Breaking News

ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗದು: ಸತೀಶ ಜಾರಕಿಹೊಳಿ

ಬೆಳಗಾವಿ: ‘ನನ್ನ ವಿರುದ್ಧ ಯಾರೂ ಷಡ್ಯಂತ್ರ ಮಾಡಲಾಗುವುದಿಲ್ಲ. ಹೀಗಾಗಿ, ಯಮಕನಮರಡಿ ಕ್ಷೇತ್ರದ ಜನರು ಹಾಗೂ ಅಭಿಮಾನಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಅಲ್ಲಿನ ಶಾಸಕ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ, ತಾವು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಜನಾಭಿಪ್ರಾಯ ಆಲಿಸಲು ಶುಕ್ರವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ‘ಹಾಗೊಂದು ವೇಳೆ ಯಾರದರೂ ನನ್ನ ವಿರುದ್ಧ ಷಡ್ಯಂತ್ರ …

Read More »

ಪುದುಚೇರಿಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಏನೇನು ಭರವಸೆ?

ಪುದುಚೇರಿ: ಪುದುಚೇರಿ ವಿಧಾನಸಭೆಗೆ ಬಿಜೆಪಿಯ ಪ್ರಣಾಳಿಕೆ, ‘ಬೆಸ್ಟ್‌ (BEST) ಪುದುಚೇರಿ’ ಅನ್ನು ಶುಕ್ರವಾರ ಇಲ್ಲಿ ಬಿಡುಗಡೆ ಮಾಡಲಾಯಿತು. ಕೆ.ಜಿ. ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ, ಜವಳಿ ಉದ್ದಿಮೆಗಳನ್ನು ಪುನರಾರಂಭಿಸುವುದು, ಜವಳಿ ಪಾರ್ಕ್‌ ಆರಂಭ ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಪುದುಚೇರಿಯನ್ನು ವ್ಯಾಪಾರ (B), ಶಿಕ್ಷಣ (E), ಅಧ್ಯಾತ್ಮ (S) ಹಾಗೂ ಪ್ರವಾಸೋದ್ಯಮ (T) ಕೇಂದ್ರವಾಗಿಸುವ ಭರವಸೆಯನ್ನು ನೀಡಲಾಗಿದೆ. …

Read More »

ಬಿಜೆಪಿ ಟಿಕೆಟ್‌ ಹಂಚಿಕೆ: ತೇಜಸ್ವಿನಿ – ಮಂಗಲಾಗೆ ವಿಭಿನ್ನ ನಿಲುವು

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ‌ ಅಂಗಡಿ ಆವರ ಪತ್ನಿ ಮಂಗಲಾ ಅಂಗಡಿಯವರಿಗೆ ಟಿಕೆಟ್‌ ನೀಡಿದ ವಿಚಾರ ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಕೋವಿಡ್‌ನಿಂದ ಸುರೇಶ‌ ಅಂಗಡಿ ಮೃತಪಟ್ಟ ಕಾರಣ ಉಪಚುನಾವಣೆ ಎದುರಾಗಿದೆ. ಈ ಕ್ಷೇತ್ರವನ್ನು ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯ. ಆದರೆ, ಹಿಂದೆ ದಿವಂಗತ ಎಚ್.ಎನ್‌. ಅನಂತ್‌ ಕುಮಾರ್ ಪತ್ನಿಗೆ ಟಿಕೆಟ್‌ ತಪ್ಪಿಸಿದ್ದು ಎಷ್ಟು ಸರಿ ಎಂಬ ‘ಯಕ್ಷ ಪ್ರಶ್ನೆ’ ಚರ್ಚೆಯ …

Read More »

ಬಿಜೆಪಿ ಟಿಕೆಟ್‌ ಹಂಚಿಕೆಯಲ್ಲಿ ಡೀಲ್‌ : ಖೂಬಾ

ಬೀದರ್‌: ‘ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್‌ ಹಂಚಿಕೆಯಲ್ಲಿ ಡೀಲ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈಗ ನನಗೂ ಈ ಸಂಶಯ ಕಾಡುತ್ತಿದೆ’ ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್‌ಅನ್ನು ಈ ತಾಲ್ಲೂಕು ಹಾಗೂ ಬೀದರ್‌ ಜಿಲ್ಲೆಯವರನ್ನು ಬಿಟ್ಟು ಬೇರೆ ಜಿಲ್ಲೆಯವರಿಗೆ ಕೊಡಲಾಗಿದೆ. ಡೀಲ್‌ ಆರೋಪ ಸತ್ಯವೋ, ಮಿಥ್ಯವೋ …

Read More »

ಸಿಡಿ ಲೇಡಿಯ ಆಡಿಯೋ ವೈರಲ್: ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ!

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಿಡಿ ರಾದ್ದಾಂತ ಪ್ರಕರಣ ಘಳಿಗೆಗೊಂದು ತಿರುವು ತೆಗೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋದಲ್ಲಿ ಇದ್ದಾಳೆ ಎನ್ನಲಾದ ಯುವತಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ಇಂದು ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾಳೆ. ಆಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ನಾಳೆ ಇದಕ್ಕಿಂತ ದೊಡ್ಡ ಬಾಂಬ್ ಇದೆ. ಸಂಜೆ 4-6 ರೊಳಗೆ ಬಿಡುಗಡೆಯಾಗಲಿದೆ …

Read More »

‘CD’ ಪ್ರಕರಣ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ : ಸತೀಶ್ ಜಾರಕಿಹೊಳಿ

ಏ 17 ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಕೈ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಿಡಿ ಪ್ರಕರಣ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಇದೊಂದು ಅವಕಾಶ ನಮಗೆ ಸಿಕ್ಕಿದೆ. ಯಮಕನಮರಡಿ ಕ್ಷೇತ್ರದ ಜನರು ಈಗ ಬೆಂಬಲ ನೀಡಿದ್ದಾರೆ ಎಂದು ಸತೀಶ್ ಹೇಳಿದ್ದಾರೆ,.ಸಿಡಿ ಪ್ರಕರಣ ಪ್ರಸ್ತಾಪದಿಂದ ಲಾಭ ಆಗಲಿದೆ ಎಂದು ಅನಿಸಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಮುಂದಿಟ್ಟುಕೊಂಡು ಚುನಾವಣೆ …

Read More »

ವೈರಲ್ ಆಡಿಯೋ, ಎಫ್‌ಐಆರ್‌ಗೆ ಹೆದರಲ್ಲ ಎಂದ ರಮೇಶ್ ಜಾರಕಿಹೊಳಿ

ಬೆಂಗಳೂರು, ಮಾರ್ಚ್ 26: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಪೂರಕವಾಗಿ ಇಂದು ಆಡಿಯೋ ಸಂಭಾಷಣೆಯೊಂದು ಹೊರ ಬಂದಿದೆ. ಸಿಡಿಯಲ್ಲಿರುವ ಯುವತಿ ತಮ್ಮ ವಕೀಲ ಜಗದೀಶ್ ಕುಮಾರ್ ಮೂಲಕ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ. ಈ ಪ್ರಕರಣದ ಎಲ್ಲಾ ಬೆಳವಣಿಗೆ ಬಗ್ಗೆ ಮೂರು ಬಾರಿ ಮಾಧ್ಯಮಗಳ ಮುಂದೆ ಬಂದ ರಮೇಶ್ ಅವರು ಸಂಜೆ ವೇಳೆಗೆ ಆಡಿಯೋ ಹಾಗೂ …

Read More »

ಬಿ.ಎಸ್.ವೈ ಸಂಪುಟದಲ್ಲಿ ಮಂತ್ರಿಯಾಗಲ್ಲ. ಇದು ನನ್ನ ಭೀಷ್ಮ ಪ್ರತಿಜ್ಞೆ: ಯತ್ನಾಳ್..!

ಬಿಎಸ್ ವೈ ನೇತೃತ್ವದ ಸರ್ಕಾರದ ವಿರುದ್ಧ ಭೀಷ್ಮ ಪ್ರತಿಜ್ಞೆ ಮಾಡಿದ ಯತ್ನಾಳ್..! ತುಮಕೂರು: ಸ್ವಪಕ್ಷದ ವಿರುದ್ಧವೇ ಹೇಳಿಕೆಗಳನ್ನ ನೀಡುತ್ತಾ ಸದಾ ಸುದ್ದಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೊಮ್ಮೆ ಬಿಎಸ್ ವೈ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಪ್ರತಿಜ್ಞೆ ಒಂದನ್ನ ಮಾಡಿದ್ದಾರೆ. ಹೌದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನಾನು ಮಂತ್ರಿಯಾಗಲ್ಲ ಎಂದು ಶಪತ ಮಾಡಿದ್ದಾರೆ ಯತ್ನಾಳ್. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ …

Read More »

ಸಂತ್ರಸ್ತೆ ಎಸ್‌ಐಟಿ ಎದುರು ಹಾಜರಾಗಲಿ: ಸಿದ್ದರಾಮಯ್ಯ ಸಲಹೆ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತ ಯುವತಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಹಾಜರಾಗಿ ತನ್ನ ಹೇಳಿಕೆ ದಾಖಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು. ಶುಕ್ರವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಯುವತಿ ಮರೆಯಾಗಿದ್ದುಕೊಂಡು ವಿಡಿಯೊ ಹೇಳಿಕೆ ಬಿಡುಗಡೆ ಮಾಡುವ ಬದಲಿಗೆ ನೇರವಾಗಿ ಎಸ್‌ಐಟಿ ಎದುರು ಹಾಜರಾಗಲಿ. ಅಲ್ಲಿ …

Read More »

ನಾಳೆ 4-6 ಗಂಟೆವರೆಗೆ ರಮೇಶ್ ಜಾರಕಿಹೊಳಿ ಸಿಡಿಸುವ ಮಹಾ ಬಾಂಬ್ ಮೇಲೆ ಎಲ್ಲರ ಚಿತ್ತ

ಬೆಂಗಳೂರು: ಸಿಡಿ ಲೇಡಿ ಎನ್ನಲಾದ ಯುವತಿ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಗೆ ಒಳ್ಳೆಯದಾಗಲಿ, ಆಡಿಯೋದಲ್ಲಿ ಅವರ ಹೆಸರಿದ್ದ ಮಾತ್ರಕ್ಕೆ ಅವರು ಅಪರಾಧಿಯಲ್ಲ ಎಂದು ಹೇಳಿದ್ದಾರೆ. ಸಿಡಿಯಲ್ಲಿದ್ದ ಯುವತಿ ಆಡಿಯೋ ವೈರಲ್ ಹಿನ್ನೆಲೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ನನ್ನ ಹಳೇ ಸ್ನೇಹಿತ. ಅವರಿಗೆ ಒಳ್ಳೆಯದಾಗಲಿ. ಆಡಿಯೋದಲ್ಲಿ ಹೆಸರಿದ್ದ ಮಾತ್ರಕ್ಕೆ ಅವರು ಆರೋಪಿಯಲ್ಲ. ಅವರು ಕೆಪಿಸಿಸಿ ಅಧ್ಯಕ್ಷ …

Read More »