Breaking News

ಕೋವಿಡ್ ಹಗಲಲ್ಲಿ ಹರಡಲ್ಲ, ರಾತ್ರಿ ಮಾತ್ರ ಹರಡುತ್ತೆ ಎಂದ ವಿಜ್ಞಾನಿಯ ಫೋಟೋ ಕೊಡಿ : ಡಿಕೆಶಿ

ಬೆಳಗಾವಿ : ಕೋವಿಡ್ ಹಗಲಲ್ಲಿ ಹರಡುವುದಿಲ್ಲ, ರಾತ್ರಿ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದರೂ ತಿಳಿಸಿದರೆ ಅವರ ಫೋಟೊವನ್ನು ನಾವೂ ಇಟ್ಟುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಶನಿವಾರ ವ್ಯಂಗ್ಯವಾಡಿದ್ದಾರೆ. ರಾತ್ರಿ ಕರ್ಫ್ಯೂ ಮಾಡಿ ಆರ್ಥಿಕತೆ ಹಾಳು ಮಾಡುತ್ತಿದ್ದಾರೆ. ರಾತ್ರಿ ಕರ್ಫ್ಯೂ ಇಂದ ಜನರನ್ನು ಮಾನಸಿಕವಾಗಿ ಕುಂದಿಸುತ್ತಿದ್ದಾರೆ. ಹಗಲಲ್ಲಿ ಕೋವಿಡ್ ಹರಡುವುದಿಲ್ಲವೇ? ಇವೆಲ್ಲ ಅವೈಜ್ಞಾನಿಕ ನಿರ್ಧಾರಗಳು ಎಂದು ಬಿಜೆಪಿ ವಿರುದ್ಧ ಡಿಕೆಶಿ ಕಿಡಿ ಕಾರಿದ್ದಾರೆ. ಪತ್ರಕರ್ತರ …

Read More »

ಏಪ್ರಿಲ್ 13ರಂದು ‘ಮದಗಜ’ ಚಿತ್ರದ “lovesome” ಟೀಸರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹು ನಿರೀಕ್ಷೆಯ ‘ಮದಗಜ’ ಚಿತ್ರದ ಲವ್ ಟೀಸರ್ ವೊಂದನ್ನು ಏಪ್ರಿಲ್ 13ರಂದು ರಿಲೀಸ್ ಮಾಡುತ್ತಿದ್ದಾರೆ ಈ ಕುರಿತು ಶ್ರೀಮುರಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.   ಈ ಟೀಸರ್ ಅನ್ನು ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಮಾಡಲಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದು, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ …

Read More »

ವಕೀಲ್ ಸಾಬ್ ಸಿನಿಮಾ ರಿಲೀಸ್ ದಿನವೇ ಥಿಯೇಟರ್ ಧ್ವಂಸಗೊಳಿಸಿದ ಫ್ಯಾನ್ಸ್..!

ತೆಲಂಗಾಣ : ವಕೀಲ್ ಸಾಬ್ ಸಿನಿಮಾ ರಿಲೀಸ್ ಆದ ದಿನವೇ ಥಿಯೇಟರ್ ಗಳಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳ ಅವಾಂತರ ಸೃಷ್ಟಿಮಾಡಿದ್ದರು. ತಾಂತ್ರಿಕ ದೋಷದಿಂದಾಗಿ ವಕೀಲ್ ಸಾಬ್ ಚಿತ್ರದ ಸ್ಕ್ರೀನಿಂಗ್ ಗೆ ಅಡ್ಡಿಯಾದ ಹಿನ್ನಲೆಯಲ್ಲಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಥಿಯೇಟರ್ ನ್ನು ಧ್ವಂಸಗೊಳಿಸಿದ್ದಾರೆ. ತೆಲಂಗಾಣದ ಜೋಗುಲಂಬಾ ಗಡ್ವಾಲ್ ನ ಥಿಯೇಟರ್ ನಲ್ಲಿ ನಿನ್ನೆ ಬೆಳಿಗ್ಗೆ ಕಾರ್ಯಕ್ರಮದಲ್ಲಿ ಅಡ್ಡಿ ಉಂಟಾಗಿದೆ. ಆಗ ಥಿಯೇಟರ್ ಮ್ಯಾನೇಜ್ ಮೆಂಟ್ ಕೆಲವು ನಿಮಿಷ ಕಾಯುವಂತೆ ಮನವಿ …

Read More »

ಕೊರೊನಾ ವೈರಸ್ ಭೀತಿ: ತಲೈವಿ ಚಿತ್ರಕ್ಕೆ ಮತ್ತೆ ನಿರಾಸೆ

ಕೊರೊನಾ ವೈರಸ್ ಎರಡನೇ ಅಲೆಯಿಂದ ಮತ್ತೊಂದು ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಚಿತ್ರ ಪ್ರಪಂಚದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ತಲೈವಿ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ಮೊದಲು ನಿರ್ಧರಿಸಿದಂತೆ ಏಪ್ರಿಲ್ 23 ರಂದು ತಲೈವಿ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬರಬೇಕಿತ್ತು. ಅದಕ್ಕೆ ಬೇಕಾದ ತಯಾರಿ ಸಹ ನಡೆದಿತ್ತು. ಆದರೆ ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡ ಪರಿಣಾಮ ಬಿಡುಗಡೆಯಿಂದ ಹಿಂದೆ …

Read More »

ಕಿರಿಕ್ ಪಾರ್ಟಿ ತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್

ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರೆಂಟ್ ನೀಡಿದ್ದು, ಬಂಧಿಸಿ ಕರೆತರುವಂತೆ ಕೋರ್ಟ್ ಸೂಚಿಸಿದೆ. ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡಿಯೋಸ್ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಲಹರಿ ಸಂಸ್ಥೆ ಅನುಮತಿ ಇಲ್ಲದೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಹಾಡನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿತ್ತು.   2016ರಲ್ಲಿ ಲಹರಿ ಸಂಸ್ಥೆ ಕಾಪಿ ರೈಟ್ ಆಕ್ಟ್ ಅಡಿ …

Read More »

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಬೆಂಗಳೂರು, ಏಪ್ರಿಲ್ 10: ಯಲಚೇನಹಳ್ಳಿ ನಮ್ಮ ಮೆಟ್ರೋ ನಿಲ್ದಾಣದ ಕೇಬಲ್ ನಾಳ(ಡಕ್ಟ್‌)ದಲ್ಲಿ 65 ವರ್ಷದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾರುತಿನಗರ ರಿಯಲ್ ಎಸ್ಟೇಟ್ ಬ್ರೋಕರ್ ಆಗಿರುವ ನಾಗರಾಜ್ ಅವರು ಏಪ್ರಿಲ್ 4 ರಂದು ಕೇಬಲ್ ನಾಳದೊಳಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದರೂ ಈ ಘಟನೆ ಏಪ್ರಿಲ್ 9 ರಂದು ಬೆಳಕಿಗೆ ಬಂದಿದೆ.   ಹೌಸ್‌ಕೀಪಿಂಗ್ ಸಿಬ್ಬಂದಿ ಶುಚಿಗೊಳಿಸುತ್ತಿರುವಾಗ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದಾರೆ ಬಳಿಕ ಬಂದು ಬಾಗಿಲು ತೆರೆದಾಗ …

Read More »

ಹಳಿ ದಾಟಲು ಬಂದ ಆನೆ ಕಂಡು ರೈಲು ನಿಲ್ಲಿಸಿದ ಲೋಕೋಪೈಲಟ್

ಜನಸಂಖ್ಯಾ ಸ್ಫೋಟದ ಪರಿಣಾಮದಿಂದಾಗಿ ದೇಶದ ಅರಣ್ಯ ಸಂಪತ್ತು ಕ್ಷೀಣಿಸುತ್ತಲೇ ಇದೆ. ಪ್ರಾಣಿಗಳಿಗೆ ತಂತಮ್ಮ ಸ್ವಾಭಾವಿಕ ನೆಲೆಯಲ್ಲಿ ಮಾನವನ ಉಪಟಳವಿಲ್ಲದೆ ಬದುಕುವುದು ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಇಂಥ ಚಾಲೆಂಜಿಂಗ್ ಪರಿಸ್ಥಿತಿಯಲ್ಲೂ ಸಹ ಪ್ರಾಣಿಗಳ ಜೀವಿಸುವ ಹಕ್ಕನ್ನು ಗೌರವಿಸುವ ಮಂದಿ ಅಪರೂಪಕ್ಕೆ ಅಲ್ಲಿ ಇಲ್ಲಿ ಇನ್ನೂ ಇದ್ದಾರೆ. ಇಂಥದ್ದೇ ಗುಣವಿರುವ ಲೋಕೋ ಪೈಲಟ್‌ಗಳಾದ ಎಸ್‌.ಸಿ. ಸರ್ಕಾರ್‌ ಹಾಗೂ ಟಿ. ಕುಮಾರ್‌ ಅವರು ಹಳಿಗಳ ಮೇಲೆ ಆನೆ ಮರಿಯೊಂದು ಹೋಗುತ್ತಿದ್ದ ಕಾರಣ ರೈಲನ್ನು ಕೆಲಕಾಲ …

Read More »

ಅಲ್ಲೊಬ್ಬರು ಪಾಳೆಯಗಾರ, ಇಲ್ಲೊಬ್ಬರು ಮಾಂಡಲಿಕ! ಭಲೇ ಜೋಡಿ!’: ಸಿದ್ದರಾಮಯ್ಯ

ಬೆಂಗಳೂರು: ನೈಟ್ ಕರ್ಪ್ಯೂವನ್ನು ಜಾರಿಗೊಳಿಸುವ ರಾಜ್ಯ ಸರ್ಕಾರದ ಕ್ರಮ ಕೊರೊನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಸರಣಿ ಟ್ವೀಟ್‌ಗಳ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ದೇಶದಪ್ರಧಾನಿ ಅಂಧಾ ದರ್ಬಾರ್‌ನಿಂದ ಸಿಎಂ ಬಿಎಸ್‌ ಯಡಿಯೂರಪ್ಪ ಸ್ಪೂರ್ತಿ ಪಡೆದರೆ, ಮುಖ್ಯಮಂತ್ರಿಗಳಿಂದ ಪ್ರೇರಣೆ ಪಡೆದು ಕೆಲವು ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು …

Read More »

118 ಬಿಎಂಟಿಸಿ ನೌಕರರು ವಜಾ – ಸೀನಿಯರ್ ನೌಕರರಿಗೆ ನಿವೃತ್ತಿ ಎಚ್ಚರಿಕೆ: ಮುಷ್ಕರ ನಿರತರಿಗೆ ಬಿಎಂಟಿಸಿ ಬಿಗ್ ಶಾಕ್

ಬೆಂಗಳೂರು; ಸಾರಿಗೆ ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಎಂಟಿಸಿ ಮುಂದಾಗಿದ್ದು, ಮುಷ್ಕರ ಹತ್ತಿಕ್ಕಲು ಸರ್ವಪ್ರಯತ್ನ ನಡೆಸಿದೆ. ಮುಷ್ಕರದಲ್ಲಿ ಭಾಗವಹಿಸಿರುವ 118 ಸಾರಿಗೆ ಸಿಬ್ಬಂದಿಗಳನ್ನು ಬಿಎಂಟಿಸಿ ವಜಾ ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ ಸೀನಿಯರ್ ನೌಕರರಿಗೆ ನಿವೃತ್ತಿ ನಿಡುವ ಎಚ್ಚರಿಕೆಯನ್ನು ನೀಡಿದೆ. 55 ವರ್ಷ ಮೇಲ್ಪಟ್ಟ ಬಿಎಂಟಿಸಿ ಸಿಬ್ಬಂದಿ ವೈದ್ಯಕೀಯ ಹಾಗೂ ದೇಹದಾರ್ಡ್ಯತೆ ಪ್ರಮಾಣ ಪತ್ರವನ್ನು ಏಪ್ರಿಲ್ …

Read More »

62.55 ಲಕ್ಷ ನಗದು ವಶ ಚುನಾವಣಾ ಅಕ್ರಮ ತಡೆಗೆ ತೀವ್ರ ನಿಗಾ: ಡಾ.ಕೆ.ಹರೀಶ್ ಕುಮಾರ್

ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಅಕ್ರಮ‌ ಹಣ ಅಥವಾ ಮದ್ಯ ಸಾಗಾಣಿಕೆ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಚೆಕ್ ಪೋಸ್ಟ್ ಗಳಲ್ಲಿ ಇದುವರೆಗೆ 62.55 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ 27 ಚೆಕ್ ಪೋಸ್ಟ್ ಗಳಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡಿರುವ ಎಸ್.ಎಸ್.ಟಿ. ತಂಡಗಳು ತಪಾಸಣೆ …

Read More »