Breaking News

ವೈನ್‌ಶಾಪ್ ಮುಚ್ಚಿಸಿ – ಜನಜಾಗೃತಿ ವೇದಿಕೆ ಆಗ್ರಹ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ, ಕಣಿಯೂರು ಗ್ರಾಮದ, ಪದ್ಮುಂಜ ವೃತ್ತದ ಬಳಿ ಕೊಲ್ಲಾಜೆ ಕಾಂಪ್ಲೆಕ್ಸ್ನಲ್ಲಿ ತೆರೆಯಲಾದ ವೈನ್‌ಶಾಪ್/ಬಾರ್‌ಎಂಡ್ ರೆಸ್ಟೋರೆಂಟ್‌ನ್ನು ಕೂಡಲೇ ಮುಚ್ಚಿಸುವಂತೆ ಜನಜಾಗೃತಿ ವೇದಿಕೆಯು ತಹಶೀಲ್ದಾರ ಮಹೇಜ್‌ಜೆ. ರವರಿಗೆ ಮನವಿ ಮಾಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಮೂಲಕ ಜನಜಾಗೃತಿ ವೇದಿಕೆಯ ಪ್ರಾಯೋಜಕತ್ವದಲ್ಲಿ ಸಾವಿರಾರು ಮದ್ಯವರ್ಜನ ಶಿಬಿರಗಳನ್ನು ಬೆಳ್ತಂಗಡಿ ತಾಲೂಕಿನಲ್ಲಿಯೇ ನಡೆಸುತ್ತಿದ್ದು, ಇದರಲ್ಲಿ ಪಾನಮುಕ್ತರಾದವರು ಮರು ವ್ಯಸನಕ್ಕೆ ಬಲಿ ಬೀಳಲು ವೈನ್‌ಶಾಪ್ ಕಾರಣವಾಗುತ್ತದೆ. ಹಳ್ಳಿಯ ಅಭಿವೃದ್ಧಿಯ ದೃಷ್ಟಿಯಿಂದ ಮಹಿಳೆಯರು ಮತ್ತು …

Read More »

2ನೇ ಅಲೆಯ ಇಳಿಕೆಯ ನಂತ್ರ, ಕೊರೋನಾ 3ನೇ ಅಲೆಯ ಆರಂಭದ ಮುನ್ಸೂಚನೆ ಮತ್ತೆ ಲಾಕ್ ಡೌನ್ ಫಿಕ್ಸ್?

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಇಳಿಕೆಯ ನಂತ್ರ, ಈಗ ಕೊರೋನಾ 3ನೇ ಅಲೆಯ ಆರಂಭದ ಮುನ್ಸೂಚನೆ ದೊರೆತಿದೆ. ಇದೇ ಕಾರಣದಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಸಭೆ ಕೂಡ ನಡೆಯುತ್ತಿದೆ. ಈ ಸಭೆಯಲ್ಲಿ ಕೊರೋನಾ ಪಾಸಿಟಿವಿಟಿ ದರ ಹೆಚ್ಚಿರುವಂತ ಜಿಲ್ಲೆಗಳಲ್ಲಿ ಕಠಿಣ ರೂಲ್ಸ್ ಜಾರಿಗೆ ಸೂಚಿಸಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ( Karnataka Lockdown ) ಫಿಕ್ಸ್ …

Read More »

ತಪ್ಪಿದ ಸಚಿವ ಸ್ಥಾನ; ಶಾಸಕಿ ಪೂರ್ಣಿಮಾ ಅಭಿಮಾನಿಗಳಿಂದ ಪಾದಯಾತ್ರೆ

ಚಿತ್ರದುರ್ಗ: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಮಾನಿಗಳು ಅಸಮಾಧಾನಗೊಂಡಿದ್ದು ಪಾದಯಾತ್ರೆ ನಡೆಸಿ ಅಸಾಮಾಧನ ಹೊರ ಹಾಕಿದ್ದಾರೆ.   ಶಾಸಕಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ ಅಭಿಮಾನಿಗಳು, ಧರ್ಮಪುರದಿಂದ-ಹಿರಿಯೂರು ನಗರಕ್ಕೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದು, ಸಾಮಾಜಿಕ ನ್ಯಾಯ, ಮಹಿಳಾ ಕೋಟಾದಡಿ ಮಂತ್ರಿಗಿರಿ ನೀಡುವಂತೆ ಆಗ್ರಹ ಪಡಿಸಿದ ಅಭಿಮಾನಿಗಳು, ಮಂತ್ರಿ ಸ್ಥಾನ ನೀಡುವುದಾಗಿ ಆಸೆ ತೋರಿಸಿ ಬೊಮ್ಮಾಯಿ ಸರ್ಕಾರ ಮೋಸ ಮಾಡಿದೆ ಎಂದು …

Read More »

ಅತೃಪ್ತರು ಭಿನ್ನಮತ ಶುರು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ರಾತ್ರಿ ಸಭೆ

ಬೆಂಗಳೂರು– ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವಸ್ಥಾನ ಸಿಗದ ಹಿನ್ನೆಲೆಯಲ್ಲಿ ಅತೃಪ್ತರು ಭಿನ್ನಮತ ಶುರು ಮಾಡಿದ್ದು, ಇಂದು ರಾತ್ರಿ ಸಭೆ ಸೇರಲು ನಿರ್ಧರಿಸಿದ್ದಾರೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ರಾತ್ರಿ ಸಭೆ ನಡೆಯಲಿದೆ ಎಂದು ಗೊತ್ತಾಗಿದೆ. ರಮೇಶ ಜಾರಕಿಹೊಳಿ ನೇತೃತ್ವದಲ್ಲಿ 17 ಶಾಸಕರು ಕಾಂಗ್ರೆಸ್ – ಜೆಡಿಎಸ್ ತೊರೆದು ಬಿಜೆಪಿಗೆ ಬಂದು ಬಿಜೆಪಿ ಸರಕಾರ ರಚನೆಗೆ ಕಾರಣರಾಗಿದ್ದರು. ಇವರಲ್ಲಿ ಕೆಲವರಿಗೆ ಹಿಂದಿನ ಯಡಿಯೂರಪ್ಪ …

Read More »

ವಿಷಾಹಾರ ಸೇವನೆ; ಒಂದೇ ಕುಟುಂಬದ 7 ಜನರ ಸ್ಥಿತಿ ಗಂಭೀರ

ಬಾಗಲಕೋಟೆ; ವಿಷಾಹಾರ ಸೇವಿಸಿದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಕುಟುಂಬದ 7 ಸದಸ್ಯರು ಅಸ್ವಸ್ಥರಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿಯೇ ತಯಾರಿಸಿದ ಗೋಧಿ ಚಪಾತಿ ಸೇವಿಸಿದ ಬಳಿಕ ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ವಾಂತಿ-ಭೇದಿ ಶುರುವಾಗಿದೆ. ತಾಯಿ, ಮಗ, ಸೊಸೆ, ಮೊಮ್ಮಕ್ಕಳು ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.   ದುಂಡವ್ವ ಮಹಾರುದ್ರಪ್ಪ (60), ಮಗ ಲಕ್ಷ್ಮಣ (38), ಸೊಸೆ ಶಾಂತಾ (28) ಮೊಮ್ಮಕ್ಕಳಾದ ತೇಜಸ್ವಿನಿ (12), ಪಲ್ಲವಿ (10), ಪ್ರಥಮ್ …

Read More »

ಗಣೇಶ ಹಬ್ಬದ ಬಳಿಕ ಯಡಿಯೂರಪ್ಪ ರಾಜ್ಯ ಪ್ರವಾಸ

ಬೆಂಗಳೂರು: ‘ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಮತ್ತೆ ಅಧಿಕಾರಕ್ಕೆ ತರುವ ತನಕ ವಿಶ್ರಮಿಸುವುದಿಲ್ಲ’ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಣೇಶ ಹಬ್ಬದ ಬಳಿಕ ರಾಜ್ಯ ಪ್ರವಾಸ ಆರಂಭಿಸುವರು ಎಂದು ಮೂಲಗಳು ತಿಳಿಸಿವೆ. ‘ರಾಜ್ಯದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವ ಭಾಗದಲ್ಲಿ ಓಡಾಡಿ ಬಲಪಡಿಸುತ್ತೇನೆ. …

Read More »

ಕೇಳಿದ ಪ್ರಶ್ನೆಯನ್ನೇ ಪದೇ ಪದೇ ಕೇಳಿ ಕಾಲಹರಣ ಮಾಡಿದರು: ಇ.ಡಿ ದಾಳಿ ಬಗ್ಗೆ ಬೇಗ್‌

ಬೆಂಗಳೂರು: ಮಾಜಿ ಸಚಿವ ರೋಷನ್‌ ಬೇಗ್‌ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ನಡೆಸಿದ್ದ ದಾಳಿ ಶುಕ್ರವಾರ ಬೆಳಗಿನ ಜಾವ ಮುಕ್ತಾಯಗೊಂಡಿದೆ. ಸತತ 23 ಗಂಟೆಗಳ ಕಾಲ ದಾಖಲೆಗಳ ಹುಡುಕಾಟ, ವಿಚಾರಣೆ ನಡೆಸಿ ಬೆಳಗಿನ ಜಾವ ಅಧಿಕಾರಿಗಳ ವಾಪಸ್ ಹೋಗಿದೆ. ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ದಾಳಿ ಬಗ್ಗೆ ಪ್ರತಿಕ್ರಿಯಿಸಿದ ರೋಷನ್ ಬೇಗ್‌, ‘ಅಕ್ರಮ ಹಣಕಾಸು ವ್ಯವಹಾರ(ಮನಿ ಲಾಂಡ್ರಿಂಗ್) …

Read More »

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜೀನಾಮೆಗೆ ರೆವಲ್ಯೂಶನ್ ಗೋವನ್ಸ್ ಒತ್ತಾಯ..!

ಪಣಜಿ : ಮಹಿಳೆಯ ಮೇಲೆ ನಡೆದಿರುವ ಲೈಂಗಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕೂಡಲೆ ರಾಜೀನಾಮೆ ನೀಡಬೇಕು ಎಂದು ರೆವಲ್ಯೂಶನ್ ಗೋವನ್ಸ್ ಒತ್ತಾಯಿಸಿದೆ. ಪಕ್ಷದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೆವಲ್ಯೂಶನ್ ಗೋವನ್ಸ್ ನ ಸುನಯನಾ ಗಾವಡೆ, ಗೋವಾಕ್ಕೆ ಶಾಂತಿಪ್ರಿಯ ಎಂಬ ಗುರುತು ಬದಲಾಗುತ್ತಿದೆ. ಇದಕ್ಕೆ ಜನಪ್ರತಿನಿಧಿಗಳೇ ಕಾರಣ. ಗೋವಾ ರಾಜ್ಯವು ಯಾವಾಗ ಸುರಕ್ಷಿತವಾಗಲಿದೆ..? ರಾತ್ರಿಯ ಸಂದರ್ಭದಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರ …

Read More »

ಪ್ರಬಲ ಖಾತೆ ಮೇಲೆ ಹಿರಿಯರ ಕಣ್ಣು

ಬೆಂಗಳೂರು: ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಪ್ರಮುಖ ಖಾತೆಗಳ ಮೇಲೆ ಹಿರಿಯ ಸಚಿವರ ಕಣ್ಣು ಬಿದ್ದಿದೆ. ಪ್ರಭಾವಿ ಖಾತೆಗಳಿಗಾಗಿ ಸಿಎಂ ಬಳಿ ಬೇಡಿಕೆ ಇರಿಸಿದ್ದು, ಬಹುತೇಕ ಶುಕ್ರವಾರ ಸಚಿವರಿಗೆ ಖಾತೆಗಳ ಹಂಚಿಕೆಯಾಗುವ ಸಾಧ್ಯತೆ ಇದೆ. ಗೃಹ, ಇಂಧನ, ಕಂದಾಯ, ಆರ್‌ಡಿಪಿಆರ್‌, ಬೃಹತ್‌ ಕೈಗಾರಿಕೆ, ಬೆಂಗ ಳೂರು ನಗರಾಭಿವೃದ್ಧಿ, ಜಲ ಸಂಪನ್ಮೂಲ ಖಾತೆಗಳ ಮೇಲೆ ಹಿರಿಯ ಸಚಿವರು ನಿರೀಕ್ಷೆ ಇರಿಸಿ ದ್ದಾರೆ. ಬಿಎಸ್‌ವೈ ಸರಕಾರದಲ್ಲಿ ಸಚಿವರಾಗಿದ್ದವರಿಗೆ ಅದೇ ಖಾತೆ  ಗಳನ್ನು ನೀಡುವಂತೆ ಪಕ್ಷದ ವರಿಷ್ಠರು ಸಲಹೆ …

Read More »

ಬಿಎಸ್​ವೈ ಬ್ಲೂಪ್ರಿಂಟ್​ಗೆ ವಿರೋಧಿ ಬಣ ತತ್ತರ; ವಿರೋಧಿಗಳಿಗೆ ರಾಜಾಹುಲಿ ಕೊಟ್ಟ ಏಟು ಹೇಗಿದೆ?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನೂತನವಾಗಿ ರಾಜ್ಯ ಸಚಿವ ಸಂಪುಟ ರಚನೆ ಹಾಗೂ ಹೊಸ ಕ್ಯಾಬಿನೆಟ್ ಗಮನಿಸಿದರೆ ಪ್ರಮುಖವಾಗಿ ಒಂದು ವಿಚಾರ ಎದ್ದು ಕಾಣುತ್ತದೆ. ಅದೇನೆಂದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಅಡಿರುವ ಗೇಮ್​ನಿಂದ ಬಿಎಸ್​ವೈ ವಿರೋಧಿ ಬಣ ಸದ್ಯಕ್ಕೆ ಪುಲ್ ಸೈಡ್ ಲೈನ್ ಆಗಿದೆ. ರಾಜಾಹುಲಿಯ ಬ್ಲೂಪ್ರಿಂಟ್​ಗೆ ಕಕ್ಕಾಬಿಕ್ಕಿಯಾಗಿ ಅಡ್ರೆಸ್ ಕಳೆದುಕೊಂಡು ಆಫೋಸಿಟ್ ಗ್ಯಾಂಗ್​ನವರು ಈಗ ಎಲ್ಲಿ ಇದ್ದಾರೆ ಅನ್ನೋದೇ ಗೊತ್ತಾಗ್ತಾ ಇಲ್ಲ. ರಾಜ್ಯ ಬಿಜೆಪಿಯ …

Read More »