Breaking News

75 ರೂಪಾಯಿಗೆ ಸಿಗಲಿದೆಯಾ ಕೊರೊನಾ ಲಸಿಕೆ?

ರಷ್ಯಾ ಹೊರತುಪಡಿಸಿದರೆ ಜಗತ್ತಿನ ಬೇರೆ ಯಾವ ದೇಶದಲ್ಲೂ ಕೊರೊನಾಗೆ ಸೂಕ್ತ ಲಸಿಕೆ ಸಿಕ್ಕಿಲ್ಲ. ಭಾರತದಲ್ಲೂ 3 ಪ್ರಮುಖ ಕಂಪನಿಗಳು ಕೊರೊನಾ ಲಸಿಕೆಗೆ ಸಂಶೋಧನೆ ನಡೆಸುತ್ತಿವೆ. ಆದ್ರೆ ಭಾರತದಲ್ಲಿ ಲಸಿಕೆಗೆ ಸಾಮಾನ್ಯ ಜನರು ಎಷ್ಟು ಹಣ ತೆರಬೇಕಾಗುತ್ತೆ, ಲಸಿಕೆ ದುಬಾರಿಯಾಗುತ್ತಾ, ಇಲ್ಲ ಅಗ್ಗವಾಗುತ್ತಾ, ಸರ್ಕಾರವೇ ಖರೀದಿಸಿ ಉಚಿತ ಲಸಿಕೆ ನೀಡುತ್ತಾ ಎನ್ನುವ ಕುತೂಹಲ ಇದ್ದು, ಇದಕ್ಕೆಲ್ಲಾ ಉತ್ತರ ಇಲ್ಲಿದೆ. ಕೊರೊನಾ ಮಹಾಮಾರಿಗೆ ವ್ಯಾಕ್ಸಿನ್ ಇನ್ನೂ ಕನ್ಫರ್ಮ್ ಆಗಿಲ್ಲ. ಸೆರಮ್ ಇನ್ಸ್​ಟಿಟ್ಯೂಟ್ ಆಫ್ …

Read More »

ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗೆ ‘ರೆಡ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು  : ರಾಜ್ಯದಲ್ಲಿ ಮುಂಗಾರಿನ ಆರ್ಭಟ ಉತ್ತರ ಒಳನಾಡಿನ ಜೊತೆಗೆ ಕರಾವಳಿ ಭಾಗಕ್ಕೂ ಆವರಿಸಿದ್ದು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗೆ ‘ರೆಡ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. ಗುಡುಗು ಸಹಿತ ಅತ್ಯಂತ ಹೆಚ್ಚು ಮಳೆ ಸುರಿಯುವುದರಿಂದ ಅ.15ರಂದು ಕರಾವಳಿ ಜಿಲ್ಲೆಗಳು ಹಾಗೂ ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಿಗೆ ‘ರೆಡ್‌ ಅಲರ್ಟ್‌’. ಅತಿ ಹೆಚ್ಚು ಮಳೆ ಸುರಿಯುವ ಸಂಭವ ಇರುವುದರಿಂದ ಧಾರವಾಡ, ಗದಗ, ಕಲಬುರ್ಗಿ ಸೇರಿದಂತೆ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, …

Read More »

ಕೊವಿಡ್-19: ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಸೋಂಕಿತರು

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಇಂದು ಸಾಯಂಕಾಲ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕರ್ನಾಕದಲ್ಲಿ ಇಂದು ಕೊರೊನಾ ಸೋಂಕಿನಿಂದ 75 ಜನ ಮರಣವನ್ನಪ್ಪಿದ್ದಾರೆ ಮತ್ತು ಹೊಸದಾಗಿ 9,265 ಜನರಲ್ಲಿ ಸೋಂಕು ದೃಢಪಟ್ಟಿದೆ . ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,35,371 ಕ್ಕೇರಿದ್ದು ಇದುವರೆಗೆ ಬಲಿಯಾದವರ ಸಂಖ್ಯೆ 10,198 ತಲುಪಿದೆ. ಸೋಂಕಿತರ ಪೈಕಿ 6,11,167 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಮಿಕ್ಕಿದ 1,13,987 ಜನರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ …

Read More »

ಫಿರಂಗಿಪುರ ಬಳಿ ಭೀಕರ ಘಟನೆ: ಬಸ್ ಪಲ್ಟಿ, 20ಕ್ಕೂ ಹೆಚ್ಚು ಜನರಿಗೆ ಗಾಯ

ಹೈದರಾಬಾದ್: ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ದುರಂತ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಫಿರಂಗಿಪುರ ಬಳಿ ನಡೆದಿದೆ. ಚಿರಾಲದಿಂದ ಹೈದರಾಬಾದ್​ಗೆ ಹೊರಟಿತ್ತು ಎನ್ನಲಾದ ಬಸ್ ಚಲಿಸುತ್ತಿರುವಾಗ ಏಕಾಏಕಿ ಪಲ್ಟಿಯಾಗಿದೆ. ಈ ಪರಿಣಾಮ ಇಷ್ಟೆಲ್ಲಾ ಅನಾಹುತಗಳು ಸಂಭವಿಸಿವೆ. ಬಸ್ ಸೀಟುಗಳಲ್ಲಿ ಇಬ್ಬರು ಮಕ್ಕಳು ಸಿಕ್ಕಿ‌ ಹಾಕಿ ಕೊಂಡಿದ್ದರು. ಸದ್ಯ ಅವರನ್ನ ಅಡ್ಡವಾಗಿದ್ದ ರಾಡ್, ಗ್ಲಾಸ್ ಮುರಿದು ರಕ್ಷಣೆ ಮಾಡಲಾಗಿದೆ. ಬಸ್​ನಲ್ಲಿ 30ಕ್ಮೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. …

Read More »

ದಿನಕ್ಕೆ 50 ಕೇಸ್​ನಂತೆ ಟಾರ್ಗೆಟ್: ಸಿಕ್ಕ ಸಿಕ್ಕವರ ಬಳಿ ದಂಡ ವಸೂಲಿ, ಪೊಲೀಸರ ನಡೆಗೆ ಸ್ಥಳೀಯರ ಕಿಡಿ

ನೆಲಮಂಗಲ: ಕೊರೊನಾ ಸೋಂಕು ಹರಡದಂತೆ ತಡೆಯಲು ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡಲು ಸರ್ಕಾರ ನಿರ್ಧರಿಸಿದ್ದು ನಗರ ಪ್ರದೇಶಗಳಲ್ಲಿ 250 ರುಪಾಯಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 100 ರುಪಾಯಿ ದಂಡ ವಸೂಲಿ ಮಾಡಲು ಪೊಲೀಸರಿಗೂ ಸಹ ಸೂಚನೆ ನೀಡಲಾಗಿದೆ. ಆದ್ರೆ ಸೂಚನೆ ನೀಡಿದ ಬೆನ್ನಲ್ಲಿ ಪೊಲೀಸರಿಗೆ ಪ್ರತಿದಿನಕ್ಕೆ 50 ಕೇಸ್ ಮಾಡುವಂತೆ ಟಾರ್ಗೆಟ್ ಸಹ ನೀಡಲಾಗಿದೆ.     ಸರ್ಕಾರದ ದಂಡಕ್ಕೆ ಜನ ಭಯಭೀತರಾಗಿದ್ದು, ಮಾಸ್ಕ್ ಹಾಕಿಕೊಂಡು ಓಡಾಡುವವರ ಸಂಖ್ಯೆ …

Read More »

ಕಲಬುರಗಿ ಮಹಾಮಳೆ: ಪ್ರವಾಹದಲ್ಲಿ ಸಿಲುಕಿದ್ದ 6 ಶಾಲಾ ಸಿಬ್ಬಂದಿ ರಕ್ಷಣೆ..

ಕಲಬುರಗಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಕಷ್ಟ ಪಡುತ್ತಿದೆ. ಪ್ರವಾಹಕ್ಕೆ ಸಿಲುಕಿ ನರಳುತ್ತಿದೆ. ಕಾಗಿಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಶಾಲೆ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಸೇಡಂ ತಾಲೂಕಿನ ಮಳಖೇಡ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ಜನ ಸಿಬ್ಬಂದಿ ಸಿಲುಕಿದ್ದರು. ಅವರನ್ನು NDRF ತಂಡ ರಕ್ಷಿಸಿದೆ. ನಿನ್ನೆ ಬೆಳಗ್ಗೆ ಶಾಲೆಗೆ ಕಾಗಿಣಾ ನದಿಯ ನೀರು ನುಗ್ಗಿ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದರು. ವಸತಿ ಶಾಲೆಯಿಂದ …

Read More »

ಕೊರೊನಾ ಸೋಂಕು ನಿಯಂತ್ರಿಸಲು ಜನರು ಮಾಸ್ಕ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು:

ಗೋಕಾಕ : ಕೊರೊನಾ ಸೋಂಕು ನಿಯಂತ್ರಿಸಲು ಜನರು ಮಾಸ್ಕ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು  12ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಎಂ.ಎ. ಹೇಳಿದರು. ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾ ಆರೋಗ್ಯ ಇಲಾಖೆ, ತಾಲೂಕಾಡಳಿತ, ಶಿಕ್ಷಣ ಇಲಾಖೆ ಹಾಗೂ ಎಸ್‍ಎಲ್‍ಜೆ ಕಾನೂನು ಕಾಲೇಜ್ ಸಹಯೋಗದಲ್ಲಿ ನಡೆದ ಕೊರೊನಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ ನಿಯಂತ್ರಿಸುವ …

Read More »

ವೀರಮದಕರಿ ನಾಯಕನ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು:ಪ್ರಸನ್ನಾನಂದ ಸ್ವಾಮೀಜಿ

ಕಣಬರಗಿ : ಬೆಳಗಾವಿ ಆರ್.ಪಿ.ಡಿ ವೃತ್ತದಲ್ಲಿ ವೀರಮದಕರಿ ನಾಯಕನ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಕಣಬರಗಿಯ ವಾಲ್ಮೀಕಿ    ನೌಕರರ ಭವನದಲ್ಲಿ ಇಂದು ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಮೋಘಲರ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ  ಮಹಾನ್ ನಾಯಕ ವೀರಮದಕರಿ. ಅಂತಹ ದಿಮಂತ ನಾಯಕನ ಪ್ರತಿಮೆ ಸ್ಥಾಪನೆ ಮಾಡಬೇಕಾಗಿದೆ ಎಂದರು. ಬೆಳಗಾವಿ ನಗರದಲ್ಲಿ ಈಗಾಗಲೇ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿ ಕರ್ನಾಟಕ …

Read More »

ರಾಯಬಾಗ ತಾಲ್ಲಕಿನ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ವಿರುದ್ಧ ಕೋವಿಡ್ ನಿರ್ವಹಣೆಗೆ ಬಿಡುಗಡೆಯಾದ ಅನುದಾನ ದುರ್ಬಳಕೆ ಆರೋಪ

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲ್ಲಕಿನ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ವಿರುದ್ಧ ಕೋವಿಡ್ ನಿರ್ವಹಣೆಗೆ ಬಿಡುಗಡೆಯಾದ ಅನುದಾನ ದುರ್ಬಳಕೆ ಆರೋಪ ಕೇಳಿ ಬಂದಿದ್ದು, ತಹಶೀಲ್ದಾರ್ ವಿಚಾರಣೆ ಆರಂಭವಾಗಿದೆ. ಕೋವಿಡ್ ನಿರ್ವಹಣೆಯ 1.49 ಕೋಟಿ ಅನುದಾನವನ್ನು ತಮ್ಮ ಸ್ವಂತ ಖಾತೆಗೆ ತಹಶೀಲ್ದಾರ್ ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿದ್ದಾರೆ ಎಂದು ಕುಡಚಿ ಶಾಸಕ ಪಿ.ರಾಜೀವ್  ವಿಧಾನಮಂಡಲ ಅಧಿವೇಶನದಲ್ಲಿ  ಆರೋಪಿಸಿದ್ದರು. ಕೆಲ ಸಂಘಟನೆಗಳು ತನಿಖೆಗೆ ಜಿಲ್ಲಾಧಿಕಾರಿಗೆ ಒತ್ತಾಯಿಸಿ, ಮನವಿ ಸಲ್ಲಿಸಿದ್ದರು. ಇದರಿಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ …

Read More »

ಕೊರೊನಾ ಸೋಂಕಿನಿಂದ  ಮೃತಪಟ್ಟ ಸಾರಿಗೆ ಇಲಾಖೆ ಸಿಬ್ಬಂದಿ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ಪರಿಹಾರ:ಲಕ್ಷ್ಮಣ ಸವದಿ

ಬೆಳಗಾವಿ : ಕೊರೊನಾ ಸೋಂಕಿನಿಂದ  ಮೃತಪಟ್ಟ ಸಾರಿಗೆ ಇಲಾಖೆ ಸಿಬ್ಬಂದಿ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಅವರು, ಕೊರೊನಾದಿಂದ ಸಾರಿಗೆ ಇಲಾಖೆ ಮೂರು ಸಾವಿರ ಕೋಟಿಗೂ ಅಧಿಕ ನಷ್ಟ ಅನುಭವಿಸುತ್ತಿದೆ. ಇದರಿಂದ ಸಾರಿಗೆ ಇಲಾಖೆಯ ಸಿಬ್ಬಂದಿಯ ವೇತನ ವಿಳಂಬವಾಗುತ್ತಿದೆ.  ಸದ್ಯ ಸಾರಿಗೆ ಇಲಾಖೆಯಲ್ಲಿ 1 ಲಕ್ಷ 30 ಸಾವಿರ ಸಿಬ್ಬಂದಿ …

Read More »