Breaking News

ಕೇರಳದಲ್ಲಿ ಮೇ16ರವರೆಗೆ ಲಾಕ್‌ಡೌನ್ : ಸಿಎಂ ಪಿಣರಾಯಿ ವಿಜಯನ್

ತಿರುವನಂತಪುರ: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದೇವರನಾಡು ಕೇರಳದಲ್ಲಿ ಇದೀಗ ಲಾಕ್ ಡೌನ್ ‍ಘೋಷಣೆಯಾಗಿದೆ. ಮೇ 8ರ ಬೆಳಗ್ಗೆ 6 ಗಂಟೆಯಿಂದ ಮೇ16ರವರೆಗೆ ಕೇರಳ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡುತ್ತಿರುವುದಾಗಿ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಬುಧವಾರ ಕೇರಳದಲ್ಲಿ 41,953 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದೇ ಕಾರಣವಾಗಿದೆ. ಇದು ಇದುವರೆಗಿನ ದೈನಂದಿನ ದಾಖಲೆಯಾಗಿದೆ. ಲಾಕ್‌ಡೌನ್ ವೇಳೆ ಯಾವುದಕ್ಕೆಲ್ಲ ವಿನಾಯತಿ ಇರಲಿದೆ ಎಂಬುದು ಮಾರ್ಗಸೂಚಿಯಲ್ಲಿ …

Read More »

ಶಾಕಿಂಗ್‌ ನ್ಯೂಸ್: ಕೊರೊನಾಗೆ ಮತ್ತೊಬ್ಬ ನಟಿ ಬಲಿ

ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗ್ತಿದೆ. ಅನೇಕ ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ಬಲಿಯಾಗ್ತಿದ್ದಾರೆ. ಈಗ ಮತ್ತೊಬ್ಬ ನಟಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿತ್ರ ಚಿಚೋರ್ ನಲ್ಲಿ ನಟಿಸಿದ್ದ ಅಭಿಲಾಶಾ ಪಾಟೀಲ್ ಕೊರೊನಾಕ್ಕೆ ಬಲಿಯಾಗಿದ್ದಾರೆ. ವರದಿ ಪ್ರಕಾರ, ಅಭಿಲಾಶಾ ಪಾಟೀಲ್, ವಾರಣಾಸಿಯಲ್ಲಿ ಸಿನಿಮಾ ಶೂಟಿಂಗ್ ಮಾಡ್ತಿದ್ದರು. ಶೂಟಿಂಗ್ ಮುಗಿಸಿ ಮುಂಬೈಗೆ ವಾಪಸ್ ಆದವರಿಗೆ ಕೊರೊನಾ ಕಾಣಿಸಿಕೊಂಡಿದೆ. ಆರಂಭಿಕ ರೋಗಲಕ್ಷಣ ಕಾಣಿಸಿಕೊಂಡ ನಂತ್ರ ಪರೀಕ್ಷೆ ಮಾಡಲಾಗಿತ್ತು. ಮನೆಯಲ್ಲಿಯೇ ನಟಿ ಚಿಕಿತ್ಸೆ …

Read More »

ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು.. ರೇಣುಕಾಚಾರ್ಯಗೆ ಡಾ. ಕೆ. ಸುಧಾಕರ್ ತಿರುಗೇಟು

ಬೆಂಗಳೂರು: ಶಾಸಕ ಎಂಪಿ ರೇಣುಕಾಚಾರ್ಯ ಅವರು ಇತ್ತೀಚೆಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜೀನಾಮೆಗೆ ಒತ್ತಾಯ ಮಾಡಿದ್ದರು. ಈ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಾ. ಕೆ. ಸುಧಾಕರ್ ಅವರು ರೇಣುಕಾಚಾರ್ಯ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾನು ಈಗಾಗಲೇ ರಾಜೀನಾಮೆ ಕೊಟ್ಟೆ ಇಲ್ಲಿಗೆ ಬಂದಿರೋದು. ರಾಜೀನಾಮೆ ಕೊಟ್ಟು ಕಷ್ಟ ಅನುಭವಿಸಿ ಇಲ್ಲಿಗೆ ಬಂದಿದ್ದೇನೆ. ಸರ್ಕಾರ‌ನೂ ಬಂದಿದೆ. ಈ ಸಮಯದಲ್ಲಿ ನಾನು ರಾಜಕೀಯ ಮಾತಾಡಿಲ್ಲ ಎಂದಿದ್ದಾರೆ. ನಾನು …

Read More »

ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರು ರೋಗಿಗಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬೆಳಗಾವಿ: ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರು ರೋಗಿಗಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎರಡು ಗಂಟೆಯಲ್ಲಿ ನಾಲ್ವರು ರೋಗಿಗಳು ಕುಟುಂಬಸ್ಥರ ಮುಂದೆಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ನಾಲ್ಕು ಗಂಟೆಗಳ ಹಿಂದೆ 56 ವರ್ಷ ವ್ಯಕ್ತಿಯನ್ನ ಬೆಳಗಾವಿಯ ಬಿಮ್ಸ್ ಗೆ ಕರೆತರಲಾಗಿತ್ತು. ಆಕ್ಸಿಜನ್ ಬೆಡ್ ನೀಡುವಂತೆ ರೋಗಿಯ ಸಂಬಂಧಿ ಆಸ್ಪತ್ರೆಯ ಸಿಬ್ಬಂದಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ಬೆಡ್ ಸಿಗುವ ವೇಳೆಗಾಗಲೇ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದರಿಂದ …

Read More »

ಬೆಳಗಾವಿಯ ಆರೋಗ್ಯ ಇಲಾಖೆಯ ನಿನ್ನೆಯ ಕೊರೊನಾ ಬುಲೆಟಿನ್‍ನಲ್ಲಿ ಸುಳ್ಳು ಲೆಕ್ಕ

ಬೆಳಗಾವಿ: ಕಳೆದ 24 ಗಂಟೆಗಳಲ್ಲಿ ಕೊರೊನಾ ಮಹಾಮಾರಿಗೆ ಬರೋಬ್ಬರಿ 42 ಜನ ಸಾವನ್ನಪ್ಪಿದ್ದು, ಹೆಲ್ತ್ ಬುಲೆಟಿನ್ ನಲ್ಲಿ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತೋರಿಸಲಾಗಿದೆ. ಈ ಮೂಲಕ ಸರ್ಕಾರ ಸಾವಿನಲ್ಲೂ ಸುಳ್ಳು ಲೆಕ್ಕ ನೀಡುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 42 ಜನ ಸೋಂಕಿತರ ಶವಗಳನ್ನು ಮಣ್ಣು ಮಾಡಲಾಗಿದ್ದು, ಸಾವಿನ ಸುದ್ದಿಗಳನ್ನು ಕೇಳಿದ ಸಂಬಂಧಿಕರು ಆಘಾತಕ್ಕೋಳಗಿದ್ದಾರೆ. ಕೋರ್ಟ್ ಆವರಣದ ಮುಂದಿರುವ ಅಂಜುಮನ್ ಸ್ಮಶಾನದಲ್ಲಿ 28 ಶವಗಳನ್ನು …

Read More »

ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ ಕೋವಿಡ್ ಕೇರ್ ಆಸ್ಪತ್ರೆ ಆರಂಭ

ಚಿಕ್ಕೋಡಿ: ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ ಕೋವಿಡ್ ಕೇರ್ ಆಸ್ಪತ್ರೆ ಆರಂಭಿಸಲಾಗಿದ್ದು, ಸೋಂಕಿತರಿಗೆ ಆಕ್ಸಿಜನ್ ಬೆಡ್ ಸಹಿತ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ವತಿಯಿಂದ ಆರಂಭಿಸಿರುವ ಕೋವಿಡ್ ಕೇರ್ ಆಸ್ಪತ್ರೆಗೆ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಜೊಲ್ಲೆ ಒಡೆತನದ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ ಕೋವಿಡ್ ಕೇರ್ ಆಸ್ಪತ್ರೆ ತೆರೆಯಲಾಗಿದೆ. ಈ ಆಸ್ಪತ್ರೆಯಲ್ಲಿ ಕೊವಿಡ್ …

Read More »

ಚುನಾವಣಾ ಪ್ರಚಾರದ ವೆಳೆ ಸಿಎಂ ಪ್ರಾಥಮಿಕ ಸಂಪರ್ಕದಲ್ಲಿದ್ದ ಹೋಟೆಲ್ ಸಿಬ್ಬಂದಿ ಬೆಳಗಾವಿಯ ಹೋಟೆಲ್ ನ 12 ಸಿಬ್ಬಂದಿಗೆ ಇದೀಗ ಕೊರೊನಾ ಸೋಂಕು ಪತ್ತೆ

ಬೆಳಗಾವಿ: ಕೆಲ ದಿನಗಳ ಹಿಂದೆ ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಅಂದು ಸಿಎಂ ಯಡಿಯೂರಪ್ಪನವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಬೆಳಗಾವಿಯ ಹೋಟೆಲ್ ನ 12 ಸಿಬ್ಬಂದಿಗೆ ಇದೀಗ ಕೊರೊನಾ ಸೋಂಕು ಪತ್ತೆಯಾಗಿದೆ.   ಏಪ್ರಿಲ್ 16ರಂದೆ ಈ ಸಿಬ್ಬಂದಿಗಳ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತಾದರೂ 20 ದಿನಗಳ ಬಳಿಕ ವರದಿ ಬಂದಿದ್ದು, ಇದೀಗ 12 ಜನರಲ್ಲಿ ಸೋಂಕು ದೃಢ್ಪಟ್ಟಿದೆ. …

Read More »

ಧಾರವಾಡ : ಗ್ರಾಮಗಳ ತುಂಬಾ ಕೊರೊನಾಯಣ

ಧಾರವಾಡ: ಅಮ್ಮ ಮೈಗೆ ಹಚ್ಚುವ ಸೋಪುಗಳು ಯಾಕೆ ವಾಸನೆ ಬರುತ್ತಿಲ್ಲ? ಎಂದು ಪ್ರಶ್ನೆ ಕೇಳುತ್ತಿರುವ ಹಳ್ಳಿಯ ಮಕ್ಕಳು. ಗುಟಕಾವೂ ರಚಿಸುತ್ತಿಲ್ಲವಲ್ಲೋ ಎಂದು ಪರಸ್ಪರ ಸ್ನೇಹಿತರನ್ನು ಕೇಳಿಕೊಳ್ಳುತ್ತಿರುವ ಹಳ್ಳಿಯ ಪಡ್ಡೆ ಹುಡುಗರು. ಮೈ ಕೈ ನೋವು, ನೆಗಡಿ, ಕೆಮ್ಮಿನಿಂದ ಬಳಲುತ್ತಿರುವ ರೈತ ಸಮೂಹ. ಒಟ್ಟಿನಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶವನ್ನು ಕೋವಿಡ್‌ ಸಣ್ಣಗೆ ಪ್ರವೇಶ ಮಾಡಿಯಾಗಿದ್ದು, ಇನ್ನೇನಿದ್ದರೂ ಅದನ್ನು ಎದುರಿಸುವುದೊಂದೇ ದಾರಿ. ಹೌದು, ಇದು ವಾಸ್ತವ. ಹೆಚ್ಚು ಕಡಿಮೆ ಒಂದು ತಿಂಗಳ ಮೊದಲು …

Read More »

ಚಿತಾಗಾರಗಳ ಅಕ್ಕಪಕ್ಕದಲ್ಲಿ ಮೃತದೇಹಗಳ ಅವಶೇಷಗಳು..!

ಬೆಂಗಳೂರು,ಮೇ.5-ಕೊರೊನಾ ಸೋಂಕಿನಿಂದ ಮೃತಪಟ್ಟ ನಿಮ್ಮ ಕುಟುಂಬ ಸದಸ್ಯರ ಮೃತದೇಹಗಳ ಶವಸಂಸ್ಕಾರ ಸಮರ್ಪಕವಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲ ಅಂದರೆ ಮೃತದೇಹಗಳ ಅರೆಬೆಂದ ದೇಹದ ಭಾಗಗಳು ನಾಯಿ ನರಿ ಪಾಲಾಗಲಿದೆ.ಹೇಗೆ ಅಂತಿರಾ. ಹಾಗಾದರೆ ಈ ಸುದ್ದಿ ಓದಿ.. ನಗರದಲ್ಲಿ ದಿನೇ ದಿನೇ ನೂರಾರು ಮಂದಿ ಕೊರೊನಾ ಸೋಂಕಿನಿಂದ ಬಲಿಯಾಗುತ್ತಿದ್ದಾರೆ. ಸಾಯುತ್ತಿರುವವರ ಶವಗಳ ಸಂಸ್ಕಾರ ಮಾಡಲು ನಗರದಲ್ಲಿ ಸ್ಮಶಾನಗಳು ಸಾಕಾಗುತ್ತಿಲ್ಲ. ಹೀಗಾಗಿ ಪ್ರತಿನಿತ್ಯ ನೂರಾರು ಶವಗಳನ್ನು ಬೇಕಾಬಿಟ್ಟಿ ಸುಡಲಾಗುತ್ತಿದೆ. ಈಗಾಗಲೇ ಸುಮನಹಳ್ಳಿ ರುದ್ರಭೂಮಿಯಲ್ಲಿ ತಾಂತ್ರಿಕ …

Read More »

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ

ಹೊಸಪೇಟೆ (ವಿಜಯನಗರ): ಕೋವಿಡ್‌ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ನಗರದ ರೋಟರಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಸೆಕ್ಷನ್‌ 144 ಕರ್ಫ್ಯೂ ಜಾರಿಯಲ್ಲಿರುವುದರಿಂದ ಜನ ಒಂದೆಡೆ ಗುಂಪು ಗೂಡುವಂತಿಲ್ಲ. ಆದರೆ, ಬಿಜೆಪಿ ಕಾರ್ಯಕರ್ತರು ಒಂದೆಡೆ ಸೇರಿ ಪ್ರತಿಭಟನೆ ನಡೆಸಿದರು. ಎಲ್ಲರೂ ಮಾಸ್ಕ್‌ ಧರಿಸಿದ್ದರು. ಆದರೆ, ಅಂತರವಿರಲಿಲ್ಲ. ಪಟ್ಟಣ ಠಾಣೆಯ ಕೂಗಳತೆಯ ದೂರದಲ್ಲೇ ಇರುವ ರೋಟರಿ ವೃತ್ತದಲ್ಲಿ ಏಕಾಏಕಿ ಪ್ರತಿಭಟನೆ ನಡೆಸಿದ್ದರು. ‘ಪೊಲೀಸ್‌ ಇಲಾಖೆಯಿಂದ ಅನುಮತಿ …

Read More »