ರಾಯಚೂರು: ಬಿಜೆಪಿ ಎಂದರೆ ‘ಭ್ರಷ್ಟಾಚಾರ ಜನತಾ ಪಾರ್ಟಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಮುದಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಸ್ ವೈ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸಿಎಂ ಮನೆಗೆ ಹೋಗುತ್ತಾರೆ ಎಂದು ಅದೇ ಪಕ್ಷದ ಯತ್ನಾಳ ಹೇಳಿದ್ದಾರೆ. ಬಿಜೆಪಿಯವರು ಎಲ್ಲಿಯಾದರೂ ಸೋಲ್ತೀವಿ ಅಂತ ಹೇಳಿದ್ದಾರೆ. ಯಡಿಯೂರಪ್ಪನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಯಡಿಯೂರಪ್ಪನವರು ಮೊದಲಿಬಿಂದಲೂ ಸುಳ್ಳು ಹೇಳಿಕೊಂಡೆ ಬಂದಿದ್ದಾರೆ ಎಂದರು. ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಹೋಗುತ್ತದೆ ಎನ್ನುವುದು ಬಾಲಿಶತನದ ಹೇಳಿಕೆ. …
Read More »ತಟ್ಟೆ, ಲೋಟ ಬಡಿಯುವ ಮೂಲಕ ನಾಳೆ ರಾಜ್ಯಾದ್ಯಂತ ಸಾರಿಗೆ ನೌಕರರ ಚಳವಳಿ: ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಮುಷ್ಕರ ತೀವ್ರವಾಗಿದೆ. ಸರ್ಕಾರದ ಮನವಿ, ಬೆದರಿಕೆಗಳಿಗೆ ನೌಕರರು ಬಗ್ಗುತ್ತಿಲ್ಲ. ನಾಳೆ ತಟ್ಟೆ, ಲೋಟ ಬಡಿಯುವ ಮೂಲಕ ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಚಳವಳಿ ನಡೆಸಲಾಗುವುದು ಎಂದು ಸಾರಿಗೆ ಇಲಾಖೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ತಹಶಿಲ್ದಾರ್ ಕಚೇರಿ ಮುಂದೆ ಚಳವಳಿ ನಡೆಸುತ್ತೇವೆ, ಚಳವಳಿ ಯಶಸ್ವಿಯಾಗಲಿದೆ ಎಂಬ ನಂಬಿಕೆಯಿದೆ. ನಾಳೆ ಅಪರಾಹ್ನ 3 …
Read More »ಆರನೇ ವೇತನ ಆಯೋಗಕ್ಕೆ ಸಮನಾದ ವೇತನ ನೀಡಲ್ಲ: ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ
ಹುಮನಾಬಾದ: ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ ಸಮನಾದ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಮಾಣಿಕನಗರದಲ್ಲಿ ರವಿವಾರ ‘ಉದಯವಾಣಿ’ ಜತೆ ಮಾತನಾಡಿದ ಅವರು, ಆರನೇ ವೇತನ ಆಯೋಗದ ಸಮನಾದ ಸಂಬಳ ನೀಡಲು ಸಾಧ್ಯವೇ ಇಲ್ಲ. ಒಂದು ವೇಳೆ ಸಮನಾದ ಸಂಬಳ ನೀಡಿದರೆ ಇಲಾಖೆಯ ಸಿಬ್ಬಂದಿಗಳ ಮಧ್ಯೆ ತಾರತಮ್ಯ ನೀತಿ ಹುಟ್ಟಿಕೊಳ್ಳುತ್ತದೆ. ಸೀನಿಯರ್ ಸಿಬ್ಬಂದಿಗಳು ಹಾಗೂ ಜೂನಿಯರ್ ಸಿಬ್ಬಂದಿಗಳ …
Read More »ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಡಿ.ಕೆ. ಶಿ.
ಧಾರವಾಡ: ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಂಚಮಸಾಲಿ ಶ್ರೀಗಳನ್ನು ಭೇಟಿಯಾಗಿದ್ದಾರೆ. ಧಾರವಾಡಕ್ಕೆ ಆಗಮಿಸಿರುವ ಡಿ.ಕೆ.ಶಿವಕುಮಾರ್, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಶಾಸಕ ಗಣೇಶ್ ಹುಕ್ಕೇರಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತಿತರರು ಉಪಸ್ಥಿತರಿದ್ದರು.
Read More »ಮದ್ವೆಯಾಗಿ ಕೊಲ್ಹಾಪುರದಿಂದ ಬೆಳಗಾವಿಗೆ ಬಂದ್ರು – ಮೊದಲ ರಾತ್ರಿಯೇ ಕನ್ಯತ್ವ ಪರೀಕ್ಷೆ ಶೀಲ ಶಂಕಿಸಿ ವಿಚ್ಛೇಧನ
ಮುಂಬೈ: ಪತ್ನಿಯರ ಶೀಲ ಶಂಕಿಸಿ ಇಬ್ಬರು ಸಹೋದರಿಯರನ್ನು ಅವರ ಪತಿಯಂದಿರು ಮನೆಯಿಂದ ಹೊರ ಹಾಕಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಈ ಪತಿಯದಿರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಹಿನ್ನಲೆ: 2020ರಲ್ಲಿ ನವೆಂಬರ್ನಲ್ಲಿ ಕಂಬರ್ಜಾಟ್ ಸಮುದಾಯಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು, ಅದೇ ಸಮುದಾಯದ ಕರ್ನಾಟಕದ ಬೆಳಗಾವಿ ಒಂದೇ ಸಮುದಾಯದ ಯುವಕರನ್ನು ವಿವಾಹವಾದರು. ಮೊದಲ ರಾತ್ರಿಯಂದು ಸಮುದಾಯ ಸಂಪ್ರದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷೆಸಲಾಗಿದೆ. ಈ ಪರೀಕ್ಷೆಯಲ್ಲಿ ಅಕ್ಕ ವಿಫಲಳಾಗಿದ್ದಾಳೆ. ಆದರೆ …
Read More »ರೆಸಾರ್ಟ್ನಲ್ಲಿ ಕೊರೊನಾ ನಿಯಮ ಉಲ್ಲಂಘನೆ ಪಾರ್ಟಿ – 150ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ
ಹಾಸನ: ಖಾಸಗಿ ರೆಸಾರ್ಟ್ ಮೇಲೆ ಪೊಲೀಸರ ದಾಳಿ ನಡೆಸಿ ಕೊರೊನಾ ನಿಯಮ ಮೀರಿ ಪಾರ್ಟಿಯಲ್ಲಿ ಭಾಗವಹಿಸಿದ್ದ 150 ಕ್ಕೂ ಹೆಚ್ಚು ಜನ ವಶಕ್ಕೆ ಪಡೆದಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ, ಆಲೂರು ತಾಲೂಕಿನ ಹಲವೆಡೆ ಖಾಸಗಿ ರೆಸಾರ್ಟ್ ಮೇಲೆ ದಾಳಿ ನಡೆಸಿದ ಎಸ್ಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ರೆಸಾರ್ಟ್ನಲ್ಲಿ ಪಾರ್ಟಿಯಲ್ಲಿ ತೊಡಗಿದ್ದ ಯುವಕ ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಒಂದು ಕಡೆ ಹಾಸನದಲ್ಲಿ ಕೊರೊನ ಆತಂಕ ದಿನದಿಂದ ದಿನಕ್ಕೆ …
Read More »ಸಾರಿಗೆ ಅಧಿಕಾರಿಗಳ ವಿರುದ್ಧ ಖಾಸಗಿ ಬಸ್ ಚಾಲಕರ ಆಕ್ರೋಶ
ಮೈಸೂರು: ಸಾರಿಗೆ ಅಧಿಕಾರಿಗಳು ಮತ್ತು ಖಾಸಗಿ ಬಸ್ಗಳ ಚಾಲಕರು, ನಿರ್ವಾಹಕರ ನಡುವೆ ವಾಗ್ವಾದ ನಡೆದಿರುವ ಘಟನೆ ಮೈಸೂರಿನ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರಿಗೆ ನೌಕರರು ಮುಷ್ಕರ ಮುಂದುವರಿದ ಹಿನ್ನೆಲೆ ಕೆಎಸ್ಆರ್ಟಿಸಿ ಬಸ್ಗಳು ಇಲ್ಲದೇ ಖಾಸಗಿ ಬಸ್ಗಳು ಸೇವೆ ಸಲ್ಲಿಸುತ್ತಿವೆ. ಇದೀಗ ಒಂದೊಂದಾಗಿ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿಯುತ್ತಿದೆ. ಹಾಗಾಗಿ ಖಾಸಗಿ ಬಸ್ಗಳ ಚಾಲಕರು ಮತ್ತು ನಿರ್ವಾಹಕರು ನಾವು ಬೆಳಿಗ್ಗೆಯಿಂದಲೇ ನಮ್ಮ ಬಸ್ಗಳನ್ನು ತಂದು ನಿಲ್ಲಿಸಿ ಕಾದು ಕುಳಿತಿದ್ದೇವೆ. ನೀವು ಈಗ …
Read More »‘ನಿನ್ನ ವಿಳಾಸ ಹೇಳು, ಬ್ರಾ ಕಳುಹಿಸುತ್ತೇನೆ’ ಎಂದ ಯುವತಿಗೆ ನಟಿ ಕೊಟ್ಟ ಉತ್ತರವೇನು?
ಸಾಮಾಜಿಕ ಜಾಲತಾಣದಲ್ಲಿ ಬಾಡಿ ಶೇಮಿಂಗ್ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿದೆ. ಇತ್ತೀಚಿಗಷ್ಟೆ ನೆಟ್ಟಿಗನೊಬ್ಬ ಬ್ರಾ (ಒಳ ಉಡುಪು) ಸೈಜ್ ಕೇಳಿದ್ದ ಘಟನೆ ಕುರಿತು ಬಾಲಿವುಡ್ ಕಿರುತೆರೆ ನಟಿ ಸಯಂತನಿಗೆ ಘೋಷ್ ಹೇಳಿಕೊಂಡಿದ್ದರು. ಇದೀಗ, ಕಿರುತೆರೆ ನಟಿ ಅನುಷಾ ದಾಂಡೇಕರ್ ಅವರಿಗೆ ”ನಿನ್ನ ವಿಳಾಸ ಕಳುಹಿಸಿ, ನನ್ನದೊಂದು ಜೊತೆ ಬ್ರಾ (ಒಳ ಉಡುಪು) ಕಳುಹಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ. ಕಿರುತೆರೆ ನಟಿ …
Read More »ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
ಬಾಲಿವುಡ್ ನಟ ಅಜಯ್ ದೇವಗನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಮೇಡೇ’ ಸಿನಿಮಾದ ಚಿತ್ರೀಕರಣ ಮುಂದೂಡಿಕೆಯಾಗಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಿಗದಿಯಾಗಿದ್ದ ಶೂಟಿಂಗ್ ತಾತ್ಕಾಲಿಕವಾಗಿ ಮುಂದಕ್ಕೆ ಹಾಕಲಾಗಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಸೆಟ್ಟೇರಿದ್ದ ‘ಮೇಡೇ’ ಸಿನಿಮಾ ಅದಾಗಲೇ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಿದೆ. ಆದರೆ, ಕೋವಿಡ್ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಅಂದ್ಹಾಗೆ, ಏಪ್ರಿಲ್ ಕೊನೆಯಲ್ಲಿ ದೋಹಾದಲ್ಲಿ ಶೂಟಿಂಗ್ ಶುರು ಮಾಡಲು ಎಲ್ಲಾ ತಯಾರಿ ನಡೆದಿತ್ತು. ಈ ವೇಳೆ ಅಜಯ್ …
Read More »ಇಂದಿರಾನಗರದ ಗೂಂಡಾ ನಾನೇ’ ಎಂದು ದ್ರಾವಿಡ್ಗೆ ಸೆಡ್ಡು ಹೊಡೆದ ಖ್ಯಾತ ನಟಿ
ಸಿಲಿಕಾನ್ ಸಿಟಿ ಟ್ರಾಫಿಕ್ನಲ್ಲಿ ಸಿಲುಕಿಕೊಂಡ ಕ್ರಿಕೆಟಿಗ ರಾಹುಲ್ ದ್ರಾವಿಡ್ ”ನಾನು ಇಂದಿರಾನಗರದ ಗೂಂಡಾ” ಎಂದು ಕಿರುಚಾಡಿ ಅಕ್ಕಪಕ್ಕದ ಕಾರುಗಳ ಗಾಜು ಪುಡಿ ಪುಡಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ಹಾಗೆ, ಇದು ಜಾಹೀರಾತು. ಕ್ರಿಕೆಟ್ ಜಗತ್ತಿನ ಜಂಟಲ್ಮ್ಯಾನ್ ಎಂದೇ ಗುರುತಿಸಿಕೊಂಡಿರುವ ರಾಹುಲ್ ದ್ರಾವಿಡ್ ಅವರನ್ನು ಹಿಂದೆಂದೂ ಈ ರೀತಿ ನೋಡಿರಲು ಸಾಧ್ಯವಿಲ್ಲ. ಆದರೆ, ಜಾಹೀರಾತಿಗಾಗಿ ತಮ್ಮ ಉಗ್ರರೂಪ ತೋರಿಸಿದ್ದಾರೆ. ಇದೀಗ, ‘ನಾನು ಇಂದಿರಾನಗರದ ಗೂಂಡಾ’ ಎಂಬ ಡೈಲಾಗ್ …
Read More »