ನೋಡುಗರಿಗೆ ಎದೆ ಝಲ್ ಎನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನ ಕೆಳಗಿದ್ದು, ಉಪಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಲಿಸುತ್ತಿರುವ ರೈಲಿನ ಕೆಳಗೆ ಮಹಿಳೆ ಇರುವುದನ್ನು ನೋಡಿ ಸುತ್ತಲಿನ ಜನ ದಂಗಾಗಿದ್ದಾರೆ. ಹರಿಯಾಣದ ರಥಕ್ನಲ್ಲಿ ಈ ಘಟನೆ ಸಂಭವಿಸಿದೆ. ರೈಲು ಸಿಗ್ನಲ್ಗಾಗಿ ಕಾಯುತ್ತಿರುವಾಗ ಮಹಿಳೆ ಟ್ರೈನ್ ಕೆಳಗಿನಿಂದ ಪಕ್ಕದ ರಸ್ತೆಗೆ ಪಾಸಾಗಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ರೈಲು ಕೂಡಲೇ ಚಲಿಸಿದ್ದು, ಮಹಿಳೆ ಪ್ರಾಣ ರಕ್ಷಣೆಗಾಗಿ ರೈಲು ಹಳಿಯ …
Read More »ಇಂದು ಯಾರಿಗೆ ಒಲಿಯುತ್ತಾರೆ ಅದೃಷ್ಟ ಲಕ್ಷ್ಮಿ?; ಹರಾಜಿನ ಪ್ರಮುಖ ಆಕರ್ಷಣೆಯೇ ಅರ್ಜುನ್ ತೆಂಡುಲ್ಕರ್
ಐಪಿಎಲ್ ಸೀಸನ್ -14ರ ಮಿನಿ ಹರಾಜಿಗೆ, ಚೆನ್ನೈನಲ್ಲಿ ವೇದಿಕೆ ಸಜ್ಜಾಗಿದೆ. ಈಗಾಗಲೇ ಹರಾಜಿಗೆ ತಯಾರಿ ನಡೆಸಿರುವ ಫ್ರಾಂಚೈಸಿಗಳು, ಕೆಲ ಸ್ಟಾರ್ ಆಟಗಾರರ ಜೊತೆ ಫ್ಯೂಚರ್ ಸ್ಟಾರ್ಗಳಿಗೆ ಮಣೆಹಾಕುವ ಲೆಕ್ಕಚಾರದಲ್ಲಿವೆ. ಇನ್ನು ಕೆಲ ಫ್ರಾಂಚೈಸಿಗಳಂತೂ, ದೇಶಿ ಟೂರ್ನಿಗಳಲ್ಲಿ ಕಮಾಲ್ ಮಾಡಿರುವ ಪ್ರತಿಭೆಗಳನ್ನ, ಖರೀದಿಸಲು ಪ್ಲಾನ್ ಮಾಡಿಕೊಂಡಿವೆ. ಅರ್ಜುನ್ ತೆಂಡುಲ್ಕರ್- ಆಲ್ರೌಂಡರ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಪ್ರಮುಖ ಆಕರ್ಷಣೆ, ದಿಗ್ಗಜ ಸಚಿನ್ ತೆಂಡುಲ್ಕರ್ ಸುಪುತ್ರ ಅರ್ಜುನ್ ತೆಂಡುಲ್ಕರ್. ಎಡಗೈ ಪೇಸರ್ ಮತ್ತು …
Read More »ಡೆತ್ ನೋಟಲ್ಲಿ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಬರಬೇಕು ಅಂತಾ ಬರೆದಿದ್ದಾನೆ. !
ಮಂಡ್ಯ : ಡೆತ್ ನೋಟಲ್ಲಿ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಬರಬೇಕು ಅಂತಾ ಬರೆದಿದ್ದಾನೆ. ನನಗೆ ಅಷ್ಟೊಂದು ಪರಿಚಯವಿಲ್ಲ. ಅದರೂ ನನ್ನ ಅಭಿಮಾನಿಯಾಗಿದ್ದಾನೆ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯತ್ವ ಮುಖ್ಯ. ನನಗೆ ಗೊತ್ತಿಲ್ಲದೆ ದೊಡ್ಡ ಅಭಿಮಾನಿಯಾಗಿ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾನೆ. ಅಭಿಮಾನಿ ಆಗಲಿ, ಯಾರೇ ಆಗಲಿ ಅಂತ್ಯಕ್ರಿಯೆಗೆ ಬರಬೇಕು ಅಂತಾ ಬರೆದುಕೊಂಡಿದ್ದಾನೆ. ಅಂತ್ಯಕ್ರಿಯೆಗೆ ಬಂದಿದ್ದೇನೆ ಎಂಬುದಾಗಿ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯ ತಾಲೂಕಿನ ಕೋಡಿದೊಡ್ಡಿಯಲ್ಲಿ ಅಭಿಮಾನಿ ರಾಮಕೃಷ್ಣ …
Read More »ನಟ ರಾಘವೇಂದ್ರ ರಾಜ್ ಕುಮಾರ್ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ಅನಾರೋಗ್ಯದಿಂದ ಫೆಬ್ರವರಿ 16ರಂದು ಸಂಜೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ-ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಅವ್ರು ಸಧ್ಯ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ನಂತ್ರ ಮಾತನಾಡದ ರಾಘಣ್ಣ ‘ಬೆಳಕು ಸಿನಿಮಾದ ಶೂಟಿಂಗ್ನಲ್ಲಿದ್ದೆ. ಆ ಸಮಯದಲ್ಲಿ ಹೃದಯ ಬಡಿತದಲ್ಲಿ ಏರು ಪೇರು ಕಾಣಿಸಿಕೊಳ್ತು. ಆಗಲೇ ಆಸ್ಪತ್ರಗೆ ಬಂದು ಅಡ್ಮಿಟ್ ಆದೆ. ಇದೇ ಆಸ್ಪತ್ರೆಯಲ್ಲಿ ನಾನು ಏಳು ವರ್ಷದ ಹಿಂದೆ ಸ್ಟ್ರೋಕ್ ಆದಾಗಲೂ ಅಡ್ಮಿಟ್ ಆಗಿದ್ದೆ. ಇಲ್ಲಿ ಬಂದು ಆಯಂಜಿಯೋಗ್ರಾಮ್ ಮಾಡಿ …
Read More »ಸಿದ್ದರಾಮಯ್ಯ, ಕುಮಾರಸ್ವಾಮಿ ಕೋತಿಗಳ ರೀತಿ ಹೇಳಿಕೆ ಕೊಡುತ್ತಿದ್ದಾರೆ: ಈಶ್ವರಪ್ಪ
ಶಿವಮೊಗ್ಗ, ಫೆ.17: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಮತ್ತ ಸಿದ್ದರಾಮಯ್ಯ ಅವರು ಕೋತಿಗಳ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಜನಮಾನಸದಿಂದ ದೂರವಾಗುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೋ ಹತ್ಯೆಯಾಗುತ್ತಿವೆ, ಗೋವುಗಳ ಕಳ್ಳತನ ನಡೆಯುತ್ತಿದೆ ಎಂದು ದೂರು ನೀಡಿದರೆ ಗೋರಕ್ಷರ ಮೇಲೆಯೇ ಕ್ರಮ ಜರುಗಿಸಿದರು. ಇದರ ಪರಿಣಾಮವೇ ಕಾಂಗ್ರೆಸ್ ಸರ್ಕಾರ …
Read More »ಮೋದಿ ಶಕ್ತಿ ಕುಗ್ಗಿಸಲು RJD, ಕಾಂಗ್ರೆಸ್ ಗೆ ವಿಜಯೇಂದ್ರ ಹಣ ನೀಡಿದ್ದಾರೆ: ಯತ್ನಾಳ್ ಬಾಂಬ್
ಬೆಂಗಳೂರು: ಬಿಜೆಪಿ ವರಿಷ್ಠರು ನೀಡಿದ್ದ ಶೋಕಾಸ್ ನೋಟಿಸ್ ಗೆ 11 ಪುಟಗಳಷ್ಟು ಉತ್ತರ ನೀಡಿದ್ದೇನೆ. ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ಬಗ್ಗೆ ಬರೆದಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಕುಗ್ಗಿಸಲು ವಿಜಯೇಂದ್ರ ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಿದ್ದಾರೆ. ಅಲ್ಲಿ ಬಿಜೆಪಿ ಸೋಲಿಸಲು ಆರ್ ಜೆಡಿ, ಕಾಂಗ್ರೆಸ್ ಗೆ …
Read More »ಮನೆ ಕಿಟಕಿಯನ್ನೇ ಮುರಿದು ಒಳನುಗ್ಗಿದ ಕಳ್ಳರು ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿ
ಬೆಳಗಾವಿ: ಮನೆ ಕಿಟಕಿಯನ್ನೇ ಮುರಿದು ಒಳನುಗ್ಗಿದ ಕಳ್ಳರು ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ. ಇಲ್ಲಿನ ರಾಣಾಪ್ರತಾಪರಾವ್ ರಸ್ತೆಯಲ್ಲಿರುವ ಅಭಿಜಿತ್ ಸಾಮಂತ ಅವರಿಗೆ ಸೇರಿದ ಮನೆಯಲ್ಲಿ ರಾತ್ರಿ ಮೂರು ಗಂಟೆಗೆ ದರೋಡೆ ನಡೆದಿದೆ. ಮನೆ ಕಿಟಕಿ ಮುರಿದು ಒಳಬಂದ 7 ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾರೆ. ನಾವು ನಿಮಗೆ ಏನೂ ಮಾಡಲ್ಲ ನಮಗೆ ಹಣ, ಒಡವೆ ಕೊಟ್ಟುಬಿಡಿ ಎಂದಿದ್ದಾರೆ. ಅಭಿಜಿತ್ ಪತ್ನಿ ಮಾಂಗಲ್ಯ, …
Read More »ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಉದ್ಯಮಿಗೆ ಧಮ್ಕಿ
ಬೆಳಗಾವಿ: ಕೊಲೆ ಕೇಸ್ ನಲ್ಲಿ ಹಿಂಡಲಗಾ ಜೈಲು ಸೇರಿರುವ ರೌಡಿ ಶೀಟರ್ ಒಬ್ಬ ಮಹಿಳೆಯೋರ್ವರಿಗೆ ಫೋನ್ ಮಾಡಿ ಹಣ ನಿಡುವಂತೆ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಆರೋಪಿ ತೌಸಿಫ್ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಉದ್ಯಮಿಗೆ ಧಮ್ಕಿ ಹಾಕಿ ತನ್ನ ಬೇಲ್ ಗಾಗಿ 3 ಲಕ್ಷ ರೂ ಹಣ ವಸೂಲಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸ್ನೇಹಾ ಹಾಗೂ ತೌಸಿಫ್ …
Read More »ಡಿಕೆಶಿ ಮಗಳ ಮದುವೆ ಆರತಕ್ಷತೆಯಲ್ಲಿ ರಾಹುಲ್, ಪ್ರಿಯಾಂಕಾ; ಗಮನಸೆಳೆದ ಗೋಕಾಕ್ ಸಾಹುಕಾರ್
ರಾಜಕೀಯದಲ್ಲಿ ಯಾರು ಶತ್ರುಗಳಲ್ಲ. ಯಾರು ಮಿತ್ರರಲ್ಲ ಎಂಬುದು ಕೆಲವು ಸಂದರ್ಭದಲ್ಲಿ ಸಾಬೀತಾಗುತ್ತಿರುತ್ತದೆ. ಅದೇ ರೀತಿಯ ಸನ್ನಿವೇಶವೊಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳ ಮದುವೆ ಸಂದರ್ಭದಲ್ಲಿ ನಡೆದಿದೆ. ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಮದುವೆ ಆರತಕ್ಷತೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ. ಈ ಆರತಕ್ಷತೆಯಲ್ಲಿ ಡಿಕೆ ಶಿವಕುಮಾರ್ ಅವರ ರಾಜಕೀಯ ಸ್ನೇಹಿತರ ಸಮಾಗಮವಾಗಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಕೂಡ ಆಗಮಿಸಿ ಶುಭಕೋರಿದ್ದಾರೆ. ಇದರಲ್ಲಿ ಗಮನಸೆಳೆದವರು ಎಂದರೇ …
Read More »ರಾಜ್ಯದ SC, ST ಉದ್ದಿಮೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಸಹಾಯಧನ ಶೇ.50 ರಿಂದ ಶೇ.75ಕ್ಕೆ ಹೆಚ್ಚಳ
ಬೆಂಗಳೂರು : ರಾಜ್ಯದ SC, ST ಉದ್ದಿಮೆದಾರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಸಹಾಯಧನ ಶೇ.50 ರಿಂದ ಶೇ.75ಕ್ಕೆ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ. ಯೆಸ್, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ/ಶೆಡ್ ಗಳನ್ನು ನೀಡುವಲ್ಲಿ ಖಾಲಿ ಇರುವ ಸಹಾಯಧನವನ್ನು ಶೇ.50 ರಿಂದ ಶೇ 75 ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಹೊರಡಿಸಿದ. ಸದರಿ ಆದೇಶದಲ್ಲಿ ವಿಧಿಸಲಾಗಿರುವ ಷರತ್ತು ಮತ್ತು ಕೆಲವು ನಿಬಂಧನೆಗಳನ್ನು ಮಾರ್ಪಡಿಸಿ ಬಗ್ಗೆ ಪಿ …
Read More »