Breaking News

ಆಯುಷ್ ಪದ್ಧತಿಗಳ ಮೂಲಕ ಕೋವಿಡ್ ನಿಯಂತ್ರಣಕ್ಕೆ ಔಷಧಿ ಬಿಡುಗಡೆ

ಬೆಂಗಳೂರು, ಮೇ 21- ಆಯುಷ್ ಪದ್ಧತಿಗಳ ಮೂಲಕ ಕೋವಿಡ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಆಯುಷ್ ಸಚಿವಾಲಯ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದು, ಮನೆಯಲ್ಲಿ ಕ್ವಾರೆಂಟೈನ್ ಆಗಿರುವ ಕೋವಿಡ್- 19 ರೋಗಿಗಳಿಗೆ ಆಯುಷ್ 64 ಔಷಧಿಯನ್ನು ವಿತರಿಸಲು ಮುಂದಾಗಿದೆ. ಆಯುಷ್ ಸಚಿವಾಲಯವು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಜೊತೆಗೆ ಆಯುಷ್ 64 ಆಯುರ್ವೇದ ಮಾತ್ರೆಯ ಮೌಲ್ಯಮಾಪನ ಮಾಡಲು ಬಹು-ಕೇಂದ್ರ ಸಂಶೋಧನೆ ನಡೆಸಿತ್ತು. ಈ ಪ್ರಯೋಗದಲ್ಲಿ ಸ್ಟ್ಯಾಂಡರ್ಡ್ ಆರೈಕೆ ಜೊತೆಗೆ …

Read More »

ಕೊರೊನಾ ಎರಡನೇ ಅಲೆ ಹೆಚ್ಚಳಕ್ಕೆ ಧಾರ್ಮಿಕ ಕಾರ್ಯಕ್ರಮಗಳು, ವಲಸೆ ಕಾರಣ: ಐಸಿಎಂಆರ್

ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿ ಹಬ್ಬಲು ಧಾರ್ಮಿಕ ಕಾರ್ಯಕ್ರಮಗಳು ಮತ್ತು ವಲಸೆ ಪ್ರಮುಖ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ನೇತೃತ್ವದ ಅಧ್ಯಯನ ತಂಡವೊಂದು ವರದಿ ಮಾಡಿದೆ. ಐಸಿಎಂಆರ್ ಅಧ್ಯಯನದ ಪ್ರಕಾರ, ವಿದೇಶಿ ಪ್ರಯಾಣಿಕರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು, ದೇಶದಲ್ಲಿನ ಜನರು ಆಂತರಿಕವಾಗಿ ವಲಸೆ ಹೋಗಿರುವುದು ಮತ್ತು ದೇಶದಾದ್ಯಂತ ನಡೆದ ಹಲವು ಧಾರ್ಮಿಕ ಕಾರ್ಯಕ್ರಮಗಳು ಕೊರೊನಾ ಎರಡನೇ ಅಲೆ ಹೆಚ್ಚಳಕ್ಕೆ ನೇರವಾದ ಕಾರಣ. ಮಿಂಟ್ …

Read More »

ಕ್ರಿಕೆಟ್ ಆಡಬೇಡಿ, ಮಾಸ್ಕ್ ಹಾಕ್ಕೊಳ್ಳಿ ಎಂದಿದ್ದಕ್ಕೆ ಪಿಡಿಒ ಮೇಲೆ ಯುವಕನಿಂದ ಹಲ್ಲೆ

ಹುಬ್ಬಳ್ಳಿ: ಕ್ರಿಕೆಟ್ ಆಡಬೇಡಿ, ಮಾಸ್ಕ್ ಹಾಕಿಕೊಳ್ಳಿ ಎಂದು ತಿಳಿ ಹೇಳಿದ್ದಕ್ಕೆ ಗ್ರಾಮ ಪಂಚಾಯತಿ ಪಿಡಿಒ ಮೇಲೆ ಯುವಕನೊಬ್ಬ ಹಲ್ಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಹಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ. ಹಳ್ಳಿಗೇರಿ ಗ್ರಾಮ ಪಂಚಾಯತಿ ಪಿಡಿಒ ಮೃತ್ಯುಂಜಯ ಮೆಣಸಿನಕಾಯಿ ಅವರೇ ಹಲ್ಲೆಗೊಳಗಾದ ವ್ಯಕ್ತಿ. ಪಿಡಿಒ ಬುದ್ಧಿವಾದ ಹೇಳಿದ್ದಕ್ಕೆ ಪುಂಡ ಯುವಕನೊಬ್ಬ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಗ್ರಾಮದ ಮೈದಾನದಲ್ಲಿ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಲಾಕ್‍ಡೌನ್ ಇದೆ, ಕ್ರಿಕೆಟ್ …

Read More »

ರೇಪ್​ ಕೇಸ್​ನಿಂದ ತೆಹಲ್ಕಾ ಮ್ಯಾಗಜಿನ್​ ಸಂಸ್ಥಾಪಕ ತರುಣ್​ ತೇಜ್​ಪಾಲ್​ ಖುಲಾಸೆ: ಗೋವಾ ನ್ಯಾಯಾಲಯ ಆದೇಶ

ಪಣಜಿ, ಮೇ 21: ಗೋವಾದ ಸೆಷನ್ಸ್ ನ್ಯಾಯಾಲಯದಿಂದ ಶುಕ್ರವಾರದಂದು ಖ್ಯಾತ ಪತ್ರಕರ್ತ, ತೆಹಲ್ಕಾ ಸಹ ಸಂಸ್ಥಾಪಕ, ಸಂಪಾದಕ ತರುಣ್ ತೇಜಪಾಲ್ ಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ತಮ್ಮ ಸಂಸ್ಥೆಯ ಮಹಿಳಾ ಸಹೋದ್ಯೋಗಿ ಅಸಭ್ಯವಾಗಿ ನಡೆದುಕೊಂಡ ಘಟನೆಗೆ ಸಂಬಂಧಿಸಿದ ಪ್ರಕರಣದಿಂದ ತೇಜಪಾಲ್ ಖುಲಾಸೆಗೊಂಡಿದ್ದಾರೆ. ಗೋವಾದ ಸೆಷನ್ಸ್ ನ್ಯಾಯಾಲಯದ ಜಡ್ಜ್ ಕ್ಷಮಾ ಜೋಶಿ ಅವರು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ, ತೇಜ್ ಪಾಲ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ. ಈ ಪ್ರಕರಣ ಬೆಳಕಿಗೆ …

Read More »

ಮುಂಬೈ ಬಾರ್ಜ್‌ ದುರಂತ- ಕ್ಯಾಪ್ಟನ್‌ ವಿರುದ್ಧ ಎಫ್‌ಐಆರ್‌

ಮುಂಬೈ, ಮೇ 21: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಂಬೈನಿಂದ 35 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮುಳುಗಿದ್ದ ಬಾರ್ಜ್ ಪಿ -305 ರ ಕ್ಯಾಪ್ಟನ್ ವಿರುದ್ಧ ನಿರ್ಲಕ್ಷ್ಯದಿಂದ ಜನರ ಸಾವಿಗೆ ಕಾರಣದ ಆರೋಪದಲ್ಲಿ ಮುಂಬೈ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. 261 ಜನರನ್ನು ಹೊತ್ತೊಯ್ಯುತ್ತಿದ್ದ ಬಾರ್ಜ್ ಪಿ -305 ರ ಸೋಮವಾರ ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಳುಗಿತ್ತು. ಈ ಘಟನೆ ನಡೆದು ಐದು ದಿನಗಳಾಗಿದ್ದು ಈವರೆಗೆ 49 ಶವಗಳು …

Read More »

ಬಾಗಲಕೋಟೆಯಿಂದ ಗದಗಕ್ಕೆ ಶವ ತಂದ ಕುಟುಂಬಸ್ಥರು, ಆದರೆ ಸೋಂಕಿತ ವೃದ್ಧನ ಶವ ಸಂಸ್ಕಾರಕ್ಕೆ ಗ್ರಾಮಸ್ಥರಿಂದ ವಿರೋಧ

ಗದಗ: ಜಿಲ್ಲೆಯುಲ್ಲಿ ಕೊರೊನಾ ಸೋಂಕಿತ ವೃದ್ಧನ ಶವ ಸಂಸ್ಕಾರಕ್ಕೆ ಗ್ರಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಅಮರಗೋಳದಲ್ಲಿ ನಡೆದಿದೆ. ಮೂಲತಃ ಅಮರಗೋಳ ಗ್ರಾಮದ 72 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದರು. ಗ್ರಮದಲ್ಲೇ ವೃದ್ಧನ ಶವ ಸಂಸ್ಕಾರ ಮಾಡಲು ಕುಟುಂಬಸ್ಥರು ಚಿಂತಿಸಿದ್ದರು. ಆದರೆ ಗ್ರಾಮದ ಜನ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ಮಾತಿನ ಚಕಮಕಿ ನಡೆದಿದೆ. ಮೃತ ವೃದ್ಧ ಗದಗ ಬಿಟ್ಟು ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ …

Read More »

ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳು ನಾಳೆಯಿಂದ ಸೀಲ್​ಡೌನ್

ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದು, ದಿನೇದಿನೆ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಾಳೆ ಬೆಳಗ್ಗೆ 10 ಗಂಟೆಯಿಂದ ಸೀಲ್​​ಡೌನ್​ ಜಾರಿ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್​ ತಿಳಿಸಿದ್ದಾರೆ. ಉತ್ತರಕನ್ನಡದ ಸಿದ್ದಾಪುರ, ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡು ಪಟ್ಟಣಗಳು ನಾಳೆಯಿಂದ ಮೇ 24ರ ಸಂಜೆಯವರೆಗೆ ಸೀಲ್​ಡೌನ್ ಆಗಲಿವೆ. ಇನ್ನು ಉಳಿದ ಎಲ್ಲ ತಾಲೂಕುಗಳು ಶನಿವಾರ ಮತ್ತು ಭಾನುವಾರ ಮಾತ್ರ ಸೀಲ್​ಡೌನ್​ ಆಗಲಿವೆ …

Read More »

ಮಾಜಿ ಪ್ರಧಾನಿ ರಾಜೀವ್ ಗಾಂಧಿ 30ನೇ ಪುಣ್ಯತಿಥಿ: ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರಿಂದ ಗೌರವ, ನಾಯಕರಿಂದ ಸ್ಮರಣೆ

ನವದೆಹಲಿ: ಮೇ 21, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿ. 30 ವರ್ಷಗಳ ಹಿಂದೆ ಮೇ.21, 1991ರಲ್ಲಿ ತಮಿಳು ನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಜೀವ್ ಗಾಂಧಿಯವರು ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ ಟಿಟಿಇ ಕಾರ್ಯಕರ್ತರ ಆತ್ಮಹತ್ಯಾ ದಾಳಿಗೆ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಇಂದು ಅವರ ಜಯಂತಿ ಸಂದರ್ಭದಲ್ಲಿ ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಹಲವು ರಾಜಕೀಯ ನಾಯಕರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕಾಂಗ್ರೆಸ್ ಮುಖಂಡರು …

Read More »

ಸಾಮಾನ್ಯ ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೆ ಇನ್ನೊಂದು ನ್ಯಾಯ, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಶೆಟ್ಟರ್ ಆಪ್ತ..!

ಹುಬ್ಬಳ್ಳಿ: ಅವಳಿ ನಗರಿಯಲ್ಲಿ ಸಾಮಾನ್ಯ ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೆ ಇನ್ನೊಂದು ನ್ಯಾಯ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವ ಜಗದೀಶ್ ಶೆಟ್ಟರ್ ಆಪ್ತ ಹಾಗೂ ಬಿಜೆಪಿ ಮುಖಂಡ ಆಗಿರುವ ಮಲ್ಲಿಕಾರ್ಜುನ ಸಾಹುಕಾರ್ ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದಾರೆ. ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾಹುಕಾರ್ ತಮ್ಮ 25ನೇ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿಲ್ಲ. ನಿಯಮಗಳ ಉಲ್ಲಂಘಿಸಿ ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವ ಸಮಾರಂಭ ಮಾಡಿದ್ದಾರೆ. ಮೇ 18 ರಿಂದ …

Read More »

ಕೋವಿಡ್​ನಿಂದ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್​ ನಿಧನ

ಬೆಳಗಾವಿ: ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದ ರೈತ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್​ (78) ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಬೆಳಗಾವಿ ‌ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರಾಗಿದ್ದ ಬಾಬಾಗೌಡ ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ವಾರದ ಹಿಂದೆ ಬಾಬಾಗೌಡ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಾಬಾಗೌಡ ಅವರು 1989ರಲ್ಲಿ ಬೆಳಗಾವಿ …

Read More »