Breaking News

ಪತ್ನಿಯನ್ನ ಕೆಎಎಸ್​ ಅಧಿಕಾರಿ ಮಾಡಿಸಿದ್ದವ ಕರೊನಾಗೆ ಬಲಿ

ಶಿವಮೊಗ್ಗ: ಮದುವೆ ಆದ ಮೇಲೆ ಹೆಂಡತಿಯನ್ನ ಚೆನ್ನಾಗಿ ಓದಿಸಿದ್ದ. ಕೆಎಎಸ್​ ಅಧಿಕಾರಿ ಸ್ಥಾನಕ್ಕೇರಲೂ ಬೆನ್ನೆಲುಬಾಗಿ ನಿಂತಿದ್ದ. ತಾನು ಕಂಡಿದ್ದ ಕನಸು ನನಸಾದ ಖುಷಿಯಲ್ಲಿ ಬದುಕಿನ ಪಯಣ ನಡೆಸಬೇಕಿದ್ದವ ಮಹಾಮಾರಿ ಕರೊನಾಗೆ ಬಲಿಯಾಗಿದ್ದಾನೆ. ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ. ಈತ ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಮದುವೆಯಾಗಿದ್ದ. ನಾನಂತೂ ಓದಿಲ್ಲ ಹಾಗಾಗಿ ಹೆಂಡತಿಯಾದರೂ ಓದಿ ಕೆಎಎಸ್ ಅಧಿಕಾರಿ ಆಗಲಿ ಎಂದು ಕನಸುಕಂಡಿದ್ದ‌. ಹೀಗಾಗಿ …

Read More »

ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ.. ಸೂಚಿಸಿದ್ರೂ ಕ್ರಮ ಕೈಗೊಂಡಿಲ್ಲ ಎಂದು ಶಾಸನ ಎಸ್.ರಾಮಪ್ಪ ಕಿಡಿ

ದಾವಣಗೆರೆ: ಜಿಲ್ಲೆಯ ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಆರೋಪ ಮಾಡಿದ್ದು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದರು ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ. ಕೊರೊನಾ ಲಾಕ್ಡೌನ್ ವೇಳೆ ಹರಿಹರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದಕ್ಕೆ ಸಾಕ್ಷಿಯಾಗಿ ರಾಜನಹಳ್ಳಿಯಲ್ಲಿ ಗ್ರಾಮಸ್ಥರು ಟಿಪ್ಪರ್ ತಡೆದು ಆಕ್ರೋಶ ಹೊರ ಹಾಕಿದ್ದರು. ಈ ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 10 …

Read More »

ಕೋವಿಡ್​ ಸೋಂಕಿತರ ಕುಟುಂಬಸ್ಥರಿಗೆ ಸ್ಥಳೀಯರ ಕಿರುಕುಳ.. ಬೆಂಕಿ ಹಚ್ಚಿಕೊಂಡು ಸಾಯ್ತೀವಿ. ಕಣ್ಣೀರಿಟ್ಟ ಮಹಿಳೆಯರು

ಅರಕಲಗೂಡು: ಕೋವಿಡ್ ಕೇರ್ ಸೆಂಟರ್​​​​​ಗೆ ದಾಖಲಾಗಿರುವ ರೋಗಿಗಳ ಕುಟುಂಬಸ್ಥರಿಗೆ ಗ್ರಾಮಸ್ಥರು ಬೆದರಿಕೆ ಹಾಕಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ತಾಲೂಕಿನ ಎಚ್.ಆರ್.ಪಿ. ವಡ್ಡರಹಳ್ಳಿ ಗ್ರಾಮದ ವಿವಿಧ ಮನೆಯ ಐವರು ಪುರುಷರಿಗೆ ಕೋವಿಡ್ ಸೋಂಕು ದೃಢವಾಗಿದ್ದ ಹಿನ್ನೆಲೆ ಅವರೆಲ್ಲ ಕೋವಿಡ್ ಸೆಂಟರ್​​ಗೆ ದಾಖಲಾಗಿದ್ದರು. ಈ ವೇಳೆ, ಗ್ರಾಮದಲ್ಲಿ ರೋಗಿಯ ಕುಟುಂಬದಲ್ಲಿರುವ ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದು, ಮನೆಯಿಂದ ಹೊರ ಬಾರದಂತೆ ತಾಕೀತು ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ವಿಡಿಯೋದಲ್ಲಿ ಆರೋಪಿಸಿದ್ದಾರೆ. ನಮಗೆ ಅಗತ್ಯ …

Read More »

ಅಧಿಕಾರಿಗಳನ್ನೇ ಯಾಮಾರಿಸಿ ರಾತ್ರೋರಾತ್ರಿ ಬಾಲ್ಯವಿವಾಹ; ಬಾಲಕಿ ರಕ್ಷಣೆ

ಬಾಗಲಕೋಟೆ: ಕೊರೊನಾ ಲಾಕ್ ಡೌನ್ ನಡುವೆ ಗ್ರಾಮಗಳಲ್ಲಿ ಮತ್ತೆ ಬಾಲ್ಯವಿವಾಹ ಪದ್ಧತಿಗಳು ಹೆಚ್ಚುತ್ತಿವೆ. ಅಧಿಕಾರಿಗಳನ್ನೇ ಯಾಮಾರಿಸಿ ರಾತ್ರೋರಾತ್ರಿ ಬಾಲ್ಯವಿವಾಹ ಮಾಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.   ಗ್ರಾಮದಲ್ಲಿ ಬಾಲ್ಯವಿವಾಹ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾಮಾರಿಸಿದ ಪೋಷಕರು ನಮ್ಮ ಮನೆಯಲ್ಲಿ ಸಾವಾಗಿದೆ. ನಾವೇಕೆ ಈಗ ವಿವಾಹ ಮಾಡಿಸಲಿ ಎಂದು ಹೇಳಿದ್ದರು. ಪೋಷಕರ …

Read More »

ನಾಯಕತ್ವ ಬದಲಾವಣೆ ವಿಚಾರ; ವಿರೋಧಿ ಬಣಕ್ಕೆ ಟಾಂಗ್ ಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಾ, ದೆಹಲಿಯಲ್ಲಿ ಬೀಡು ಬಿಟ್ಟಿದ್ದ ನಾಯಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಸಿ ಮುಟ್ಟಿಸಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಶಾಸಕಾಂಗ ಸಭೆ ವಿಚಾರದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ನನ್ನ ಮುಂದೆ ಇರುವುದು ಕೋವಿಡ್ ನಿಯಂತ್ರಣ ಮಾತ್ರ. ಜನರ ಹಿತ ಕಾಯುವುದು ನನ್ನ ಮೊದಲ ಆದ್ಯತೆ. ಯಾರು ದೆಹಲಿಗೆ ಹೋಗಿ ಬಂದಿದ್ದಾರೋ ಅವರಿಗೆ ಅಲ್ಲಿಯೇ ಉತ್ತರ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳುವ …

Read More »

ದ್ವಿತೀಯ ಪಿಯುಸಿ ಪರೀಕ್ಷೆ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವರ್ಚುಯಲ್ ಸಭೆ ನಡೆಸಲಿದ್ದಾರೆ. ಶಿಕ್ಷಣ ತಜ್ಞರು, ಶಿಕ್ಷಕರು, ಶಾಲೆಗಳ ಆಡಳಿತ ಮಂಡಳಿ, ಪೋಷಕರೊಂದಿಗೆ ಸಚಿವರು ಶೀಘ್ರವೇ ಸಭೆ ನಡೆಸಲಿದ್ದು, ಸೋಂಕು ಕಡಿಮೆಯಾದ ಬಳಿಕ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪರೀಕ್ಷಾ ವಿಧಾನ ಹೇಗಿರಬೇಕು ಎಂದು ಸಚಿವರು ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಕಳೆದ ವರ್ಷ ಎಸ್‌ಎಸ್‌ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅದೇ …

Read More »

6 ರಾಜ್ಯಗಳಿಗೆ 24 ಗಂಟೆಗಳಲ್ಲಿ 969 ಟನ್ ಆಕ್ಸಿಜನ್‌ ಸಾಗಿಸಿದ ರೈಲ್ವೆ ಇಲಾಖೆ

ನವದೆಹಲಿ: “ಪ್ರತಿಕೂಲ ಹವಾಮಾನದ ಮಧ್ಯೆಯೂ 12 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳು 24 ಗಂಟೆಗಳ ಅವಧಿಯೊಳಗೆ 6 ರಾಜ್ಯಗಳಿಗೆ 969 ಟನ್ ದ್ರವ ವೈದ್ಯಕೀಯ ಆಕ್ಸಿಜನ್‌ ಅನ್ನು ಸಾಗಿಸಿವೆ” ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಮೂರು ರೈಲುಗಳು ತಮಿಳುನಾಡಿಗೆ ತಲುಪಿದರೆ, ನಾಲ್ಕು ಆಂಧ್ರಪ್ರದೇಶಕ್ಕೆ, ತಲಾ ಒಂದೊಂದು ರೈಲುಗಳು ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ, ಅಸ್ಸಾಂ ಹಾಗೂ ಕೇರಳಕ್ಕೆ ತಲುಪಿವೆ. “ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಿಂದ ಈ ರೈಲುಗಳು ಆಕ್ಸಿಜನ್‌ ಸಂಗ್ರಹಿಸಿಕೊಂಡು …

Read More »

ಶಾಸಕನ ಅಮಾನವೀಯ ನಡೆಗೆ ಮೃತಪಟ್ಟ ವೈದ್ಯ: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ರೂ ನೆರವಿಗೆ ಬಾರದೇ ನಿರ್ಲಕ್ಷ್

ಚಿಕ್ಕಮಗಳೂರು: ಅಪಘಾತದಲ್ಲಿ ವೈದ್ಯರೊಬ್ಬರು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ನರಳಾಡುತ್ತಿದ್ದರೂ, ಸಮೀಪದಲ್ಲೇ ಇದ್ದ ಶಾಸಕರೊಬ್ಬರು ಸಹಾಯಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ. ಕರ್ತವ್ಯ ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಕೋವಿಡ್ ವಾರಿಯರ್ ಡಾ. ರಮೇಶ್ ಕುಮಾರ್ ಅವರಿಗೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎನ್ನಲಾಗಿದೆ. ಅಪಘಾತದ ನಂತರ …

Read More »

ಕರ್ನಾಟಕದ ಹೊಸ ಮುಖ್ಯಮಂತ್ರಿ ಹೆಸರು ಘೋಷಿಸಲಿರುವ ಪ್ರಧಾನಿ ಮೋದಿ!

ಬೆಂಗಳೂರು, ಮೇ. 26: ವಯೋ ಸಹಜ ಕಾರಣದಿಂದ ಬಿ.ಎಸ್.ಯಡಿಯೂರಪ್ಪ ಅವರ ಸಿಎಂ ಪಟ್ಟದಿಂದ ಕೆಳಗೆ ಇಳಿಯಲಿದ್ದಾರೆ. ಅಂದುಕೊಂಡಂತೆ ಆದಲ್ಲಿ ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ‘ಯಂಗ್ ಸಿಎಂ’ ಹೆಸರನ್ನು ಪ್ರಧಾನಿ ಮೋದಿ ಅವರೇ ಘೊಷಣೆ ಮಾಡಲಿದ್ದಾರೆ. ಆ ಅಚ್ಚರಿಯ ಹೊಸ ಸಿಎಂ ಯಾರು ಅಂತ ಈವರೆಗೂ ಯಾರಿಗೂ ಗುಟ್ಟು ಬಿಟ್ಟು ಕೊಟ್ಟಿಲ್ಲ!     ಹೌದು. ಬಿಜೆಪಿ ವಲಯದಲ್ಲಿ ಬಹು ಚರ್ಚೆಗೆ ಕಾರಣವಾಗಿರುವ ವಿಚಾರವಿದು. ಬಿಜೆಪಿ ಪಕ್ಷದ ನೀತಿ ಸಂಹಿತೆ …

Read More »

ಯಡಿಯೂರಪ್ಪ ಸಿಎಂ ಪಟ್ಟ ಬಿಟ್ಟರೆ ಈ ಸಚಿವರೂ ಬದಲಾಗುತ್ತಾರೆ

ಬೆಂಗಳೂರು, ಮೇ. 26: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬದಲು ಮಾಡುವ ಜತೆಗೆ ರಾಜ್ಯದಲ್ಲಿ ಸಚಿವರ ಖಾತೆಗಳು ಬದಲಾಗಲಿವೆ. ಕೆಲವರಿಗೆ ಸಚಿವ ಸಂಪುಟ ಭಾಗ್ಯ ಸಿಕ್ಕಿದರೆ, ಇನ್ನೂ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳುವುದು ಗ್ಯಾರೆಂಟಿ ಎಂಬ ಮಹತ್ವದ ಸಂಗತಿಯೊಂದು ಬಿಜೆಪಿ ಪಾಳಯದಿಂದಲೇ ಹೊರಗೆ ಬಿದ್ದಿದೆ. ಆಪರೇಷನ್ ಕಮಲ ಮಾಡಿ ಪಕ್ಷಾಂತರಿಗಳಿಗೆ ಮಣೆ ಹಾಕಿ ಯಡಿಯೂರಪ್ಪ ಅವರು ಸಚಿವ ಸಂಪುಟ ರಚನೆ ಮಾಡಿದ್ದರು. ಮಹತ್ವದ ಖಾತೆಗಳನ್ನು ವಲಸೆ ನಾಯಕರಿಗೆ ಕೊಟ್ಟು ಮೂಲ …

Read More »