಲ್ಲಿ 2 ವರ್ಷದ ಮಗುವನ್ನು ಅಪಹರಿಸಿದ್ದ ಖತರನಾಕ್ ಗ್ಯಾಂಗ್ ನ್ನು ನಾಲ್ಕೇ ದಿನದಲ್ಲಿ ಪೊಲೀಸರು ಪತ್ತೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಅಪಹರಿಸಿದ ಕಾರಣವೇ ವಿಚಿತ್ರವಾಗಿದೆ. ಸಂಕೋನಟ್ಟಿಯ ಸದಾಶಿವ ಪಾರ್ಕ್ ಹತ್ತಿರ ಜೋಪಡಿಪಟ್ಟಿಯಲ್ಲಿ ವಾಸಿಸುತ್ತಿರುವ ಹುಸೇನವ್ವ ಚಿನ್ನಪ್ಪ ಬಹುರೂಪಿ ಅಲಿಯಾಸ ಬಾದಗಿ ಎನ್ನುವವರ 2 ವರ್ಷದ ಮಗು ಕಾಣೆಯಾಗಿರುವ ಕುರಿತು ಫೆ.6ರಂದು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ …
Read More »