Breaking News

ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್​ಪಿನ್ ಶಿವಕುಮಾರ್​​ ಕೊರೋನಾಗೆ ಬಲಿ

ತುಮಕೂರು: ವಿವಿಧ ಪಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಕೋವಿಡ್‌ನಿಂದ ಮಂಗಳವಾರ ಸಾವನ್ನಪ್ಪಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಕಾಗ್ಗೆರೆ ಗ್ರಾಮದವರಾಗಿದ್ದು, ಮೇ 16ರಂದು ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. 2011ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಈತನ ವಿರುದ್ಧ ಗುಬ್ಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2012ರಲ್ಲಿ ತುಮಕೂರಿನ ಹೊಸ ಬಡಾವಣೆ ಪೊಲೀಸ್‌ …

Read More »

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 3 ಮಹಿಳೆಯರು, ಮೂವರು ಗ್ರಾಹಕರು ಅರೆಸ್ಟ್

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಂತ 3 ಪೊಲೀಸ್ ಠಾಣೆ ಪ್ರದೇಶದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಮಹಿಳೆಯರಲ್ಲಿ ಒಬ್ಬಳು ಬಾಡಿಗೆದಾರಳಾಗಿ ವಾಸಿಸುತ್ತಿದ್ದಾಳೆ. ಆಕೆ ಮೊಬೈಲ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಮನೆಗೆ ಆಹ್ವಾನಿಸುತ್ತಿದ್ದಳು. ಬೇರೆ ಮಹಿಳೆಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಈ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗಿದೆ. …

Read More »

ವೈದ್ಯರ ಮೇಲೆ ಹಲ್ಲೆ ಆರೋಪ: ಇನ್ಸ್​​​ಪೆಕ್ಟರ್​​ ಕ್ಯಾತ್ಯಾಯಿನಿ ಅಮಾನತು​

ಬೆಂಗಳೂರು: ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸಂಜಯನಗರ ಪೊಲೀಸ್​ ಠಾಣೆ ಇನ್ಸ್​​​ಪೆಕ್ಟರ್​​ ಕ್ಯಾತ್ಯಾಯಿನಿ ಸೇರಿ ಮೂರು ಜನ ಕ್ರೈಂ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ. ಸಂಜಯನಗರ ಪೊಲೀಸರ ವಿರುದ್ಧ ಅಕ್ರಮ ರೆಮ್ಡಿಸಿವರ್​ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ನಾಗರಾಜ್​ ಅವರನ್ನು ಠಾಣೆಗೆ ಕರೆಸಿ ಹಲ್ಲೆ ಮಾಡಿದ್ದಲ್ಲದೇ ಐದೂವರೆ ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ …

Read More »

ನಕಲಿ R,T,P,C,R,ವರದಿಯನ್ನು ನೀಡುತ್ತಿದ್ದ ಮೂವರ ಬಂಧನ

ನವದೆಹಲಿ, : ಜನರಿಗೆ ನಕಲಿ ಆರ್‌ಟಿ-ಪಿಸಿಆರ್ ವರದಿಯನ್ನು ನೀಡಿ ವಂಚಿಸುತ್ತಿದ್ದ ತಂಡವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಖಾಸಗಿ ಟೆಸ್ಟಿಂಗ್ ಲ್ಯಾಬ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಬಂಧಿತರಿಂದ ಒಂದು ಲ್ಯಾಪ್‌ಟಾಪ್, ನಕಲಿ ಬಿಲ್‌ಗಳು ಮತ್ತು ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸನ್ನಿ ಹಾಗೂ ಆತನ ಇಬ್ಬರು ಸಹಾಯಕರಾದ ಜೀತೇಂದ್ರ ಸಾಹು ಮತ್ತು ಸುನಿಲ್ ಕುಮಾರ್ ಎಂಬವರು ಬಂಧಿತ ಆರೋಪಿಗಳು ಎಂದು ಪೊಲೀಸರು ವಿವರಗಳನ್ನು ನೀಡಿದ್ದಾರೆ. ಪೊಲೀಸರು …

Read More »

2ನೇ ಅಲೆ ಹೊಡೆತ: ಕೋವಿಡ್ ನಿಂದ 300ಕ್ಕೂ ಅಧಿಕ ಪತ್ರಕರ್ತರು ನಿಧನ

ನವದೆಹಲಿ: ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಗಳಾದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದರು. ನಂತರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ವಿತರಣೆಯಲ್ಲಿ ಆದ್ಯತೆ ನೀಡಿದ್ದರು. ಇದರಿಂದ ಎರಡನೇ ಅಲೆಯಲ್ಲಿ ಪ್ರಾಣಹಾನಿ ಪ್ರಮಾಣ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ ಪತ್ರಕರ್ತರು ಮಾತ್ರ ಈ ವಿಚಾರದಲ್ಲಿ ದುರಾದೃಷ್ಟವಂತರಾಗಿದ್ದರು!   ಕೋವಿಡ್ ತೀವ್ರವಾಗಿ ಹರಡುತ್ತಿದ್ದ ಸಂದರ್ಭದಲ್ಲಿಯೂ ಪತ್ರಕರ್ತರು ನಿರಂತರವಾಗಿ ಫೀಲ್ಡ್ ನಲ್ಲಿದ್ದು …

Read More »

ಗ್ರಾಮ ಪಂಚಾಯತ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಪ್ರಾರಂಭಿಸಲಾಗುವುದು : ಜಿಲ್ಲಾಧಿಕಾರಿ ಎಂ ಜಿ ಹಿರೇಮಠ 

ಮಾಂಜರಿ  – ಕೊರೋನಾ ಪಾಸಿಟಿವ್ ಧೃಢಪಟ್ಟ ವ್ಯಕ್ತಿಗಳು ಹೋಂ ಕ್ವಾರೆಂಟಿನಾಗಿರುವುದರಿಂದ ಮನೆಯ ಜನರಿಗೆಲ್ಲಾ ಸೋಂಕು ಹರಡುವ ಲಕ್ಷಣಗಳು ಗೋಚರಿಸುವುದರಿಂದ ಇದನ್ನು ತೆಡಗಟ್ಟುವ ಉದ್ದೇಶದಿಂದ ಗ್ರಾಮ ಪಂಚಾಯತ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ  ತಿಳಿಸಿದರು. ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರುಗಳಾದ ಡಾಕ್ಟರ್ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಗಳ ಆಶೀರ್ವಾದ ಪಡೆದು ಯಡೂರು …

Read More »

ಬೆಳಗಾವಿ ಜಿಲ್ಲೆಯಲ್ಲಿ 3 ದಿನ ಸಂಪೂರ್ಣ ಲಾಕ್ ಡೌನ್:ಜಿಲ್ಲಾಧಿಕಾರಿ

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ 3 ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿಗಳು ಇಂದು ಹೊಸ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 22, 23 ಹಾಗೂ 24ರಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಆದೇಶ ಹೊರಡಿಸಲಾಗಿದೆ. 22ರ ಬೆಳಗ್ಗೆ 6 ಗಂಟೆಯಿಂದ 24ರ ಬೆಳಗ್ಗೆ 6 ಗಂಟೆಯವರೆಗೂ ಲಾಕ್ ಡೌನ್ ಇರಲಿದೆ. ಇದು ಈಗಾಗಲೆ ಜಾರಿಯಲ್ಲಿರುವ ಲಾಕ್ …

Read More »

ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ

ಎಂ.ಕೆ. ಹುಬ್ಬಳ್ಳಿ : ಇಲ್ಲಿ ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ ವಹಿಸಿರುವುದು ನಿವಾಸಿಗಳಿಗೆ ತೊಂದರೆಯಾಗಿ ಪರಿಣಮಿಸಿದೆ. ತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿರುವುದೂ ತೊಡಕಾಗಿದೆ. ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳು ಕಸದಿಂದ ತುಂಬಿವೆ. ಅದರಿಂದ ಹೊರಸೂಸುತ್ತಿರುವ ದುರ್ನಾತ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೆಳಗಾವಿಯಿಂದ ಧಾರವಾಡ ಕಡೆಯ 1, 2, 3 ಮತ್ತು 4ನೇ ವಾರ್ಡ್‌ಗೆ ಒಳಪಡುವ ಗಾಂಧಿ ನಗರ, ಬಸವ ನಗರ, ಚನ್ನಮ್ಮ …

Read More »

ಸಿಎಂ ಬಿಎಸ್‌ವೈ ಸುದ್ದಿಗೋಷ್ಠಿ: ಲಾಕ್​ಡೌನ್ ವಿಸ್ತರಣೆ ಜೊತೆಗೆ ಪರಿಹಾರದ ಪ್ಯಾಕೇಜ್ ಘೋಷಣೆ ಸಾಧ್ಯತೆ

ಬೆಂಗಳೂರು, ಮೇ 19: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇ 19ರಂದು ಬೆಳಗ್ಗೆ 11.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟದ ಹಿರಿಯ ಸಹದ್ಯೋಗಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಮೇ 24ರವರೆಗೆ ಜಾರಿಯಲ್ಲಿರುವ ಲಾಕ್‍ಡೌನ್ ಅನ್ನು ವಿಸ್ತರಣೆ ಮಾಡುವುದು ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುವ …

Read More »

ಬೆಂಗಳೂರಿನಲ್ಲಿ ರೆಮ್‌ಡೆಸಿವಿರ್‌ ನ ಖಾಲಿ ಬಾಟಲಿಯಲ್ಲಿ ಗ್ಲುಕೋಸ್ ತುಂಬಿಸಿ ಮಾರಾಟ ಮಾಡುತ್ತಿದ್ದ ಓರ್ವ ವೈದ್ಯ ಸಹಿತ ವಾರ್ಡ್‍ಬಾಯ್ ಬಂಧನ

ಬೆಂಗಳೂರು – ನಗರದಲ್ಲಿ ನಕಲಿ ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ಮಾರಾಟ ಮಾಡಿದ ಖಾಸಗಿ ಆಸ್ಪತ್ರೆಯ ವೈದ್ಯ. ಡಾ.ಸಾಗರ ಮತ್ತು ವಾರ್ಡ್‍ಬಾಯ್ ಕೃಷ್ಣ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ‘ರೋಹಿತ್’ ಎಂಬ ಹೆಸರಿನಲ್ಲಿ ಸರಕಾರದಿಂದ ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ತರಿಸುತ್ತಿದ್ದರು ಮತ್ತು ಅವುಗಳಲ್ಲಿ ಅರ್ಧವನ್ನು ರೋಗಿಗಳಿಗಾಗಿ ಬಳಸಲಾಗುತ್ತಿತ್ತು ಮತ್ತು ಉಳಿದವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅವರು ಖಾಲಿ ರೆಮ್‌ಡೆಸಿವಿರ್‌ ಬಾಟಲಿಗಳಲ್ಲಿ ಗ್ಲೂಕೋಸ್ ಅನ್ನು ತುಂಬಿಸಿ ೨೦,೦೦೦ ರೂಪಾಯಿಗೂ ಹೆಚ್ಚು ದರದಲ್ಲಿ ಮಾರಾಟ …

Read More »