ನವದೆಹಲಿ, ಮೇ 14: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಅಭಾವ ಸೃಷ್ಟಿಯಾಗಿರುವುದು ಅಂಕಿ-ಅಂಶಗಳ ಸಹಿತ ಸಾಬೀತಾಗಿದೆ. ದಿನದಿಂದ ದಿನಕ್ಕೆ ಕೊವಿಡ್-19 ಲಸಿಕೆ ವಿತರಣೆ ಪ್ರಮಾಣ ಇಳಿಮುಖ ಆಗುತ್ತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಒಂದು ದಿನದಲ್ಲಿ 30 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡುತ್ತಿದ್ದ ಸಂಖ್ಯೆ ಇದೀಗ ಅರ್ಧಕ್ಕರ್ಧ ತಗ್ಗಿದೆ. ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 118 ದಿನಗಳಲ್ಲಿ 17,91,77,029 ಜನರಿಗೆ ಲಸಿಕೆ ನೀಡಲಾಗಿದೆ. ಗುರುವಾರ ರಾತ್ರಿ 8 ಗಂಟೆ …
Read More »ರಾಜ್ಯಕ್ಕೆ ಲಭ್ಯವಾದ ಆಮ್ಲಜನಕ ಎಷ್ಟು? ಎಚ್‌ಡಿಕೆ -ತೇಜಸ್ವಿ ಸೂರ್ಯ ಟ್ವೀಟ್ ಜಗಳ
ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಮಾಡಿದೆ ಎಂಬ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಮಧ್ಯೆ ಟ್ವೀಟ್ ಸಮರ ನಡೆಸಿದೆ. ‘ಕರ್ನಾಟಕಕ್ಕೆ ಪ್ರತಿ ನಿತ್ಯದ 1,200 ಟನ್ ಆಮ್ಲಜನಕ ಪೂರೈಸಬೇಕು ಎಂಬ ನ್ಯಾಯಾಲಯದ ಆದೇಶ ನಂತರವೂ ಕೇಂದ್ರ ಸರ್ಕಾರ ಕೇವಲ 120 ಟನ್ ಆಮ್ಲಜನಕ ಪೂರೈಕೆ ಮಾಡಿದೆ. ಆದರೆ, ಉತ್ತರ ಪ್ರದೇಶಕ್ಕೆ 1,680 ಟನ್ ಆಮ್ಲಜನಕ …
Read More »ಮೇ ಅಂತ್ಯದ ತನಕ ಲಸಿಕೆ ಸಿಗಲ್ಲ; ಸುಪ್ರೀಂಗೆ 9 ರಾಜ್ಯಗಳ ಅಫಿಡೆವಿಟ್
ನವದೆಹಲಿ, ಮೇ 13; ಮೇ ಅಂತ್ಯದ ವೇಳೆಗೆ ನಾವು ಬೇಡಿಕೆ ಇಟ್ಟಿರುವ ಕೋವಿಡ್ ಲಸಿಕೆ ಉತ್ಪಾದಕರಿಂದ ರಾಜ್ಯಕ್ಕೆ ತಲುಪಬಹುದು ಎಂದು 9 ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿವೆ. ಸುಪ್ರೀಂಕೋರ್ಟ್ ಕೋವಿಡ್ ಲಸಿಕೆ ಪೂರೈಕೆ ಬಗ್ಗೆ ಸ್ವಯಂ ಪ್ರೇರಿತ ಅರ್ಜಿಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಲಸಿಕೆ ಬರುವ ತನಕ 18-44 ವರ್ಷದವಿಗೆ ಲಸಿಕೆ ನೀಡುವುದು ಕಷ್ಟಸಾಧ್ಯವಾಗಲಿದೆ ಎಂದು ರಾಜ್ಯಗಳು ಹೇಳಿವೆ. ಪಂಜಾಬ್, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ, …
Read More »ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ಬೆಂಗಳೂರು, ಮೇ 13; ಕೋವಿಡ್ ಪಿಡುಗು ತೀವ್ರವಾಗಿದ್ದು, ಇಡೀ ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ಹೀಗಾಗಿ ಈ ಬಾರಿ ಯಾರೂ ನನ್ನ ಜನ್ಮದಿನ ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಗುರುವಾರ ಪತ್ರಿಕಾ ಪ್ರಕಟಣೆ ಮೂಲಕ ಅವರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಗೆ ಈ ಕುರಿತು ಮನವಿ ಮಾಡಿದ್ದಾರೆ. ಮೇ 15ರಂದು ಡಿ. ಕೆ. ಶಿವಕುಮಾರ್ 59ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. …
Read More »ಟ್ರಾಯ್: 4ಜಿ ಡೌನ್‌ಲೋಡ್ ಸ್ಪೀಡ್‌ನಲ್ಲಿ ರಿಲಯನ್ಸ್ ಜಿಯೋ ಎಲ್ಲರಿಗಿಂತ ಮುಂದೆ
ನವದೆಹಲಿ, ಮೇ 13: ರಿಲಯನ್ಸ್ ಜಿಯೋ, ಪ್ರತಿ ಸೆಕೆಂಡ್‌ಗೆ 20.1 ಮೆಗಾಬೈಟ್ ಡೇಟಾ ಡೌನ್‌ಲೋಡ್ ಪ್ರಮಾಣದಲ್ಲಿ 4ಜಿ ಸ್ಪೀಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಏಪ್ರಿಲ್ ತಿಂಗಳ ಅಪ್‌ಲೋಡ್ ವೇಗದ ವಿಭಾಗದಲ್ಲಿ ವೊಡಾಫೋನ್ 6.7 Mbpsನೊಂದಿಗೆ ಇತರೆ ಕಂಪೆನಿಗಳಿಗಿಂತ ಮುಂಚೂಣಿಯಲ್ಲಿದೆ ಎಂದು ದೂರಸಂಪರ್ಕ ನಿಯಂತ್ರಕ ಸಂಸ್ಥೆ ಟ್ರಾಯ್‌ನ ಇತ್ತೀಚಿನ ಮಾಹಿತಿ ತಿಳಿಸಿದೆ. ತನ್ನ ಅತ್ಯಂತ ನಿಕಟ ಸ್ಪರ್ಧಿ ವೊಡಾಫೋನ್‌ಗಿಂತಲೂ ಮೂರು ಪಟ್ಟು ಅಧಿಕ ಡೌಲ್‌ಲೋಡ್ ವೇಗವನ್ನು ರಿಲಯನ್ಸ್ ಜಿಯೋ ಹೊಂದಿದೆ. …
Read More »ಭಾರೀ ಚರ್ಚೆಗೆ ಕಾರಣವಾದ ಸದಾನಂದ ಗೌಡರ ಲಸಿಕೆ ಹೇಳಿಕೆ
ಬೆಂಗಳೂರು, ಮೇ 13; “ಕಂಪನಿಗಳು ಅಗತ್ಯ ಪ್ರಮಾಣದಷ್ಟು ಲಸಿಕೆ ತಯಾರು ಮಾಡದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?” ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ನೀಡಿದ ಹೇಳಿಕೆ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿದೆ. ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಸದಾನಂದ ಗೌಡರು, “ಹೈಕೋರ್ಟ್ ನಾಳೆಯೇ ಲಸಿಕೆ ಬೇಕು ಎನ್ನುತ್ತದೆ. ಕಂಪನಿಗಳು ಅಗತ್ಯ ಪ್ರಮಾಣದಷ್ಟು ಲಸಿಕೆ ತಯಾರು ಮಾಡದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?” …
Read More »ಆಮ್ಲಜನಕದ ಸಿಲಿಂಡರ್‌ಗೆ ಪ್ರತಿಯಾಗಿ ಲೈಂಗಿಕತೆಯನ್ನು ಕೇಳಿದ ವ್ಯಕ್ತಿ; ನೆಟ್ಟಿಗರ ಆಕ್ರೋಶ
ನವದೆಹಲಿ: COVID-19_ ಸಾಂಕ್ರಾಮಿಕದ ಎರಡನೇ ಅಲೆಯ ಅಡಿಯಲ್ಲಿ ರಾಷ್ಟ್ರವು ಕಂಗಾಲಾಗಿರುವ ಈ ಸಮಯದಲ್ಲಿ, ಅಮಾನವೀಯ ನಡವಳಿಕೆಗಳ ಘಟನೆಗಳು, ಕಿರುಕುಳಗಳು ಹೆಚ್ಚಾಗುತ್ತಿವೆ. ಈ ಸವಾಲಿನ ಸನ್ನಿವೇಶಗಳು ಮಾನವೀಯತೆಯ ಕೆಟ್ಟದ್ದನ್ನು ಹೊರತಂದಿವೆ. ರಾಷ್ಟ್ರದಲ್ಲಿ ಆಮ್ಲಜನಕದ ಬಿಕ್ಕಟ್ಟು ಮುಂದುವರಿದಂತೆ, ಕೆಲವೇ ವ್ಯಕ್ತಿಗಳು ಕಾಸ್ಟಿಂಗ್ ಕೌಚ್ ತರಹದ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಇನ್ನೊಬ್ಬರ ನೋವು ಮತ್ತು ಅಸಹಾಯಕತೆಯನ್ನು ಬಳಸುತ್ತಿದ್ದಾರೆ. ಅಂತಹ ಒಂದು ಆಘಾತಕಾರಿ ಘಟನೆಯನ್ನು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್ ಎನ್ನುವ ಖಾತೆಯಲ್ಲಿ …
Read More »ಸಿಎಂ, ಸಚಿವರ 1 ವರ್ಷದ ವೇತನ ಕೋವಿಡ್ ಪರಿಹಾರ ನಿಧಿಗೆ
ಬೆಂಗಳೂರು, ಮೇ 13; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಭಾರೀ ಆಘಾತವನ್ನು ಉಂಟು ಮಾಡಿದೆ. ಸರ್ಕಾರ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ 14 ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದೆ. ಪರಿಹಾರ ಕಾರ್ಯಗಳಿಗಾಗಿ ಸಚಿವರ ವೇತನವನ್ನು ಪರಿಹಾರ ನಿಧಿಗೆ ನೀಡಲಾಗುತ್ತದೆ. ಗುರುವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಸಂಪುಟದ 32 ಸಚಿವರು ಒಂದು ವರ್ಷದ ವೇತನವನ್ನು ಕೋವಿಡ್ -19 ಪರಿಹಾರ ನಿಧಿಗೆ ನೀಡಲಿದ್ದಾರೆ. …
Read More »ಕೋವಿಡ್: 12ದಿನದಲ್ಲಿ ಒಂದೇ ಕುಟುಂಬದ ನಾಲ್ವರ ಸಾವು; ಇಬ್ಬರು ಮಕ್ಕಳು ಅನಾಥ
ನವದೆಹಲಿ: ಭಾರತದಲ್ಲಿ ಕೋವಿಡ್ ನ ಎರಡನೇ ರೂಪಾಂತರಿ ಅಲೆ ತೀವ್ರಗತಿಯಲ್ಲಿ ಹರಡುತ್ತಿದೆ. ಕೋವಿಡ್ ಸೋಂಕಿನಿಂದ ಕುಟುಂಬಗಳು ಒಡೆದು ಹೋಗಿದ್ದು, ಜನರ ಬದುಕು ಹಳಿತಪ್ಪಿದ ರೈಲಿನಂತಾಗಿದೆ ಎಂದು ತಿಳಿಸಿದೆ. ಕೋವಿಡ್ ಸೋಂಕಿನಿಂದ ಸಂಭವಿಸಿದ ಹೃದಯವಿದ್ರಾವಕ ಘಟನೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದು, ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲೂ ಇಂತಹ ಘಟನೆಯೊಂದು ನಡೆದಿದೆ. ಕೋವಿಡ್ ಸೋಂಕಿನಿಂದಾಗಿ ತಂದೆ, ತಾಯಿ ಮತ್ತು ಅಜ್ಜ, ಅಜ್ಜಿ ನಿಧನರಾಗಿದ್ದು, ಇದರ ಪರಿಣಾಮ ಅರು ಮತ್ತು ಎಂಟು ವರ್ಷದ ಇಬ್ಬರು ಹೆಣ್ಣುಮಕ್ಕಳು …
Read More »ಬಿಜೆಪಿ ಸರ್ಕಾರದ ಡಬಲ್ ಇಂಜಿನ್ ನಿಂತುಹೋಗಿದೆ – KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್
ಬೆಂಗಳೂರು : ‘ಕರ್ನಾಟಕದ ಏಳಿಗೆಗೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಡಬಲ್ ಇಂಜಿನ್ ರೀತಿ ಕೆಲಸ ಮಾಡುತ್ತವೆ ಎಂದು ಹೇಳಿದ್ದರು. ಆದರೆ ಕೋವಿಡ್ ನಿರ್ವಹಣೆ, ಆಕ್ಸಿಜನ್, ಲಸಿಕೆ ಪೂರೈಕೆ ವಿಚಾರದಲ್ಲಿ ಈ ಡಬಲ್ ಇಂಜಿನ್ ಗಳು ಕೆಟ್ಟು ನಿಂತಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ‘ಚಾಮರಾಜನಗರದಲ್ಲಿ 24 ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು …
Read More »