Breaking News

1 ರಿಂದ 9 ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ: ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್ ಮಾಡಲು ಚಿಂತನೆ.?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಏರುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ 9 ನೇ ತರಗತಿಯ ಮಕ್ಕಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಚಿಂತನೆ ನಡೆದಿದೆ. ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದ್ದು, ಕೆಲವು ರಾಜ್ಯಗಳಲ್ಲಿ ಕೂಡ ಬೋರ್ಡ್ ಪರೀಕ್ಷೆ ರದ್ದು ಮಾಡಲಾಗಿದೆ. ರಾಜ್ಯದಲ್ಲಿ ಮೌಲ್ಯಾಂಕನ ಮೂಲಕ ಒಂದರಿಂದ 9ನೇ ತರಗತಿ ಮಕ್ಕಳನ್ನು ಪಾಸ್ ಮಾಡಲು ಚರ್ಚೆ ನಡೆದಿದ್ದು, ಮೌಲ್ಯಾಂಕನ ಪರೀಕ್ಷೆ ಕೂಡ ಇಲ್ಲದೆ ಎಲ್ಲರನ್ನು ಪಾಸ್ ಮಾಡಲು ತೀರ್ಮಾನಿಸಲಾಗಿದೆ ಎಂದು …

Read More »

ಪ್ರೀತಿಸಿ ಜೊತೆಯಾದವರು 6 ತಿಂಗಳಲ್ಲಿ ಹೆಣವಾದ್ರು – ಪತ್ನಿಯನ್ನ ಕೊಂದು ಪತಿ ಆತ್ಮಹತ್ಯೆ..!

ಕೋಲಾರ: ಪ್ರೀತಿಸಿ ಮದುವೆಯಾದ ಯುವಕನೊಬ್ಬ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಆಡಂಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶೈಲ ಹಾಗೂ ಮುರುಗೇಶ್ ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆ ಇದೇ ಆಡಂಪಲ್ಲಿ ಗ್ರಾಮದ ಶೈಲ ಹಾಗೂ ಮುರುಗೇಶ್ ಒಬ್ಬರನ್ನೊಬ್ಬರು ಪ್ರೀತಿಸಿದ್ದರು. ಶೈಲ ಆಗಿನ್ನು ಅಪ್ರಾಪ್ತಳಾಗಿದ್ದಳು. ಇದು ಶೈಲ ಕುಟುಂಬದವರಿಗೆ ತಿಳಿದು ಮುರುಗೇಶ್ ಮೇಲೆ ಅತ್ಯಾಚಾರ ಪ್ರಕರಣ ದೂರು ದಾಖಲಿಸಿದ್ದು, ಮುರುಗೇಶ್ …

Read More »

ಕೊರೊನಾ ಬೆಡ್ ಬಗ್ಗೆ ಸಚಿವರೇ ಲೆಕ್ಕ ಕೇಳಿದ್ರೂ ನೋ ಯೂಸ್ – ಖಾಸಗಿ ಆಸ್ಪತ್ರೆ ಸಿಬ್ಬಂದಿ ಡೋಂಟ್ ಕೇರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣಾರ್ಭಟ ಮುಂದುವರಿದ್ದು, ಖಾಸಗಿ ಆಸ್ಪತ್ರೆಗಳು ಇದರ ಲಾಭ ಪಡೆಯಲು ಮುಂದಾದ್ವಾ ಎಂಬ ಪ್ರಶ್ನೆಯೊಂದು ಮೂಡಿದೆ. ಹೌದು. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ಫುಲ್ ಆಗಿವೆಯಾ..? ಡಿಮ್ಯಾಂಡ್ ಸೃಷ್ಟಿ ಮಾಡಲು ಬೆಡ್ ಕೊರತೆಯ ನಾಟಕ ಆಡ್ತಿವೆಯಾ..?, ಜನರಲ್ಲಿ ಸೋಂಕು ಭೀತಿ ಹುಟ್ಟಿಸಲು ಬೆಡ್ ಫುಲ್ ಅಂತಾ ಕಥೆ ಕಟ್ಟುತ್ತಿವೆಯಾ ಎಂಬ ಪ್ರಶ್ನೆ ಮೂಡಿದ್ದು, ಖಾಸಗಿ ಆಸ್ಪತ್ರೆಗಳ ದರ್ಬಾರ್ ಸ್ಟೋರಿಯನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ. ಬೆಂಗಳೂರು ಬೆಡ್ …

Read More »

ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸದಾಶಿವರಾವ ಬಾಪುಸಾಹೇಬ ಭೋಸಲೆ ನಿಧನ

ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಹಾಗೂ ಅಪ್ಪಟ ಗಾಂಧಿವಾದಿಯಾಗಿದ್ದ ಸದಾಶಿವರಾವ ಬಾಪುಸಾಹೇಬ ಭೋಸಲೆ(101) ಅವರು ವಯೋಸಹಜ ಅನಾರೋಗ್ಯದಿಂದ ತಾಲ್ಲೂಕಿನ ಕಡೋಲಿ ಗ್ರಾಮದ ಸ್ವಗೃಹದಲ್ಲಿ ಗುರುವಾರ ಮುಂಜಾನೆ ನಿಧನರಾದರು. ಮೃತರಿಗೆ ಪುತ್ರ, ಸೊಸೆ, ಮಗಳು, ಅಳಿಯ ಹಾಗೂ ಮೊಮ್ಮಕ್ಕಳು ಇದ್ದಾರೆ. ಸದಾಶಿವರಾವ ಬಾಪುಸಾಹೇಬ ಭೋಸಲೆ ಅವರು ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಧಾರೆಗಳನ್ನು ಪಾಲಿಸುತ್ತಿದ್ದರು. ಅವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. 1946ರಲ್ಲಿ ಬ್ರಿಟಿಷ್ ಸರ್ಕಾರವು ನಡೆಸಿದ ಚುನಾವಣೆಯಲ್ಲಿ …

Read More »

ಕಿರಣ ಸುಬ್ಬರಾವ್ ಇನ್ನಿಲ್ಲ ಅಲ್ಪಕಾಲದ ಅನಾರೋಗ್ಯದ ನಂತರ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

ಬೆಳಗಾವಿ – ಇಲ್ಲಿಯ ಸ್ಮಾರ್ಟ್ ಸಿಟಿ ಕಂಪನಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಕಿರಣ ಸುಬ್ಬರಾವ್ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಅಲ್ಪಕಾಲದ ಅನಾರೋಗ್ಯದ ನಂತರ ಶುಕ್ರವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು. ಮೂಲತಃ ಲೋಕೋಪಯೋಗಿ ಇಲಾಖೆಯ ಉದ್ಯೋಗಿಯಾಗಿರುವ ಕಿರಣ ಸುಬ್ಬರಾವ್, ನಿಯೋಜನೆಯ ಮೇರೆಗೆ ಸ್ಮಾರ್ಟ್ ಸಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ ಹಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ತಾಯಿ, ಪತ್ನಿ, ಓರ್ವ …

Read More »

ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸಿದರೆ ಎಫ್​ಐಆರ್​ ; ಚಿತ್ರನಟರೂ, ರಾಜಕಾರಣಿಗಳ ಮೇಲೂ ಕ್ರಮಕ್ಕೆ ಹೈ ಕೋರ್ಟ್​ ಸೂಚನೆ

ಬೆಂಗಳೂರು (ಏ. 15): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣ ಹೆಚ್ಚಾಗುತ್ತಲೇ ಇದೆ. ಕೋವಿಡ್​ ಎರಡನೇ ಅಲೆ ಗಂಭೀರತೆ ಮರೆತು ಸಾರ್ವಜನಿಕರು ನಿರ್ಲಕ್ಷ್ಯ ತಾಳಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಗ್ಗೆ ರಾತ್ರಿ ಕರ್ಫ್ಯೂ ಸೇರಿದಂತೆ ಜಾಗೃತಿಯಂತಹ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಸೋಂಕು ಏರುಗತಿಗೆ ತಡೆ ಇಲ್ಲದಂತೆ ಆಗಿದೆ. ಇನ್ನು ನಿನ್ನೆ ಒಂದೇ ದಿನ ದಾಖಲೆ ಮಟ್ಟದ 11 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಈ …

Read More »

ದೆಹಲಿಯಲ್ಲಿಯೂ ವಾರಾಂತ್ಯದ ಕರ್ಫ್ಯೂ ಘೋಷಣೆ

ನವದೆಹಲಿ, ಏಪ್ರಿಲ್ 15: ರಾಜ್ಯದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ವಾರಾಂತ್ಯದ ಕರ್ಫ್ಯೂ ಹೇರಲು ನಿರ್ಧರಿಸಿರುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುರುವಾರ ಘೋಷಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ ಪರಿಶೀಲನೆಗೆ ಗುರುವಾರ ಮಧ್ಯಾಹ್ನ ಗವರ್ನರ್ ಅನಿಲ್ ಬೈಜಾಲ್ ಹಾಗೂ ಇತರೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಕರ್ಫ್ಯೂ ಸಂದರ್ಭ ಮಾಲ್‌ಗಳು, ಜಿಮ್‌ಗಳು, ಸ್ಪಾ ಹಾಗೂ ಆಡಿಟೋರಿಯಂಗಳು ಮುಚ್ಚಿರಲಿವೆ. ಮದುವೆಗೆ ಹಾಗೂ ಯಾವುದೇ ಕಾರ್ಯಕ್ರಮಗಳಿಗೆ ಕರ್ಫ್ಯೂ …

Read More »

ಆಕ್ಸಿಜನ್ ಮಾಸ್ಕ್ ಕಿತ್ತುಹಾಕಿದ ವಾರ್ಡ್ ಬಾಯ್: ಕೋವಿಡ್ ರೋಗಿ ಸಾವು

ಭೋಪಾಲ್, ಮಧ್ಯಪ್ರದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟ ಸಂಖ್ಯೆಯನ್ನು ಸರ್ಕಾರ ಅಡಗಿಸುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಅಲ್ಲಿನ ಆರೋಗ್ಯ ವ್ಯವಸ್ಥೆಯ ಹೀನಾಯ ಸ್ಥಿತಿಯನ್ನು ತೋರಿಸುವ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಶಿವಪುರಿಯಲ್ಲಿ ವಾರ್ಡ್ ಬಾಯ್ ಒಬ್ಬಾತ ಕೋವಿಡ್ ರೋಗಿಗೆ ಅಳವಡಿಸಿದ್ದ ಆಕ್ಸಿಜನ್ ಮಾಸ್ಕ್ ಅನ್ನು ತೆಗೆದುಹಾಕಿದ್ದಾನೆ. ಇದರಿಂದ ಆಮ್ಲಜನಕವಿಲ್ಲದೆ ವೃದ್ಧ ರೋಗಿ ನರಳಿ ಮೃತಪಟ್ಟಿದ್ದಾರೆ. ಈ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುರೇಂದ್ರ ಶರ್ಮಾ ಎಂಬ ರೋಗಿಯನ್ನು ಶಿವಪುರಿಯ ಆಸ್ಪತ್ರೆಯೊಂದರ …

Read More »

ಬೆಡ್ ಕೊಡಿ ಇಲ್ಲವೇ ಕೊಂದು ಬಿಡಿ; ಸೋಂಕಿತ ತಂದೆಯ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್​ನಲ್ಲಿ 2 ರಾಜ್ಯಗಳನ್ನು ಸುತ್ತಿದ ಮಗ..!

ಮುಂಬೈ (ಏ. 15): ಆಸ್ಪತ್ರೆಯಲ್ಲಿ ಬೆಡ್ ಕೊಡಿ, ಇಲ್ಲವೇ ನನ್ನ ತಂದೆಗೆ ಇಂಜೆಕ್ಷನ್ ಕೊಟ್ಟು ಕೊಂಡು ಬಿಡಿ.. ಬೆಡ್​ಗಾಗಿ ಅಲೆದಾಡಿದ ನೊಂದ ಪುತ್ರನೊಬ್ಬನ ಆಕ್ರೋಶದ ನುಡಿಗಳಿವು. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಇಂಥದೊಂದು ಕರುಣಾಜನಕ ಘಟನೆ ನಡೆದಿದೆ. ಚಂದ್ರಾಪುರದ ನಿವಾಸಿಯಾದ ಸಾಗರ್ ಕಿಶೋರ್ ಎಂಬುವರು ತಮ್ಮ ಸೋಂಕಿತ ತಂದೆಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಆಂಬ್ಯುಲೆನ್ಸ್​​ನಲ್ಲಿ ಅಲೆದಾಡಿದ್ದಾರೆ. ಮಹಾರಾಷ್ಟ್ರ ಮಾತ್ರವಲ್ಲದೇ ಆಂಧ್ರಪ್ರದೇಶಕ್ಕೂ ಕರೆದೊಯ್ದು ಆಸ್ಪತ್ರೆಗಳಲ್ಲಿ ಬೆಡ್​ಗಾಗಿ ಹುಡುಕಾಡಿದ್ದಾರೆ. ಅಲ್ಲಿಯೂ ಬೆಡ್ ಸಿಗದೆ …

Read More »

ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ: ಸಂಕಷ್ಟದಲ್ಲಿ ಡಬ್ಬಾವಾಲಾಗಳು

ಮುಂಬೈ, ಏಪ್ರಿಲ್ 15: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದ್ದು, ಜನರಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಈ ಮಧ್ಯೆ ಮುಂಬೈ ಡಬ್ಬಾವಾಲಾಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈನಲ್ಲಿ ಒಟ್ಟು 5 ಸಾವಿರ ಡಬ್ಬಾವಾಲಾಗಳಿದ್ದರು, ಆದರೆ ಕೊರೊನಾ ಬಳಿಕ ಅವರಲ್ಲಿ ಕೇವಲ 400,500ರಷ್ಟು ಡಬ್ಬಾವಾಲಾಗಳು ಮಾತ್ರ ಕೆಲಸ ಮಾಡುತ್ತಿದ್ದರು. ಇದೀಗ ಮತ್ತೆ ಹೊಸ ನಿಯಮಗಳು ಜಾರಿಗೊಂಡಬಳಿಕ 200-250 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಇದೀಗ ಡಬ್ಬಾವಾಲಾಗಳ ಪರಿಸ್ಥಿತಿ ತೀವ್ರ ಸಂಕಷ್ಟಕ್ಕೆ …

Read More »