ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರು ಪುಕ್ಕಟೆ ಉಪದೇಶ ನೀಡುವ ಬದಲಿಗೆ ಕೊರೊನಾದಿಂದ ತತ್ತರಿಸುತ್ತಿರುವ ರಾಜ್ಯದ ನೆರವಿಗೆ ಧಾವಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ತಾಕೀತು ಮಾಡಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ನಿತ್ಯ ಸಾವಿರಾರು ಜನರು ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ ಮತ್ತು ಸಾವನ್ನಪ್ಪುತ್ತಿದ್ದಾರೆ. ಮೋದಿಯವರು ಖುದ್ದು ರಾಜ್ಯಕ್ಕೆ ಭೇಟಿ ನೀಡಿ ಲಸಿಕೆ, ಆಕ್ಸಿಜನ್, ವೆಂಟಿಲೇಟರ್ ಇತರೆ ಅಗತ್ಯ ಸೌಲಭ್ಯಗಳ ಒದಗಿಸಬೇಕು. ಎಲ್ಲಿಯೋ …
Read More »ರೈತರು, ಆಟೋ, ಟ್ಯಾಕ್ಸಿ ಚಾಲಕರು ಸೇರಿ ಸಂಕಷ್ಟಕ್ಕೆ ಒಳಗಾದವರಿಗೆ ಸಿಎಂ ಯಡಿಯೂರಪ್ಪ ಸಿಹಿ ಸುದ್ದಿ.?
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ್ದು, ಮೇ 24ರ ನಂತರವೂ ಲಾಕ್ಡೌನ್ ಮುಂದುವರೆಯಲಿರುವ ಹಿನ್ನಲೆಯಲ್ಲಿಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದು. ಇಂದು ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಲಿದ್ದು, ಕಳೆದ ವರ್ಷ ಘೋಷಿಸಿದಂತೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆಟೋ, ಟ್ಯಾಕ್ಸಿ ಚಾಲಕರು, …
Read More »ರಷ್ಯಾದ ಸ್ಪುಟ್ನಿಕ್ ಕೊರೋನಾ ಲಸಿಕೆ ಇನ್ನು ಮುಂದೆ ಧಾರವಾಡದಲ್ಲೇ ತಯಾರಾಗಲಿದೆ!
ಧಾರವಾಡ : ಕೊರೋನಾ ತನ್ನ ಅಟ್ಟಹಾಸ ಪ್ರದರ್ಶನ ಮಾಡುತ್ತಿರೊ ಹಿನ್ನೆಲೆ ಜನರಿಗೆ ಸಂಜೀವಿನಿಯಾದದ್ದು ಕೋವಿಡ್ ಲಸಿಕೆ. ಈ ಲಸಿಕೆ ಪಡೆಯಲು ಜನರು ನಾಮುಂದು ತಾಮುಂದು ಎನ್ನುತ್ತಿದ್ದಾರೆ. ಅದರಲ್ಲಿಯೂ ರಷ್ಯಾ ಮೂಲದ ಸ್ಪುಟ್ನಿಕ್ ವ್ಯಾಕ್ಸಿನ್ ಗೆ ಎಲ್ಲಿಲ್ಲದ ಬೇಡಿಕೆ ಇದೆ. ಆದ್ರೆ ಈ ಸ್ಪುಟ್ನಿಕ್ ಲಸಿಕೆ ಇನ್ನೂ ಮುಂದೆ ಧಾರವಾಡದ ಕೈಗಾರಿಕೆಯೊಂದರಲ್ಲಿ ತಯಾರಾಗಲ ಸಜ್ಜಾಗಿದೆ. ಇದರಿಂದ ವಿದ್ಯಾಕಾಶಿ ಧಾರವಾಡ ಹಿರಿಮೆ ಹೆಚ್ಚುದಂತಾಗಿದೆ. ಹೌದು ಧಾರವಾಡದ ಬೇಲೂರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶಿಲ್ಪಾ ಬಯೋಲಾಜಿಕಲ್ಸ್ …
Read More »300 ಮಂದಿಯ ಅಂತ್ಯಕ್ರಿಯೆ ನಡೆಸಿದ್ದ ಅಧಿಕಾರಿ ಕೋವಿಡ್ ನಿಂದ ಸಾವು
ಹರಿಯಾಣ : ಹರಿಯಾಣದ ಹಿಸಾರ್‌ನಲ್ಲೊಂದು ಮನಮಿಡಿಯುವ ಘಟನೆ ನಡೆದಿದೆ. ಕಳೆದ ವರ್ಷ ಕೊರೊನಾ ಶುರುವಾದಾಗಿನಿಂದ ಇಲ್ಲಿಯವರೆಗೆ 300 ಕೊರೊನಾ ಪೀಡಿತರ ಶವದಹನಕ್ಕೆ ನೆರವಾಗಿದ್ದ, ಅಂತಿಮ ಕ್ರಿಯೆಗಳನ್ನು ವಿಧಿವತ್ತಾಗಿ ನಡೆಸಿದ್ದ ಹಿಸಾರ್ ನಗರಪಾಲಿಕೆ ಅಧಿಕಾರಿಯೊಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅದೂ ಸೋಂಕಿದೆ ಎಂದು ಗೊತ್ತಾಗಿ ಎರಡೇ ದಿನಗಳಲ್ಲಿ! 43 ವರ್ಷದ ಪ್ರವೀಣಕುಮಾರ್; ಸೋಮವಾರ ರಾತ್ರಿ ಆಮ್ಲಜನಕ ಪ್ರಮಾಣ ತೀವ್ರ ಇಳಿಕೆಯಾಗಿದ್ದರಿಂದ ಅಸು ನೀ ಗಿ ದ್ದಾ ರೆ. ಅವರನ್ನು ಕಳೆದವರ್ಷ ಶವಸಂಸ್ಕಾರ ತಂಡದ ಮುಖ್ಯಸ್ಥರನ್ನಾಗಿ ಹಿಸಾರ್ ನಗರಪಾಲಿಕೆ ನೇಮಿಸಿತ್ತು. …
Read More »ಕೊರೊನಾ ರುದ್ರನರ್ತನಕ್ಕೆ ಕೋಟ್ಯಾಧಿಪತಿ ಅಣ್ತಾಮ್ಮಾಸ್ ಬಲಿ; ದೊಡ್ಡಣ್ಣ ಸಾವು-ಬದುಕಿನ ನಡುವೆ ಹೋರಾಟ
ಧಾರವಾಡ: ಅವರು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸಹೋದರರು. ಆದರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮ್‌ಹೊಂಗಲ್ ಗ್ರಾಮದಲ್ಲಿ ಜೀವನೋಪಾಯಕ್ಕೆ ಪಾತ್ರೆ ಅಂಗಡಿ ಇಟ್ಟಿದ್ದರು. ಕೌದಿ ಹೊಲೆಯೋ ಕೆಲಸ ಸಹ ಮಾಡುತ್ತಿದ್ದರು. ಅದರಿಂದಲೇ ಜೀವನದಲ್ಲಿ ಮುಂದೆ ಬಂದು ಕೋಟ್ಯಾಧೀಶರಾಗಿದ್ದರು. ಸುಮಾರು 80 ಎಕರೆ ಭೂಮಿಯ ಒಡೆಯರಾಗಿದ್ದರು. ಬದುಕು ಸುಂದರವಾಗಿ ನಡೆದಿದೆ ಅಂದುಕೊಳ್ಳುತ್ತರುವ ಹೊತ್ತಿನಲ್ಲೇ ಬಾಗಲೆ ಮನೆಯ ಬಾಗಿಲಿಗೆ ಕೊರೊನಾ ಮಾರಿ ವಕ್ಕರಿಸಿಬಿಟ್ಟಿದೆ. ಮೊದಲು ಆ ಮನೆಯಲ್ಲಿ ನಾಲ್ಕು ದಿನಗಳ ಅಂತರದಲ್ಲಿ …
Read More »ರೆಮ್ಡಿಸಿವರ್ ಕಾಳಸಂತೆ: ಖಾಸಗಿ ಆಸ್ಪತ್ರೆ ಸ್ಟಾಫ್ ನರ್ಸ್ ಅರೆಸ್ಟ್
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ರೆಮ್ಡಿಸಿವರ್ ಮಾರಾಟ ಮಾಡುತ್ತಿದ್ದ ಮತ್ತೋರ್ವ ಆರೋಪಿಯನ್ನು ಬಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮನು (26) ಬಂಧಿತ ಆರೋಪಿ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡ್ತಿದ್ದ ಆರೋಪಿ, ರೆಮ್ಡಿಸಿವರ್ ಒಂದು ಡೋಸ್ಗೆ ₹25 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಖಚಿತ ಮಾಹಿತಿ ಕಲೆ ಹಾಕಿದ್ದು, ಇಂದು ನಗರದ ಫೇಮಸ್ ಖಾಸಗಿ ಆಸ್ಪತ್ರೆ ಬಳಿ ಮಾರಾಟ ಮಾಡುತ್ತಿದ್ದ ವೇಳೆ ರೆಡ್ಹ್ಯಾಂಡ್ ಆಗಿ …
Read More »ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 130 ಕ್ವಿಂಟಾಲ್ ಅಕ್ಕಿ ಪೊಲೀಸರ ವಶಕ್ಕೆ
ಕಲಬುರಗಿ: ಕರ್ನಾಟಕ ಸರ್ಕಾರದಿಂದ ಪಡಿತರ ಕಾರ್ಡ್ ದಾರರಿಗೆ ಹಂಚಿಕೆ ಆಗಬೇಕಾಗಿದ್ದ ಅಕ್ಕಿ ಕಾಳಸಂತೆಯಲ್ಲಿ ಮಹಾರಾಷ್ಟ್ರದ ಪಾಲಾಗುತ್ತಿರುವಾಗ ಜಿಲ್ಲೆಯ ಅಫಜಲಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರದ ಗುಲಾಬಚಂದ್ ರಾಠೋಡ ಎಂಬುವವರು ಈ ಅಕ್ಕಿ ಸಾಗಿಸುತ್ತಿದ್ದರು. ಅಫಜಲಪುರ ತಾಲೂಕಿನ ಬಳ್ಳೂರ್ಗಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರ ತಪಾಸಣೆ ವೇಳೆ ಈ ಅಕ್ರಮ ಪತ್ತೆಯಾಗಿದೆ. ಅಂದಾಜು 130 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಇದರ ಒಟ್ಟು ಮೌಲ್ಯ 2, 86,600 …
Read More »ಬ್ಲಾಕ್ ಫಂಗಸ್ ಸೋಂಕಿತರ ಚಿಕಿತ್ಸೆಗೆ ಔಷಧಿ ಅಭಾವವಿದೆ: ಡಿಸಿಎಂ ಲಕ್ಷ್ಮಣ ಸವದಿ
ಡಿಸಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳಿಗೆ ಕೊರೊನಾ ನಿಯಂತ್ರಣದ ಜವಾಬ್ದಾರಿ ನೀಡಿದ್ದಾರೆ. ಪ್ರಧಾನಿ ಮೋದಿ ಸಂವಾದದ ವಿಚಾರವಾಗಿ ರಾಯಚೂರಿನಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಪರಿಸ್ಥಿತಿ ನಿಯಂತ್ರಣದ ಬಗ್ಗೆ ಪ್ರಧಾನಿ ಮೋದಿ ನೀಡಿದ ಎಲ್ಲಾ ಸೂಚನೆ ಪಾಲಿಸುತ್ತೇವೆ ಎಂದು ಹೇಳಿದ್ರು. ಕೊರೊನಾ ನಿಯಂತ್ರಣಕ್ಕಾಗಿ ರಾಯಚೂರಿನಲ್ಲಿ ಕಠಿಣ ಲಾಕ್ಡೌನ್ನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದೇವೆ. ಮೂರು ದಿನ ಕಠಿಣ ಲಾಕ್ಡೌನ್ ಹಾಗೂ ಒಂದು …
Read More »ರಕ್ತದಾನ ಮಹಾದಾನ’ – ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ ತರುಣ್ ಸುಧೀರ್
ಬೆಂಗಳೂರು : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಈ ನಡುವೆ ಲಸಿಕೆ ಅಭಿಯಾನವೂ ಶುರುವಾಗಿದೆ.. ಆದ್ರೆ ಲಸಿಕೆ ಪಡೆಯುವುದಕ್ಕೂ ಮುನ್ನ ರಕ್ತದಾನ …
Read More »ಸುಧಾಕರ್ ಅಯೋಗ್ಯ ಮಂತ್ರಿ: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಬೆಂಗಳೂರು: ಆರೋಗ್ಯ ಸಚಿವ ಸುಧಾಕರ್ ಅಯೋಗ್ಯ ಮಂತ್ರಿಯಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೊರೋನಾ ತೀವ್ರ ಏರಿಕೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ ಎಚ್ಚರಿಕೆ ನೀಡಿತ್ತು. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದರೂ ನಿರ್ಲಕ್ಷಿಸಲಾಯಿತು ಎಂದು ದೂರಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಅವರು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿಲ್ಲ. ಸಮಯ ವ್ಯರ್ಥ ಮಾಡುತ್ತ ಕಾಲ ಕಳೆದರು. ಅವರೊಬ್ಬ ಅಯೋಗ್ಯ ಮಂತ್ರಿ …
Read More »
Laxmi News 24×7